Subscribe to Gizbot

ಏನೀದು ಶಿಯೋಮಿ ಬಿಗ್ ಇಸ್ ಬ್ಯಾಕ್..? ಬಿಗ್ ಫೋನ್ ಯಾವುದು..?

Written By:

ಭಾರತೀಯ ಸ್ಮಾರ್ಟ್‌ಫೋನ್ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿರುವ ಶಿಯೋಮಿ ಈ ಬಾರಿ ದೊಡ್ಡ ಸ್ಮಾರ್ಟ್‌ಫೋನ್ ಒಂದನ್ನು ಮಾರುಕಟ್ಟಗೆ ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ. ನೂತನ ಫೋನ್ ಮಿ ಮಾಕ್ಸ್ 2 ಸ್ಮಾರ್ಟ್‌ಫೋನ್ ಅನ್ನು ಜುಲೈ 18 ರಂದು ಲಾಂಚ್ ಮಾಡಲಿದೆ ಎನ್ನಲಾಗಿದೆ.

ಏನೀದು ಶಿಯೋಮಿ ಬಿಗ್ ಇಸ್ ಬ್ಯಾಕ್..? ಬಿಗ್ ಫೋನ್ ಯಾವುದು..?

ಇದಕ್ಕಾಗಿ ಈಗಾಗಲೇ ಸಾಮಾಜಿಕ ಜಾಲತಾಣಗಲ್ಲಿ ಶಿಯೋಮಿ ಭಾರೀ ಪ್ರಚಾರವನ್ನು ಆರಂಭಿಸಿದೆ. ಈಗಾಗಲೇ ಬಜೆಟ್ ಬೆಲೆಯಲ್ಲಿ ಸಾಕಷ್ಟು ಫೋನ್ ಗಳನ್ನು ಬಿಡುಗಡೆ ಮಾಡಿರುವ ಶಿಯೋಮಿ ಈ ಬಾರಿ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5300mAh ಬ್ಯಾಟರಿ:

5300mAh ಬ್ಯಾಟರಿ:

ಮಿ ಮಾಕ್ಸ್ 2 ಸ್ಮಾರ್ಟ್‌ಫೋನಿನಲ್ಲಿ ದೊಡ್ಡದಾದ 5300mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಈ ಬ್ಯಾಟರಿ ವೇಗವಾಗಿ ಚಾರ್ಜ್ ಆಗಲಿ ಎಂಬ ಕಾರಣಕ್ಕೆ ಕ್ವಾಲ್ಕಮ್ ಕ್ವೀಕ್ ಚಾರ್ಜರ್ 3.0 ನೀಡಲಾಗಿದೆ. ಒಂದೇ ಗಂಟೆಯಲ್ಲಿ 68% ಚಾರ್ಜ್ ಆಗಲು ಈ ಬ್ಯಾಟರಿ ಶಕ್ತವಾಗಿದೆ.

12 MP ಸೋನಿ ಕ್ಯಾಮರಾ:

12 MP ಸೋನಿ ಕ್ಯಾಮರಾ:

ಮಿ ಮಾಕ್ಸ್ 2 ಸ್ಮಾರ್ಟ್‌ಫೋನಿನಲ್ಲಿ ಸೋನಿಯ IMX386 ಸೆನ್ಸಾರ್ ಇರುವಂತಹ 12MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ನೀಡಿದ್ದು, ಎರಡು ಕ್ಯಾಮೆರಾಗಳು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ.

ಉತ್ತಮ ವಿನ್ಯಾಸ:

ಉತ್ತಮ ವಿನ್ಯಾಸ:

ಮಿ ಮಾಕ್ಸ್ 2 ಸ್ಮಾರ್ಟ್‌ಫೋನು ಸಂಪೂರ್ಣ ಯುನಿ ಬಾಡಿ ಮೆಟಲ್ ವಿನ್ಯಾಸವನ್ನು ಹೊಂದಿದೆ. ರೌಂಡ್ ಕಾರ್ನರ್ ಡಿಸೈನ್ ಇದಾಗಿದೆ. ನೋಡಲು ಐಫೋನ್ 7 ಮಾದರಿಯಲ್ಲಿ ಕಾಣಿಸಲಿದೆ. ಇದರಲ್ಲಿ 6.44 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಮಿ ಮಾಕ್ಸ್ 2 ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ಬಾಪ್ ಡ್ರಾಗನ್ 625 ಚಿಪ್ ಸೆಟ್ ಇದ್ದು, 4GB RAM ಕಾಣಬಹುದಾಗಿದೆ. ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. 4G VoLTE ಸಫೋರ್ಟ್ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Xiaomi has scheduled yet another smartphone launch in India on July 18. The company is using the tagline ‘Big is Back,’ to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot