Home
ಸುದ್ದಿಜಾಲ

Jio: ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್: ಓಟಿಟಿ ಪ್ರಿಯರಿಗಾಗಿಯೇ ಈ ವಿಶೇಷ ಪ್ಲ್ಯಾನ್‌ಗಳು‌!

ಜಿಯೋ (Jio) ಆಗಾಗ್ಗೆ ವಿಶೇಷ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಇತರೆ ಟೆಲಿಕಾಂಗಳ ವಿರುದ್ಧ ತನ್ನದೇ ಆದ ರೀತಿಯಲ್ಲಿ ಸ್ಪರ್ಧೆ ನೀಡುತ್ತಿದೆ. ಅದರಲ್ಲೂ ಅಗ್ಗದ ದರದಲ್ಲಿ ಉತ್ತಮ ಪ್ಲ್ಯಾನ್‌ಗಳನ್ನು ಪರಿಚಯಿಸುವ ಟೆಲಿಕಾಂ ಎಂದೂ ಸಹ ಕರೆಸಿಕೊಳ್ಳುತ್ತಿದೆ. ಈ ಬೆಳವಣಿಗೆ ನಡುವೆ ಈಗ ಗ್ರಾಹಕರಿಗೆ ಮತ್ತೆ ಗುಡ್ ನ್ಯೂಸ್ ನೀಡಲಾಗಿದೆ.

ಹೌದು, ಜಿಯೋ ಇದೀಗ ಜಿಯೋಟಿವಿ ಪ್ರೀಮಿಯಂ ಪ್ಲ್ಯಾನ್‌ಗಳನ್ನು (JioTV Premium Plan) ಅನ್ನು ಘೋಷಣೆ ಮಾಡಿದೆ. ಬಳಕೆದಾರರು ವೈವಿಧ್ಯಮಯ ಓಟಿಟಿ ಕಂಟೆಂಟ್‌ಗೆ ಪ್ರವೇಶಿಸುವ ವಿಧಾನವನ್ನು ಈ ಮೂಲಕ ಬದಲಾಯಿಸುವ ಕೆಲಸವನ್ನು ಮಾಡಲಾಗಿದೆ. ಸಂತಸ ಪಡುವ ವಿಷಯ ಏನೆಂದರೆ ಈ ಪ್ಲ್ಯಾನ್‌ಗಳು 398 ರೂ.ಗಳಿಂದ ವಿಭಿನ್ನ ಮಾನ್ಯತೆ ಮತ್ತು ಓಟಿಟಿ ಪ್ರವೇಶದೊಂದಿಗೆ ಆರಂಭ ಆಗಲಿವೆ. ಹಾಗಿದ್ರೆ, ತಡಯಾಕೆ ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದು ಬರೋಣ.

ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್: ಓಟಿಟಿ ಪ್ರಿಯರಿಗಾಗಿಯೇ ಈ ವಿಶೇಷ ಪ್ಲ್ಯಾನ್‌ಗಳು

ಜಿಯೋ ಟಿವಿ ಪ್ರೀಮಿಯಂ ಪ್ಲ್ಯಾನ್‌: ಜನಪ್ರಿಯ ಟೆಲಿಕಾಂ ಬ್ರ್ಯಾಂಡ್ ಆಗಿರುವ ಜಿಯೋ, ಹೊಸ ಜಿಯೋ ಟಿವಿ ಪ್ರೀಮಿಯಂ ಪ್ಲ್ಯಾನ್‌ ಅನ್ನು ಪ್ರಾರಂಭಿಸಿದೆ. ಜನರು ವ್ಯಾಪಕ ಶ್ರೇಣಿಯ ಓವರ್-ದಿ-ಟಾಪ್ (OTT) ಕಂಟೆಂಟ್‌ಗೆ ಹೇಗೆ ಪ್ರವೇಶಿಸುತ್ತಾರೆ ಎಂಬುದರಲ್ಲಿ ಗಮನಾರ್ಹ ಬದಲಾವಣೆಯನ್ನು ಈ ಮೂಲಕ ಕಂಡುಕೊಳ್ಳಲಾಗಿದೆ. ಅಂದರೆ. ಈ ಪ್ಲ್ಯಾನ್‌ಗಳಲ್ಲಿ ಜನರು ಸಾಕಷ್ಟು ವಿಭಿನ್ನ ಶೋಗಳು ಮತ್ತು ಚಲನಚಿತ್ರಗಳನ್ನು ಸರಳವಾಗಿ ವೀಕ್ಷಣೆ ಮಾಡಬಹುದಾಗಿದೆ.

ಇನ್ನು ಈ ವಿಶೇಷ ಪ್ಲ್ಯಾನ್‌ 398 ರೂ.ಗಳಿಂದ ಆರಂಭವಾಗಲಿದ್ದು, ಈ ಪ್ಲ್ಯಾನ್‌ನಿಂದಾಗಿ ನೀವು ಇನ್ಮುಂದೆ ಪ್ರತಿ ಆಪ್‌ಗೂ ಸಹ ಪ್ರತ್ಯೇಕ ಚಂದಾದಾರಿಕೆಗಳನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಅಷ್ಟೇ ಅಲ್ಲದೆ ಇದು ಹೆಚ್ಚಿನ ಪಾಸ್‌ವರ್ಡ್‌ ಹಾಗೂ ವಿಭಿನ್ನ ಲಾಗಿನ್‌ಗಳನ್ನೂ ಸಹ ಕೇಳುವುದಿಲ್ಲ. ಪರಿಣಾಮ ನೀವು ವಿವಿಧ ಆಪ್‌ಗಳಿಂದ ನಿಮಗೆ ಬೇಕಾದ ಎಲ್ಲಾ ಕಂಟೆಂಟ್‌ ಅನ್ನು ಒಂದೇ ಸ್ಥಳದಲ್ಲಿ ಪಡೆಯಬಹುದು.

ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್: ಓಟಿಟಿ ಪ್ರಿಯರಿಗಾಗಿಯೇ ಈ ವಿಶೇಷ ಪ್ಲ್ಯಾನ್‌ಗಳು

ಯಾವೆಲ್ಲಾ ಪ್ಲ್ಯಾನ್‌ ಇವೆ?: ಈ ಜಿಯೋ ಟಿವಿ ಪ್ರೀಮಿಯಂ ಪ್ಲ್ಯಾನ್‌ಗಳು 398 ರೂ.ಗಳಿಂದ ಪ್ರಾರಂಭವಾಗಲಿದ್ದು, ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ 1198 ರೂ.ಗಳ ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರಲಿದ್ದು, 4498 ರೂ.ಗಳ ಪ್ಲ್ಯಾನ್‌ ಬರೋಬ್ಬರಿ ಒಂದು ವರ್ಷ ಅಥವಾ 365 ದಿನಗಳ ಮಾನ್ಯತೆಯನ್ನು ಹೊಂದಿದೆ. 398 ರೂ.ಗಳ ಪ್ಲ್ಯಾನ್‌ 2GB ಡೇಟಾ ಜೊತೆಗೆ 12 ಓಟಿಟಿ ಆಪ್‌ಗಳಿಗೆ ಪ್ರವೇಶ ನೀಡಲಿದ್ದು, ಇತರೆ ಪ್ಲ್ಯಾನ್‌ಗಳು 2GB ಯೊಂದಿಗೆ 14 ಓಟಿಟಿ ಆಪ್‌ಗಳಿಗೆ ಎಂಟ್ರಿ ಕೊಡಿಸುತ್ತವೆ.

ಈ ಪ್ಲ್ಯಾನ್‌ಗಳ ಆಧಾರದ ಮೇಲೆ ನೀವು ತಿಂಗಳಿಗೊಮ್ಮೆ, ಪ್ರತಿ ಮೂರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಪಾವತಿ ಆಯ್ಕೆ ಮಾಡಬಹುದು. ಜೊತೆಗೆ, ವಾರ್ಷಿಕ ಯೋಜನೆಗೆ ಹೋದರೆ, ತ್ವರಿತ ಗ್ರಾಹಕ ಸೇವೆ ಮತ್ತು ಕಂತುಗಳಲ್ಲಿ ಪಾವತಿ ಆಯ್ಕೆಗಳಂತಹ ಹೆಚ್ಚುವರಿ ಸೌಲಭ್ಯ ಸಹ ನಿಮಗೆ ಸಿಗಲಿದೆ. ಇನ್ನು ಜಿಯೋ ಮೊಬೈಲ್ ಸಂಖ್ಯೆ ಬಳಕೆ ಮಾಡಿಕೊಂಡು ಈ ಜಿಯೋಟಿವಿ ಆಪ್‌ಗೆ ಲಾಗ್ ಇನ್ ಮಾಡಿಕೊಳ್ಳಬಹುದಾಗಿದೆ. ಪ್ರಮುಖ ವಿಷಯ ಏನೆಂದರೆ ಒಮ್ಮೆ ಲಾಗಿನ್‌ ಆದರೆ ಮತ್ತೆ ಮತ್ತೆ ಲಾಗಿನ್‌ ಆಗುವ ಅವಶ್ಯಕತೆ ಇರುವುದಿಲ್ಲ.

ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್: ಓಟಿಟಿ ಪ್ರಿಯರಿಗಾಗಿಯೇ ಈ ವಿಶೇಷ ಪ್ಲ್ಯಾನ್‌ಗಳು

ಅದಾಗ್ಯೂ ಈ ಪ್ಲ್ಯಾನ್‌ಗಳಲ್ಲಿ ಬೇಸರ ಪಡುವ ವಿಷಯ ಏನೆಂದರೆ ಜಿಯೋ ಸಿನಿಮಾ ಪ್ರೀಮಿಯಂ, ಅಮೆಜಾನ್‌ ಪ್ರೈಮ್‌ ವಿಡಿಯೋ (ಮೊಬೈಲ್‌) ಮತ್ತು ಡಿಸ್ನಿ+ ಹಾಟ್‌ಸ್ಟಾರ್ ನಂತಹ ಕೆಲವು ಆಪ್‌ಗಳಿಗೆ ಪ್ರವೇಶಿಸಲು ಹೆಚ್ಚುವರಿ ಹಂತಗಳ ಅಗತ್ಯವಿದೆ. ಅಂದರೆ, ಜಿಯೋ ಸಿನಿಮಾ ಪ್ರೀಮಿಯಂಗೆ ಪ್ರವೇಶಿಸಲು ನೀವು ಮೈ ಜಿಯೋ ನಿಂದ ಕೂಪನ್ ಅನ್ನು ಬಳಕೆ ಮಾಡಿಕೊಳ್ಳಬಹುದು ಹಾಗೂ ಅಮೆಜಾನ್‌ ಪ್ರೈಮ್‌ ಅನ್ನೂ ಸಹ ಮೈ ಜಿಯೋ ಮೂಲಕ ಸಕ್ರಿಯಗೊಳಿಸಬೇಕಿದೆ.

Best Mobiles in India

English summary
Jio has just announced JioTV Premium Plan. This has been done to change the way users access diverse OTT content.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+