ಏಪ್ರೀಲ್ನಲ್ಲಿ ಜಿಯೋ ಡಿಟಿಹೆಚ್ ಲಾಂಚ್: ಮೊದಲ ಮೂರು ತಿಂಗಳೂ ಉಚಿತ, ನಂತರ ಕೇವಲ 99 ರೂ.ಮಾತ್ರ...!
ಈಗಾಗಲೇ ಜಿಯೋ ಲಾಂಚ್ ಸಂದರ್ಭದಲ್ಲಿ ಪ್ರಮೋಷನ್ಗಾಗಿ ಮೂರು ತಿಂಗಳ ಉಚಿತ ಸೇವೆಯನ್ನು ನೀಡಿದ್ದ ಮಾದರಿಯಲ್ಲೇ ಜಿಯೋ ಡಿಟಿಹೆಚ್ ಲಾಂಚ್ ವೇಳೆಯಲ್ಲಿಯೂ ಮೂರು ತಿಂಗಳ ಉಚಿತ ಸೇವೆಯನ್ನು ನೀಡಲು ಜಿಯೋ ಚಿಂತನೆ ನಡೆಸಿದೆ.
ದೇಶಿಯ ಟೆಲಿಕಾಂ ವಲಯದಲ್ಲಿ ಹೊಸದೊಂದು ಶಕೆಯನ್ನು ಆರಂಭಿಸಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಟಿವಿ ಲೋಕಕ್ಕೂ ಕಾಲಿಡಲಿದೆ. ಡಿಟಿಹೆಚ್ ಸೇವೆಯಲ್ಲಿ ಹೊಸದೊಂದು ಕ್ರಾಂತಿಯನ್ನು ನಡೆಸಲು ಮುಂದಾಗಿದ್ದು, ಏಪ್ರೀಲ್ ಕೊನೆವಾರದಲ್ಲಿ ಇಲ್ಲವೇ ಮೇ ಮೊದಲ ವಾರದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಓದಿರಿ: ಯೂಟುಬ್ 'ಗೋ' ಆಪ್: ಆಪ್ಲೈನ್ ವಿಡಿಯೋ ನೋಡಿ, ಸ್ನೇಹಿತರ ಮೊಬೈಲ್ಗೆ ಶೇರ್ ಮಾಡಿ..!

ಮೂರು ತಿಂಗಳ ಉಚಿತ ಸೇವೆ:
ಈಗಾಗಲೇ ಜಿಯೋ ಲಾಂಚ್ ಸಂದರ್ಭದಲ್ಲಿ ಪ್ರಮೋಷನ್ಗಾಗಿ ಮೂರು ತಿಂಗಳ ಉಚಿತ ಸೇವೆಯನ್ನು ನೀಡಿದ್ದ ಮಾದರಿಯಲ್ಲೇ ಜಿಯೋ ಡಿಟಿಹೆಚ್ ಲಾಂಚ್ ವೇಳೆಯಲ್ಲಿಯೂ ಮೂರು ತಿಂಗಳ ಉಚಿತ ಸೇವೆಯನ್ನು ನೀಡಲು ಜಿಯೋ ಚಿಂತನೆ ನಡೆಸಿದ್ದು, ಸದ್ಯ ದೇಶದಲ್ಲಿ ಲಭ್ಯವಿರುವ ಎಲ್ಲಾ ಚಾಲನ್ಗಳನ್ನು ತನ್ನ ಡಿಟಿಹೆಚ್ನಲ್ಲಿ ಪ್ರಸಾರ ಮಾಡುವ ಮಹದಾಸೆಯನ್ನು ಹೊಂದಿದೆ ಎನ್ನಲಾಗಿದೆ.

ನಾಲ್ಕು ಪ್ಲಾನ್ಗಳು:
ಜಿಯೋ ತನ್ನ ಬಳಕೆದಾರಿಗಾಗಿ ನಾಲ್ಕು ಪ್ಲಾನ್ಗಳನ್ನು ರೆಡಿ ಮಾಡಿದ್ದು, ಇಸ್ಟ್ ಇಂಡಿಯಾ ಪ್ಲಾನ್, ವೆಸ್ಟ್ ಇಂಡಿಯಾ ಪ್ಲಾನ್, ನಾರ್ತ್ ಇಂಡಿಯಾ ಪ್ಲಾನ್ ಮತ್ತು ಸೌಥ್ ಇಂಡಿಯಾ ಪ್ಲಾನ್ ಗಳನ್ನು ಪರಿಚಯಿಸಿದ್ದು, ನಾಲ್ಕು ಮೂಲೆಗಳಿಗೂ ಅಲ್ಲಿನ ಸ್ಥಳೀಯಾ ಚಾನಲ್ಗಳನ್ನು ಪ್ರಸಾರ ಮಾಡಲಿದೆ.

ಬೆಸಿಕ್ ಪ್ಲಾನ್ ಅನ್ನು ಕೇವಲ ರೂ.99ಕ್ಕೆ
ಜಿಯೋ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಡಿಟಿಹೆಚ್ ಸೇವೆಯನ್ನು ಆರಂಭಿಸಲಿದ್ದು, ಇದಕ್ಕಾಗಿ ಬೆಸಿಕ್ ಪ್ಲಾನ್ ಅನ್ನು ಕೇವಲ ರೂ.89-99ಕ್ಕೆ ನೀಡಲಿದೆ. ಸ್ಪೋರ್ಸ್ ಪ್ಯಾಕಿಗೆ ರೂ. 120-135 ನಿಗಧಿ ಮಾಡಿದ್ದು, ಮೈ ಪ್ಲಾನ್ ವೊಂದನ್ನು ಪರಿಚಯಿಸಿದ್ದು ರೂ. 189-200 ಅನ್ನು ನಿಗಧಿ ಮಾಡಿದೆ. ಫ್ಯಾಮಿಲಿ ಪ್ಯಾಕ್ ಸಹ ಇದ್ದು, ಇದಕ್ಕೆ ರೂ. 255-295 ಹಾಗೂ ಮಕ್ಕಳಿಗಾಗಿ ಪ್ಯಾಕ್ ಇದ್ದು, ಅದಕ್ಕೆ ರೂ. 185-219 ಇರಲಿದೆ ಎನ್ನಲಾಗಿದೆ.


Click it and Unblock the Notifications








