ಜಿಯೋ, ಏರ್‌ಟೆಲ್, ವಿ ಟೆಲಿಕಾಂಗಳ 399ರೂ. ಒಳಗಿನ ಬೆಸ್ಟ್ ಪ್ಲ್ಯಾನ್‌ಗಳು!
ಭಾರತದಲ್ಲಿ ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್ ಮತ್ತು ವಿ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಅವುಗಳಲ್ಲಿ ಪ್ರೀಪೇಯ್ಡ್ ಯೋಜನೆಗಳು ಹಾಗೂ ಪೋಸ್ಟ್‌ಪೇಯ್ಡ್ ಯೋಜನೆಗಳು ಸೇರಿವೆ. ಆದರೆ ಗ್ರಾಹಕ ಸ್ನೇಹಿ ಬೆಲೆಯಲ್ಲಿ ಕೆಲವು ಪ್ರೀಪೇಯ್ಡ್ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಗಮನ ಸೆಳೆದಿವೆ. ಆ ಪೈಕಿ ಬಹುತೇಕ ಬಳಕೆದಾರರು 399ರೂ. ಒಳಗಿನ ಬೆಲೆಯ ಪ್ಲ್ಯಾನ್ ರೀಚಾರ್ಜ್‌ಗೆ ಮುಂದಾಗುತ್ತಾರೆ.

ಹೌದು, ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್ ಮತ್ತು ವಿ ಟೆಲಿಕಾಂ ಸಂಸ್ಥೆಗಳು 399ರೂ. ಒಳಗಿನ ಬೆಲೆಯ ಪ್ರೀಪೇಯ್ಡ್ ಪ್ಲ್ಯಾನ್ ಆಯ್ಕೆ ಹೊಂದಿವೆ. ಈ ಮೂರು ಟೆಲಿಕಾಂಗಳ ಈ ಮೊತ್ತದ ರೀಚಾರ್ಜ್ ಪ್ಲ್ಯಾನಿನಲ್ಲಿ ಅಧಿಕ ಡೈಲಿ ಡೇಟಾ, ಬಿಗ್ ವ್ಯಾಲಿಡಿಟಿ, ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಪ್ರಯೋಜನಗಳು ಸೇರಿವೆ. ಹಾಗೆಯೇ ಹೆಚ್ಚುವರಿಯಾಗಿ ಓಟಿಟಿ ಸೌಲಭ್ಯಗಳು ಸಿಗಲಿವೆ. ಆದರೂ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೇ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ 399ರೂ. ಒಳಗಿನ ಆಕರ್ಷಕ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 399ರೂ. ಪ್ರೀಪೇಯ್ಡ್ ಪ್ಲಾನ್
ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿರುವ ಜಿಯೋದ 399ರೂ. ಪ್ರೀಪೇಯ್ಡ್ ಪ್ಲ್ಯಾನ್ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಸೇರಿದಂತೆ ಇತರೆ ನೆಟವರ್ಕ್ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿವೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ನೀಡುತ್ತದೆ.

ವಿ ಟೆಲಿಕಾಂ 399ರೂ. ಪ್ರಿಪೇಯ್ಡ್ ಪ್ಲ್ಯಾನ್
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಪ್ಲ್ಯಾನಿನಲ್ಲಿ ಬಳಕೆದಾರರು ಹೆಚ್ಚುವರಿ 5GB ಡೇಟಾವನ್ನು ಪಡೆಯಬಹುದು.

ಏರ್‌ಟೆಲ್ 399ರೂ. ಪ್ರಿಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಪ್ಲ್ಯಾನಿನಲ್ಲಿ ಹೆಚ್ಚುವರಿ ಏರ್‌ಟೆಲ್ ಎಕ್ಸ್‌ಟ್ರಿಮ್ ಸೇವೆಯನ್ನು ಪಡೆಯಬಹುದು.

ಬಿಎಸ್‌ಎನ್‌ಎಲ್ 399ರೂ. ಪ್ರಿಪೇಯ್ಡ್ ಪ್ಲ್ಯಾನ್
ಬಿಎಸ್‌ಎನ್‌ಎಲ್ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 1GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಯಾವುದೇ ನೆಟವರ್ಕ್‌ಗೆ ಪ್ರತಿದಿನ 250 ನಿಮಿಷಗಳ ವಾಯಿಸ್ ಕರೆಯ ಸೌಲಭ್ಯ ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 80 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ನಿಗದಿತ 1 ಜಿಬಿ ದೈನಂದಿನ ಡೇಟಾ ಬಳಕೆಯಾದ ಬಳಿಕ 80 ಕೆಬಿಪಿಎಸ್ ವೇಗದಲ್ಲಿ ಡೇಟಾ ಮುಂದುವರೆಯಲಿದೆ. ಜೊತೆಗೆ ಗ್ರಾಹಕರಿಗೆ ಉಚಿತ ಬಿಎಸ್‌ಎನ್‌ಎಲ್ ಟ್ಯೂನ್ಸ್ ಲಭ್ಯವಿದೆ.

ಜಿಯೋ 249ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್ ಸಹ ಲಭ್ಯ.


Click it and Unblock the Notifications








