Home
ಸುದ್ದಿಜಾಲ

Jio Bharat phones: ಎರಡು 4G ಪ್ರಿಪೇಯ್ಡ್ ಪ್ಲ್ಯಾನ್‌ ಘೋಷಣೆ ಮಾಡಿದ ಜಿಯೋ, ಏನೆಲ್ಲಾ ಪ್ರಯೋಜನ?

ಜಿಯೋ ಒಂದಲ್ಲಾ ಒಂದು ವಿಚಾರದಿಂದ ಸದಾ ಸದ್ದು ಮಾಡುತ್ತಿರುತ್ತದೆ. ಅದರಂತೆ ಈಗ ಜಿಯೋ ಭಾರತ್‌ ಫೋನ್‌ ಅನ್ನು ಲಾಂಚ್‌ ಮಾಡುವ ಮೂಲಕ ಅದರಲ್ಲೂ ಕೇವಲ 999ರೂ.ಗಳಿಗೆ ಲಭ್ಯವಾಗಿಸುವ ಮೂಲಕ ಭಾರತೀಯರಿಗೆ ಸಂತಸ ಉಂಟಾಗುವಂತೆ ಮಾಡಿತ್ತು. ಈ ನಡುವೆ ಮತ್ತೊಂದು ಖುಷಿಯ ವಿಚಾರವನ್ನು ನೀಡಿದೆ.

ಹೌದು, ಜಿಯೋ ಕೇವಲ ಟೆಲಿಕಾಂ ಸೇವೆಗೆ ಮಾತ್ರ ಸೀಮಿತವಾಗದೆ ಎಲ್ಲಾ ರಂಗದಲ್ಲೂ ತನ್ನ ಸಾಮರ್ಥ್ಯ ತೋರುತ್ತಿದೆ. ಈ ಕಾರಣಕ್ಕೆ ಹೊಸ ಹೊಸ ಡಿವೈಸ್‌ಗಳು ಅನಾವರಣ ಆಗುತ್ತಿದೆ. ಅದರಂತೆ ಈಗ ಜಿಯೋ ಭಾರತ್‌ ಮೊಬೈಲ್‌ಗಳೊಂದಿಗೆ ಎರಡು 4G ಪ್ರಿಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳನ್ನೂ ಸಹ ಘೋಷಣೆ ಮಾಡಿದೆ. ಈ ಮೂಲಕ ಬಳಕೆದಾರರು ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಬನ್ನಿ ಈ ರೀಚಾರ್ಜ್‌ ಪ್ಲ್ಯಾನ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಬರೋಣ.

ಎರಡು 4G ಪ್ರಿಪೇಯ್ಡ್ ಪ್ಲ್ಯಾನ್‌ ಘೋಷಣೆ ಮಾಡಿದ ಜಿಯೋ, ಏನೆಲ್ಲಾ ಪ್ರಯೋಜನ?

ರಿಲಯನ್ಸ್ ಜಿಯೋ ಪ್ರವೇಶ ಮಟ್ಟದ 4G ಇಂಟರ್ನೆಟ್-ಸಕ್ರಿಯಗೊಳಿಸಿದ ಫೋನ್‌ಗಳನ್ನು ಲಾಂಚ್ ಮಾಡಿದ್ದು, ಈ ಹೊಸ ಮೊಬೈಲ್ ಫೋನ್‌ಗಳು ಭಾರತವನ್ನು 2Gಯಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಿವೆ. ಜೊತೆಗೆ ಈ ಫೋನ್‌ಗಳು ಕ್ಯಾಮೆರಾ, ಜಿಯೋ ಪೇ, ಯುಪಿಐ ಸೌಲಭ್ಯ, ಜಿಯೋ ಸಾವನ್‌, ಜಿಯೋ ಸಿನಿಮಾ ಸೇರಿದಂತೆ ಇನ್ನೂ ಅನೇಕ ಸೇವೆ ಪಡೆದುಕೊಳ್ಳಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಇದರೊಂದಿಗೆ ಜಿಯೋ ಭಾರತ್ ಫೋನ್ ಬಳಕೆದಾರರಿಗೆ ಮೂಲ ರೀಚಾರ್ಜ್ ಯೋಜನೆಗಳನ್ನು ಸಹ ಘೋಷಣೆ ಮಾಡಲಾಗಿದೆ.

ಜಿಯೋ ಭಾರತ್ ಬಳಕೆದಾರರು ಇನ್ಮುಂದೆ 123 ರೂ.ಗಳು ಹಾಗೂ 1,234 ರೂ.ಗಳ ಎರಡು ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಗಳನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಪ್ಲ್ಯಾನ್‌ಗಳು ಅನಿಯಮಿತ ವಾಯ್ಸ್‌ಕಾಲ್‌ ಸೌಲಭ್ಯ ಹಾಗೂ ಇಂಟರ್ನೆಟ್ ಡೇಟಾ ಪ್ರಯೋಜನಗಳನ್ನು ನೀಡುತ್ತವೆ. ಅಷ್ಟು ಮಾತ್ರವಲ್ಲದೆ ಹೊಸ 4G ಫೋನ್‌ಗಳ ಮಾರಾಟವನ್ನು ಹೆಚ್ಚಿಗೆ ಮಾಡುವ ಉದ್ದೇಶದಿಂದ ಭಾರತದಲ್ಲಿ 250 ಮಿಲಿಯನ್ ಫೀಚರ್ ಫೋನ್ ಬಳಕೆದಾರರಿಗೆ ಡಿಜಿಟಲ್ ಸ್ವಾತಂತ್ರ್ಯದ ಸೌಲಭ್ಯ ನೀಡಲಾಗುತ್ತಿದೆ.

ಈ ಸಂಬಂಧ ಜಿಯೋ ಭಾರತ್ ಫೋನ್ ಮತ್ತು ಯೋಜನೆಗಳ ಬಿಡುಗಡೆ ಕುರಿತು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಮಾತನಾಡಿ. ಜಗತ್ತು 5G ಕ್ರಾಂತಿಯ ತುದಿಯಲ್ಲಿ ನಿಂತಿರುವ ಸಮಯದಲ್ಲಿ ಭಾರತದಲ್ಲಿ ಇನ್ನೂ 250 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರು 2G ಯುಗದಲ್ಲಿ ಇದ್ದಾರೆ. ಇದರಿಂದಾಗಿ ಇಂಟರ್ನೆಟ್‌ನ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಈ ಫೋನ್‌ಗಳು ಅದನ್ನು ಸಾಧ್ಯ ಆಗಿಸುತ್ತವೆ ಎಂದಿದ್ದಾರೆ. ಹಾಗಿದ್ರೆ, ಬನ್ನಿ ಈ ರೀಚಾರ್ಜ್‌ ಪ್ಲ್ಯಾನ್‌ಗಳ ಸೌಲಭ್ಯ ಗಮನಿಸೋಣ.

ಎರಡು 4G ಪ್ರಿಪೇಯ್ಡ್ ಪ್ಲ್ಯಾನ್‌ ಘೋಷಣೆ ಮಾಡಿದ ಜಿಯೋ, ಏನೆಲ್ಲಾ ಪ್ರಯೋಜನ?

ಜಿಯೋ ಭಾರತ್ 123ರೂ. ರೀಚಾರ್ಜ್ ಪ್ಲ್ಯಾನ್: ಜಿಯೋದ ಭಾರತ್ ಪ್ಲ್ಯಾನ್‌ 123ರೂ.ಗಳಲ್ಲಿ ಬಳಕೆದಾರರು ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯದೊಂದಿಗೆ ಒಟ್ಟು 14 GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಬಳಕೆದಾರರು ನಿತ್ಯವೂ 0.5GB ಡೇಟಾವನ್ನು ಖರ್ಚು ಮಾಡಬಹುದು. ಈ ಪ್ಲ್ಯಾನ್‌ ರೀಚಾರ್ಜ್ ದಿನಾಂಕದಿಂದ 28 ದಿನಗಳ ವರೆಗೆ ಮಾನ್ಯತೆ ಹೊಂದಿರುತ್ತದೆ.

ಈ ಪ್ಲ್ಯಾನ್‌ ಅನ್ನು ಏರ್‌ಟೆಲ್‌ ಹಾಗೂ ಇನ್ನಿತರೆ ಟೆಲಿಕಾಂ ಸೇವೆಗಳಿಗೆ ಹೋಲಿಕೆ ಮಾಡಿ ನೋಡಿದರೆ ಈ ಪ್ಲ್ಯಾನ್‌ ಮಾತ್ರ ಬಳಕೆದಾರರಿಗೆ ಶೇಕಡಾ 30 ರಷ್ಟು ಉಳಿಸಲು ಅನುವು ಮಾಡಿಕೊಡುತ್ತದೆ. ಯಾಕೆಂದರೆ ಇತರ ಆಪರೇಟರ್‌ಗಳು 179 ರೂ.ಗಳ ಪ್ಲ್ಯಾನ್‌ನಲ್ಲಿ ಕೇವಲ 2GB ಡೇಟಾ ನೀಡುತ್ತವೆ. ಆದರೆ, ಈ ಪ್ಲ್ಯಾನ್‌ನಲ್ಲಿ ಜಿಯೋ ಬಳಕೆದಾರರು 14 GB ಡೇಟಾ ಸೌಲಭ್ಯ ಪಡೆದುಕೊಳ್ಳುವುದು ಪ್ರಮುಖವಾದ ವಿಷಯವಾಗಿದೆ.

ಜಿಯೋ ಭಾರತ್ 1,234 ರೂ.ಗಳ ರೀಚಾರ್ಜ್ ಪ್ಲ್ಯಾನ್‌: ಇನ್ನು ಮತ್ತೊಂದು ದೊಡ್ಡ ಮೊತ್ತದ ರೀಚಾರ್ಜ್‌ ಪ್ಲ್ಯಾನ್‌ಬಗ್ಗೆ ಮಾತನಾಡುವುದಾದರೆ ಇದು ವಾರ್ಷಿಕ ಪ್ಲ್ಯಾನ್‌ ಆಗಿದ್ದು, ಇದರಲ್ಲಿ ಬಳಕೆದಾರರು ನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ ಹಾಗೂ ಒಟ್ಟಾರೆ 168GB ಡೇಟಾವನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಅಂದರೆ, ಈ ಪ್ಲ್ಯಾನ್‌ನಲ್ಲೂ ಸಹ ಬಳಕೆದಾರರು ನಿತ್ಯವೂ 0.5GB ಡೇಟಾ ಬಳಕೆ ಮಾಡಬಹುದು. ಈ ಪ್ಲ್ಯಾನ್‌ನಲ್ಲೂ ಸಹ ಪ್ರತಿ ಸ್ಪರ್ಧಿಗಳಿಗಿಂತ 7 ಪಟ್ಟು ಹೆಚ್ಚು ಡೇಟಾವನ್ನು ನೀಡಲಾಗುತ್ತದೆ.

Best Mobiles in India

English summary
Jio has announced two 4G prepaid recharge plans with Jio Bharat Mobiles. These will give great benefits to the users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+