ಐಪಿಎಲ್ ಮುಗಿಯೋದೆ ತಡ ನೀವು ಜಿಯೋ ಸಿನಿಮಾಗೆ ಶುಲ್ಕ ಪಾವತಿಸಬೇಕು! ಇನ್ಮುಂದೆ ಫ್ರೀ ಇಲ್ಲ
ಜಿಯೋ ಟೆಲಿಕಾಂ ವಿಭಾಗದಲ್ಲಿ ಮಾತ್ರವಲ್ಲದೆ ಇತರೆ ಟೆಕ್ ವಲಯದಲ್ಲೂ ಭಾರೀ ಸದ್ದು ಮಾಡುತ್ತದೆ. ಅದರಲ್ಲೂ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನ ಅಧಿಕೃತ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರನಾಗಿರುವ ಜಿಯೋ ಈಗ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಅಂದರೆ ಇನ್ಮುಂದೆ ಬಳಕೆದಾರರು ಹಣ ಪಾವತಿ ಮಾಡಬೇಕಿದೆ.
ಹೌದು, ಜಿಯೋದ ಸಾಂಪ್ರದಾಯಿಕ ನೀತಿಯಂತೆ ಇದೀಗ ತನ್ನ ಬುದ್ದಿಯಲ್ಲಿ ತೋರಿಸಲು ಮುಂದಾಗಿದೆ. ಅಂದರೆ ರಿಲಯನ್ಸ್ ಮಾಲೀಕತ್ವದ ಜಿಯೋ ಸಿನಿಮಾ ಇಂಡಿಯನ್ ಪ್ರೀಮಿಯರ್ ಲೀಗ್‌ನ ನಂತರ ಶುಲ್ಕ ವಿಧಿಸಲು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ, ಜಿಯೋದ ಮಾಸ್ಟರ್ ಪ್ಲ್ಯಾನ್ ಏನು?, ಇದರಿಂದ ಬಳಕೆದಾರರಿಗೆ ಆಗುವ ಸಮಸ್ಯೆ ಏನು ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಜಿಯೋ ಮಾಸ್ಟರ್ ಪ್ಲ್ಯಾನ್: ಜಿಯೋ ಭಾರತದಲ್ಲಿ ಯಾವುದೋ ಹೊಸ ಪ್ಲ್ಯಾನ್ ಪರಿಚಯಿಸಿದರೂ ಸಹ ಅದರ ಹಿಂದೆ ಒಂದು ವ್ಯವಸ್ಥಿತ ಯೋಜನೆ ಇದ್ದೇ ಇರುತ್ತದೆ. ಅದರಂತೆ ಜಿಯೋ ಸಿನಿಮಾ ನೆಟ್‌ಫ್ಲಿಕ್ಸ್ ಮತ್ತು ವಾಲ್ಟ್ ಡಿಸ್ನಿಯ ರೀತಿಯಲ್ಲಿಯೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ 100 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಟಿವಿ ಸರಣಿಗಳೊಂದಿಗೆ ಕಂಟೆಂಟ್ ಅನ್ನು ಹೆಚ್ಚಿಗೆ ಮಾಡಲು ಯೋಜಿಸುತ್ತಿದೆ. ಆದರೆ, ಇದು ಉಚಿತವಲ್ಲ ಎಂಬುದು ಗೊತ್ತಿರಲಿ.
ಇನ್ನು ರಿಲಯನ್ಸ್‌ನ ಮಾಧ್ಯಮ ಮತ್ತು ವಿಷಯ ವ್ಯವಹಾರದ ಅಧ್ಯಕ್ಷೆ ಜ್ಯೋತಿ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ವಿವರಣೆ ನೀಡಿದ್ದು, ಐಪಿಎಲ್ ಕ್ರೇಜ್ ಮುಗಿಯುವ ಮುನ್ನವೇ ಅಂದರೆ ಮೇ 28 ರಂದು ಐಪಿಎಲ್ ಮುಗಿಯುವ ಮೊದಲು ಕಂಟೆಂಟ್ ಅನ್ನು ಸೇರಿಸಲಾಗುವುದು. ವೀಕ್ಷಕರು ಈಗಲೂ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಅಸ್ತಿತ್ವದಲ್ಲಿರುವ ಸ್ಕ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಪಾಶ್ಚಿಮಾತ್ಯೀಕರಿಸಿದ ಕಂಟೆಂಟ್‌ನಿಂದ ಪ್ರಾಬಲ್ಯ ಹೊಂದಿದೆ. ಆದರೆ, ಜಿಯೋ ಸ್ಟುಡಿಯೋಸ್ ಪ್ರತಿಭೆಗಳ ಅಡ್ಡ ಪರಾಗಸ್ಪರ್ಶಕ್ಕೆ ವೇಗವರ್ಧಕವಾಗಲು ಮುಂದಾಗುತ್ತದೆ. ಈ ಮೂಲಕ ನಾವು ಸಾಧ್ಯವಾದಷ್ಟು ಭಾರತೀಯರಾಗಲು ಬಯಸುತ್ತೇವೆ ಹಾಗೆಯೇ ವೀಕ್ಷಕರಿಗೆ ಸುಂಕವನ್ನು ಸರಳವಾಗಿರಿಸುವುದು ಸಹ ನಮ್ಮ ಯೋಜನೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಭಾರತವು ಬೆಲೆ ಆಧಾರದ ಮೇಲೆ ಇರುವ ಮಾರುಕಟ್ಟೆಯಾಗಿದ್ದು, ನೆಟ್‌ಫ್ಲಿಕ್ಸ್‌ಗೆ ಪ್ರವೇಶವನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸುವಂತೆ ಬೆಲೆಗಳನ್ನು ಕಡಿತಗೊಳಿಸಲಾಗುತ್ತದೆ. ಹಾಗೆಯೇ ಹಲವಾರು ಪ್ರಾದೇಶಿಕ ಓಟಿಟಿಗಳು ಸ್ಥಳೀಯ ಸಿನಿಮಾ ಅಭಿಮಾನಿಗಳನ್ನು ಆಕರ್ಷಿಸುವ ಮೂಲಕ ಉತ್ತಮ ಚಂದಾದಾರರ ನೆಲೆಯನ್ನು ಕಂಡುಕೊಳ್ಳುತ್ತಿವೆ.ಆದರೆ, ಜಿಯೋ ಸಿನಿಮಾದಲ್ಲಿ ಕಂಟೆಂಟ್‌ಹಾಗೂ ಬೆಲೆ ಬಗ್ಗೆ ಯೋಜಿಸಲಾಗುತ್ತದೆ ಎಂದಿದ್ದಾರೆ.
ಇನ್ನು ಮೊದಲ ವಾರದಲ್ಲಿ ಪ್ಲಾಟ್‌ಫಾರ್ಮ್ 5.5 ಬಿಲಿಯನ್ ವಿಡಿಯೋ ವೀಕ್ಷಣೆಗಳನ್ನು ಕಂಡಿದೆ ಎಂದು ಜಿಯೋ ಸಿನಿಮಾ ಮಾಹಿತಿ ನೀಡಿದ್ದು, ಅದರಲ್ಲೂ ಏಪ್ರಿಲ್ 12, 2023 ರಂದು ಜಿಯೋ ಸಿನಿಮಾದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯವು ದಾಖಲೆಯ 22 ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡಿದೆ ಎಂದು ಉಲ್ಲೇಖಿಸಿದೆ.
ಇದಕ್ಕೆ ಪ್ರತಿಸ್ಪರ್ಧಿಯಾಗಿರುವ ಡಿಸ್ನಿ ಸ್ಟಾರ್ 20 ಕ್ಕೂ ಹೆಚ್ಚು ಚಾನೆಲ್‌ಗಳಲ್ಲಿ ಪಂದ್ಯಗಳನ್ನು ಪ್ರಸಾರ ಮಾಡುತ್ತಿದೆ. ಅದರಂತೆ ಮೊದಲ 10 ಐಪಿಎಲ್ ಪಂದ್ಯಗಳು 62.3 ಶತಕೋಟಿ ನಿಮಿಷಗಳ ವೀಕ್ಷಣೆ ಸಮಯವನ್ನು ಹೊಂದಿವೆ. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಆರಂಭಿಕ ಪಂದ್ಯದಲ್ಲೇ 56 ಮಿಲಿಯನ್‌ನ ಗರಿಷ್ಠ ವೀಕ್ಷಣೆ ಹೊಂದಿದೆ.

ಇದೇ ಮೊದಲ ಬಾರಿಗೆ ಡಿಸ್ನಿ ಸ್ಟಾರ್ ಮತ್ತು ವಯಾಕಾಮ್ 18 ಕ್ರಮವಾಗಿ ದೂರದರ್ಶನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪಂದ್ಯಗಳನ್ನು ಪ್ರಸಾರ ಮಾಡುತ್ತಿವೆ. ಈ ಪ್ರಸಾರದ ಹಕ್ಕು ಪಡೆಯಲು ಈ ಎರಡೂ ಕಂಪೆನಿಗಳು ಭಾರೀ ಖರ್ಚು ಮಾಡಿದ್ದವು. ಈ ಮೂಲಕ ಕ್ರಿಕೆಟ್ ವೀಕ್ಷಿಸಲು ಓಟಿಟಿಯನ್ನು ಆದ್ಯತೆಯ ಮೋಡ್‌ನಂತೆ ಅಳವಡಿಸಿಕೊಳ್ಳುವ ಅಭ್ಯಾಸವನ್ನು ಬದಲಾಯಿಸಲು ತಮ್ಮದೇ ಆದ ಕೆಲಸ ಮಾಡುತ್ತಿವೆ.
ಅಂಬಾನಿ ಅವರು ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿದ್ದು, ಐಪಿಎಲ್‌ನ ಜನಪ್ರಿಯತೆಯನ್ನು ಹೆಚ್ಚಿಸುತ್ತಿದ್ದಾರೆ. ಹಾಗೆಯೇ ಅಂತಿಮವಾಗಿ ಕ್ರಿಕೆಟ್ ಮತ್ತು ಚಲನಚಿತ್ರಗಳ ಬಗ್ಗೆ ಹುಚ್ಚರಾಗಿರುವ 1.4 ಶತಕೋಟಿ ಜನರನ್ನು ಈ ಮೂಲಕ ಸೆಳೆಯುತ್ತಿದ್ದಾರೆ. ಈ ಮೂಲಕ ಜಾಗತಿಕವಾಗಿ ಸ್ಟ್ರೀಮಿಂಗ್ ದೈತ್ಯನಾಗಲು ಜಿಯೋ ಮುಂದಾಗಿದೆ. ಆದರೆ ಇದನ್ನು ಭಾರತದ ಜನರು ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೋ ಕಾದುನೋಡಬೇಕಿದೆ.


Click it and Unblock the Notifications








