ಜಿಯೋ ಗ್ರಾಹಕರಿಗೆ ಗುಡ್‌ನ್ಯೂಸ್; ಬಜೆಟ್ ಬೆಲೆಗೆ ಹೊಸ ಆಲ್-ಇನ್-ಒನ್ ಪ್ಯಾಕ್!
ಅಗ್ಗದ ಪ್ರೀಪೇಡ್ ಪ್ಲ್ಯಾನ್‌ಗಳಲ್ಲಿ ಹೆಚ್ಚಿನ ಪ್ರಯೋಜನ ನೀಡಿ ಬಳಕೆದಾರರ ಗಮನ ಸೆಳೆದಿರುವ ಜಿಯೋ, ಆಲ್-ಇನ್-ಒನ್ ಪ್ರೀಪೇಡ್ ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಇದೀಗ ಜಿಯೋ ತನ್ನ ಜಿಯೋ ಫೋನ್ ಬಳಕೆದಾರರಿಗೆ ಮೂರು ನೂತನ ಆಲ್ ಇನ್ ಒನ್ ಪ್ಯಾಕ್ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದು, ಯೋಜನೆಗಳಲ್ಲಿ ಆಕರ್ಷಕ ಪ್ರಯೋಜನಗಳನ್ನು ನೀಡಿದೆ.

ಹೌದು, ಜಿಯೋ ಟೆಲಿಕಾಂ ಜಿಯೋ ಫೋನ್ ಬಳಕೆದಾರರಿಗಾಗಿ ಮೂರು ನೂತನ ಆಲ್ ಇನ್ ಒನ್ ಪ್ಯಾಕ್ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಜಿಯೋ ಈಗಾಗಲೇ ಆಲ್ ಇನ್ ಪ್ಲ್ಯಾನ್ ಆಯ್ಕೆಗಳನ್ನು ಹೊಂದಿದ್ದು, ಆದರೆ ಈ ನೂತನ ಯೋಜನೆಗಳು ವಾರ್ಷಿಕ ವ್ಯಾಲಿಡಿಟಿಯ ಸೌಲಭ್ಯ ಪಡೆದಿವೆ. ಹಾಗೂ ಡೇಟಾ ಪ್ರಯೋಜನಗಳನ್ನು ಒಳಗೊಂಡಿರುವುದು ಜಿಯೋ ಫೋನ್ ಬಳಕೆದಾರರಿಗೆ ಆಕರ್ಷಕ ಅನಿಸಲಿದೆ. ಜಿಯೋದ ಹೊಸ ಆಲ್ ಇನ್ ಪ್ಯಾಕ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ 1001ರೂ. ಆಲ್-ಇನ್-ಒನ್ ಪ್ಯಾಕ್
ಜಿಯೋ 1001ರೂ. ಆಲ್-ಇನ್-ಒನ್ ಪ್ಯಾಕ್ ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 49GB ಡೇಟಾ ಲಭ್ಯವಾಗಲಿದ್ದು, ದಿನದ ಡೇಟಾ ಲಿಮಿಟ್ 150MB ಆಗಿದೆ. ಇನ್ನು ಇದರೊಂದಿಗೆ ಜಿಯೋ-ಟು-ಜಿಯೋ ಅನಿಯಮಿತ ವಾಯಿಸ್ ಕರೆ ಹಾಗೂ ಇತರೆ ನೆಟವರ್ಕ್ ಕರೆಗಳಿಗೆ 12000 ನಿಮಿಷಗಳ ಮಿತಿ ಇದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಲಭ್ಯವಾಗಲಿವೆ.

ಜಿಯೋ 1,301ರೂ. ಆಲ್-ಇನ್-ಒನ್ ಪ್ಯಾಕ್
ಜಿಯೋ 1,301ರೂ. ಆಲ್-ಇನ್-ಒನ್ ಪ್ಯಾಕ್ ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 164GB 4G ಡೇಟಾ ಲಭ್ಯವಾಗಲಿದ್ದು, 500MB ದಿನದ ಡೇಟಾ ಮಿತಿ ನೀಡಿದೆ. ಇನ್ನು ಇದರೊಂದಿಗೆ ಜಿಯೋ-ಟು-ಜಿಯೋ ಅನಿಯಮಿತ ವಾಯಿಸ್ ಕರೆ ಹಾಗೂ ಇತರೆ ನೆಟವರ್ಕ್ ಕರೆಗಳಿಗೆ 12000 ನಿಮಿಷಗಳ ಮಿತಿ ಇದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಲಭ್ಯವಾಗಲಿವೆ.

ಜಿಯೋ 1,501ರೂ. ಆಲ್-ಇನ್-ಒನ್ ಪ್ಯಾಕ್
ಜಿಯೋ 1,501ರೂ. ಆಲ್-ಇನ್-ಒನ್ ಪ್ಯಾಕ್ ಸಹ ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 504GB 4G ಡೇಟಾ ಲಭ್ಯವಾಗಲಿದ್ದು, 1.5GB ದಿನದ ಡೇಟಾ ಮಿತಿ ನೀಡಿದೆ. ಇನ್ನು ಇದರೊಂದಿಗೆ ಜಿಯೋ-ಟು-ಜಿಯೋ ಅನಿಯಮಿತ ವಾಯಿಸ್ ಕರೆ ಹಾಗೂ ಇತರೆ ನೆಟವರ್ಕ್ ಕರೆಗಳಿಗೆ 12000 ನಿಮಿಷಗಳ ಮಿತಿ ಇದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಲಭ್ಯವಾಗಲಿವೆ.


Click it and Unblock the Notifications








