ಧಮಾಕಾ ಸುದ್ದಿ! 98 ದಿನ ಅನ್‌ಲಿಮಿಟೆಡ್ 5G.. ನಿತ್ಯ 100 SMS.. ಇಷ್ಟು ಕಡಿಮೆ ಬೆಲೆನಾ?
ಜಿಯೋ ಕಡಿಮೆ ಬೆಲೆಯಲ್ಲಿ ಅದ್ಭುತ ಯೋಜನೆಗಳನ್ನು ನೀಡುತ್ತಿದೆ. ಈ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಸೈ ಎನಿಸಿಕೊಂಡಿದೆ. ಹೀಗಾಗಿ, ರಿಲಯನ್ಸ್ ಜಿಯೋ (Jio) ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿ ಹೊರ ಹೊಮ್ಮಿದೆ. ಇದೀಗ, ಜಿಯೋ ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಮುಖ್ಯವಾಗಿ, ಸರ್ಕಾರಿ ಸೌಮ್ಯದ ಟೆಲೆಕಾಂ ಕಂಪನಿ ಬಿಎಸ್ಎನ್ಎಲ್ (BSNL) ಕೋಟ್ಯಂತರ ಹೊಸ ಬಳಕೆದಾರರನ್ನು ಪಡೆದುಕೊಂಡಿದೆ. ಇದರ ನಂತರ, ಜಿಯೋ ಈ ಆಫರ್‌ಗಳೊಂದಿಗೆ ಮತ್ತೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಮುಂದಾಗಿದೆ. ಬನ್ನಿ, ಬಜೆಟ್ ಒಳಗೆ ಉತ್ತಮ ಪ್ರಯೋಜನಗಳನ್ನು ಹೊಂದಿರುವ ಕೆಲವು ಜಿಯೋ ಯೋಜನೆಗಳನ್ನು ಈ ಲೇಖನದಲ್ಲಿ ತಿಳಿಯೋಣ.
ಜಿಯೋ ಈ ಆಫರ್‌ಗಳನ್ನು ತರಲು ಪ್ರಮುಖ ಕಾರಣ ಬಿಎಸ್ಎನ್ಎಲ್ ಜೊತೆಗಿನ ಸ್ಪರ್ಧೆ ಎನ್ನಬಹುದು. ಕಳೆದ ವರ್ಷ ಜುಲೈನಲ್ಲಿ ಮೊಬೈಲ್ ಸುಂಕದ ಬೆಲೆಗಳನ್ನು ಹೆಚ್ಚಿಸಿದ ಬಳಿಕ, ಜಿಯೋ 4 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡಿತು. ಇದೇ ಸಮಯದಲ್ಲಿ, ಬಿಎಸ್ಎನ್ಎಲ್ ಕೇವಲ ಎರಡು ತಿಂಗಳಲ್ಲಿ 5.5 ಕೋಟಿ ಹೊಸ ಗ್ರಾಹಕರನ್ನು ಪಡೆದುಕೊಂಡಿದೆ. ಹೀಗಾಗಿ, ಗ್ರಾಹಕರನ್ನು ಮರಳಿ ಕರೆತರಲು ಜಿಯೋ ಈ ಬಜೆಟ್ ಸ್ನೇಹಿ ರೀಚಾರ್ಜ್ ಪ್ಲಾನ್‌ಗಳನ್ನು ತಂದಿದೆ. ಈ ಯೋಜನೆಗಳೊಂದಿಗೆ, ಜಿಯೋ ಮತ್ತೊಮ್ಮೆ ತನ್ನ ಬಳಕೆದಾರರ ಮೊದಲ ಆಯ್ಕೆಯಾಗಲು ನೋಡುತ್ತಿದೆ. ಕಡಿಮೆ ಬೆಲೆಯಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಮತ್ತು ಅತ್ಯುತ್ತಮ ಕರೆ ಸೇವೆಗಳನ್ನು ಒದಗಿಸುವುದು ಜಿಯೋದ ಉದ್ದೇಶವಾಗಿದೆ.

ಜಿಯೋ 999 ರೂ. ರೀಚಾರ್ಜ್ ಪ್ಲಾನ್
ಜಿಯೋ 999 ರೂ. ರೀಚಾರ್ಜ್ ಪ್ಲಾನ್ ದೀರ್ಘಾವಧಿಯ ಬಳಕೆದಾರರಿಗೆ ಅದ್ಭುತ ಆಯ್ಕೆಯಾಗಿದೆ. ಆಗಾಗ್ಗೆ ರೀಚಾರ್ಜ್ ಮಾಡುವ ಅಗತ್ಯವಿಲ್ಲದೆ ದೀರ್ಘಾವಧಿಯ ಪ್ರಯೋಜನಗಳನ್ನು ಬಯಸುವವರಿಗೆ ಇದನ್ನು ಬಳಸಬಹುದು. ಈ ಪ್ಲಾನ್ ಅನಿಯಮಿತ 5G ಡೇಟಾ ನೀಡುತ್ತದೆ. 5G ನೆಟ್‌ವರ್ಕ್‌ಗಳು ಲಭ್ಯವಿರುವ ಪ್ರದೇಶಗಳಲ್ಲಿ, 5G ಫೋನ್ ಹೊಂದಿರುವವರು ಮಾತ್ರ ಅದನ್ನು ಬಳಸಲು ಸಾಧ್ಯವಾಗುತ್ತದೆ.
ಪ್ರತಿದಿನ 2GB 4G ಡೇಟಾವನ್ನು ಸಹ ನೀಡಲಾಗುತ್ತದೆ. ನೀವು 2GB ಡೇಟಾ ಖಾಲಿ ಮಾಡಿದರೆ, ವೇಗ ಸ್ವಲ್ಪ ಕಡಿಮೆಯಾಗುತ್ತದೆ. ದೇಶದ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ (ಧ್ವನಿ ಕರೆ) ಸಹ ಮಾಡಬಹುದು. ಜೊತೆಗೆ ನಿತ್ಯ 100 ಎಸ್‌ಎಂಎಸ್ ಉಚಿತವಾಗಿದೆ. ದೇಶಾದ್ಯಂತ ರೋಮಿಂಗ್ ಉಚಿತ. ಇದಲ್ಲದೆ, ನೀವು JioTV, JioCloud ಮತ್ತು JioCinema ನಂತಹ ಜಿಯೋ ಅಪ್ಲಿಕೇಶನ್‌ಗಳನ್ನು ಸಹ ಬಳಸಬಹುದು.
ಈ ಸುದ್ದಿ ಓದಿದ್ದೀರಾ?: ಬೆಂಕಿ ಫೀಚರ್! ಇನ್ಮುಂದೆ ಕೇಳಂಗಿಲ್ಲ.. ಖಾಸಗಿ ಚಾಟ್‌ಗಳಲ್ಲಿಯೂ ಈ ವೈಶಿಷ್ಟ್ಯ ಲಭ್ಯ.. ಏನದು?
10 ರೂ.ಗಳಿಗಿಂತ ಕಡಿಮೆ ವೆಚ್ಚ
98 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಈ ಪ್ಲಾನ್, ದಿನಕ್ಕೆ 10 ರೂ.ಗಳಿಗಿಂತ ಕಡಿಮೆ ವೆಚ್ಚವಾಗುತ್ತದೆ. ಹೆಚ್ಚು ಡೇಟಾ ಬಳಸುವವರಿಗೆ ಇದು ಸೂಪರ್ ಆಯ್ಕೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಪ್ರಯೋಜನಗಳು ನಿಮಗೆ ಇಷ್ಟವಾದಲ್ಲಿ, ನೀವು ಜಿಯೋ ಆಪ್ (JioApp) ಅಥವಾ ಇತರೆ ಆನ್‌ಲೈನ್ ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳಿಗೆ ಹೋಗಿ ಈಗಲೇ ರೀಚಾರ್ಜ್ ಮಾಡಬಹುದು.
ಜಿಯೋ ರೂ. 189 ರೀಚಾರ್ಜ್ ಪ್ಲಾನ್
ಈ ಮಧ್ಯೆ ಜಿಯೋ ಇತ್ತೀಚೆಗೆ 189 ರೂ. ಪ್ಲಾನ್ ಅನ್ನು ಮತ್ತೆ ಪರಿಚಯಿಸಿದೆ. ಈ ಯೋಜನೆ ಮೊದಲು ಅಸ್ತಿತ್ವದಲ್ಲಿತ್ತು, ಆದರೆ ಮಧ್ಯದಲ್ಲಿ ನಿಲ್ಲಿಸಲಾಯಿತು. ಹೆಚ್ಚು ಕರೆ ಮಾಡುವ ಮತ್ತು ಇಂಟರ್ನೆಟ್ ಕಡಿಮೆ ಬಳಸುವವರಿಗೆ ಈ ಯೋಜನೆ ಒಳ್ಳೆಯದು. ಇದರಲ್ಲಿ ನಿಮಗೆ 28 ದಿನಗಳ ವ್ಯಾಲಿಡಿಟಿ ಇರುತ್ತದೆ. ಈ 28 ದಿನಗಳವರೆಗೆ, 2GB ಹೈ ಸ್ಪೀಡ್ 4G ಡೇಟಾವನ್ನು ಒದಗಿಸಲಾಗುತ್ತದೆ.
ಡೇಟಾ ಖಾಲಿಯಾದರೆ, ಇಂಟರ್ನೆಟ್ ವೇಗ 64kbps ಗೆ ಇಳಿಯುತ್ತದೆ. ನೀವು ಅನ್‌ಲಿಮಿಟೆಡ್ ಕಾಲ್‌ಗಳನ್ನು ಮಾಡಬಹುದು. 300 ಎಸ್‌ಎಂಎಸ್ ಉಚಿತ ಮತ್ತು ದೇಶಾದ್ಯಂತ ರೋಮಿಂಗ್ ಉಚಿತವಾಗಿದೆ. ನೀವು JioTV, JioCloud ಮತ್ತು JioCinema ಅಪ್ಲಿಕೇಶನ್‌ಗಳನ್ನು ಸಹ ಬಳಸಬಹುದು. ಹಿಂದೆ, ಈ ಪ್ಲಾನ್ ಬೆಲೆ 155 ರೂ. ಆಗಿತ್ತು. ಆದರೆ, ಕಳೆದ ವರ್ಷ ಜುಲೈನಲ್ಲಿ ಜಿಯೋ ಬೆಲೆಗಳನ್ನು ಹೆಚ್ಚಿಸಿದ ನಂತರ, ಇದನ್ನು ಸ್ವಲ್ಪ ಹೆಚ್ಚಿಸಿದೆ.
ಜಿಯೋ 349 ರೂ. ರೀಚಾರ್ಜ್ ಪ್ಲಾನ್
ಪ್ರತಿದಿನ ಹೈ ಸ್ಪೀಡ್ ಡೇಟಾವನ್ನು ಬಯಸುವವರಿಗೆ ಜಿಯೋ 349 ರೂ. ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ 5G ಡೇಟಾ, ನಿತ್ಯ 2GB 4G ಡೇಟಾ ಮತ್ತು ಅನಿಯಮಿತ ವಾಯ್ಸ್ ಕಾಲ್ (ಧ್ವನಿ ಕರೆ) ಸೌಲಭ್ಯ ಪಡೆಯಬಹುದು. ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯು ಕಡಿಮೆ ಬೆಲೆಯಲ್ಲಿ ನಿಮಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಲಭ್ಯಗೊಳಿಸುತ್ತದೆ. ಹೆಚ್ಚು ಮೊಬೈಲ್ ಡೇಟಾ ಬಳಸುವವರಿಗೆ ಇದು ಉತ್ತಮ ಯೋಜನೆಯಾಗಿದೆ.


Click it and Unblock the Notifications








