Home
ಸುದ್ದಿಜಾಲ

ಇಲ್ಲಿ ಐಫೋನ್ 15 ಖರೀದಿಸಿದರೆ, ಜಿಯೋದಿಂದ ಈ ಗಿಫ್ಟ್‌ ಗ್ಯಾರಂಟಿ!

ಜನಪ್ರಿಯ ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋ ಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ 2,394 ರೂ. ಮೌಲ್ಯದ ಆರು ತಿಂಗಳ ಪ್ಲಾನ್ ಅನ್ನು ಉಚಿತವಾಗಿ ಬಳಕೆದಾರರಿಗೆ ಲಭ್ಯ ಮಾಡಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ಜನಪ್ರಿಯ ರಿಲಯನ್ಸ್ ಜಿಯೋ, ನೂತನ ಆಪಲ್ ಐಫೋನ್ 15 ಖರೀದಿಸುವ ಗ್ರಾಹಕರಿಗೆ 399 ರೂ. ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ಒದಗಿಸಲಿದೆ. ಈ ಕೊಡುಗೆಯ ಒಟ್ಟು ಮೌಲ್ಯ 2,394 ರೂ. ಗಳಾಗಲಿದ್ದು, ಬಳಕೆದಾರರಿಗೆ ಅಧಿಕ ಲಾಭವನ್ನು ಮಾಡಿಕೊಡಲಿದೆ.

ಇಲ್ಲಿ ಐಫೋನ್ 15 ಖರೀದಿಸಿದರೆ, ಜಿಯೋದಿಂದ ಈ ಗಿಫ್ಟ್‌ ಗ್ಯಾರಂಟಿ!

ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ 399 ರೂ. ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿದಿನ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಯ ಸೌಲಭ್ಯ ದೊರೆಯಲಿದ್ದು, ಇದರ ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ವಾಯಿಸ್‌ ಕರೆಯ ಸೌಲಭ್ಯ ಸಹ ಸಿಗಲಿದೆ. ಅಲ್ಲದೇ ಪ್ರತಿದಿನ 100 ಎಸ್ಎಂಎಸ್ ಗಳನ್ನು ಸಹ ಉಚಿತ ವಾಗಿ ಕಳುಹಿಸಬಹುದಾಗಿದೆ.

ಆದರೆ ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋ ಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಕೊಡುಗೆಯ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದು.

ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಪ್ರಯೋಜನ ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು. ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ಕೂಡಾ ಮಾಡಿಕೊಳ್ಳಬಹುದಾಗಿದೆ.

ಅಂದಹಾಗೆ ಈ ಕೊಡುಗೆಯು ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗಲಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ದೊರೆಯಲಿದೆ. ಈ ಯೋಜನಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯ ನಿರ್ವಹಿಸಲಿದೆ.

ಐಫೋನ್‌ 15 ಫೋನ್ ಫೀಚರ್ಸ್‌ ಹೀಗಿವೆ :
ಐಫೋನ್‌ 15 ಫೋನ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, 1600 nits ಬ್ರೈಟ್ನಸ್‌ ಬೆಂಬಲ ಸಹ ಹೊಂದಿದೆ. ಈ ಐಫೋನ್‌ ಪಿಲ್‌ ಶೇಪ್‌ ಮಾದರಿ ಪಂಚ್‌ ಹೋಲ್‌ ರಚನೆ ಪಡೆದಿದೆ. ಹಾಗೆಯೇ ಐಫೋನ್‌ 15 ಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಇದಕ್ಕೆ ಬೆಂಬಲವಾಗಿ ios 17 ಓಎಸ್‌ ಸಪೋರ್ಟ್ ಕೂಡಾ ಹೊಂದಿದೆ.

ಅಲ್ಲದೇ ಇದು 128 GB, 256 GB, 512 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಜೊತೆಗೆ ಐಫೋನ್‌ 15 ಫೋನ್‌ ಎರಡು ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್‌ ಆಂಗಲ್‌ ಲೆನ್ಸ್‌ ಹೊಂದಿದ್ದು, 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಐಫೋನ್‌ 15 ಪ್ರೈಸ್‌ ವಿವರ ಹೀಗಿದೆ :
ಐಫೋನ್‌ 15 128GB ವೇರಿಯಂಟ್‌ ಬೆಲೆ - 79,900 ರೂ
ಐಫೋನ್‌ 15 256GB ವೇರಿಯಂಟ್‌ ಬೆಲೆ - 89,900 ರೂ
ಐಫೋನ್‌ 15 512GB ವೇರಿಯಂಟ್‌ ಬೆಲೆ - 1,09,900 ರೂ

Best Mobiles in India

English summary
Jio announces Amazing iPhone 15 offers at Reliance Digital and JioMart. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+