Jio: ಜಿಯೋದಿಂದ ಮಗದೊಂದು ಹೊಸ ಪ್ಲ್ಯಾನ್! ಅನಿಯಮಿತ ಕರೆ, 28GB ಡೇಟಾ...
ಜಿಯೋ (Jio) ಆಗಾಗ್ಗೆ ವಿಶೇಷ ಪ್ರಯೋಜನಗಳನ್ನು ನೀಡುವ ಸಾಕಷ್ಟು ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿಕೊಂಡು ಬರುತ್ತಲೇ ಇರುತ್ತದೆ. ಅದರಂತೆ ಈಗ ಮಗದೊಂದು ಪ್ಲ್ಯಾನ್ ಅನ್ನು ಲಾಂಚ್ ಮಾಡಿದ್ದು, ಈ ಮೂಲಕ ಗ್ರಾಹಕರು ಅನಿಯಮಿತ ಕರೆ, 28GB ಡೇಟಾ ಪ್ರಯೋಜನ ಪಡೆಯಬಹುದಾಗಿದೆ.
ಹೌದು, ಆಕಾಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಭಾರತದಲ್ಲಿ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿದೆ. ಸಾಕಷ್ಟು ಜನರು ಜಿಯೋ ಚಂದಾದಾರಿಕೆ ಪಡೆದಿದ್ದು, ಕಡಿಮೆ ದರದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ನಡುವೆ ಕಳೆದ ವರ್ಷ ಕೈಗೆಟುಕುವ ಬೆಲೆಯಲ್ಲಿ ಲಾಂಚ್ ಮಾಡಲಾದ ಜಿಯೋಭಾರತ್ V2 (JioBharat V2) ಫೋನ್‌ಗಾಗಿ ಈ ವಿಶೇಷ ಪ್ಲ್ಯಾನ್ ಅನ್ನು ಲಾಂಚ್ ಮಾಡಿದೆ. ಹಾಗಿದ್ರೆ, ಇದರ ಬೆಲೆ ಎಷ್ಟು?, ಏನೆಲ್ಲಾ ಪ್ರಯೋಜನ ಲಭ್ಯ ಇವೆ ಅನ್ನೋ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಜಿಯೋದ ಹೊಸ ರೀಚಾರ್ಜ್ ಪ್ಲ್ಯಾನ್: ಮೊದಲೇ ತಿಳಿಸಿದಂತೆ ಜಿಯೋ ತನ್ನ ಜಿಯೋಭಾರತ್ V2 ಫೋನ್‌ಗಾಗಿ ಈ ಪ್ಲ್ಯಾನ್ ಅನ್ನು ಲಾಂಚ್ ಮಾಡಲಾಗಿದೆ. ಜಿಯೋ ನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿದಂತೆ ಈ ಪ್ಲ್ಯಾನ್ ದರ 234 ರೂ.ಗಳಾಗಿದೆ. ಈ ಪ್ಲ್ಯಾನ್ ಮೂಲಕ ಬಳಕೆದಾರರು 28GB ಡೇಟಾ, ಅನಿಯಮಿತ ವಾಯ್ಸ್ ಕರೆ ಸೌಲಭ್ಯ ಮತ್ತು 300ಎಸ್‌ಎಮ್‌ಎಸ್ ಸೌಲಭ್ಯದೊಂದಿಗೆ ಜಿಯೋ ಸಾವನ್, ಜಿಯೋ ಸಿನಿಮಾ ಚಂದಾದಾರಿಕೆಯನ್ನೂ ಸಹ ನೀಡಲಾಗುತ್ತಿದೆ. ಇದು 56 ದಿನಗಳ ಮಾನ್ಯತೆ ಪಡೆದಿದೆ.
ಗಮನಿಸಬೇಕಾದ ವಿಷಯ ಏನೆಂದರೆ ಈಗಾಗಲೇ ಈ ಫೋನ್‌ಗಾಗಿ ಕೆಲವು ರೀಚಾರ್ಜ್ ಪ್ಲ್ಯಾನ್‌ಗಳನ್ನು ಈ ಮೊದಲೂ ಸಹ ಲಾಂಚ್ ಮಾಡಿದೆ. ಆದರೆ ಬಳಕೆದಾರರು ಕೇವಲ ಎರಡು ಪ್ಲಾನ್‌ಗಳನ್ನು ಮಾತ್ರ ನೋಡುತ್ತಿದ್ದರು. ಆದರೆ ಇನ್ಮುಂದೆ ಮೂರು ಪ್ಲ್ಯಾನ್‌ಗಳು ಲಭ್ಯ ಇರಲಿವೆ. ಅಂದರೆ ಮೊದಲು 123 ರೂ.ಗಳು ಮತ್ತು 1234 ರೂ.ಗಳ ಪ್ಲ್ಯಾನ್ ಇದ್ದವು.

ಜಿಯೋ ಭಾರತ್ 123 ರೂ.ಗಳ ಪ್ಲ್ಯಾನ್ ಕಡೆ ಗಮನಹರಿಸುವುದಾದರೆ ಇದು 28 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ಒಟ್ಟು 14GB ಡೇಟಾ ಸೌಲಭ್ಯ ಅನಿಯಮಿತ ವಾಯ್ಸ್ ಕರೆಗಳು ಮತ್ತು 300 ಎಸ್‌ಎಮ್‌ಎಸ್ ಸೌಲಭ್ಯ ನೀಡಲಿದೆ. ಈ ಪ್ಲ್ಯಾನ್‌ನಲ್ಲೂ ಸಹ ಬಳಕೆದಾರರು ಜಿಯೋ ಸಾವನ್ ಹಾಗೂ ಜಿಯೋ ಸಿನಿಮಾ ಚಂದಾದಾರಿಕೆ ಪಡೆಯಬಹುದಾಗಿದೆ.
ಜಿಯೋ ಭಾರತ್ 1,234 ರೂ.ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು 336 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ವಾಯ್ಸ್ ಕರೆ ಸೌಲಭ್ಯ, 300 ಎಸ್‌ಎಮ್‌ಎಸ್ ಪ್ರಯೋಜನದ ಒಟ್ಟು 168GB ಡೇಟಾ ಸಿಗಲಿದೆ. ಇದರಲ್ಲೂ ಸಹ ಜಿಯೋ ಸಾವನ್ ಹಾಗೂ ಜಿಯೋ ಸಿನಿಮಾ ಚಂದಾದಾರಿಕೆ ಸಿಗಲಿದೆ.
ಇನ್ನು ಈ ಜಿಯೋಭಾರತ್ V2 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಕೇವಲ 999 ರೂ. ಗಳಿಗೆ ಲಾಂಚ್ ಮಾಡಲಾಗಿತ್ತು. ಈ ಫೋನ್ ಜಿಯೋ ಭಾರತ್ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಬಳಕೆದಾರರಿಗೆ ಯುಪಿಐ, ಜಿಯೋ ಸಿನಿಮಾ ಮತ್ತು ಇತರ ಸೇವೆಗಳನ್ನು ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಪ್ರಮುಖ ಸೌಲಭ್ಯಗಳನ್ನು ಈ ಫೋನ್ ಮೂಲಕವೂ ಪಡೆಯಬಹುದಾಗಿದೆ.

ಸುಮಾರು 250 ಮಿಲಿಯನ್ 2G ಬಳಕೆದಾರರನ್ನು ಗಮನದಲ್ಲಿ ಇಟ್ಟುಕೊಂಡು ಈ ಫೋನ್ ಅನ್ನು ಅನಾವರಣ ಮಾಡಲಾಗಿದೆ. ಅದರಲ್ಲೂ ಗ್ರಾಮೀಣ ಬಳಕೆದಾರರನ್ನು 4G ನೆಟ್‌ವರ್ಕ್‌ಗಳಿಗೆ ವಲಸೆ ಹೋಗುವುದನ್ನು ವೇಗಗೊಳಿಸುವ ಗುರಿಯನ್ನು ಈ ಫೋನ್ ಮೂಲ ಜಿಯೋ ಹೊಂದಿದೆ. ಈ ಕಾರಣಕ್ಕೆ ಈಗಾಗಲೇ ಸಾಕಷ್ಟು ಗ್ರಾಹಕರು ಜಿಯೋ ಕರೆ ವಾಲುವಂತೆ ಮಾಡಲಾಗಿದೆ.


Click it and Unblock the Notifications








