ಶಿಯೋಮಿ ಸ್ಮಾರ್ಟ್‌ಟಿವಿ ಸೇರಲಿದೆ 'ಜಿಯೋ ಸಿನಿಮಾ' ಆಪ್!.ಮನರಂಜನೆ ಡಬಲ್!
ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಪರಿಚಯಿಸುವ ಮೂಲಕ ಜನಪ್ರಿಯಗಳಿಸಿರುವ 'ಶಿಯೋಮಿ' ಅದೇ ರೀತಿ ಕಡಿಮೆ ಬೆಲೆಗೆ ಅತ್ಯುತ್ತಮ ಡೇಟಾ ಪ್ರಯೋಜನಗಳನ್ನು ಒದಗಿಸಿ ಗುರುತಿಸಿಕೊಂಡಿರುವ 'ಜಿಯೋ' ಟೆಲಿಕಾಂ ಈ ಸಂಸ್ಥೆಗಳೆರಡು ಈಗಾಗಲೇ ಗ್ರಾಹಕರ ನೆಚ್ಚಿನ ಕಂಪನಿಗಳಾಗಿವೆ. ಈ ಎರಡು ಕಂಪನಿಗಳು ಒಂದುಗೂಡಿದರೇ?..ಹೀಗೊಂದು ವಿಚಾರ ನಿಮ್ಮಲ್ಲಿ ಮೂಡಿರಬಹುದು? ಒಂದು ವೇಳೆ ಮೂಡಿದ್ದರೇ ಅದು ಖಂಡಿತಾ ಈಗ ನಿಜವಾಗುವ ಕಾಲ ಕೂಡಿ ಬಂದಿದೆ.

ಹೌದು, ಜಿಯೋ ಸಂಸ್ಥೆಯ 'ಜಿಯೋ ಸಿನಿಮಾ' ಆಪ್ ಅನ್ನು ಶಿಯೋಮಿ ತನ್ನ ಸ್ಮಾರ್ಟ್ ಟಿವಿಗಳಲ್ಲಿ ಸೇರಿಸುವುದಾಗಿ ಘೋಷಿಸಿದ್ದು, ಜಿಯೋ ಸಿನಿಮಾ ಆಪ್‌ನಲ್ಲಿ ಲಭ್ಯವಾಗುವ ಸಿನಿಮಾ ಮತ್ತು ಟಿವಿ ಶೋಗಳನ್ನು (on-demand content) ಶಿಯೋಮಿ ಟಿವಿಯ ದೊಡ್ಡ ಪರದೆಯ ಮೇಲೆ ವೀಕ್ಷಿಸಬಹುದಾಗಿದೆ. ಈ ಸೌಲಭ್ಯವು ಶೀಘ್ರದಲ್ಲೇ ಮಿ ಟಿವಿ ಗ್ರಾಹಕರಿಗೆ ದೊರೆಯಲಿದೆ ಎನ್ನುವ ಸಮಾಚಾರ ಇದೀಗ ಗ್ರಾಹಕರಿಗೆ ಸಖತ್ ಖುಷಿ ನೀಡಿದೆ.

ಶಿಯೋಮಿ ಸ್ಮಾರ್ಟ್‌ಟಿವಿಗಳಲ್ಲಿ ಇನ್ಮುಂದೆ ಜಿಯೋ ಸಿನಿಮಾ ಆಪ್‌ನಲ್ಲಿ ಸೇರಿಸಲು ಸಜ್ಜಾಗಿದೆ. ಮಿ ಟಿವಿ ಗ್ರಾಹಕರಿಗೆ ಪ್ರಸ್ತುತ ಲಭ್ಯವಿರುವ ವಿಡಿಯೊ ಸ್ಟ್ರಿಮಿಂಗ್ ಸೇವೆಗಳಲ್ಲಿ 'ಜಿಯೋ ಸಿನಿಮಾ ಆಪ್' ಸಹ ಒಂದಾಗಲಿದ್ದು, ಆದರೆ ಡಿಸ್ನಿ ಕಂಟೆಂಟ್‌ಗಳನ್ನು ಒಳಗೊಂಡಿರಲಿದ್ದು, ಮನರಂಜನೆ ಮಾತ್ರ ಡಬಲ್ ಸೀಗಲಿದೆ. ಈ ಕುರಿತು ಶಿಯೋಮಿ ಈಗಾಗಲೇ ಟೀಸರ್ ಪೋಸ್ಟರ್ ರಿಲೀಸ್ ಮಾಡಿದ್ದು, ಮತ್ತಷ್ಟು ಪುಷ್ಠಿ ನೀಡುತ್ತಿದೆ.

ಜಿಯೋ ಗ್ರಾಹಕರಿಗೆ ದೊರೆಯುತ್ತಿದ್ದ ಜಿಯೋ ಸಿನಿಮಾ ಅಪ್ಲಿಕೇಶನ್ ಮಿ ಟಿವಿ ಗ್ರಾಹಕರಿಗೂ ಲಭ್ಯವಾಗಲಿದೆ. ಆಪ್‌ನಲ್ಲಿ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದ್ದು, ಜನಪ್ರಿಯ ವಿಡಿಯೊ ಕಂಟೆಂಟ್‌ಗಳು ಸಹ ಕಾಣಿಸಿಕೊಳ್ಳಲಿವೆ. ಜಿಯೋ ಸಿನಿಮಾ ಅಪ್ಲಿಕೇಶನ್ ಹಿಂದಿ, ಕನ್ನಡ, ಮರಾಠಿ, ತಮಿಳ, ತೆಲಗು, ಮಲಿಯಾಳಂ, ಬೆಂಗಾಲಿ, ಗುಜರಾತ, ಪಂಜಾಬಿ, ಭೋಜ್‌ಪುರಿ ಮತ್ತು ಇಂಗ್ಲೀಷ್ ಭಾಷೆಗಳ ಆಯ್ಕೆಗಳನ್ನು ಹೊಂದಿದೆ.
ಹಾಗೆಯೇ ಅಗ್ಗದ ಸ್ಮಾರ್ಟ್ ಟಿವಿಗಳ ಶ್ರೇಣಿಯನ್ನು ಪರಿಚಯಿಸಿರುವ ಟಿಸಿಎಲ್ ಕಂಪನಿಯು ಸಹ ತನ್ನ ಟಿವಿಗಳಲ್ಲಿ ಜಿಯೋ ಸಿನಿಮಾ ಆಪ್ ಅನ್ನು ಸೇರಿಸಲು ಸಿದ್ಧತೆಗಳನ್ನು ನಡೆಸಿದೆ. ಟಿಸಿಎಲ್‌ನ ಕೇಲವು ಸ್ಮಾರ್ಟ್ ಟಿವಿಗಳ ಶ್ರೇಣಿಗಳು ಗೂಗಲ್ ಮಾನ್ಯತೆಯನ್ನು ಪಡೆದುಕೊಂಡಿವೆ. ಜಿಯೋ ಸಿನಿಮಾ OTT ಸೇವೆಯನ್ನು ಟಿವಿಯಲ್ಲಿ ಲಭ್ಯ ಮಾಡುವುದು ಮನರಂಜನೆ ದೊರೆತಂತಾಗುತ್ತದೆ ಎಂದು ಟಿಸಿಎಲ್ ಸಂಸ್ಥೆ ತಿಳಿಸಿದೆ.


Click it and Unblock the Notifications








