ಜಿಯೋದ ಈ ಪ್ಲ್ಯಾನ್ ತಿಂಗಳ ಶುಲ್ಕ 123ರೂ. ಮಾತ್ರ!..ವಾಯಿಸ್ ಕರೆ ಮತ್ತು ಡೇಟಾ ಲಭ್ಯ!
ರಿಲಯನ್ಸ್ ಜಿಯೋ ಟೆಲಿಕಾಂ ಇತ್ತೀಚಿಗಷ್ಟೆ 999ರೂ. ಗಳಿಗೆ ಇಂಟರ್ನೆಟ್ ಬೆಂಬಲಿತ ಫೋನ್ ಲಾಂಚ್ ಮಾಡಿದ್ದು, ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದುವೇ ಜಿಯೋ ಭಾರತ್ ಫೋನ್ ಆಗಿದ್ದು, ಈ ಫೋನ್ UPI ಪೇಮೆಂಟ್ ಆಯ್ಕೆ ಅನ್ನು ಪಡೆದುಕೊಂಡಿದೆ. ಹಾಗೆಯೇ ಜಿಯೋ ಒಂದು ಅಗ್ಗದ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿ ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ.
ಹೌದು, ಜಿಯೋ ಸಂಸ್ಥೆಯು 2G ಮುಕ್ತ ಭಾರತ ಉದ್ದೇಶದಿಂದ ಹೊಸದಾಗಿ ಜಿಯೋ ಭಾರತ್ 4G ಮೊಬೈಲ್ ಲಾಂಚ್ ಮಾಡಿದೆ. ಹಾಗೆಯೇ ತನ್ನ ಜಿಯೋ ಭಾರತ್ ಫೋನಿಗಾಗಿ ತಿಂಗಳಿಗೆ 123ರೂ. ಗಳ ಅಗ್ಗದ ಯೋಜನೆ ನೀಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ 14GB ಡೇಟಾ ಪ್ರಯೋಜನ ಸಹ ಲಭ್ಯವಾಗಲಿದೆ.

ಜಿಯೋ ಭಾರತ್ 123ರೂ. ಪ್ಲ್ಯಾನ್ : ಜಿಯೋ ಸಂಸ್ಥೆಯ ಈ ಜಿಯೋ ಭಾರತ್ 123ರೂ. ಯೋಜನೆಯು ಅನಿಯಮಿತ ವಾಯಿಸ್ ಕರೆಗಳ ಜೊತೆಗೆ 14GB ಡೇಟಾ ಸೌಲಭ್ಯ ಪಡೆದಿದೆ. ಪ್ರತಿದಿನ 0.5GB ಡೇಟಾ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಅನ್ನು ಪಡೆದುಕೊಂಡಿದೆ. ಇತರೆ ಟೆಲಿಕಾಂಗಳಿಗೆ ಹೋಲಿಸಿದರೆ ಇದು ಸಾಕಷ್ಟು ಅಗ್ಗದ ಯೋಜನೆ ಆಗಿದೆ.
ಜಿಯೋ ಭಾರತ್ 1234ರೂ. ಪ್ಲ್ಯಾನ್ : ಜಿಯೋ ಭಾರತ್ 1234ರೂ. ಯೋಜನೆಯು ವಾರ್ಷಿಕ ಯೋಜನೆ ಆಗಿದ್ದು, ಒಂದು ವರ್ಷ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಪಡೆದಿದೆ. ಜೊತೆಗೆ ಪೂರ್ಣ ವಾರ್ಷಿಕ ಅವಧಿಗೆ ಒಟ್ಟು 168GB ಡೇಟಾ ಸೌಲಭ್ಯ ಪಡೆದಿದೆ. ಇತರೆ ಟೆಲಿಕಾಂಗಳಿಗೆ ಹೋಲಿಸಿದರೆ ಈ ವಾರ್ಷಿಕ ಯೋಜನೆಯು ಗ್ರಾಹಕರಿಗೆ ಶೇ. 70% ರಷ್ಟು ಉಳಿತಾಯ ಒದಗಿಸಲಿದೆ.
ಜಿಯೋ ಸಂಸ್ಥೆಯ 895ರೂ. ರೀಚಾರ್ಜ್ ಪ್ಲ್ಯಾನ್ ಮಾಹಿತಿ : ಜಿಯೋ ಸಂಸ್ಥೆಯ ಈ 895ರೂ. ರೀಚಾರ್ಜ್ ಯೋಜನೆಯು ಒಟ್ಟು 336 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಪ್ಲ್ಯಾನಿನಲ್ಲಿ ಒಟ್ಟು 24GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, 28 ದಿನಗಳಿಗೆ 2GB ಡೇಟಾ ಸೌಲಭ್ಯ ದೊರೆಯುತ್ತದೆ. ಅಲ್ಲದೇ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ಸಹ ಸಿಗುತ್ತದೆ. ಇದಲ್ಲದೇ ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ 28 ದಿನಗಳಿಗೊಮ್ಮೆ 50 ಎಸ್‌ಎಮ್ಎಸ್ ಪ್ರಯೋಜನ ಸಿಗಲಿದೆ.
ಜಿಯೋ ಸಂಸ್ಥೆಯ 186ರೂ. ರೀಚಾರ್ಜ್ ಪ್ಲ್ಯಾನ್ ಮಾಹಿತಿ : ಜಿಯೋ ಸಂಸ್ಥೆಯ ಈ 186ರೂ. ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ರೀಚಾರ್ಜ್ ನಲ್ಲಿ ಒಟ್ಟು 28 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ಸಿಗಲಿದ್ದು, ಪ್ರತಿದಿನ 1 GB ಡೇಟಾ ಪ್ರಯೋಜನ ಲಭ್ಯ. ಅಲ್ಲದೇ ಅನಿಯಮಿತ ಧ್ವನಿ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದಲ್ಲದೇ ಪ್ರತಿದಿನ 100 ಎಸ್‌ಎಮ್ಎಸ್ ಸೌಲಭ್ಯ ಕೂಡಾ ಗ್ರಾಹಕರಿಗೆ ಲಭ್ಯ.
ಜಿಯೋ ಸಂಸ್ಥೆಯ 152ರೂ. ರೀಚಾರ್ಜ್ ಪ್ಲ್ಯಾನ್ ಮಾಹಿತಿ : ಜಿಯೋ ಕಂಪನಿಯ 152ರೂ. ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಅನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 14 GB ಡೇಟಾ ಸೌಲಭ್ಯಗಳು ಸಿಗಲಿದ್ದು, ಪ್ರತಿದಿನ 0.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಅಲ್ಲದೇ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ಕೂಡಾ ಸಹ ದೊರೆಯುತ್ತದೆ. ಇದಲ್ಲದೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಉಚಿತ ಎಸ್‌ಎಮ್ಎಸ್ ಪ್ರಯೋಜನ ಖಚಿತ.


Click it and Unblock the Notifications








