Subscribe to Gizbot

ಮಾರುಕಟ್ಟೆಯಲ್ಲೇ ಅತೀ ಕಡಿಮೆ ದರ: ಜಿಯೋದಿಂದ ರೂ.6ಕ್ಕೆ 1 GB ಡೇಟಾ..!

Written By:

ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಆವಿಷ್ಕಾರಗಳಿಗೆ ಮತ್ತು ಹೊಸ ತನಗಳಿಗೆ ಕಾರಣವಾಗಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಮತ್ತೊಂದು ಹೊಸ ಸಾಹಕ್ಕೆ ಕೈ ಹಾಕಿದೆ ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಕೇವಲ ರೂ.6ಕ್ಕೆ 1GB 4G ಡೇಟಾವನ್ನು ಬಳಕೆಗೆ ನೀಡಲು ಮುಂದಾಗಿದೆ.

ಮಾರುಕಟ್ಟೆಯಲ್ಲೇ ಅತೀ ಕಡಿಮೆ ದರ: ಜಿಯೋದಿಂದ ರೂ.6ಕ್ಕೆ 1 GB ಡೇಟಾ..!

ಓದಿರಿ: ಮೊಬೈಲ್ ಡೇಟಾ ಸಾಲುತ್ತಿಲ್ಲವೇ..? ಈ ಟ್ರಿಕ್ ಬಳಕೆ ಮಾಡಿಕೊಳ್ಳಿ..!

ಗ್ರಾಹಕರಿಗೆ ಹೊಸ ವರ್ಷದ ಸಲುವಾಗಿ ಜಿಯೋ ಎರಡು ಹೊಸ ಆಫರ್ ಗಳನ್ನು ನೀಡಲು ಮುಂದಾಗಿದೆ. ಜಿಯೋ ಪ್ರೈಮ್ ಸದಸ್ಯರು ಮಾತ್ರವೇ ಈ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದ್ದು, ಜಿಯೋ ಗ್ರಾಹಕರು ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ದರಕ್ಕೆ ಡೇಟಾವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರತಿ ನಿತ್ಯ 1.2GBಗಿಂತಲೂ ಅಧಿಕ ಹೈಸ್ಪೀಡ್ ಡೇಟಾ:

ಪ್ರತಿ ನಿತ್ಯ 1.2GBಗಿಂತಲೂ ಅಧಿಕ ಹೈಸ್ಪೀಡ್ ಡೇಟಾ:

ಜಿಯೋ ಎರಡು ಆಫರ್ ಗಳನ್ನು ಬಿಡುಗಡೆ ಮಾಡಿದ್ದು, ರೂ.199 ಮತ್ತು 299 ಪ್ಲಾನ್‌ ಲಾಂಚ್ ಮಾಡಿದ್ದು, ಇದರಲ್ಲಿ ಗ್ರಾಹಕರು ಪ್ರತಿ ನಿತ್ಯ 1.2GB ಮತ್ತು 2GB ಡೇಟಾವನ್ನು ಬಳಕೆ ಪಡೆದುಕೊಳ್ಳಿದ್ದಾರೆ. ರೂ.199ಕ್ಕೆ 33.6 ಡೇಟಾ ಮತ್ತು ರೂ.299ಕ್ಕೆ 56 GB ಡೇಟಾವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಇದರಿಂದಾಗಿ ಗ್ರಾಹಕರಿಗೆ ರೂ.6ಕ್ಕಿಂತಕಲೂ ಕಡಿಮೆ ಬೆಲೆಗೆ ಡೇಟಾ ದೊರೆಯಲಿದೆ.

ಡೇಟಾ ಬಳಕೆಗೆ ಮಿತಿ ಇಲ್ಲ:

ಡೇಟಾ ಬಳಕೆಗೆ ಮಿತಿ ಇಲ್ಲ:

ಇನ್ನೊಂದು ಮಾದರಿಯಲ್ಲಿ ಈ ಆಫರ್ ಅನ್ನು ನೋಡುವುದಾದರೆ ಜಿಯೋ ತನ್ನ ಬಳಕೆದಾರರಿಗೆ ಯಾವುದೇ ಡೇಟಾ ಬಳಕೆಯ ಮಿತಿಯನ್ನು ವಿಧಿಸಿಲ್ಲ. ಆದರೆ 4G ಡೇಟಾ ಬಳಕೆಯನ್ನು ಮಾತ್ರವೇ ಮಿತಿಗೊಳಿಸಿದ್ದು, ಇದಾದ ನಂತರದಲ್ಲಿ ಕಡಿಮೆ ವೇಗದ ಡೇಟಾವನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಬೇರೆ ಕಂಪನಿ ಗ್ರಾಹಕರಿಗೆ ಇಲ್ಲ:

ಬೇರೆ ಕಂಪನಿ ಗ್ರಾಹಕರಿಗೆ ಇಲ್ಲ:

ಈ ಮಾದರಿಯ ಯಾವುದೇ ಆಫರ್ ಅನ್ನು ಬೇರೆ ಯಾವುದೇ ಟೆಲಿಕಾಂ ಗಳು ಇದುವರೆಗೂ ನೀಡಿಲ್ಲ ಎನ್ನಲಾಗಿದ್ದು, ಇದೇ ಮೊದಲ ಬಾರಿಗೆ ಜಿಯೋ ಅತೀ ಕಡಿಮೆ ಬೆಲೆಗೆ ಅತೀ ವೇಗದ ಸೇವೆಯನ್ನು ನೀಡುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Jio cost of less than Rs. 6 per GB. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot