ದೀಪಾವಳಿ ಹಬ್ಬಕ್ಕೆ ಜಿಯೋದಿಂದ ಬಂಫರ್ ಆಫರ್ ಘೋಷಣೆ; ಗ್ರಾಹಕರಿಗೆ ಖುಷಿ!
ಸದ್ಯ ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮಾ ಜೋರಾಗಿದೆ. ಈ ಹಬ್ಬದ ಸಂತಸವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ರಿಲಯನ್ಸ್ ಜಿಯೋ (Jio) ತನ್ನ ಚಂದಾದಾರರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಅದೆನೆಂದರೇ 899ರೂ ಮತ್ತು 3,599ರೂ. ಪ್ಲ್ಯಾನ್‌ಗಳ ಟ್ರೂ 5G ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳಲ್ಲಿ ಸುಮಾರು 3,350ರೂ. ಮೌಲ್ಯದ ಬಂಫರ್ ಕೊಡುಗೆಗಳನ್ನು ಘೋಷಿಸಿದೆ.
ಹೌದು, ಜಿಯೋ ಟೆಲಿಕಾಂ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗೆ 3,350ರೂ. ಮೌಲ್ಯದ ಪ್ರಯೋಜನಗಳಿಗೆ ಪ್ರವೇಶವನ್ನು ತಿಳಿಸಿದೆ. ಅಂದಹಾಗೆ ಇದೇ ಅಕ್ಟೋಬರ್ 25 ರಿಂದ ನವೆಂಬರ್ 5 ರ ವರೆಗೆ ಲಭ್ಯವಿರುವ ಈ ವಿಶೇಷ ಕೊಡುಗೆಗಳು ಜನಪ್ರಿಯ ಬ್ರಾಂಡ್‌ಗಳಾದ ಈಸ್ ಮೈಟ್ರಿಪ್, ಅಜಿಯೋ ಮತ್ತು ಸ್ವಿಗ್ಗಿಯ ವೋಚರ್‌ಗಳು ಹಾಗೂ ರಿಯಾಯಿತಿಗಳು ಸೇರಿವೆ.

ದೀಪಾವಳಿ ಧಮಾಕಾ ಆಫರ್ ವಿಶೇಷ
ಜಿಯೋ ಟೆಲಿಕಾಂನ 899ರೂ. ಹಾಗೂ 3,599ರೂ ಜಿಯೋ ಟ್ರೂ 5G ರೀಚಾರ್ಜ್ ಯೋಜನೆಗಳಿಗೆ, ಗ್ರಾಹಕರು ಈ ಕೆಳಗಿನ ಬೊಂಬಾಟ್ ಕೊಡುಗೆಗಳನ್ನು ಪಡೆಯಲಿದ್ದಾರೆ.
- ಗ್ರಾಹಕರಿಗೆ ಈಸ್ ಮೈಟ್ರಿಪ್ ನಿಂದ 3,000ರೂ. ಗಳ ವೋಚರ್, ಹೋಟೆಲ್ ಮತ್ತು ವಿಮಾನ ಪ್ರಯಾಣದ ಬುಕಿಂಗ್ ಗೆ ಅನ್ವಯಿಸುತ್ತದೆ. ಇದು ಅನುಕೂಲಕರ ಪ್ರಯಾಣ ಪ್ರಯೋಜನವನ್ನು ಸೇರಿಸುತ್ತದೆ.
- ಹಾಗೆಯೇ ಈ ಹಬ್ಬದ ಋತುವಿನಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಬಯಸುವ ಗ್ರಾಹಕರಿಗೆ 999ರೂ. ಮತ್ತು ಅದಕ್ಕಿಂತ ಹೆಚ್ಚಿನ ಖರೀದಿಗಳಿಗೆ ಮಾನ್ಯವಾಗಿರುವ ಅಜಿಯೋ (Ajio) ದಿಂದ 200ರೂ. ಗಳ ಕೂಪನ್ ಸಹ ಸಿಗಲಿದೆ.
- ಅಲ್ಲದೇ 150ರೂ. ಗಳ ಸ್ವಿಗ್ಗಿ ವೋಚರ್‌ನಲ್ಲಿ ರಿಯಾಯಿತಿ ದರಕ್ಕೆ ಆಹಾರ ತಿನಿಸುಗಳನ್ನು ಪಡೆಯಬಹುದು.
ಗ್ರಾಹಕರು ಎರಡೂ ಯೋಜನೆಗಳೊಂದಿಗೆ ರೀಚಾರ್ಜ್ ಮಾಡಿದ ನಂತರ, ಈ ವೋಚರ್‌ಗಳನ್ನು 'ಕೊಡುಗೆಗಳು' ವಿಭಾಗದ ಆಯ್ಕೆಯಲ್ಲಿ ಅವರ ಮೈಜಿಯೋ ಖಾತೆಗೆ ಜಮಾ ಮಾಡಲಾಗುತ್ತದೆ. ಕೊಡುಗೆಯನ್ನು ರಿಡೀಮ್ ಮಾಡಲು, ಬಳಕೆದಾರರು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.
* ಮೊದಲಿಗೆ ಮೈ ಜಿಯೋ ಆಪ್ ತೆರೆಯಿರಿ ಹಾಗೂ ಕೊಡುಗೆಗಳು ಆಯ್ಕೆಯ ವಿಭಾಗಕ್ಕೆ ಹೋಗಿ.
* ಬಳಿಕ 'ಮೈ ರೀವಾರ್ಡ್ಸ್' ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಅಪೇಕ್ಷಿತ ಪ್ರಯೋಜನಕ್ಕಾಗಿ ಕೂಪನ್ ಕೋಡ್ ಅನ್ನು ಆಯ್ಕೆ ಮಾಡಿ ಮತ್ತು ಕಾಪಿ ಮಾಡಿ.
* ಆಯಾ ಪಾಲುದಾರ ವೆಬ್‌ಸೈಟ್ ಲಿಂಕ್ ಅನ್ನು ಬಳಸಿ, ಅಲ್ಲಿ ಚೆಕ್ಔಟ್‌ನಲ್ಲಿ ವೋಚರ್ ಕೋಡ್ ಅನ್ನು ಅನ್ವಯಿಸಬಹುದು.
ಅಂದಹಾಗೆ 899ರೂ ಜಿಯೋ ರೀಚಾರ್ಜ್ ಯೋಜನೆಯು 90 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ನೀಡುತ್ತದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳು ಹಾಗೂ ಪ್ರತಿದಿನ 100 ಎಸ್ಎಂಎಸ್ ಪ್ರಯೋಜನ ಒದಗಿಸುತ್ತದೆ. ಇದರ ಜೊತೆಗೆ ದೈನಂದಿನ 2GB ಡೇಟಾ ಸೌಲಭ್ಯ ಸಹ ಪಡೆದಿದೆ. ಇದು ಜಿಯೋ ಟಿವಿ, ಜಿಯೋ ಸಿನೆಮಾ ಮತ್ತು ಜಿಯೋಕ್ಲೌಡ್‌ಗೆ ಪೂರಕ ಪ್ರವೇಶವನ್ನು ಸಹ ಒಳಗೊಂಡಿದೆ.
ಅದೇ ರೀತಿ ವಾರ್ಷಿಕ ಬಳಕೆಗಾಗಿ ವಿನ್ಯಾಸಗೊಳಿಸಲಾದ 3,599ರೂ. ಗಳ ರೀಚಾರ್ಜ್ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಇದು ಪ್ರತಿದಿನ 2.5 GB ಡೇಟಾವನ್ನು (ಒಟ್ಟು 912.5 GB) ಜೊತೆಗೆ ಅನಿಯಮಿತ ವಾಯಿಸ್ ಕರೆ ಮತ್ತು ಎಸ್ಎಂಎಸ್ ಪ್ರಯೋಜನಗಳೊಂದಿಗೆ ಸಹ ಪಡೆದುಕೊಂಡಿದೆ. ಈ ದೀರ್ಘಾವಧಿಯ ಯೋಜನೆ ಆಯ್ಕೆಯು ಜಿಯೋ ಟಿವಿ, ಜಿಯೋ ಸಿನೆಮಾ ಮತ್ತು ಜಿಯೋಕ್ಲೌಡ್‌ಗೆ ಪ್ರವೇಶವನ್ನು ಒದಗಿಸುತ್ತದೆ. ಆದರೆ, ಜಿಯೋ ಪ್ರೈಮ್‌ನ ಕಂಟೆಂಟ್‌ಗಳನ್ನು ವೀಕ್ಷಿಸಲು ಆಗುವುದಿಲ್ಲ.


Click it and Unblock the Notifications








