Home
ಸುದ್ದಿಜಾಲ

Dive VR glasses: ನಿಮ್ಮನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯಲಿದೆ ಈ VR ಗ್ಲಾಸ್; ಬೆಲೆ ಕೇವಲ 1,200ರೂ. ಅಷ್ಟೇ!

ಇತ್ತೀಚೆಗೆ ವಿಭಿನ್ನ ಗ್ಯಾಜೆಟ್‌ಗಳ ಅನಾವರಣ ಆಗುತ್ತಿದ್ದು, ಇವು ಹೊಸ ತಂತ್ರಜ್ಞಾನಕ್ಕೆ ಮುನ್ನುಡಿ ಬರೆಯುತ್ತಿವೆ. ಅದರಲ್ಲೂ ಟೆಕ್‌ ದೈತ್ಯ ಆಪಲ್‌ ಕೆಲವು ದಿನಗಳ ಹಿಂದೆ ಅತ್ಯಂತ ಆಕರ್ಷಕ ಹಾಗೂ ವಿಶೇಷ ಫೀಚರ್ಸ್‌ ಇರುವ ವಿಷನ್ ಪ್ರೊ ಅನ್ನು ಲಾಂಚ್ ಮಾಡಿದೆ. ಇದು ಬರೋಬ್ಬರಿ 2,88,406ರೂ.ಗಳನ್ನು ಹೊಂದಿದೆ. ಈ ಕಾರಣಕ್ಕೆ ಭಾರತದ ಬಹುಪಾಲು ಮಂದಿ ಈ ಕಡೆ ತಿರುಗಿಯೂ ನೋಡುವುದಿಲ್ಲ.

ಹೌದು, ಆಪಲ್‌ ಡಿವೈಸ್‌ಗಳು ಎಷ್ಟೇ ಹೆಚ್ಚಿನ ಬೆಲೆ ಹೊಂದಿದ್ದರೂ ಸಹ ಅಷ್ಟೇ ಪ್ರಮಾಣ ಫೀಚರ್ಸ್‌ ಅನ್ನು ಹೊಂದಿರುವುದು ಸಾಮಾನ್ಯ ಸಂಗತಿ. ಆದರೆ ಭಾರತದ ಜನರು ಎರಡು ಲಕ್ಷಕ್ಕೆ ಈ ಡಿವೈಸ್‌ ಖರೀದಿ ಮಾಡಿ ಬಳಕೆ ಮಾಡುವ ಬದಲು ಕೇವಲ 1200ರೂ.ಗಳಲ್ಲೇ ವಿಆರ್‌ ಗ್ಲಾಸ್ ಮೂಲಕ ಹೊಸ ಪ್ರಪಂಚವನ್ನೇ ವೀಕ್ಷಣೆ ಮಾಡುವುದು ಎಂದರೆ ನೀವು ನಂಬಲೇಬೇಕು. ಹಾಗಿದ್ರೆ, ಯಾವುದು ಈ ವಿಆರ್‌ಗ್ಲಾಸ್‌?, ಯಾವಾಗ ಲಭ್ಯ ಎಂಬ ಇಂಟ್ರೆಸ್ಟಿಂಗ್‌ ವಿಚಾರ ಇಲ್ಲಿದೆ ನೋಡಿ.

ನಿಮ್ಮನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯಲಿದೆ ಈ VR ಗ್ಲಾಸ್; ಬೆಲೆ ಕೇವಲ 1,200ರೂ..

ಅಗ್ಗದ ಬೆಲೆಯ ವಿಆರ್‌ ಗ್ಲಾಸ್: ಬಹುಪಾಲು ಭಾರತೀಯರು ಎಂದಿಗೂ ಸ್ಮಾರ್ಟ್‌ಡಿವೈಸ್‌ಗಳಿಗೆ ದೊಡ್ಡ ಪ್ರಮಾಣದ ಹಣ ಹೂಡಿಕೆ ಮಾಡುವುದಿಲ್ಲ. ಭಾರತೀಯರ ನಾಡಿ ಮಿಡಿತ ಅರಿತಿರುವ ದೇಶೀಯ ಬ್ರ್ಯಾಂಡ್ ಆಗಿರುವ ಜಿಯೋ ಈ ಕಾರಣಕ್ಕೆ ಅಗ್ಗದ ದರದಲ್ಲಿ ತನ್ನದೇ ಆದ ಸೇವೆ ನೀಡುತ್ತಿದೆ. ಅಷ್ಟೇ ಯಾಕೆ ಈಗ ಕೇವಲ 999ರೂ.ಗಳಿಗೆ 4G ಫೋನ್‌ ಅನ್ನು ಸಹ ಲಾಂಚ್ ಮಾಡಿದೆ. ಅದರಂತೆ ಈಗ ಅಗ್ಗದ ಬೆಲೆಯ ವಿಆರ್‌ ಗ್ಲಾಸ್ ಅನ್ನು ಸಹ ಘೋಷಣೆ ಮಾಡಿದೆ.

ಮೊದಲೇ ಹೇಳಿದಂತೆ ಸಾಮಾನ್ಯವಾಗಿ ಆಪಲ್‌ ಪರಿಚಯಿಸುತ್ತಿರುವ ಹೊಸ ವಿಆರ್‌ ಡಿವೈಸ್‌ ಅನ್ನು ಅಷ್ಟು ಬೆಲೆಗೆ ಖರೀದಿ ಮಾಡಿ ಬಳಕೆ ಮಾಡುವವರು ಬೆರಳಣಿಕೆ ಜನರು ಮಾತ್ರ. ಆದರೆ ಈ ವಿಆರ್‌ ಕನ್ನಡಕ 1200ರೂ.ಗಳಿಗೆ ಲಭ್ಯ ಆಗಲಿದೆ ಎನ್ನಲಾಗಿದ್ದು, ಇದನ್ನು ಜಿಯೋ ತಯಾರು ಮಾಡುತ್ತಿದೆ ಎಂದು ತಿಳಿದುಬಂದಿದೆ. ಈ ವಿಶೇಷ ಹಾಗೂ ಅಗ್ಗದ ಬೆಲೆಯ ಡಿವೈಸ್‌ಗೆ ಡೈವ್ (Dive VR glasses) ಎಂದು ಹೆಸರು ಇಡಲಾಗಿದೆ.

ಇಷ್ಟೊಂದು ಕಡಿಮೆ ಬೆಲೆಗೆ ಲಭ್ಯ ಆಗುತ್ತಿರುವ ಈ ಡೈವ್‌ ಕಡಿಮೆ ಫೀಚರ್ಸ್ ಅಥವಾ ಉತ್ತಮವಲ್ಲದ್ದು ಎಂದುಕೊಂಡರೆ ನಿಮ್ಮ ಅನಿಸಿಕೆ ಖಂಡಿತಾ ತಪ್ಪಾಗುತ್ತದೆ. ಜಿಯೋ ಇಷ್ಟು ಕಡಿಮೆ ಮೊತ್ತದಲ್ಲಿ ಈ ಗ್ಲಾಸ್‌ ಅನ್ನು ಮಾರಲು ಮುಂದಾಗಿದೆಯೇ ಹೊರತು ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಂಡಿಲ್ಲವಂತೆ. ಈ ಕಾರಣಕ್ಕಾಗಿಯೇ ಶಕ್ತಿಯುತ ಅನುಭವವನ್ನು ನೀಡಲು ಇದನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ವಿಶೇಷ ವಿಆರ್‌ ಗ್ಲಾಸ್‌ನ ಫೀಚರ್ಸ್ ಏನು?: ಈ ಡಿವೈಸ್‌ ಆಕರ್ಷಕ ವಿನ್ಯಾಸದಿಂದ ಕೂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ತಮ್ಮದೇ ಆದ ಪ್ರಭಾವ ಬೀರುವುದಂತೂ ಸತ್ಯ. ಅದರಂತೆ ಇದನ್ನು ಗಂಟೆಗಟ್ಟಲೆ ಬಳಕೆ ಮಾಡಿದ್ರೂ ಸಹ ಕಣ್ಣಿಗೆ ಯಾವುದೇ ಸಮಸ್ಯೆ ಆಗುವುದಿಲ್ಲವಂತೆ. ಅಷ್ಟು ಮಾತ್ರವಲ್ಲದೆ ತಲೆನೋವು ಸಹ ಬರುವುದಿಲ್ಲ ಎನ್ನಲಾಗಿದೆ. ಈ ಮೂಲಕ ಬಳಕೆದಾರರು ಆರಾಮದಾಯಕ ಅನುಭವ ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಇದೆಲ್ಲದಕ್ಕೂ ಮಿಗಿಲಾಗಿ ಜಿಯೋ ಡೈವ್‌ನಲ್ಲಿ ಬಳಕೆದಾರರು 100 ಇಂಚಿನ ವರ್ಚುವಲ್ ಡಿಸ್‌ಪ್ಲೇಯನ್ನು ವೀಕ್ಷಣೆ ಮಾಡುವ ಅನುಭವವನ್ನು ನೀಡುತ್ತದಂತೆ. ಈ ಮೂಲಕ ಸಿನಿಮಾ ಥಿಯೇಟರ್‌ ಅನುಭವ ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ ಗೇಮ್‌ ಆಡಬಹುದು, ಸಿನಿಮಾ ವೀಕ್ಷಣೆ ಮಾಡಬಹುದು ಹಾಗೂ ವೆಬ್‌ ಸರಣಿಯನ್ನು ಯಾವುದೇ ಅಡೆತಡೆ ಇಲ್ಲದೆ ವೀಕ್ಷಣೆ ಮಾಡಬಹುದು.

ನಿಮ್ಮನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯಲಿದೆ ಈ VR ಗ್ಲಾಸ್; ಬೆಲೆ ಕೇವಲ 1,200ರೂ..

ಇನ್ನು ಈ ಡಿವೈಸ್‌ ಯಾವುದೇ ನೆಟ್ವರ್ಕ್ ಅಥವಾ ವೈ ಫೈ ನೊಂದಿಗೆ ಕಾರ್ಯನಿರ್ವಹಿಸಲಿದ್ದು, ಜಿಯೋ ಸಿನಿಮಾ ಮತ್ತು ಜಿಯೋ ಟಿವಿ ಮೂಲಕ 6000+ ಚಲನಚಿತ್ರಗಳು, 1000+ ಟಿವಿ ಕಾರ್ಯಕ್ರಮಗಳು, 1000+ ಟಿವಿ ಚಾನೆಲ್‌ಗಳು ಮತ್ತು ಲೈವ್ ಸ್ಪೋರ್ಟ್ಸ್‌ಗಳನ್ನು ವೀಕ್ಷಣೆ ಮಾಡಬಹುದು. ಅದರಲ್ಲೂ ವಿಆರ್‌ ಆಪ್ ಮೂಲಕ ಮಕ್ಕಳಿಗೆ ಶಿಕ್ಷಣ ಸಹ ನೀಡಬಹುದಾಗಿದೆ.

Best Mobiles in India

English summary
The Dive VR glasses will be available for Rs 1200 and is manufactured by Jio. Users can get great entertainment by using it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+