ಗ್ರಾಹಕರಿಗೆ ಗುಡ್‌ನ್ಯೂಸ್!..ಹೊಸ ವರ್ಷಕ್ಕೆ ಜಿಯೋದಿಂದ ಭರ್ಜರಿ ಗಿಫ್ಟ್!..ಬೆಸ್ಟ್ ಚಾನ್ಸ್..
ರಿಲಯನ್ಸ್ ಜಿಯೋ ಸಂಸ್ಥೆಯು ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಲು ತನ್ನ ಚಂದಾದಾರರಿಗೆ ನ್ಯೂ ಇಯರ್ ವೆಲ್‌ಕಮ್ ಪ್ಲಾನ್ - 2025 () ಬಿಡುಗಡೆ ಮಾಡಿದೆ. ಈ ರೀಚಾರ್ಜ್ ಯೋಜನೆಯ 2025ರೂ. ಗಳಿಗೆ ನಿಗದಿ ಮಾಡಲಾಗಿದೆ. ಅಂದಹಾಗೆ ಈ ಪ್ಲ್ಯಾನ್ ದೀರ್ಘಾವಧಿಯ ಪ್ರೀಪೇಯ್ಡ್ ಯೋಜನೆ ಆಗಿದ್ದು, ಅನಿಯಮಿತ 5G ಡೇಟಾ, ಉಚಿತ ಎಸ್‌ಎಂಎಸ್ ಪ್ರಯೋಜನ ಇನ್ನು ಹೆಚ್ಚಿನ ಕೊಡುಗೆ ಪಡೆದಿದೆ.
ಹೌದು, ಜಿಯೋ ಟೆಲಿಕಾಂ ನೂತನ ವರ್ಷದ ಸ್ವಾಗತಕ್ಕಾಗಿ 2025 ರೂ. ಬೆಲೆಯ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಅನಿಯಮಿತ 5G ಡೇಟಾ, ಉಚಿತ ಎಸ್‌ಎಂಎಸ್ ಪ್ರಯೋಜನ ಸೇರಿದಂತೆ 200 ದಿನಗಳ ಅನಿಯಮಿತ 5G ಡೇಟಾ, ವಾಯ್ಸ್, ಎಸ್‌ಎಂಎಸ್ ಇದರೊಂದಿಗೆ 2,150ರೂ. ಮೌಲ್ಯದ ಕೂಪನ್ ಕೊಡುಗೆಗಳು ಸಹ ಗ್ರಾಹಕರಿಗೆ ಸಿಗಲಿದೆ.

ಯಾರಿಗೆ ಈ ಕೊಡುಗೆ ಲಭ್ಯ
ರಿಲಯನ್ಸ್ ಜಿಯೋ ಟೆಲಿಕಾಂನ ಈ ಹೊಸ ಯೋಜನೆಯು ಜಿಯೋದ ಹಾಲಿ ಚಂದಾದಾರರು ಸೇರಿದಂತೆ ನೂತನ ಗ್ರಾಹಕರಿಗೂ ಲಭ್ಯ. 2024 ರ ಡಿಸೆಂಬರ್ 11 ರಿಂದ 2025 ರ ಜನವರಿ 11 ರ ವರೆಗೆ ಈ ರೀಚಾರ್ಜ್ ಯೋಜನೆ ಚಾಲ್ತಿ ಇರಲಿದೆ. ಇನ್ನು ಗ್ರಾಹಕರು ಈ ಯೋಜನೆಯನ್ನು ಮೈ ಜಿಯೋ ಆಪ್ ಮೂಲಕ ಅಥವಾ ಜಿಯೋದ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ಅಧಿಕೃತ ರಿಟೇಲರ್ ಮೂಲಕ ರೀಚಾರ್ಜ್ ಮಾಡಬಹುದು.
ಪ್ಲ್ಯಾನಿನ ವಿವರ ಹೀಗಿದೆ
* ಇದು ಅನಿಯಮಿತ 5G ಡೇಟಾ ಸೌಲಭ್ಯ ಪಡೆದಿದೆ
* 500 GB ಯಷ್ಟು 4G ಡೇಟಾ (ಪ್ರತಿದಿನ 2.5 GB)
* ಅನಿಯಮಿತ ವಾಯಿಸ್ ಕರೆ ಹಾಗೂ ಉಚಿತ ಎಸ್‌ಎಂಎಸ್ ಸೇವೆ
* ಅಲ್ಲದೇ 2,150 ರೂ. ಮೌಲ್ಯದ ಪಾರ್ಟ್ನರ್ ಕೂಪನ್ ಕೊಡುಗೆ ಸಹ ಲಭ್ಯ
* ಜಿಯೋ ಟೆಲಿಕಾಂನ 349 ರೂ. ಪ್ಲಾನ್ 200 ದಿನಗಳಿಗೆ 2,493 ರೂ. ಗಳಷ್ಟು ಆಗುತ್ತದೆ. ಇದಕ್ಕೆ ಹೋಲಿಸಿದರೆ ಈ ನೂತನ ಪ್ಲಾನ್‌ನಲ್ಲಿ ಗ್ರಾಹಕರಿಗೆ 468 ರೂ. ಗಳಷ್ಟು ಉಳಿತಾಯ ಆಗಲಿದೆ.
ಪಾರ್ಟ್ನರ್ ಕೂಪನ್ ಕೊಡುಗೆಯ ಮಾಹಿತಿ
* ಅಜಿಯೋ ಖರೀದಿಗೆ 2500 ರೂ ಅಥವಾ ಅಧಿಕ ಮೊತ್ತದ ಖರೀದಿಸಿದರೆ 500 ರೂ. ಗಳ ವಿನಾಯಿತಿ ಲಭ್ಯ ಆಗಲಿದೆ. ಗ್ರಾಹಕರು ಲಿಂಕ್ ಬಳಸಿ ರಿಡೀಮ್ ಮಾಡಬಹುದು.
* ಹಾಗೆಯೇ ಸ್ವಿಗ್ಗಿಯಲ್ಲಿ 499 ರೂ. ಮೇಲಿನ ಖರೀದಿಗೆ 150 ರೂ. ಗಳ ವಿನಾಯಿತಿ ದೊರೆಯಲಿದೆ.
* EaseMyTrip.com ಮೊಬೈಲ್ ಆಪ್ ಹಾಗೂ ವೆಬ್‌ಸೈಟ್ ಮೂಲಕ ಫ್ಲೈಟ್ ಟಿಕೆಟ್ ಬುಕಿಂಗ್ ಮಾಡಿದರೆ 150 ರೂ. ಗಳ ವಿನಾಯಿತಿ.


Click it and Unblock the Notifications








