jio: ಭಾರತದಲ್ಲಿ ಭರ್ಜರಿಯಾಗಿ ಸದ್ದು ಮಾಡಲು ಸಜ್ಜಾಗುತ್ತಿದೆ ಜಿಯೋ ಭಾರತ್ B2!
ಜಿಯೋ (Jio) ಕೇವಲ ಟೆಲಿಕಾಂ ವಲಯದಲ್ಲಿ ಮಾತ್ರ ಅಗ್ರಸ್ಥಾನದಲ್ಲಿ ಇಲ್ಲ. ಬದಲಾಗಿ ಇತರೆ ಸ್ಮಾರ್ಟ್‌ಗ್ಯಾಜೆಟ್‌ಗಳಲ್ಲೂ ತನ್ನ ಪ್ರಾಬಲ್ಯ ಸಾಧಿಸಿದೆ. ಈಗಾಗಲೇ ಜಿಯೋ ವಿಶೇಷ ಫೀಚರ್ಸ್ ಆಯ್ಕೆ ಇರುವ ಫೀಚರ್ ಫೋನ್‌ಗಳನ್ನು ಅಗ್ಗದ ಬೆಲೆಗೆ ಲಾಂಚ್ ಮಾಡಿದ್ದು, ಈ ಸಾಲಿಗೆ ಮತ್ತೊಂದು ಫೋನ್ ಎಂಟ್ರಿಕೊಡಲಿದೆ.
ಹೌದು, ಈಗಾಗಲೇ ಭಾರತದಲ್ಲಿ ರಿಲಯನ್ಸ್ ಜಿಯೋದ 4G ಫೀಚರ್ (Jio bharat 4G phone) ಫೋನ್‌ಗಳು ಸಾಕಷ್ಟು ಜನಪ್ರಿಯವಾಗಿದೆ. ಮುಖೇಶ್ ಅಂಬಾನಿ ಅವರು ಈ ಫೋನ್‌ಗಳನ್ನು ಜಿಯೋ ಫೋನ್ ಮೂಲಕ ಆರಂಭಿಸಿದ್ದಾರೆ. ಅಲ್ಲದೆ ಈ ಫೋನ್ ಮಾರಾಟದಲ್ಲಿ ಜಿಯೋ ಸಹ ದೊಡ್ಡ ದಾಖಲೆ ಸೃಷ್ಟಿ ಮಾಡಿಕೊಂಡಿದ್ದು, ಟೆಲಿಕಾಂ ವಲಯದಲ್ಲೂ ಹೆಚ್ಚಿನ ಗ್ರಾಹಕರನ್ನು ಸೆಳೆದಿತ್ತು. ಅದರಂತೆ ಈಗ ಮತ್ತೊಂದು ಹೊಸ ಫೀಚರ್ ಫೋನ್ ಲಾಂಚ್ ಮಾಡಲು ಮುಂದಾಗಿದೆ. ಹಾಗಿದ್ರೆ, ಈ ಫೋನ್ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.

ಜಿಯೋ ಭಾರತ್ B2: ಕಳೆದ ವರ್ಷ, ಕಂಪನಿಯು ತನ್ನ ಫೀಚರ್ ಫೋನ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದ್ದು, ಭಾರತದಲ್ಲಿ ಎರಡು ಹೊಸ ಮಾದರಿಗಳಾದ ಜಿಯೋ ಭಾರತ್ V2 ಮತ್ತು ಜಿಯೋ ಭಾರತ್ B1 (Jio Bharat V2 and Jio Bharat B1) ಅನ್ನು ಲಾಂಚ್ ಮಾಡಿತ್ತು. ಈಗ ಜಿಯೋದ ಮತ್ತೊಂದು ಹೊಸ ಫೋನ್ ಮಾದರಿಯ ಮಾಹಿತಿಯು ಮುನ್ನೆಲೆಗೆ ಬಂದಿದೆ. ಈ ಫೋನ್ ಅನ್ನು ಭಾರತೀಯ ಮಾನದಂಡಗಳ ವೆಬ್‌ಸೈಟ್ BIS ನಲ್ಲಿ ಮಾಡೆಲ್ ಸಂಖ್ಯೆ JBB121B1 ನೊಂದಿಗೆ ಪಟ್ಟಿ ಮಾಡಲಾಗಿದೆ.
ಗಮನಿಸಬೇಕಾದ ವಿಷಯ ಏನೆಂದರೆ ಈ ಫೋನ್ ಹೆಸರು ಅಥವಾ ಫೋನ್‌ನ ವಿಶೇಷತೆಗಳ ಕುರಿತು ಯಾವುದೇ ಮಾಹಿತಿಯನ್ನೂ ಇಲ್ಲಿ ಉಲ್ಲೇಖ ಮಾಡಿಲ್ಲ. ಇದಕ್ಕೂ ಮೊದಲು, ಜಿಯೋ JBV161W1 ಮತ್ತು JBV162W1ನ ಎರಡು ಫೋನ್‌ಗಳನ್ನು ಆಗಸ್ಟ್ 2023 ರಲ್ಲಿ BIS ನಲ್ಲಿ ಪಟ್ಟಿ ಮಾಡಲಾಗಿತ್ತು, ನಂತರ ಇದನ್ನು ಕಂಪನಿಯು ಭಾರತ್ V2 ಹೆಸರಿನಲ್ಲಿ ಬಿಡುಗಡೆ ಮಾಡಿದ್ದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.

ಕಳೆದ ವರ್ಷದ ನವೆಂಬರ್‌ನಲ್ಲಿ, ಎರಡು ಹೊಸ ಮಾದರಿಗಳಾದ JBV191M2 ಮತ್ತು JBV191M2 ಅನ್ನು BIS ನಲ್ಲಿ ಪಟ್ಟಿಮಾಡಲಾಗಿದೆಯಾದರೂ ಸಹ ಇವುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಈಗ ಹೊಸ ವರ್ಷದಲ್ಲಿ JBB121B1 ಅನ್ನು ಕಂಪನಿಯು ಪಟ್ಟಿ ಮಾಡಿದ್ದು, ಈ ಮಾಡೆಲ್ ಸಂಖ್ಯೆಯನ್ನು ಗಮನಿಸಿದ್ರೆ ಇದು 'B' ಸರಣಿಯ ಫೋನ್ ಆಗಿರಬಹುದು ಎಂದು ಊಹಿಸಬಹುದಾಗಿದೆ. ಅದರಂತೆ ಕಂಪನಿಯು ಭಾರತ್ B2 ಅನ್ನು ಲಾಂಚ್ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಂತೆ ತೋರುತ್ತಿದೆ.
ಭಾರತ್ B1 ಫೀಚರ್ ಫೋನ್ ವಿಶೇಷತೆ: ಕಳೆದ ವರ್ಷ ಕಂಪನಿಯು ಭಾರತ್ B1 ಅನ್ನು ಲಾಂಚ್ ಮಾಡಿದೆ. ಈ ಫೋನ್ ಪ್ರವೇಶ ಮಟ್ಟದ 4G ಫೀಚರ್ಸ್ ಅನ್ನು ಹೊಂದಿದ್ದು, ಇದಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ 1,299 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಜೊತೆಗೆ ಈ ಫೋನ್ 2.4 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಹೊಂದಿದ್ದು, ರಿಯರ್ ಪ್ಯಾನೆಲ್‌ನಲ್ಲಿ VGA ಕ್ಯಾಮೆರಾ ಆಯ್ಕೆ ಪಡೆದಿದೆ. ಇದರ ಜೊತೆಗೆ 2000 mAh ಬ್ಯಾಟರಿಯನ್ನು ಒದಗಿಸಿದೆ.

ಈ ಫೋನ್‌ನ ಪ್ರಮುಖ ವಿಶೇಷ ಏನೆಂದರೆ ಜಿಯೋಸಾವನ್ ಮತ್ತು ಜಿಯೋಸಿನಿಮಾ (Jiosaavn and Jio Cinema) ಜೊತೆಗೆ, ನೀವು ಕ್ಯೂಆರ್ ಸ್ಕ್ಯಾನರ್ ಆಧಾರಿತ ಯುಪಿಐ ಆಧಾರಿತ ಪಾವತಿ ಫೀಚರ್ಸ್ ಆಯ್ಕೆ ಪಡೆದಿದ್ದು, ಇದು ಕೆಲವೇ ಫೀಚರ್ ಫೋನ್‌ಗಳಲ್ಲಿ ಲಭ್ಯವಿದೆ. ಉಳಿದಂತೆ ಈ ಫೋನ್ ಟಾರ್ಚ್ ಲೈಟ್, ಎಫ್‌ಎಂ ರೇಡಿಯೋ ಮತ್ತು ಬ್ಲೂಟೂತ್‌ನಂತಹ ವಿಶೇಷ ಫೀಚರ್ಸ್ ಆಯ್ಕೆ ಪಡೆದಿದೆ.


Click it and Unblock the Notifications








