Home
ಸುದ್ದಿಜಾಲ

ಜಿಯೋ ಗ್ರಾಹಕರಿಗೆ ಬಿಗ್‌ ಶಾಕ್‌; ಈ ಎರಡು ಜನಪ್ರಿಯ ಪ್ಲ್ಯಾನ್‌ಗಳ ಕಥೆ ಮುಗಿಯಿತು!

ಭಾರತೀಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಿಲಾಯನ್ಸ್‌ ಜಿಯೋ ಟೆಲಿಕಾಂ ಕೆಲವು ಅತ್ಯುತ್ತಮ ಪ್ಲ್ಯಾನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಜಿಯೋ ಪ್ರೀಪೇಯ್ಡ್ ಜೊತೆಗೆ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳಿಂದಲೂ ಸಹ ಗುರುತಿಸಿಕೊಂಡಿದೆ. ಆ ಪೈಕಿ ಕೆಲವು ಯೋಜನೆಗಳು ಅಧಿಕ ಡೇಟಾ ಜೊತೆಗೆ ಹೆಚ್ಚುವರಿಯಾಗಿ ಪ್ರಯೋಜನ ಸಹ ಪಡೆದಿದ್ದು, ಗ್ರಾಹಕರಿಗೆ ಖುಷಿ ನೀಡಿವೆ. ಅಲ್ಲದೇ ದೀರ್ಘಾವಧಿ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳು ಇವೆ. ಆದ್ರೆ, ಇದೀಗ ಜಿಯೋ ಮಾಡಿರುವ ಈ ನಿರ್ಧಾರ ನಿಜಕ್ಕೂ ಶಾಕ್‌ ಎನಿಸಿದೆ.

ಹೌದು, ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಜಿಯೋ ಸಂಸ್ಥೆಯು ತನ್ನ ಎರಡು ಜನಪ್ರಿಯ ಪ್ರೀಪೇಯ್ಡ್‌ ಯೋಜನೆಗಳನ್ನು ಸಂಪೂರ್ಣವಾಗಿ (removed) ನಿಲ್ಲಿಸಿದೆ. ಆ ಎರಡು ಜನಪ್ರಿಯ ರೀಚಾರ್ಜ್‌ ಯೋಜನೆಗಳು ಕಡಿಮೆ ಬೆಲೆಯಲ್ಲಿ ಅಧಿಕ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಜೊತೆಗೆ ಅನಿಯಮಿತ ವಾಯಿಸ್‌ ಕರೆ, ನಿಗದಿತ ಡೇಟಾ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿವೆ.

ಜಿಯೋ ಗ್ರಾಹಕರಿಗೆ ಬಿಗ್‌ ಶಾಕ್‌; ಈ ಎರಡು ಜನಪ್ರಿಯ ಪ್ಲ್ಯಾನ್‌ಗಳ ಕಥೆ ಮುಗಿಯಿತು!

ಜಿಯೋ (Jio) ತನ್ನ ಪ್ಲ್ಯಾನ್‌ಗಳ ಲಿಸ್ಟ್‌ನಿಂದ ತೆಗೆದುಹಾಕಿರುವ ಪ್ರೀಪೇಯ್ಡ್‌ ಪ್ಲ್ಯಾನ್‌ಗಳೆಂದರೆ, ಅವು ಕ್ರಮವಾಗಿ ಜಿಯೋ 395ರೂ ಮತ್ತು ಜಿಯೋ 1559ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಆಗಿವೆ. ಹೀಗಾಗಿ ಈ ಎರಡೂ ಯೋಜನೆಗಳು ಟೆಲಿಕಾಂನ ಅಧಿಕೃತ ವೆಬ್‌ಸೈಟ್ ಅಥವಾ ಜಿಯೋ ಮೊಬೈಲ್ ಆಪ್‌ನಲ್ಲಿ ಲಭ್ಯ ಇಲ್ಲ. ಹಾಗಾದರೆ ಜಿಯೋ ಟೆಲಿಕಾಂ ತೆಗೆದುಹಾಕಿರುವ ಈ ಎರಡು ಪ್ಲ್ಯಾನ್‌ಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಸಂಸ್ಥೆಯ 395ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ ಸಂಸ್ಥೆಯ ಈ 395ರೂ. ರೀಚಾರ್ಜ್‌ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಪಡೆದುಕೊಂಡಿತ್ತು. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 6GB ಡೇಟಾ ಪ್ರಯೋಜನ ಹೊಂದಿತ್ತು. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿಗೆ ಒಟ್ಟು 1000 ಎಸ್‌ಎಮ್‌ಎಸ್‌ ಪ್ರಯೋಜನದ ಸೌಲಭ್ಯ ದೊರೆಯುತ್ತಿತ್ತು. ಇದರೊಂದಿಗೆ ಈ ರೀಚಾರ್ಜ್‌ ಪ್ಲ್ಯಾನಿನಲ್ಲಿ ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಸಹ ಇತ್ತು.

ಅಂದಹಾಗೆ ಈ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನಿನಲ್ಲಿ ಒಟ್ಟು 6GB ಡೇಟಾ ಸೌಲಭ್ಯ ಇತ್ತು, ಯಾವುದೇ ದೈನಂದಿನ ಡೇಟಾ ಮಿತಿ ಇರಲಿಲ್ಲ. ಹಾಗೆಯೇ ಒಟ್ಟು 1000 ಎಸ್‌ಎಮ್‌ಎಸ್‌ ಲಭ್ಯ ಇತ್ತು, ದೈನಂದಿನ ಮಿತಿ ಇರಲಿಲ್ಲ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್‌ ಸೇವೆಗಳು ಕೂಡಾ ಲಭ್ಯ ಇದ್ದವು.

ಜಿಯೋ ಸಂಸ್ಥೆಯ 1559ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ ಸಂಸ್ಥೆಯ ಈ 1559ರೂ. ರೀಚಾರ್ಜ್‌ ಯೋಜನೆಯು ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿ ಪಡೆದುಕೊಂಡಿತ್ತು. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24GB ಡೇಟಾ ಪ್ರಯೋಜನ ಹೊಂದಿತ್ತು. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿಗೆ ಒಟ್ಟು 3600 ಎಸ್‌ಎಮ್‌ಎಸ್‌ ಪ್ರಯೋಜನದ ಸೌಲಭ್ಯ ದೊರೆಯುತ್ತಿತ್ತು. ಇದರೊಂದಿಗೆ ಈ ರೀಚಾರ್ಜ್‌ ಯೋಜನೆಯಲ್ಲಿ ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಸಹ ಇತ್ತು.

ಅಂದಹಾಗೆ ಈ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನಿನಲ್ಲಿ ಒಟ್ಟು 24GB ಡೇಟಾ ಸೌಲಭ್ಯ ಇತ್ತು, ಯಾವುದೇ ದೈನಂದಿನ ಡೇಟಾ ಮಿತಿ ಇರಲಿಲ್ಲ. ಹಾಗೆಯೇ ಒಟ್ಟು 3600 ಎಸ್‌ಎಮ್‌ಎಸ್‌ ಲಭ್ಯ ಇತ್ತು, ದೈನಂದಿನ ಮಿತಿ ಇರಲಿಲ್ಲ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್‌ ಸೇವೆಗಳು ಕೂಡಾ ಲಭ್ಯ ಇದ್ದವು.

Best Mobiles in India

English summary
Jio discontinued its Rs 395 and Rs 1559 Recharge Plans. Check all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+