ಉಚಿತವಾಗಿ IPL ಮ್ಯಾಚ್ ವೀಕ್ಷಿಸಲು ಜಿಯೋದಿಂದ ಭರ್ಜರಿ ಪ್ಲ್ಯಾನ್ ಲಾಂಚ್!

|

ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಉತ್ತಮ ಸುದ್ದಿ ಇದೆ, ಜಿಯೋ ಈ ಬಾರಿಯ ಐಪಿಎಲ್ ಅನ್ನು ಹೆಚ್ಚು ಆನಂದದಾಯಕವಾಗಿಸಲು ಹೊಸ ಯೋಜನೆಗಳನ್ನು ಲಾಂಚ್ ಮಾಡಿದೆ. ಜಿಯೋ ಕ್ರಿಕೆಟ್ ಯೋಜನೆಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಒಂದು ವರ್ಷದ ಚಂದದಾರಿಕೆಯೊಂದಿಗೆ ಡೇಟಾ, ವಾಯ್ಸ್ ಮತ್ತು ಎಸ್‌ಎಂಎಸ್‌ ಲಾಭಗಳನ್ನು ಪಡೆಯಬಹುದಾಗಿದೆ.

ಲೈವ್ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಸಬ್‌ಸ್ಕ್ರಿಪ್ಷನ್‌ನೊಂದಿಗೆ ಲೈವ್ ಐಪಿಎಲ್ ಮ್ಯಾಚ್‌ಗಳನ್ನು ವೀಕ್ಷಿಸಲು ಹೊಸ ಹೊಸ ಟ್ಯಾರಿಫ್ ಯೋಜನೆಗಳನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ 1 ತಿಂಗಳು, 2 ತಿಂಗಳುಗಳು, 3 ತಿಂಗಳುಗಳು ಮತ್ತು 1 ವರ್ಷದ ಮಾನ್ಯತೆಯನ್ನು ಒಳಗೊಂಡಿರುವ ಪ್ರಿಪೇಯ್ಡ್ ಯೋಜನೆಗಳು ಲಭ್ಯವಿದ್ದು, ಇದರೊಂದಿಗೆ ವಿಶೇಷ ಡೇಟಾ ಲಾಭಗಳು ದೊರೆಯಲಿದೆ.

ಜಿಯೋ

ಕ್ರಿಕೆಟ್ ಸೀಸನ್‌ಗಾಗಿ ಜಿಯೋ ಅನೇಕ ಯೋಜನೆಗಳನ್ನು ಪ್ರಕಟಿಸಿದೆ. JIO CRICKET PLAN ಡೇಟಾ, ವಾಯ್ಸ್ ಮತ್ತು ಎಸ್‌ಎಂಎಸ್‌ ಲಾಭಗಳೊಂದಿಗೆ 399 ರೂ. ಮೌಲ್ಯದ 1 ವರ್ಷದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ನೀಡಲಿದೆ.

ಜಿಯೋ 401ರೂ. ಪ್ಲ್ಯಾನ್

ಜಿಯೋ 401ರೂ. ಪ್ಲ್ಯಾನ್

ಈ ಪ್ಲಾನ್‌ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತು ಪ್ರತಿ ದಿನ 3GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಜಿಯೋ 598ರೂ. ಪ್ಲ್ಯಾನ್

ಜಿಯೋ 598ರೂ. ಪ್ಲ್ಯಾನ್

ಈ ಪ್ಲಾನ್‌ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತು ಪ್ರತಿ ದಿನ 2 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಜಿಯೋ 777ರೂ. ಪ್ಲ್ಯಾನ್

ಜಿಯೋ 777ರೂ. ಪ್ಲ್ಯಾನ್

ಜಿಯೋ ರೂ.777ಕ್ಕೆ ರಿಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಜಿಯೋ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಜಿಯೋ ಈ ಪ್ಲಾನ್‌ ರಿಚಾರ್ಜ್ ಮಾಡಿಸುವವರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡುವುದರೊಂದಿಗೆ ಪ್ರತಿ ದಿನ 1.5 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಜಿಯೋ 2599ರೂ. ಪ್ಲ್ಯಾನ್

ಜಿಯೋ 2599ರೂ. ಪ್ಲ್ಯಾನ್

ಜಿಯೋ ರೂ.2599 ರಿಚಾರ್ಜ್ ಮಾಡಿಸಿಕೊಂಡವರಿಗೆ ಜಿಯೋ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡಲಿದೆ ಮತ್ತು ಒಂದು ವರ್ಷದ ಅವಧಿಗೆ ಪ್ರತಿ ದಿನ 2 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ.

ಜಿಯೋ 499ರೂ. ಡೇಟಾ ಆಡ್ ಆನ್ ಪ್ಲಾನ್

ಜಿಯೋ 499ರೂ. ಡೇಟಾ ಆಡ್ ಆನ್ ಪ್ಲಾನ್

ಈ ಪ್ಲಾನ್‌ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತು ಪ್ರತಿ ದಿನ1.5 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

Most Read Articles
Best Mobiles in India

Read more about:
English summary
Jio Launches Multiple Affordable Tariff Plans With Free Disney Plus Hotstar Vip Subscription To Watch Live Ipl Matches.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X