Home
ಸುದ್ದಿಜಾಲ

ಜಿಯೋದಿಂದ ಹೊಸ ರೋಮಿಂಗ್ ಪ್ಲ್ಯಾನ್‌ಗಳ ಬಿಡುಗಡೆ; ಬೆಲೆ ಮಾಹಿತಿ ಇಲ್ಲಿದೆ!

ಭಾರತೀಯ ಟೆಲಿಕಾಂ ಕ್ಷೇತ್ರದ ಪ್ರಮುಖ ಕಂಪನಿ ರಿಲಯನ್ಸ್‌ ಜಿಯೋ ಹಲವು ಆಕರ್ಷಕ ಪ್ಲ್ಯಾನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಸಂಸ್ಥೆಯು ಹೊಸ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್ ಪರಿಚಯಿಸಿದೆ. ಯುಎಇ, ಥಾಯ್ಲೆಂಡ್, ಕೆ‌ನಡಾ, ಸೌದಿ ಅರೇಬಿಯಾ, ಯುರೋಪ್ ಮತ್ತು ಕೆರಿಬಿಯನ್ ದ್ವೀಪಗಳಿಗೆ ಪ್ರಯಾಣ ಮಾಡುವವರಿಗಾಗಿ ಹೆಚ್ಚಿನ ಡೇಟಾ, ಅಧಿಕ ಮೌಲ್ಯ ಮತ್ತು ಅಧಿಕ ವ್ಯಾಲಿಡಿಟಿಯ ಅಂತರರಾಷ್ಟ್ರೀಯ ಪ್ಯಾಕ್‌ಗಳನ್ನು ಘೋಷಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಕೆನಡಾ

- ಜಿಯೋದ 1,691ರೂ. ಯೋಜನೆಯಲ್ಲಿ, ಬಳಕೆದಾರರು ಗರಿಷ್ಠ 14 ದಿನಗಳ ವ್ಯಾಲಿಡಿಟಿ ಸಿಗಲಿದೆ. 100 ನಿಮಿಷಗಳ ಕಾಲ ಕರೆ ಮಾಡುವ ಸೌಲಭ್ಯವೂ ದೊರೆಯಲಿದೆ. ಇದಲ್ಲದೇ, 50 ಎಸ್‌ಎಂಎಸ್ ಸೌಲಭ್ಯ ಮತ್ತು 5ಜಿಬಿ ಡೇಟಾ ಲಭ್ಯವಿರುತ್ತದೆ.

ಜಿಯೋದಿಂದ ಹೊಸ ರೋಮಿಂಗ್ ಪ್ಲ್ಯಾನ್‌ಗಳ ಬಿಡುಗಡೆ; ಬೆಲೆ ಮಾಹಿತಿ ಇಲ್ಲಿದೆ!

- ಜಿಯೋದ 2,881ರೂ. ಯೋಜನೆಯು 150 ನಿಮಿಷಗಳ ಕರೆ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯು 30 ದಿನಗಳ ಮಾನ್ಯತೆ ಹೊಂದಿದೆ. ಅಲ್ಲದೆ 100 ಉಚಿತ ಎಸ್ಎಂಎಸ್ ಮತ್ತು 10ಜಿಬಿ ಡೇಟಾ ಸಿಗುತ್ತದೆ.

ಯುಎಇ

- ಜಿಯೋದ 898ರೂ. ಯೋಜನೆಯಲ್ಲಿ 7 ದಿನಗಳ ವ್ಯಾಲಿಡಿಟಿ ಇದ್ದು, ಬಳಕೆದಾರರು 100 ನಿಮಿಷಗಳ ಒಳಬರುವ ಕರೆ ಮತ್ತು 100 ನಿಮಿಷಗಳ ಹೊರಹೋಗುವ ಕರೆಗಳ ಸೌಲಭ್ಯವನ್ನು ಪಡೆಯುತ್ತಾರೆ. ಅಲ್ಲದೆ, 100 ಎಸ್‌ಎಂಎಸ್ ಜೊತೆಗೆ 1ಜಿಬಿ ಡೇಟಾ ನೀಡಲಾಗಿದೆ.

- ಜಿಯೋದ 1,598ರೂ. ಯೋಜನೆಯು 14 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ 150 ನಿಮಿಷಗಳ ಹೊರಹೋಗುವ ಮತ್ತು ಒಳಬರುವ ಕರೆ ಸೌಲಭ್ಯ, 100 ಎಸ್‌ಎಂ‌ಎಸ್ ನೀಡಲಾಗುವುದು. ಇದಲ್ಲದೆ, ಈ ಯೋಜನೆಯಲ್ಲಿ 3ಜಿಬಿ ಡೇಟಾವನ್ನು ಸಿಗಲಿದೆ.

- ಜಿಯೋದ 2,998ರೂ. ರೋಮಿಂಗ್ ಯೋಜನೆಯಲ್ಲಿ 21 ದಿನಗಳ ವ್ಯಾಲಿಡಿಟಿ, 250 ನಿಮಿಷಗಳ ಕರೆ ಸೌಲಭ್ಯ ಹೊಂದಿದೆ. 7ಜಿಬಿ ಡೇಟಾ, 100 ಎಸ್ಎಂಎಸ್ ನೀಡಲಾಗಿದೆ.

ಕೆರಿಬಿಯನ್ ಪ್ಯಾಕ್

- ಜಿಯೋದ 1,671ರೂ. ಯೋಜನೆಯು 14 ದಿನಗಳ ಮಾನ್ಯತೆ ಹೊಂದಿದೆ. ಇದರಲ್ಲಿ 150 ನಿಮಿಷಗಳ ಹೊರಹೋಗುವ ಮತ್ತು 50 ನಿಮಿಷಗಳ ಒಳಬರುವ ಕರೆ ಸೌಲಭ್ಯ ಲಭ್ಯವಿರುತ್ತದೆ. 50 ಎಸ್‌ಎಂ‌ಎಸ್ ಮತ್ತು 1ಜಿಬಿ ಡೇಟಾ ಸಿಗುತ್ತದೆ.

- ಜಿಯೋದ 3,851ರೂ. ಯೋಜನೆಯು 30 ದಿನಗಳ ಮಾನ್ಯತೆ ಹೊಂದಿದ್ದು, 200 ನಿಮಿಷಗಳ ಹೊರಹೋಗುವ ಮತ್ತು 50 ನಿಮಿಷಗಳ ಒಳಬರುವ ಕರೆ ಸೌಲಭ್ಯದೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ 4ಜಿಬಿ ಡೇಟಾ ಮತ್ತು 100 ಎಸ್‌ಎಂ‌ಎಸ್ ಸೌಲಭ್ಯ ಸಿಗುತ್ತದೆ .

ಥಾಯ್ಲೆಂಡ್

- ಜಿಯೋದ 1,551ರೂ. ಯೋಜನೆಯು 14 ದಿನಗಳ ಮಾನ್ಯತೆ ಹೊಂದಿದೆ. ಇದರಲ್ಲಿ 100 ನಿಮಿಷಗಳ ಕರೆಯೊಂದಿಗೆ 50 ಎಸ್‌ಎಂ‌ಎಸ್ ಮತ್ತು 6ಜಿಬಿ ಡೇಟಾ ನೀಡಲಾಗುತ್ತಿದೆ.

- ಜಿಯೋದ 2,851ರೂ. ಯೋಜನೆಯು 30 ದಿನಗಳ ಮಾನ್ಯತೆ ಹೊಂದಿದೆ. ಈ ಯೋಜನೆಯಲ್ಲಿ 150 ನಿಮಿಷಗಳ ಕರೆ, 12ಜಿಬಿ ಡೇಟಾ ಮತ್ತು 100 ಎಸ್‌ಎಂ‌ಎಸ್ ಸಿಗುತ್ತದೆ.

ಸೌದಿ ಅರೇಬಿಯಾ

- ಜಿಯೋದ 891ರೂ. ಪ್ಲಾನ್ 7 ದಿನಗಳ ವ್ಯಾಲಿಡಿಟಿ, 100 ನಿಮಿಷಗಳ ಕರೆಯೊಂದಿಗೆ ಬರುತ್ತದೆ. ಇದರಲ್ಲಿ 20 ಎಸ್‌ಎಂ‌ಎಸ್ ಮತ್ತು 1ಜಿಬಿ ಡೇಟಾ ನೀಡಲಾಗಿದೆ‌.

- ಜಿಯೋದ 1,291ರೂ. ಯೋಜನೆಯಲ್ಲಿ 14 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ. 100 ನಿಮಿಷಗಳ ಕರೆ, 50 ಸಂದೇಶಗಳು ಮತ್ತು 2ಜಿಬಿ ಡೇಟಾ ಲಭ್ಯವಿದೆ.

- ಜಿಯೋದ 2,891ರೂ. ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ 150 ನಿಮಿಷಗಳ ಕರೆ, 5ಜಿಬಿ ಡೇಟಾ ಮತ್ತು 100 ಎಸ್ಎಂ‌ಎಸ್ ಸೌಲಭ್ಯ ಲಭ್ಯವಿದೆ.

ಯುರೋಪ್ ಪ್ಯಾಕ್

- ಜಿಯೋದ 2,899ರೂ. ಯೋಜನೆಯು 30 ದಿನಗಳ ವ್ಯಾಲಿಡಿಟಿ ಹೊಂದಿದ್ದು, 100 ನಿಮಿಷಗಳ ಹೊರಹೋಗುವ ಮತ್ತು ಒಳ ಬರುವ ಕರೆ ಸೌಲಭ್ಯ ಒಳಗೊಂಡಿದೆ. ಅಲ್ಲದೆ 100 ಎಸ್‌ಎಂ‌ಎಸ್ ಮತ್ತು 5 ಜಿಬಿ ಡೇಟಾ ಲಭ್ಯ.

Best Mobiles in India

English summary
Jio announces new International Roaming Plans. check roaming plans benefits and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+