Home
ಸುದ್ದಿಜಾಲ

ಜಿಯೋದ ಈ ಅಗ್ಗದ ಮೊಬೈಲ್‌ ಬೆಲೆಯಲ್ಲಿ ಭರ್ಜರಿ ಇಳಿಕೆ; ವಾವ್‌ ಎನಿಸುವ ಆಫರ್‌!

ಅಮೆಜಾನ್‌ ಇ ಕಾಮರ್ಸ್‌ ತಾಣವು ಆನ್‌ಲೈನ್‌ ಶಾಪಿಂಗ್‌ ಪ್ರಿಯರ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಒಂದಿಲ್ಲೊಂದು ಸೇಲ್‌ ಮೇಳ ಆಯೋಜಿಸುವ ಮೂಲಕ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಗ್ರಾಹಕರನ್ನು ಸೆಳೆದಿದೆ. ಇದೀಗ ಅಮೆಜಾನ್‌ ಜಿಯೋ ಸೆಕೆಂಡ್‌ ಮೊಬೈಲ್‌ ಡೇಸ್‌ ಸೇಲ್ ಮೇಳ ಆಯೋಜಿಸಿದ್ದು, ಈ ಮಾರಾಟದಲ್ಲಿ ಜಿಯೋದ ಫೀಚರ್‌ ಫೋನಿಗೆ ಸಖತ್ ಡಿಸ್ಕೌಂಟ್‌ ಲಭ್ಯ ಮಾಡಿದೆ. ಅಂದಹಾಗೆ ಈ ಜಿಯೋ ಸೆಕೆಂಡ್‌ ಮೊಬೈಲ್‌ ಡೇಸ್‌ ಸೇಲ್ ಇದೇ ಜೂನ್‌ 6 ರಿಂದ ಪ್ರಾರಂಭವಾಗಿ ಜೂನ್ 10 ರ ವರೆಗೂ ಚಾಲ್ತಿ ಇರಲಿದೆ.

ಹೌದು, ಅಮೆಜಾನ್‌ ವೆಬ್‌ಸೈಟ್‌ನಲ್ಲಿ ನಾಳೆಯಿಂದ ಜಿಯೋ ಸೆಕೆಂಡ್‌ ಮೊಬೈಲ್‌ ಡೇಸ್‌ ಸೇಲ್ ಮಾರಾಟ ಶುರುವಾಗಲಿದ್ದು, ಇದು ಜೂನ್ 10 ರ ವರೆಗೂ ಚಾಲ್ತಿ ಇರಲಿದೆ. ಈ ಸೇಲ್‌ನಲ್ಲಿ ಜಿಯೋ ಕಂಪನಿಯ ಜಿಯೋ ಭಾರತ್ B1 4G (Jio Bharat B1 4G) ಫೋನ್‌ ಶೇ. 50% ರಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಹೀಗಾಗಿ ಗ್ರಾಹಕರು ಈ ಫೋನ್‌ ಅನ್ನು 1,299ರೂ. ಗಳ ಆಫರ್‌ ದರದಲ್ಲಿ ಖರೀದಿಸಬಹುದು. ಇದರೊಂದಿಗೆ ಇಎಮ್‌ಐ ಸೌಲಭ್ಯ ಕೂಡಾ ದೊರೆಯುತ್ತದೆ.

ಜಿಯೋದ ಈ ಅಗ್ಗದ ಮೊಬೈಲ್‌ ಬೆಲೆಯಲ್ಲಿ ಭರ್ಜರಿ ಇಳಿಕೆ; ವಾವ್‌ ಎನಿಸುವ ಆಫರ್‌!

ಜಿಯೋ ಭಾರತ್ B1 4G ಫೋನ್‌ ಫೀಚರ್‌ ಕೀ ಪ್ಯಾಡ್‌ ಫೋನ್‌ ಆಗಿದ್ದು, ಇದು ಕೆಲವು ಜಿಯೋ ಅಪ್ಲಿಕೇಶನ್‌ಗಳನ್ನು ಪ್ರಿ ಇನ್‌ಸ್ಟಾಲ್‌ ಆಗಿ ಪಡೆದಿದೆ. ಅಲ್ಲದೇ ಇದು ತನ್ನ ವರ್ಗದಲ್ಲೇ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಜೊತೆಗೆ ಹಿಂಬದಿಯಲ್ಲಿ ಸಿಂಗಲ್ ಬೇಸಿಕ್ ಕ್ಯಾಮೆರಾ ರಚನೆ ಸಹ ಪಡೆದಿದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಭಾರತ್ B1 4G ಫೀಚರ್ಸ್ ಹೀಗಿವೆ

ಜಿಯೋ ಭಾರತ್ B1 4G ಮೊಬೈಲ್‌ ಇದು 2.4 ಇಂಚಿನ ಸ್ಕ್ರೀನ್ ಹೊಂದಿದ್ದು, ಇದರೊಂದಿಗೆ 2000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನ ಹೊಂದಿರುವ ಪ್ಲಸ್‌ ಪಾಯಿಂಟ್‌ ಎನಿಸಿದೆ. ಅಂದಹಾಗೆ ಇದು ಜಿಯೋದ ಮತ್ತೊಂದು ಬಜೆಟ್ ಫೋನ್ ಆಗಿದ್ದು, ಈ ಫೋನ್ ಅನ್ನು ಸ್ವಲ್ಪ ಉತ್ತಮವಾದ ವಿಭಾಗದಲ್ಲಿ ಕಾಣಿಸಿಕೊಂಡಿದೆ.

ಜಿಯೋ ಭಾರತ್ B1 4G ಮೊಬೈಲ್‌ ಈ ಹಿಂದಿನ ವೇರಿಯಂಟ್‌ಗಳಿಗೆ ಹೋಲಿಸಿದರೆ ಅದರ ಸ್ಕ್ರೀನ್‌ ಮತ್ತು ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯದಲ್ಲಿ ಕೆಲವು ಚಿಕ್ಕ ಪುಟ್ಟ ಅಪ್‌ಡೇಟ್‌ಗಳನ್ನು ಮಾತ್ರ ನೀಡುತ್ತದೆ ಮತ್ತು ಪ್ರಮುಖ ಬದಲಾವಣೆಗಳನ್ನು ಪರಿಚಯಿಸುವುದಿಲ್ಲ. ಇನ್ನು ಈ ಫೋನ್‌ನಲ್ಲಿ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಆದರೆ ಕ್ಯಾಮೆರಾ ಮೆಗಾಪಿಕ್ಸೆಲ್‌ಗಳ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಲಾಗಿಲ್ಲ.

ಜಿಯೋ ಭಾರತ್ B1 4G ಮೊಬೈಲ್‌ ಜಿಯೋ ಅಪ್ಲಿಕೇಶನ್‌ಗಳ ಪ್ರಿ ಇನ್‌ಸ್ಟಾಲ್‌ ಒಳಗೊಂಡಿದೆ. ಈ ಫೋನ್‌ನ ಬಳಕೆದಾರರು ಸಿನಿಮಾ, ವೀಡಿಯೊಗಳು ಹಾಗೂ ಕ್ರೀಡಾ ಹೈಲೈಟ್ಸ್‌ಗಳನ್ನು ಆನಂದಿಸಬಹುದು. ಇನ್ನು ಜಿಯೋ ಭಾರತ್ ಸರಣಿಯು 23 ಭಾಷೆಗಳನ್ನು ಸಪೋರ್ಟ್‌ ಮಾಡುತ್ತದೆ ಎಂದು ಹೇಳಲಾಗಿದೆ.

ಜಿಯೋ ಪ್ರಿ ಇನ್‌ಸ್ಟಾಲ್‌ ಅಪ್ಲಿಕೇಶನ್‌ಗಳನ್ನು ಫೋನ್‌ನೊಂದಿಗೆ ಸೇರ್ಪಡೆ ಮಾಡಲಾಗಿದೆ. ಅಲ್ಲದೇ ಜಿಯೋ ಹೊರತುಪಡಿಸಿ ಇತರ ಸಿಮ್‌ (SIM) ಕಾರ್ಡ್‌ಗಳನ್ನು ಈ ಜಿಯೋ ಭಾರತ್ ಮೊಬೈಲ್‌ನಲ್ಲಿ ಬಳಸಲು ಆಗುವುದಿಲ್ಲ. ಸದ್ಯ ಜಿಯೋ ಭಾರತ್ B1 4G ಫೋನ್ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ.

ಒಟ್ಟಾರೆಯಾಗಿ, ಜಿಯೋ ಭಾರತ್ B1 ಸರಣಿಯು 4G ಫೋನ್ ಆಗಿದ್ದು, ಸಂಸ್ಥೆಯ ಈ ಹಿಂದಿನ ಮಾಡೆಲ್‌ಗಳಿಗಿಂತ ಸ್ವಲ್ಪ ಬಿಗ್‌ ಸ್ಕ್ರೀನ್‌ ಮತ್ತು ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಸಹ ಹೊಂದಿದೆ. ಇನ್ನು ಜಿಯೋ ಸಂಸ್ಥೆಯ ಜಿಯೋ ಭಾರತ್ B1 4G ಫೀಚರ್ ಮೊಬೈಲ್‌ ಅಮೆಜಾನ್‌ನಲ್ಲಿ ಆಫರ್‌ ಪಡೆದಿದ್ದು, 1,299ರೂ. ಕೊಡುಗೆಯ ಪ್ರೈಸ್‌ಟ್ಯಾಗ್‌ ಅನ್ನು ಪಡೆದಿದೆ. ಹಾಗೆಯೇ ಈ ಫೋನ್‌ ಬ್ಲ್ಯಾಕ್‌ ಕಲರ್‌ ವೇರಿಯಂಟ್‌ನಲ್ಲಿ ಖರೀದಿಗೆ ಲಭ್ಯ ಆಗಲಿದೆ.

Best Mobiles in India

English summary
Jio Bharat B1 4G Received biggest Price Drop on Amazon jio second phone days sale. check offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+