ಮೊಬೈಲ್ ಡೇಟಾ ಸಾಲುತ್ತಿಲ್ಲವೇ..? ಈ ಟ್ರಿಕ್ ಬಳಕೆ ಮಾಡಿಕೊಳ್ಳಿ..!
ಭಾರತೀಯ ಮಾರುಕಟ್ಟೆಯಲ್ಲಿ ಡೇಟಾ ದರ ತೀರಾ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ಬೆನ್ನಲೇ ಫೇಸ್‌ಬುಕ್ ನಲ್ಲಿ ವಿಡಿಯೋಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇದು ನಿಮ್ಮ ಡೇಟಾ ವನ್ನು ಬೇಗನೆ ಖಾಲಿ ಮಾಡುತ್ತಿದೆ ಎನ್ನಲಾಗಿದೆ.

ಓದಿರಿ: ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ನಲ್ಲಿ ನೀವು ನೋಡಲೇ ಬೇಕಾದದ್ದು..!
ಶೀಘ್ರವೇ ಫೇಸ್‌ಬುಕ್ ಯುಟ್ಯೂಬ್ ಮಾದರಿಯಲ್ಲಿ ವಿಡಿಯೋ ಸೇವೆಯನ್ನು ಆರಂಭಿಸಲಿದ್ದು, ಇದಕ್ಕಾಗಿ ಹೆಚ್ಚಿನ ವಿಡಿಯೋಗಳನ್ನು ತನ್ನ ನ್ಯೂಸ್ ಫೀಡ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ವಿಡಿಯೋಗಳು ಆಟೋ ಪ್ಲೇಯಾಗಲಿದ್ದು, ಇದನ್ನು ಹೇಗೆ ಸ್ಟಾಪ್ ಮಾಡುವುದು ಎನ್ನುವುದನ್ನು ನಾವು ತಿಳಿಸಿಕೊಡಲಿದ್ದೇವೆ.

ಹಂತ 01:
ಫೇಸ್‌ಬುಕ್ ವಿಡಿಯೊ ಆಟೊ ಪ್ಲೇ ಆಗದಂತೆ ಮಾಡಲು ನಿಮ್ಮ ಫೇಸ್‌ಬುಕ್ ಆಪ್‌ನಲ್ಲಿ ಕೆಲವು ಆಯ್ಕೆಗಳನ್ನು ಬದಲಿಸಬೇಕಾಗುತ್ತದೆ. ಇದಕ್ಕಾಗಿ ಮೊದಲು ಫೇಸ್‌ಬುಕ್ ಆಪ್‌ನಲ್ಲಿ ನಲ್ಲಿ ಕಾಣುವ ಮೂರು ಗೆರೆಗಳ ಮೆನು ಮೇಲೆ ಕ್ಲಿಕ್ ಮಾಡಿ.


ಹಂತ 02:
ಬಳಿಕ ಕೆಳಗೆ ಕಾಣುವ ಆಪ್ ಸೆಟಿಂಗ್ಸ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕಾಣುವ ಆಟೋ ಪ್ಲೇ (Auto-play) ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕಾಣುವ ಆಯ್ಕೆಗಳ ಪೈಕಿ ನೇವರ್ ಆಟೋ ಪ್ಲೇ ವಿಡಿಯೋ (Never Auto-play Video) ಮೇಲೆ ಕ್ಲಿಕ್ ಮಾಡಿ.

ಹಂತ 03:
ಹೀಗೆ ಮಾಡುವ ಮೂಲಕ ನ್ಯೂಸ್ ಫೀಡ್‌ನಲ್ಲಿ ಬರುವ ವಿಡಿಯೊಗಳೂ ಆಟೊ ಪ್ಲೇ ಆಗುವುದನ್ನು ನಿಲ್ಲಿಸಬಹುದಾಗಿದೆ. ನೀವು ವಿಡಿಯೋಗಳನ್ನು ನೋಡಬೇಕಾದರೆ ವಿಡಿಯೋ ಮೇಲೆ ಕ್ಲಿಕ್ ಮಾಡಿದರೆ ಮಾತ್ರ ವಿಡಿಯೋ ಪ್ಲೇ ಆಗುತ್ತದೆ.

ಡೇಟಾ ಬಳಕೆ ಕಡಿಮೆ:
ಈಗಾಗಲೇ ಡೇಟಾ ಬಳಕೆ ಕಡಿಮೆ ಮಾಡಿಕೊಳ್ಳಬಹುದಾಗಿದ್ದು, ಇದರಿಂದಾಗಿ ನಿಮ್ಮ ಮೊಬೈಲ್ ಡೇಟಾ ಹೆಚ್ಚಾಗಿ ಬಾಳಿಕೆ ಬರಲಿದೆ. ವಿಡಿಯೋ ಹೆಚ್ಚಿನ ಪ್ರಮಾಣದ ಡೇಟಾವನ್ನು ಖಾಲಿ ಮಾಡಲಿದೆ ಎನ್ನಲಾಗಿದೆ.


Click it and Unblock the Notifications








