ಇಂದು ಜಿಯೋದ ಈ ಅಗ್ಗದ ಫೋನ್ ಸೇಲ್ ಪ್ರಾರಂಭ!..ಬೆಲೆ ಎಷ್ಟು ಗಮನಿಸಿ!
ರಿಲಯನ್ಸ್ ಜಿಯೋ ಇತ್ತೀಚಿಗೆ ಜಿಯೋ ಭಾರತ್ ಫೋನ್ ಅನ್ನು ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬರನ್ನು ಡಿಜಿಟಲ್ ಸೇವೆಗಳೊಂದಿಗೆ ವಿಶೇಷವಾಗಿ ಸ್ಮಾರ್ಟ್‌ಫೋನ್ ಖರೀದಿಸಲು ಸಾಧ್ಯವಾಗದವರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಫೋನ್ ಪ್ರವೇಶಿಸಿದೆ. ಇಂದು ಈ ಫೋನಿನ ಮಾರಾಟ ಪ್ರಾರಂಭವಾಗಲಿದೆ.
ಹೌದು, ರಿಲಯನ್ಸ್ ಜಿಯೋ ಸಂಸ್ಥೆಯ ಜಿಯೋ ಭಾರತ್ ಫೋನ್ ಇಂದು (ಆಗಸ್ಟ್ 28) ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಾಗಲಿದೆ. ಅಂದಹಾಗೆ ಈ ಫೋನ್ ಅನ್ನು ದೆಹಲಿ ಮೂಲದ ಕಾರ್ಬನ್ ಮೊಬೈಲ್ಸ್ ತಯಾರಿಸುತ್ತದೆ. ಜಿಯೋ ಭಾರತ್ ಫೋನ್‌ನ ಬೆಲೆ 999ರೂ. ಗಳು ಆಗಿದೆ.

ಇನ್ನು ಈ ಫೋನ್ 1000mah ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಜೊತೆಗೆ 23 ಭಾರತೀಯ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಹಾಗೆಯೇ ಇದು ಫೋನ್ HD ಕರೆ, UPI ಪಾವತಿ, ಜಿಯೋ ಸಿನಿಮಾದಂತಹ OTT ಸೇವೆಗಳ ಸೌಲಭ್ಯವನ್ನು ಪಡೆದುಕೊಂಡಿದೆ. ಹಾಗಾದರೆ ಜಿಯೋ ಭಾರತ್ ಫೋನ್ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಜಿಯೋ ಭಾರತ್ ಫೋನ್ ಫೀಚರ್ಸ್ :
ಜಿಯೋ ಭಾರತ್ ಫೋನ್ 1.77 ಇಂಚಿನ QVGA TFT ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಫೋನ್ HD ಕರೆ, UPI ಪಾವತಿ, ಜಿಯೋ ಸಿನಿಮಾದಂತಹ OTT ಸೇವೆಗಳಿಗೆ ಆಕ್ಸಸ್ ಪಡೆದಿದ್ದು, ಜೊತೆಗೆ ಅಧಿಕ ಫೀಚರ್ಸ್‌ಗಳನ್ನು ಸಪೋರ್ಟ್ ಮಾಡುತ್ತದೆ. ಜಿಯೋ ಭಾರತ್ ಫೋನ್ ಭೌತಿಕ ಕೀಪ್ಯಾಡ್ ಮತ್ತು ಕ್ಲಾಸಿಕ್ ಬ್ಲ್ಯಾಕ್ ಬಣ್ಣವನ್ನು ಹೊಂದಿರುವ ವಿಶಿಷ್ಟ ಫೀಚರ್ಸ್‌ನ ಫೋನ್‌ನಂತೆ ಕಾಣುತ್ತದೆ.
ಜಿಯೋ ಭಾರತ್ ಫೋನ್ ತೆಗೆಯಬಹುದಾದ 1000 mah ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 24 ಗಂಟೆಗಳವರೆಗೆ ಬ್ಯಾಕ್‌ಅಪ್ ನೀಡುತ್ತದೆ. ಇನ್ನು ಇಯರ್‌ಫೋನ್‌ಗಳನ್ನು ಕನೆಕ್ಟ್ ಮಾಡಲು 3.5 ಎಂಎಂ ಆಡಿಯೊ ಫೋನ್ ಜ್ಯಾಕ್, ಫೋಟೋಗಳನ್ನು ಕ್ಲಿಕ್ ಮಾಡಲು 0.3 ಎಂಪಿ ಕ್ಯಾಮೆರಾ ಫೀಚರ್, ಟಾರ್ಚ್ ಲೈಟ್, ಎಫ್‌ಎಂ ರೇಡಿಯೋ ಮತ್ತು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಬಹುದಾದ ಆಯ್ಕೆ ಸಹ ಇದೆ.
ಈ ಹಿಂದಿನ ಜಿಯೋ ಫೋನ್‌ಗಳಂತೆ ನೂತನ ಜಿಯೋ ಭಾರತ್ ಕೂಡ ಜಿಯೋ ಸಿಮ್ ಲಾಕ್ ಆಗಿರುವ ಫೋನ್ ಪಡೆದಿದ್ದು, ಬಳಸುವ ಮೊದಲು ಬಳಕೆದಾರರು ಫೋನಿನಲ್ಲಿ ಜಿಯೋ ಸಿಮ್ ಕಾರ್ಡ್ ಅನ್ನು ಸೇರಿಸಬೇಕು. ಅಂದಹಾಗೆ ಈ ಫೋನ್ 23 ಭಾರತೀಯ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಈ ಫೋನ್ ಎರಡು ಸರಣಿಗಳಲ್ಲಿ ಲಭ್ಯವಿದ್ದು, ಅವುಗಳು ಕ್ರಮವಾಗಿ ಜಿಯೋಭಾರತ್ V2 ಮತ್ತು ಜಿಯೋಭಾರತ್ K1 ಕಾರ್ಬನ್ ಆಗಿವೆ.
ಈ ಎರಡು ವೇರಿಯಂಟ್ ಫೋನ್‌ಗಳು ಇನ್‌ಬಿಲ್ಟ್ ಜಿಯೋ ಅಪ್ಲಿಕೇಶನ್ ಪಡೆದಿವೆ. ಇದರ ಜೊತೆಗೆ ಜಿಯೋ ಭಾರತ್ ಫೋನ್‌ನ ಪ್ರಮುಖ ಫೀಚರ್ಸ್‌ಗಳೆಂದರೆ 4G ಗಾಗಿ ಅದರ ಸಪೋರ್ಟ್, ಇದು ಜಿಯೋದ ವ್ಯಾಪಕವಾದ 4G ನೆಟ್‌ವರ್ಕ್‌ನಲ್ಲಿ ಸ್ಫಟಿಕ-ಸ್ಪಷ್ಟ ವಾಯಿಸ್ ಕರೆಗಳನ್ನು ಮಾಡಲು ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತದೆ.
ಜಿಯೋ ಭಾರತ್ ರೀಚಾರ್ಜ್ ಪ್ಲ್ಯಾನ್‌ಗಳ ಮಾಹಿತಿ ಇಲ್ಲಿದೆ :
ಜಿಯೋ 123 ರೂ.ಗಳ ರೀಚಾರ್ಜ್ ಅನ್ನು ಜಿಯೋ ಭಾರತ್‌ಗಾಗಿ ಸ್ಪೆಷಲ್ ಪ್ಲ್ಯಾನ್ ಪ್ರಾರಂಭಿಸಿದೆ. ಈ ಪ್ಲ್ಯಾನಿನಲ್ಲಿ ಬಳಕೆದಾರರಿಗೆ 14 GB ಡೇಟಾ ಸೌಲಭ್ಯ (ದಿನಕ್ಕೆ 0.5GB ಡೇಟಾ) ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್ ಪ್ಲ್ಯಾನ್ ರೀಚಾರ್ಜ್ ಮಾಡಿದ ದಿನಾಂಕದಿಂದ 28 ದಿನಗಳವರೆಗೆ ವ್ಯಾಲಿಡಿಟಿ ಪಡೆದಿರುತ್ತದೆ.
ಹಾಗೆಯೇ 1234 ರೂ.ಗಳ ರೀಚಾರ್ಜ್ ಆಯ್ಕೆ ಇದ್ದು, ಈ ಯೋಜನೆಯು ವಾರ್ಷಿಕ ರೀಚಾರ್ಜ್ ಪ್ಲ್ಯಾನ್ ಆಗಿದೆ. ಈ ಯೋಜನೆಯಲ್ಲಿ ಬಳಕೆದಾರರು ಒಂದು ವರ್ಷಕ್ಕೆ ಒಟ್ಟು 168GB ಡೇಟಾ ಪ್ರಯೋಜನ ಪಡೆಯುತ್ತಾರೆ. ಇದರ ಜೊತೆಗೆ ಅನಿಯಮಿತ ಧ್ವನಿ ಕರೆ ಸೌಲಭ್ಯ ಕೂಡಾ ಸಿಗುತ್ತದೆ.


Click it and Unblock the Notifications








