ದೀಪಾವಳಿ ಧಮಾಕಾ!..ಬರೀ 699ರೂ.ಗೆ Jio ಸಂಸ್ಥೆಯ ಈ ಫೋನ್ ಲಭ್ಯ!
ದೇಶದ ಪ್ರಮುಖ ಕಂಪನಿ ಎಂದು ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ( Jio ) ಈ ದೀಪಾವಳಿಗೆ ಭರ್ಜರಿ ಕೊಡುಗೆ ಘೋಷಣೆ ಮಾಡಿದೆ. ಸಂಸ್ಥೆಯು ತನ್ನ ಜಿಯೋ ಭಾರತ್ 4G ಫೋನ್‌ಗಳ ಬೆಲೆಯನ್ನು ಶೇ 30 ರಷ್ಟು ಕಡಿತ ಮಾಡಿದೆ. ಈ ಸೀಮಿತ ಅವಧಿಯ ಕೊಡುಗೆಯ ಅಡಿಯಲ್ಲಿ, 999 ರೂ. ನ ಜಿಯೋಭಾರತ್ ಮೊಬೈಲ್ ಫೋನ್ ಈಗ 699ರೂ. ಗಳ ವಿಶೇಷ ಆಫರ್ ಬೆಲೆಗೆ ಲಭ್ಯವಿದೆ.
ಇನ್ನು ಗ್ರಾಹಕರು ಜಿಯೋಭಾರತ್ ಫೋನ್ ಅನ್ನು 123 ರೂ.ಗೆ ರೀಚಾರ್ಜ್ ಮಾಡಬಹುದು. ಈ ಮಾಸಿಕ ಟ್ಯಾರಿಫ್ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ವಾಯಿಸ್ ಕರೆಗಳು ಜೊತೆಗೆ 14 GB ಡೇಟಾ ಪ್ರಯೋಜನ ಸಹ ಒಳಗೊಂಡಿದೆ.

ಜಿಯೋದ ಮಾಸಿಕ 123ರೂ.ಗಳ ರೀಚಾರ್ಜ್ ಪ್ಲ್ಯಾನ್ ಇತರ ಟೆಲಿಕಾಂ ಗಳಿಗಿಂತ ಶೇ 40 ಪ್ರತಿಶತ ಅಗ್ಗವಾಗಿದೆ. ಏಕೆಂದರೆ ಇತರ ನೆಟ್‌ವರ್ಕ್‌ಗಳ ಫೀಚರ್ ಫೋನ್‌ಗಳ ಮಾಸಿಕ ರೀಚಾರ್ಜ್ ಕನಿಷ್ಠ 199 ರೂ. ಗಳು ಆಗಿದೆ. ಇದು ಜಿಯೋ ಟೆಲಿಕಾಂ ಗಿಂತ 76 ರೂ. ಹೆಚ್ಚು ದುಬಾರಿ ಆಗಿದೆ.
ಅಂದರೆ, ಜಿಯೋ ಗ್ರಾಹಕರಿಗೆ ಪ್ರತಿ ರೀಚಾರ್ಜ್ ನಲ್ಲಿ ತಿಂಗಳಿಗೆ 76 ರೂ. ಗಳ ಉಳಿಯಲಿದೆ. ತಿಂಗಳಿಗೆ 76ರೂ. ರಂತೆ 9 ತಿಂಗಳಿಗೆ ಉಳಿತಾಯ ಆಗಿವ ಮೊತ್ತವು ಫೋನ್ ಬೆಲೆಗೆ ಸಮನ ಆಗಲಿದೆ. ಅಂದರೆ ಜಿಯೋ ಭಾರತ್ ಫೋನ್ ಉಚಿತವಾಗಿ ಸಿಕ್ಕಂತೆ ಆಗಲಿದೆ.
ಈ ಕೊಡುಗೆಯು 2G ಯಿಂದ 4G ಗೆ ಅಪ್‌ಗ್ರೇಡ್ ಆಗುವ ಗ್ರಾಹಕರಿಗೆ ಸುವರ್ಣ ಅವಕಾಶವನ್ನು ಜಿಯೋ ನೀಡುತ್ತಿದೆ. 455 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, ಸಿನಿಮಾ ಪ್ರೀಮಿಯರ್‌ಗಳು ಮತ್ತು ಹೊಸ ಸಿನಿಮಾ, ವೀಡಿಯೊ ಶೋಗಳು, ಲೈವ್ ಸ್ಪೋರ್ಟ್ಸ್ ಕಾರ್ಯಕ್ರಮಗಳು, ಜಿಯೋ ಸಿನೆಮಾ ಹೈಲೈಟ್ಸ್, ಡಿಜಿಟಲ್ ಪಾವತಿಗಳು, ಕ್ಯೂಆರ್ (QR) ಕೋಡ್ ಸ್ಕ್ಯಾನ್‌ಗಳು ಜಿಯೋಭಾರತ್ 4G ಫೋನ್‌ನಲ್ಲಿ ಲಭ್ಯ ಇವೆ.
ಜಿಯೋಪೇ ಮತ್ತು ಜಿಯೋಚಾಟ್ ನಂತಹ ಪ್ರಿಲೋಡೆಡ್ ಅಪ್ಲಿಕೇಶನ್ ಗಳು ಸಹ ಈ ಫೋನ್‌ನಲ್ಲಿ ಲಭ್ಯ ಇರುತ್ತವೆ. ಹತ್ತಿರದ ಸ್ಟೋರ್‌ಗಳ ಹೊರತಾಗಿ, ಈ ಫೋನ್ ಅನ್ನು ಜಿಯೋ ಮಾರ್ಟ್ ಅಥವಾ ಅಮೆಜಾನ್ ಇ ಕಾಮರ್ಸ್ ತಾಣದಿಂದ ಸಹ ಖರೀದಿ ಮಾಡಬಹುದು.
ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಫೋನ್ 23 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಬಳಕೆದಾರರು, ಅವರ ಅನುಕೂಲಕರ ಭಾಷೆಯಲ್ಲಿ ಫೋನನ್ನು ಬಳಸಬಹುದು. ಅಲ್ಲದೇ ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 4G ಫೋನ್‌ಗಳಲ್ಲಿ, ಚಾಟಿಂಗ್ ಮಾಡಬಹುದು. ಇದರ ಜಿಯೋ ಚಾಟ್ ( JioChat ) ಅಪ್ಲಿಕೇಶನ್ ಮೂಲಕ, ಸ್ನೇಹಿತರು ಅಥವಾ ಕುಟುಂಬಕ್ಕೆ ಮೆಸೆಜ್‌ಗಳನ್ನು ಕಳುಹಿಸಬಹುದು. ಅಲ್ಲದೇ ವಾಯ್ಸ್ ಮೆಸೇಜ್ ಮತ್ತು ಫೋಟೋಗಳನ್ನು ಸಹ ಸೆಂಡ್ ಮಾಡಬಹುದು.
ರಿಲಯನ್ಸ್ ಜಿಯೋ ಭಾರತ್ V3 ಹಾಗೂ ಜಿಯೋ ಭಾರತ್ V4 ಫೋನ್ ಯುಪಿಐ (UPI) ಅನ್ನು ಪಡೆದಿವೆ. ಜಿಯೋ ಫೋನ್ ಬಳಸುವ ಜನರಿಗೆ ಪೇಟಿಎಂ ಅಥವಾ ಗೂಗಲ್ ಪೇ (Google Pay) ಅಗತ್ಯ ಇರಲ್ಲ. ಜಿಯೋ ಫೋನ್ ಮೂಲಕ ಮಾತ್ರ ಪೇಮೆಂಟ್ ಮಾಡಬಹುದು. ಇದಲ್ಲದೇ, ಈ ಫೋನ್ ಇನ್ ಬಿಲ್ಟ್ ಸೌಂಡ್ ಬಾಕ್ಸ್ ಕೂಡ ಪಡೆದಿದೆ. ಹಣ ಕಳುಹಿಸುವಾಗ ಅಥವಾ ಸ್ವೀಕರಿಸುವಾಗ ಬಳಕೆದಾರರಿಗೆ ಮಾಹಿತಿ ಒದಗಿಸುತ್ತದೆ.


Click it and Unblock the Notifications








