Home
ಸುದ್ದಿಜಾಲ

Jio: ಜಿಯೋದಿಂದ ಪ್ರೀಮಿಯಂ ವಾರ್ಷಿಕ ಪ್ಲ್ಯಾನ್ ಘೋಷ‍ಣೆ! ಪರಿಚಯಾತ್ಮಕ ಬೆಲೆ 299 ರೂ. ಅಷ್ಟೇ..

ಜಿಯೋ (Jio) ವಿವಿಧ ರೀತಿಯಲ್ಲಿ ಟೆಕ್ ಲೋಕವನ್ನು ಅಳುತ್ತಿದೆ. ಅದರಲ್ಲೂ ಭಾರತದಲ್ಲಿ ಮುಖ್ಯವಾಗಿ ಸಾಕಷ್ಟು ಗ್ರಾಹಕರು ಜಿಯೋ ಸೇವೆ ಪಡೆಯುತ್ತಿದ್ದು, ಈ ನಡುವೆ ಜಿಯೋ ಗುಡ್‌ ನ್ಯೂಸ್‌ ನೀಡಿದೆ. ಇದರಿಂದಾಗಿ ಒಂದು ವರ್ಷದ ವರೆಗೆ ಯಾವುದೇ ಸಮಸ್ಯೆ ಇಲ್ಲದೆ ಮನರಂಜನೆ ಪಡೆಯಬಹುದಾಗಿದೆ.

ಹೌದು, ಜಿಯೋ ಸಿನಿಮಾ (Jio Cinema) ತನ್ನ ಹೊಸ ಪ್ರೀಮಿಯಂ ಜಾಹೀರಾತು-ಮುಕ್ತ ಚಂದಾದಾರಿಕೆ ಪ್ಲ್ಯಾನ್‌ ಗಳನ್ನು ಈಗಾಗಲೇ ಘೋ‍ಷಣೆ ಮಾಡಿದೆ. ಇದರಲ್ಲಿ ತಿಂಗಳಿಗೆ 29 (51% ರಿಯಾಯಿತಿಯಲ್ಲಿ) ಮತ್ತು ಕುಟುಂಬ ಯೋಜನೆಯನ್ನು ಕಳೆದ ತಿಂಗಳು 4 ಡಿವೈಸ್‌ಗಳಿಗೆ ಅದೇ ಒಂದು ತಿಂಗಳ ಮಾನ್ಯತೆಯೊಂದಿಗೆ 89 (40% ರಿಯಾಯಿತಿ). ಪರಿಚಯಿಸಿ ಸದ್ದು ಮಾಡಿತ್ತು.ಆದರೆ ಈಗ ಹೊಸ ವಾರ್ಷಿಕ ಪ್ಲ್ಯಾನ್‌ ಅನ್ನು ಘೋಷಣೆ ಮಾಡಿದೆ. ಹಾಗಿದ್ರೆ ಯಾವುದು ಈ ಪ್ಲ್ಯಾನ್?, ಇದರಿಂದ ಏನೆಲ್ಲಾ ಲಾಭ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಜಿಯೋದಿಂದ ಪ್ರೀಮಿಯಂ ವಾರ್ಷಿಕ ಪ್ಲ್ಯಾನ್ ಘೋಷ‍ಣೆ! ಪರಿಚಯಾತ್ಮಕ ಬೆಲೆ 299 ರೂ....

ಜಿಯೋಸಿನಿಮಾ ಪ್ರೀಮಿಯಂ ಚಂದಾದಾರಿಕೆ: ಕೊನೆಗೂ ಜಿಯೋ ವಾರ್ಷಿಕ ಪ್ಲ್ಯಾನ್‌ ಅನ್ನು ಘೋ‍ಷಣೆ ಮಾಡಿದೆ. 299 (50% ರಿಯಾಯಿತಿ) ರೂ.ಗಳ ಈ ಪ್ಲ್ಯಾನ್‌ನಲ್ಲಿ 12 ತಿಂಗಳವರೆಗೆ ಮಾಸಿಕ ಯೋಜನೆಯ ಅದೇ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಹಳೆಯ ಪ್ರೀಮಿಯಂ ಯೋಜನೆಗೆ ಹೋಲಿಸಿದರೆ ಇದು ಉತ್ತಮ ಡೀಲ್ ಆಗಿದ್ದು, ಇದರ ಬೆಲೆ ವರ್ಷಕ್ಕೆ 999 ರೂ.ಆಗಿದೆ.

ಈ ಜಾಹೀರಾತು-ಮುಕ್ತ (ಕ್ರೀಡೆ ಮತ್ತು ಲೈವ್ ಹೊರತುಪಡಿಸಿ) ವಾರ್ಷಿಕ ಯೋಜನೆಯು ಒಂದೇ ಡಿವೈಸ್‌ನಲ್ಲಿ ಪ್ರೀಮಿಯಂ ಕಂಟೆಂಟ್‌ ಅನ್ನು ವೀಕ್ಷಣೆ ಮಾಡಲು ನಿಮಗೆ ಅನುಮತಿ ನೀಡಲಿದೆ. ಅಂದರೆ ಯಾವುದೇ ಒಂದು ಡಿವೈಸ್‌ನಲ್ಲಿ ಒಂದು ಸಮಯದಲ್ಲಿ 4k ಗುಣಮಟ್ಟದಲ್ಲಿ ಕಂಟೆಂಟ್‌ ಅನ್ನು ವೀಕ್ಷಣೆ ಮಾಡಬಹುದಾಗಿದೆ. ಕಂಪನಿಯು ಇದನ್ನು ವಿಶೇಷ ಕೊಡುಗೆ ಎಂದು ಕರೆಯುವುದರಿಂದ, ಯೋಜನೆಯ ಬೆಲೆಯು ಭವಿಷ್ಯದಲ್ಲಿ ಹೆಚ್ಚಾಗಬಹುದು ಎಂದು ತಿಳಿದುಬಂದಿದೆ.

ಜಿಯೋದಿಂದ ಪ್ರೀಮಿಯಂ ವಾರ್ಷಿಕ ಪ್ಲ್ಯಾನ್ ಘೋಷ‍ಣೆ! ಪರಿಚಯಾತ್ಮಕ ಬೆಲೆ 299 ರೂ....

ಅದಾಗ್ಯೂ ಹಳೆಯ ಪ್ಲ್ಯಾನ್‌ ಗಮನಿಸಿದ್ರೆ ಈ 599 ರೂ.ಗಳ ಪ್ಲ್ಯಾನ್‌ ಬೆಸ್ಟ್‌ ಎನ್ನಬಹುದಾಗಿದೆ. ಇನ್ನು ಜಿಯೋಸಿನಿಮಾ ಜಾಹೀರಾತು-ಬೆಂಬಲಿತ ಮಾದರಿಯ ಭಾಗವಾಗಿ ಐಪಿಎಲ್‌ ಸೇರಿದಂತೆ ಕೆಲವು ಪ್ರಾದೇಶಿಕ ಕಂಟೆಂಟ್‌ಗಳು ಮತ್ತು ಸ್ಪೋರ್ಟ್ಸ್‌ ಇನ್ನೂ ಉಚಿತವಾಗಿಯೇ ಇರಲಿದೆ. ಈ ಬಗ್ಗೆ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಅಥವಾ ಈ ಪ್ಲ್ಯಾನ್‌ ನಿಮಗೆ ಅಗತ್ಯ ಎಂದರೆ ಜಿಯೋಸಿನಿಮಾ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಜಿಯೋದಿಂದ ಪ್ರೀಮಿಯಂ ವಾರ್ಷಿಕ ಪ್ಲ್ಯಾನ್ ಘೋಷ‍ಣೆ! ಪರಿಚಯಾತ್ಮಕ ಬೆಲೆ 299 ರೂ....

ಜಿಯೋ ಏರ್‌ಫೈಬರ್‌ ಸೇವೆ ಪಡೆಯುವುದು ಹೇಗೆ?: ಈ ನಡುವೆ ಜಿಯೋದ ಮತ್ತೊಂದು ಸೇವೆಯಾದ ಏರ್‌ಫೈಬರ್ ಹಳ್ಳಿ ಹಳ್ಳಿಗೂ ತಲುಪುತ್ತಿದೆ. ಇದರಿಂದ ಜನರು ವಿವಿಧ ರೀತಿಯಲ್ಲಿ ಅನುಕೂಲ ಪಡೆಯುತ್ತಿದ್ದಾರೆ. ನಿಮಗೂ ಈ ಸೇವೆ ಬೇಕು ಎಂದರೆ ಮೊದಲು ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಮೈ ಜಿಯೋ ಆಪ್‌ ಬಳಕೆ ಮಾಡಿ. ಇದು ಆಗಲಿಲ್ಲ ಎಂದರೆ ಜಿಯೋ ಗ್ರಾಹಕ ಬೆಂಬಲವನ್ನು ಸಂಪರ್ಕಿಸಿ ಪಡೆಯಬಹುದು.

ಇದಕ್ಕೂ ಮೊದಲು ನಿಮ್ಮ ಪ್ರದೇಶದಲ್ಲಿ ಜಿಯೋ ಏರ್‌ಫೈಬರ್‌ ಲಭ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಪ್ರದೇಶದಲ್ಲಿ ಸಂಪರ್ಕ ಲಭ್ಯವಿದ್ದರೆ, ಬುಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿ. ಇದಕ್ಕಾಗಿ ನೀವು 60008-60008 ಗೆ ಮಿಸ್ಡ್ ಕಾಲ್ ಅನ್ನು ಡಯಲ್ ಮಾಡಿ ಅಥವಾ ಮೊದಲೇ ತಿಳಿಸಿದಂತೆ ಆಪ್‌ ಅಥವಾ ವೆಬ್‌ಸೈಟ್‌ ಗೆ ಭೇಟಿ ಕೊಡಿ. ಈ ವೇಳೆ ನೀವು ವೈಯಕ್ತಿಕ ವಿವರಗಳು ಮತ್ತು ಸ್ಥಳ ಮಾಹಿತಿ ಸೇರಿದಂತೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯ ಇದ್ದು, ಮಾಹಿತಿ ಒದಗಿಸಬೇಕಿದೆ.

ದೃಢೀಕರಣದ ನಂತರ, ನೀವು ವೈ-ಫೈ ರೂಟರ್, 4K ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್, ವಾಯ್ಸ್‌ ಆಕ್ಟಿವ್‌ ರಿಮೋಟ್ ಮತ್ತು ಹೊರಾಂಗಣ ಘಟಕವನ್ನು ಒಳಗೊಂಡಿರುವ ಜಿಯೋ ಏರ್‌ಫೈಬರ್‌ ಪ್ಯಾಕೇಜ್ ಅನ್ನು ಸ್ವೀಕರಿಸುತ್ತೀರಿ. ಬಳಿಕ ನಿಮ್ಮ ಮನೆಯಲ್ಲಿನ ಡಿವೈಸ್‌ಗಳಿಗೆ ಮನಬಂದಂತೆ ಸಂಪರ್ಕ ಮಾಡಿಕೊಂಡು ನಿಮ್ಮ ಇಷ್ಟದ ಯಾವುದೇ ಕಂಟೆಂಟ್‌ ಅನ್ನು ಉತ್ತಮ ಕ್ವಾಲಿಟಿಯನ್ನು ವೀಕ್ಷಣೆ ಮಾಡಬಹುದಾಗಿದೆ.

Best Mobiles in India

English summary
Jio Cinema has announced its new premium ad-free subscription plan for an introductory price of just Rs 299.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+