Home
ಸುದ್ದಿಜಾಲ

ಜಿಯೋದಿಂದ ಮತ್ತೆ ಭರ್ಜರಿ ಕೊಡುಗೆ: ಪ್ರತಿದಿನ 2GB ಡೇಟಾ ಉಚಿತ!

ಪ್ರಸ್ತುತ ಲಾಕ್‌ಡೌನ್‌ ಅವಧಿಯಲ್ಲಿ ದೇಶದ ಟೆಲಿಕಾಂ ಸಂಸ್ಥೆಗಳು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಿವೆ. ಮುಖ್ಯವಾಗಿ ತಮ್ಮ ಚಂದಾದಾರಿಗೆ ಅನುಕೂಲವಾಗಲೆಂದು ವ್ಯಾಲಿಡಿಟಿ ಅವಧಿಯಲ್ಲಿ ವಿಸ್ತರಣೆ ಹಾಗೂ ಅಧಿಕ ಡೇಟಾ ಪ್ರಯೋಜನಗಳ ಪ್ಲ್ಯಾನ್‌ಗಳನ್ನು ನೀಡಿವೆ. ಆ ಪೈಕಿ ಲೀಡಿಂಗ್‌ನಲ್ಲಿರುವ ರಿಲಾಯನ್ಸ್‌ ಜಿಯೋ ಟೆಲಿಕಾಂ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ. ಈಗ ಮತ್ತೆ ಭಾರಿ ಆಫರ್‌ವೊಂದನ್ನು ತಿಳಿಸಿದೆ.

ಹೌದು, ಜಿಯೋ ಟೆಲಿಕಾಂ ತನ್ನ ಚಂದಾದಾರರಿಗೆ ಪ್ರತಿದಿನ ಹೆಚ್ಚುವರಿಯಾಗಿ ಉಚಿತ 2GB ಡೇಟಾ ಒದಗಿಸುತ್ತಿದೆ. ಕಳೆದ ತಿಂಗಳು ಮಾರ್ಚ್ ತಿಂಗಳಿನಲ್ಲಿ ಜಿಯೋ ಡೇಟಾ ಪ್ಯಾಕ್ ನಡಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಉಚಿತವಾಗಿ ನೀಡಿತ್ತು. ಅದೇ ಕೊಡುಗೆಯನ್ನು ಇದೀಗ ಮತ್ತೆ ಲಭ್ಯವಾಗಿಸಿದ್ದು, ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಹಕರಿಗೆ ಖುಷಿ ತಂದಿದೆ. ಅಂದಹಾಗೆ ಈ ಉಚಿತ ಡೇಟಾ ಕೊಡುಗೆಯು ನಾಲ್ಕು ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಹೆಚ್ಚುವರಿ ಉಚಿತ ಡೇಟಾ

ಹೆಚ್ಚುವರಿ ಉಚಿತ ಡೇಟಾ

ಜಿಯೋ ತನ್ನ ಕೆಲವು ಚಂದಾದಾರರ ಖಾತೆಗೆ ಪ್ರತಿದಿನ ಹೆಚ್ಚುವರಿ 2GB ಡೇಟಾ ಪ್ರಯೋಜನ ಜಮಾ ಮಾಡುವ ಕೊಡುಗೆ ನೀಡಿದೆ. ಈ ಕೊಡುಗೆ ಪ್ರಸ್ತುತ ಅವರ ಪ್ಲ್ಯಾನ್‌ ಜೊತೆಗೆ ಈ ಕೊಡುಗೆಯು ಲಭ್ಯವಾಗುತ್ತದೆ. ಆದರೆ ಈ ಕೊಡುಗೆಯು ನಾಲ್ಕು ದಿನಗಳ ವ್ಯಾಲಿಡಿಟಿ ಹೊಂದಿದೆ. ಈಗಾಗಲೆ ಇದೇ ಏ.27ರಿಂದ ಈ ಕೊಡುಗೆಯು ಲಭ್ಯವಾಗಿದ್ದು, ಮೇ 1 ಅಥವಾ ಮೇ 2 ಅಥವಾ ಮೇ 3ರ ವರೆಗೂ ಸೌಲಭ್ಯ (ಸೌಲಭ್ಯ ದೊರೆತ ದಿನಾಂಕದಿಂದ ನಾಲ್ಕು ದಿನ ಮಾತ್ರ) ಲಭ್ಯವಾಗಲಿದೆ.

ಕೊಡುಗೆ ಲಭ್ಯತೆ ಬಗ್ಗೆ ತಿಳಿಯುವುದು ಹೇಗೆ

ಕೊಡುಗೆ ಲಭ್ಯತೆ ಬಗ್ಗೆ ತಿಳಿಯುವುದು ಹೇಗೆ

ಸದ್ಯ ಜಿಯೋ ‘ಜಿಯೋ ಡಾಟಾ ಪ್ಯಾಕ್' ಅಡಿಯಲ್ಲಿ ಪ್ರಿಪೇಯ್ಡ್ ಗ್ರಾಹಕರಿಗೆ ದಿನಕ್ಕೆ 2GB ಉಚಿತ ಡೇಟಾವನ್ನು ನೀಡುತ್ತಿದೆ. ಅಂದಹಾಗೆ ಈ ಕೊಡುಗೆಯು ಕೆಲವರಿಗೆ ಇದೇ ಏ.27ರಿಂದ ಇನ್ನು ಕೆಲವರಿಗೆ ಏ.28 ದಿಂದ ಲಭ್ಯವಾಗಿದೆ. ಇನ್ನು ಚಂದಾದಾರರು ಈ ಕೊಡುಗೆ ಲಭ್ಯವಾಗಿದೆಯಾ ಇಲ್ಲವೇ ಎಂಬುದನ್ನು ಮೈ ಜಿಯೋ ಅಪ್ಲಿಕೇಶನ್ ಮೂಲಕ ತಿಳಿಯಬಹುದಾಗಿದೆ. ಮೈ ಜಿಯೋ ಆಪ್‌ನಲ್ಲಿ ಮೈ ಪ್ಲ್ಯಾನ್ಸ್‌ ವಿಭಾಗದಲ್ಲಿ ನೋಡಬಹುದಾಗಿದೆ. ಜಿಯೋದ ಇತರೆ ಪ್ರತಿದಿನ 2GB ಡೇಟಾ ಪ್ಲ್ಯಾನ್‌ಗಳ ಬಗ್ಗೆ ಮುಂದೆ ಓದಿರಿ.

ಜಿಯೋ 249ರೂ. ಪ್ಲ್ಯಾನ್

ಜಿಯೋ 249ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ ಉಚಿತ 1,000 ನಿಮಿಷಗಳ FUP ಮಿತಿ ಇದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.

ಜಿಯೋ 444ರೂ. ಪ್ಲ್ಯಾನ್

ಜಿಯೋ 444ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗುತ್ತದೆ. (ಒಟ್ಟು ಡೇಟಾ 112GB). ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ ಉಚಿತ 2,000 ನಿಮಿಷಗಳ FUP ಮಿತಿ ಇದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ ಪೂರ್ಣ ಅವಧಿಗೆ ಒಟ್ಟು 2000ಎಸ್ಎಮ್ಎಸ್‌ಗಳ ಪ್ರಯೋಜನ.

ಜಿಯೋ 599ರೂ. ಪ್ಲ್ಯಾನ್

ಜಿಯೋ 599ರೂ. ಪ್ಲ್ಯಾನ್

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಈ ಪ್ಲ್ಯಾನ್ ಸಹ ಪ್ರತಿದಿನ 1.2GB ಡೇಟಾ ಪ್ರಯೋಜನವನ್ನು ಹೊಂದಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದಿದ್ದು, ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ 3000 ಉಚಿತ ನಿಮಿಷಗಳ ಮಿತಿ ಹೊಂದಿದೆ.

Best Mobiles in India

English summary
Reliance Jio offering 2GB Daily Data for prepaid customers under Jio Data Pack for four days.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+