Jio Diwali Dhamaka Offer: ಗ್ರಾಹಕರಿಗೆ ಈ ಸೇವೆ ಒಂದು ವರ್ಷ ಉಚಿತ!
ಟೆಲಿಕಾಂ ವಲಯದ ದಿಗ್ಗಜ ಸಂಸ್ಥೆ ರಿಲಯನ್ಸ್ ಡಿಜಿಟಲ್ ನಿಂದ ಬಹು ನಿರೀಕ್ಷಿತ ದೀಪಾವಳಿ ಡಬಲ್ ಧಮಾಕಾ (Jio Diwali Dhamaka Offer) ಆಫರ್ ಘೋಷಣೆ ಮಾಡಲಾಗಿದೆ. ಈ ಕೊಡುಗೆಯಲ್ಲಿ ಗ್ರಾಹಕರಿಗೆ ಒಂದು ವರ್ಷ ಉಚಿತವಾಗಿ ಜಿಯೋಏರ್ ಫೈಬರ್ (Jio AirFiber) ಸೇವೆ ದೊರೆಯಲಿದೆ. ದೇಶದಾದ್ಯಂತ ಇರುವ ಎಲ್ಲ ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲೂ ಈ ಹಬ್ಬದ ಆಫರ್ ದೊರೆಯಲಿದೆ. ಅಂದಹಾಗೆ ಇದೇ ಸೆಪ್ಟೆಂಬರ್ 18 ರಿಂದ ನವೆಂಬರ್ 3ನೇ ತಾರೀಕಿನವರೆಗೆ ಈ ಕೊಡುಗೆ ಚಾಲ್ತಿ ಇರಲಿದೆ.
ಖರೀದಿ ಹಾಗೂ ಉಚಿತ ಜಿಯೋಏರ್ ಫೈಬರ್ ಪಡೆಯಿರಿ
ಯಾವೆಲ್ಲ ಗ್ರಾಹಕರು ಇಪ್ಪತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರಿಲಯನ್ಸ್ ಡಿಜಿಟಲ್ ಅಥವಾ ಮೈ ಜಿಯೋದಲ್ಲಿ (MyJio) ವೆಚ್ಚ ಮಾಡುತ್ತಾರೋ ಅಂಥವರು ಒಂದು ವರ್ಷಕ್ಕೆ ಜಿಯೋಏರ್ ಫೈಬರ್ ಪಡೆಯುವುದಕ್ಕೆ ಅರ್ಹರಾಗುತ್ತಾರೆ. ಇದು ಮನೆಗಳಿಗೆ ಅತ್ಯಂತ ವೇಗದ ಇಂಟರ್ ನೆಟ್ ಸಂಪರ್ಕವನ್ನು ತರುತ್ತದೆ.

ದೀಪಾವಳಿ ಡಬಲ್ ಧಮಾಕಾ (Jio Diwali Dhamaka Offer) ಕೊಡುಗೆಯು ಜಿಯೋ ಫೈಬರ್ ಹಾಗೂ ಜಿಯೋ ಏರ್ ಫೈಬರ್ ನ ಹೊಸ ಗ್ರಾಹಕರು ಮತ್ತು ಈಗಾಗಲೇ ಗ್ರಾಹಕರಾದವರಿಗೆ ದೊರೆಯುತ್ತದೆ. ಈ ಕೊಡುಗೆಯು ಜಿಯೋದ ವಿಶ್ವಾಸಾರ್ಹ ಗ್ರಾಹಕರಿಗೆಲ್ಲ ದೊರೆಯಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ.
ಅರ್ಹತಾ ಮಾನದಂಡಗಳ ಮಾಹಿತಿ
ಹೊಸ ಗ್ರಾಹಕರಾಗಿದ್ದಲ್ಲಿ ಇಪ್ಪತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರಿಲಯನ್ಸ್ ಡಿಜಿಟಲ್ ಅಥವಾ ಮೈಜಿಯೋದಲ್ಲಿ ವೆಚ್ಚ ಮಾಡಬೇಕು. ಇಲ್ಲವೇ ಜಿಯೋ ಏರ್ ಫೈಬರ್ ( Jio AirFiber ) ಸಂಪರ್ಕವನ್ನು ಪಡೆದುಕೊಳ್ಳುವಾಗ 2,222 ರೂ. ಗಳ ಮೂರು ತಿಂಗಳ ದೀಪಾವಳಿ ಪ್ಲಾನ್ ಗೆ ಚಂದಾದಾರರಾಗಬೇಕು. ಇನ್ನು ಈಗಾಗಲೇ ಗ್ರಾಹಕರಾಗಿರುವವರು 2,222 ರೂ.ಗಳಿಗೆ ಮುಂಗಡವಾಗಿ ಮೂರು ತಿಂಗಳ ದೀಪಾವಳಿ ಪ್ಲಾನ್ ಗೆ ರೀಚಾರ್ಜ್ ಮಾಡಿಸಬೇಕಾಗುತ್ತದೆ.
ಅರ್ಹ ಗ್ರಾಹಕರು ಹನ್ನೆರಡು ಕೂಪನ್ ಗಳನ್ನು ಪಡೆಯುತ್ತಾರೆ. ಅವರು 2024 ರ ನವೆಂಬರ್ ನಿಂದ 2025 ರ ಅಕ್ಟೋಬರ್ ತನಕ ಪ್ರತಿ ತಿಂಗಳು ರಿಡೀಮ್ ಮಾಡಿಕೊಳ್ಳಬಹುದು. ಆ ಕೂಪನ್ ಮೌಲ್ಯವು ಆಯಾ ಗ್ರಾಹಕರು ಸಕ್ರಿಯ ಜಿಯೋ ಏರ್ ಫೈಬರ್ ಪ್ಲಾನ್ ಗೆ ಸಮನಾಗಿರುತ್ತದೆ. ಅದನ್ನು 30 ದಿನದೊಳಗೆ ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ ಜಿಯೋ ಪಾಯಿಂಟ್, ಜಿಯೋ ಮಾರ್ಟ್ ಎಕ್ಸ್ ಕ್ಲೂಸಿವ್ ಮಳಿಗೆಯಲ್ಲಿ ತಮ್ಮ ಮುಂದಿನ ಎಲೆಕ್ಟ್ರಾನಿಕ್ಸ್ ಖರೀದಿ ಹದಿನೈದು ಸಾವಿರ ರೂಪಾಯಿ ಮೇಲ್ಪಟ್ಟು ಮಾಡಿದಾಗ ರಿಡೀಮ್ ಮಾಡಬಹುದು.
ಜಿಯೋ ಏರ್ ಫೈಬರ್ 1199ರೂ. ಪ್ಲ್ಯಾನ್ : ಜಿಯೋದ ಈ ಪ್ಲ್ಯಾನಿನಲ್ಲಿ 100 Mbps ವೇಗದ ಇಂಟರ್ನೆಟ್ ಸೇವೆ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ 550+ ಡಿಜಿಟಲ್ ಚಾನೆಲ್‌ಗಳು ಸೇರಿದಂತೆ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಜಿಯೋ ಸಿನಿಮಾ ಪ್ರೀಮಿಯಂ ಅಲ್ಲದೇ ಇನ್ನೂ ಹೆಚ್ಚಿನ ಓಟಿಟಿ ಆಪ್‌ಗಳಿಗೆ ಈ ಮೂಲಕ ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.
ಅಲ್ಲದೇ ಜಿಯೋದ 599 ರೂ ಹಾಗೂ 899 ರೂ ಏರ್‌ಫೈಬರ್ ಯೋಜನೆಗಳು ಆಕರ್ಷಕ ಎನಿಸಿವೆ. ಜಿಯೋ ಏರ್‌ಫೈಬರ್ ( Jio AirFiber ) ಬಳಕೆದಾರರು ಓಟಿಟಿ (OTT) ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಬಳಕೆದಾರರು ಈ ಚಂದಾದಾರಿಕೆಯನ್ನು ಟಿವಿ, ಲ್ಯಾಪ್‌ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್ ನಂತಹ ಅವರ ಆಯ್ಕೆಯ ಯಾವುದೇ ಸಾಧನದಾದ್ಯಂತ ಬಳಸಬಹುದು.


Click it and Unblock the Notifications








