Home
ಸುದ್ದಿಜಾಲ

ಬರ್ತಿದೆ 'ಜಿಯೋ ಮೀಟ್' ಆಪ್‌; ಥಂಡಾ ಹೊಡೆದ ಚೀನಾದ 'ಜೂಮ್'!

ಕೊರೊನಾ ವೈರಸ್‌ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಈ ಟೈಮ್‌ನಲ್ಲಿ ಅನೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ನೌಕರರು ತಮ್ಮ ಕಛೇರಿಯ ಮೀಟಿಂಗ್‌, ಸಭೆ ಮತ್ತು ಸಂವಹನಕ್ಕಾಗಿ ವಿಡಿಯೊ ಕಾನ್ಫರೆನ್ಸ್ ಆಪ್‌ಗಳ ಬಳಕೆ ಮಾಡುತ್ತಿದ್ದು, ವಿಡಿಯೊ ಕಾಲಿಂಗ್ ಆಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ದೇಶದ ಲೀಡಿಂಗ್ ಟೆಲಿಕಾಂ ರಿಲಾಯನ್ಸ್ ಜಿಯೋ ಸಹ ವಿಡಿಯೊ ಕಾನ್ಫರೆನ್ಸ್‌ ಆಪ್‌ ಬಿಡುಗಡೆ ಮಾಡಲು ಸಜ್ಜಾಗಿದೆ.

ಜಿಯೋ

ಹೌದು, ಜಿಯೋ ಸಂಸ್ಥೆಯು ಹೊಸದಾಗಿ ''ಜಿಯೋ ಮೀಟ್'' ಹೆಸರಿನ ವಿಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ವೊಂದನ್ನು ಅಭಿವೃದ್ಧಿಪಡಿಸಿದೆ. ಪ್ರತಿಯೊಬ್ಬ ಜಿಯೋ ಬಳಕೆದಾರರಿಗೂ ಈ ಆಪ್ ಲಭ್ಯವಾಗುವಂತೆ ರೂಪಿಸಲಾಗಿದ್ದು, ಐಓಎಸ್‌, ಆಂಡ್ರಾಯ್ಡ್ ಓಎಸ್‌, ವಿಂಡೊಸ್‌ ಹಾಗೂ macOS ಸಿಸ್ಟಮ್‌ಗಳಲ್ಲಿಯೂ ಜಿಯೋ ಮೀಟ್ ಆಪ್ ಲಭ್ಯವಾಗಲಿದೆ. ವಿಡಿಯೊ ಕರೆಗಳು ಸಂಪೂರ್ಣ HD ಗುಣಮಟ್ಟದಲ್ಲಿರುತ್ತವೆ.

ಏಕಕಾಲಕ್ಕೆ 10 ಜನಕ್ಕೆ ಕನೆಕ್ಟ್‌

ಏಕಕಾಲಕ್ಕೆ 10 ಜನಕ್ಕೆ ಕನೆಕ್ಟ್‌

ಜಿಯೋ ಮೀಟ್ ವಿಡಿಯೊ ಕಾನ್ಫರೆನ್ಸ್‌ ಆಪ್‌ನಲ್ಲಿ ಬಳಕೆದಾರರು ಏಕಕಾಲಕ್ಕೆ ಹತ್ತು ಸದಸ್ಯರೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಅಂದರೇ ಒಂದು ವಿಡಿಯೊ ಕಾಲ್‌ನಲ್ಲಿ ಹತ್ತು ಸದಸ್ಯರನ್ನು ಕನೆಕ್ಟ್ ಮಾಡುವ ಸೌಲಭ್ಯ ಒಳಗೊಂಡಿದೆ. ಇನ್ನು ಜಿಯೋ ಮೀಟ್‌ನಲ್ಲಿ ಹೆಚ್‌ಡಿ ಕ್ವಾಲಿಟಿಯು ವಿಡಿಯೊ ಕರೆಯಗಳ ಸೌಲಭ್ಯ ಇರಲಿದೆ.

ಎಲ್ಲಾ ಡಿವೈಸ್‌ಗೂ ಬೆಂಬಲ

ಎಲ್ಲಾ ಡಿವೈಸ್‌ಗೂ ಬೆಂಬಲ

ರಿಲಯನ್ಸ್ ಜಿಯೋ ಜಿಯೋ ಮೀಟ್ ವಿಡಿಯೊ ಕಾನ್ಫರೆನ್ಸ್‌ ಆಪ್‌ ಆಂಡ್ರಾಯ್ಡ್, ಐಒಎಸ್, ವಿಂಡೋಸ್ ಮತ್ತು ಮ್ಯಾಕೋಓಎಸ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಹಾಗೆಯೇ ಜಿಯೋಮೀಟ್ ಅನ್ನು ಕ್ರೋಮ್‌ ಮತ್ತು ಫೈರ್‌ಫಾಕ್ಸ್‌ನಂತಹ ಬ್ರೌಸರ್‌ಗಳಿಂದ ಪ್ಲಗ್-ಇನ್ ಮಾಡಿ ಸಹ ಆಪ್ ಬಳಕೆಮಾಡಬಹುದಾಗಿದೆ. ಇನ್ನು ಈ ಆಪ್‌ನಲ್ಲಿ ಲಾಗ್-ಇನ್ ಮಾಡಲು ಬಯಸಿದರೆ ನೀವು ಅದನ್ನು ಮಾಡಬಹುದು.

ಜೂಮ್‌ಗೆ ಟಾಂಗ್

ಜೂಮ್‌ಗೆ ಟಾಂಗ್

ಜಿಯೋ ಸಂಸ್ಥೆಯು ಜಿಯೋ ಮೀಟ್ ವಿಡಿಯೊ ಕಾನ್ಫರೆನ್ಸ್‌ ಬಿಡುಗಡೆ ಮಾಡಲಿದೆ ಈ ಮೂಲಕ ಲಾಕ್‌ಡೌನ್‌ ಅವಧಿಯಲ್ಲಿ ಭಾರಿ ಡಿಮ್ಯಾಂಡ್‌ ಪಡೆದಿರುವ ಚೀನಾ ಮೂಲದ ಜೂಮ್ ಆಪ್‌ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಜಿಯೋ ಮೀಟ್ ಸದ್ಯದಲ್ಲಿಯೇ ಬಳಕೆಗೆ ಲಭ್ಯವಾಗಲಿದೆ.

ಜಿಯೋ-ಫೇಸ್‌ಬುಕ್ ಮೈತ್ರಿ

ಜಿಯೋ-ಫೇಸ್‌ಬುಕ್ ಮೈತ್ರಿ

ಸೋಷಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಹಾಗೂ ದೇಶದ ಟೆಲಿಕಾಂ ಕಿಂಗ್ ಜಿಯೋ ಇತ್ತೀಚಿಗಷ್ಟೆ ದೋಸ್ತಿ ಆಗಿದ್ದು, ಇಂಟರ್ನೆಟ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಜಿಯೋ ಸಂಸ್ಥೆಯಲ್ಲಿ ಫೇಸ್‌ಬುಕ್ 43,574ಕೋಟಿ ಹೂಡಿಕೆ ಮಾಡಿದ್ದು, ಶೇ 9.9ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಂಡಿದೆ. ಫೇಸ್‌ಬುಕ್‌ನ ಈ ಹೂಡಿಕೆಯು ದೇಶದಲ್ಲಿಯೇ ಅತೀ ದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆ ಎನ್ನಲಾಗಿದೆ.

ಜಿಯೋ ಮಾರ್ಟ್‌

ಜಿಯೋ ಮಾರ್ಟ್‌

ಜಿಯೋ-ಫೇಸ್‌ಬುಕ್ ಮೈತ್ರಿಯಿಂದ ಜಿಯೋ ಮಾರ್ಟ್‌ ಇ-ಕಾಮರ್ಸ್‌ ಸೇವೆಯಲ್ಲಿ ಮತ್ತಷ್ಟು ಹಿಡಿತ ಸಾಧಿಸಲಿದೆ. ಹೀಗಾಗಿ ದೈತ್ಯ ಇ-ಕಾಮರ್ಸ್ ತಾಣಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ಗಳಿಗೆ ಭಾರಿ ಹಿನ್ನಡೆ ಆಗಬಹುದು ಎನ್ನಲಾಗಿದೆ. ಹಾಗೆಯೇ ಜಿಯೋ-ಫೇಸ್‌ಬುಕ್‌ಗಳು ಡಿಜಿಟಲ್‌ ಪೇಮೆಂಟ್ ವಲಯಕ್ಕೂ ಕಾಲಿಡಲಿದ್ದು, ಗೂಗಲ್‌ ಪೇ, ಪೇಟಿಎಮ್, ಫೋನ್‌ಪೇಗಳಿಗೂ ಪೈಪೋಟಿ ನೀಡುವ ಸಾಧ್ಯತೆಗಳಿವೆ.

Best Mobiles in India

English summary
The JioMeet video-conferencing app to be available on both iOS and Android platforms.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+