ಜಿಯೋ ಟೆಲಿಕಾಂನಿಂದ ಮತ್ತೆ ಅಗ್ಗದ ಪ್ಲ್ಯಾನ್ ಲಾಂಚ್; ಡೇಟಾ ಪ್ರಿಯರಿಗೆ ಹಬ್ಬ!
ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ರಿಲಯನ್ಸ್ ಜಿಯೋ ಟೆಲಿಕಾಂ ಈಗಾಗಲೇ ಹಲವು ಅತ್ಯುತ್ತಮ ಪ್ಲ್ಯಾನ್‌ಗಳ ಮೂಲಕ ಗಮನ ಸೆಳೆದಿದೆ. ಇದರೊಂದಿಗೆ ಅಧಿಕ ಡೇಟಾ ಬಯಸುವ, ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗಾಗಿ ಕೆಲವು ಬೆಸ್ಟ್ ಪ್ರಿಪೇಯ್ಡ್ ಯೋಜನೆ ಆಯ್ಕೆ ಸಹ ನೀಡಿದೆ. ಅದರ ಜೊತೆಗೆ ಈಗ ಜಿಯೋ ಟೆಲಿಕಾಂ ಮತ್ತೆ ಒಂದು ನೂತನ ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿಸಿದ್ದು, ಅಧಿಕ ಡೇಟಾ ಬಯಸೋ ಗ್ರಾಹಕರಿಗೆ ಹಬ್ಬ ಎನಿಸಿದೆ.

ಹೌದು, ಜಿಯೋ ಟೆಲಿಕಾಂ ಇದೀಗ ಹೊಸದಾಗಿ 222 ರೂ. ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯನ್ನು ಸಂಸ್ಥೆಯು 'ಫುಟ್ಬಾಲ್ ವಿಶ್ವಕಪ್ ಡೇಟಾ ಪ್ಯಾಕ್' ಎಂದು ಬ್ರಾಂಡ್ ಮಾಡಿದೆ. ಅಂದಹಾಗೆ ಇದೊಂದು 4G ಡೇಟಾ ವೋಚರ್ ಆಗಿದ್ದು, ಈ ಯೋಜನೆಯನ್ನು ಬಳಕೆ ಮಾಡಲು ಗ್ರಾಹಕರು ಬೇಸ್ ಪ್ರಿಪೇಯ್ಡ್ ಪ್ಲಾನ್ ಹೊಂದಿರುವ ಅಗತ್ಯ ವಿರುತ್ತದೆ. ಹಾಗಾದರೆ ರಿಲಯನ್ಸ್ ಜಿಯೋದ 222ರೂ. ಯೋಜನೆಯ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 222ರೂ. ಪ್ಲ್ಯಾನ್ ಪ್ರಯೋಜನಗಳು
ರಿಲಯನ್ಸ್ ಜಿಯೋ ಟೆಲಿಕಾಂನ ನೂತನ 222ರೂ. ಡೇಟಾ ಆಡ್ ಆನ್ ಪ್ಲ್ಯಾನ್ ಒಟ್ಟು 30 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಈ ಅವಧಿಯಲ್ಲಿ ಒಟ್ಟು 50GB ಹೈ-ಸ್ಪೀಡ್ ಡೇಟಾ ಪ್ರಯೋಜನ ದೊರೆಯುತ್ತದೆ. ಇನ್ನು FIFA ವಿಶ್ವಕಪ್ ಅಭಿಮಾನಿಗಳಿಗೆ ಇದು ಆಕರ್ಷಕ ಪ್ಲ್ಯಾನ್ ಎನ್ನಬಹುದಾಗಿದೆ. ಏಕೆಂದರೆ ಒಂದು ತಿಂಗಳಲ್ಲಿ 50GB ಡೇಟಾ ಬೂಸ್ಟ್ ಉತ್ತಮವಾಗಿದೆ. 50GB ಡೇಟಾ ಬಳಕೆಯ ನಂತರ, ಇಂಟರ್ನೆಟ್ ವೇಗವು 64 Kbps ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.

ಜಿಯೋ 555ರೂ. ಪ್ಲ್ಯಾನ್ ಪ್ರಯೋಜನಗಳು
ರಿಲಯನ್ಸ್ ಜಿಯೋ 555ರೂ. ಡೇಟಾ ಆಡ್ ಆನ್ ಪ್ಲ್ಯಾನ್ ಒಟ್ಟು 55 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಈ ಅವಧಿಯಲ್ಲಿ ಒಟ್ಟು 55 GB ಹೈ-ಸ್ಪೀಡ್ ಡೇಟಾ ಪ್ರಯೋಜನ ದೊರೆಯುತ್ತದೆ. ಇನ್ನು ನಿಗಧಿತ ಡೇಟಾ ಬಳಕೆಯ ನಂತರ, ಇಂಟರ್ನೆಟ್ ವೇಗವು 64 Kbps ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.

ಜಿಯೋ 181ರೂ. ಪ್ಲ್ಯಾನ್ ಪ್ರಯೋಜನಗಳು
ರಿಲಯನ್ಸ್ ಜಿಯೋ 181ರೂ. ಡೇಟಾ ಆಡ್ ಆನ್ ಪ್ಲ್ಯಾನ್ ಒಟ್ಟು 30 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಈ ಅವಧಿಯಲ್ಲಿ ಒಟ್ಟು 30 GB ಹೈ-ಸ್ಪೀಡ್ ಡೇಟಾ ಪ್ರಯೋಜನ ದೊರೆಯುತ್ತದೆ. ಇನ್ನು ನಿಗಧಿತ ಡೇಟಾ ಬಳಕೆಯ ನಂತರ, ಇಂಟರ್ನೆಟ್ ವೇಗವು 64 Kbps ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.

ಜಿಯೋ 241ರೂ. ಪ್ಲ್ಯಾನ್ ಪ್ರಯೋಜನಗಳು
ರಿಲಯನ್ಸ್ ಜಿಯೋ 241ರೂ. ಡೇಟಾ ಆಡ್ ಆನ್ ಪ್ಲ್ಯಾನ್ ಸಹ ಒಟ್ಟು 30 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಆದರೆ ಈ ಅವಧಿಯಲ್ಲಿ ಒಟ್ಟು 40 GB ಹೈ-ಸ್ಪೀಡ್ ಡೇಟಾ ಪ್ರಯೋಜನ ದೊರೆಯುತ್ತದೆ. ಇನ್ನು ನಿಗಧಿತ ಡೇಟಾ ಬಳಕೆಯ ನಂತರ, ಇಂಟರ್ನೆಟ್ ವೇಗವು 64 Kbps ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.

ಜಿಯೋ 301ರೂ. ಪ್ಲ್ಯಾನ್ ಪ್ರಯೋಜನಗಳು
ರಿಲಯನ್ಸ್ ಜಿಯೋ 301ರೂ. ಡೇಟಾ ಆಡ್ ಆನ್ ಪ್ಲ್ಯಾನ್ ಸಹ ಒಟ್ಟು 30 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಆದರೆ ಈ ಅವಧಿಯಲ್ಲಿ ಒಟ್ಟು 50 GB ಹೈ-ಸ್ಪೀಡ್ ಡೇಟಾ ಪ್ರಯೋಜನ ದೊರೆಯುತ್ತದೆ. ಇನ್ನು ನಿಗಧಿತ ಡೇಟಾ ಬಳಕೆಯ ನಂತರ, ಇಂಟರ್ನೆಟ್ ವೇಗವು 64 Kbps ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.

ಜಿಯೋ 2878ರೂ. ಪ್ಲ್ಯಾನ್ ಪ್ರಯೋಜನಗಳು
ರಿಲಯನ್ಸ್ ಜಿಯೋ 2878ರೂ. ಡೇಟಾ ಆಡ್ ಆನ್ ಪ್ಲ್ಯಾನ್ ವಾರ್ಷಿಕ ಅವಧಿ ಪ್ಲ್ಯಾನ್ ಆಗಿದ್ದು, 365 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಆದರೆ ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 730 GB ಹೈ-ಸ್ಪೀಡ್ ಡೇಟಾ ಪ್ರಯೋಜನ ದೊರೆಯುತ್ತದೆ. ಇನ್ನು ನಿಗಧಿತ ಡೇಟಾ ಬಳಕೆಯ ನಂತರ, ಇಂಟರ್ನೆಟ್ ವೇಗವು 64 Kbps ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.


Click it and Unblock the Notifications








