ಯೂಟುಬ್ 'ಗೋ' ಆಪ್: ಆಪ್‌ಲೈನ್ ವಿಡಿಯೋ ನೋಡಿ, ಸ್ನೇಹಿತರ ಮೊಬೈಲ್‌ಗೆ ಶೇರ್ ಮಾಡಿ..!

Written By:

ಗೂಗಲ್ ವಿಡಿಯೋ ಪ್ರಿಯರಿಗಾಗಿಯೇ ಹೊಸದೊಂದು ಆಪ್ ಬಿಡುಗಡೆ ಮಾಡಿದ್ದು, ಯೂಟುಬ್ ಬಳಕೆದಾರನ್ನು ಗಮನದಲ್ಲಿ ಇಟ್ಟುಕೊಂಡು ಯೂಟೂಬ್ ಗೋ ಎನ್ನುವ ಹೊಸ ಆಪ್ ನಿರ್ಮಿಸಿದೆ, ಈ ಆಪ್ ಮೂಲಕ ಆಫ್‌ಲೈನ್ ವಿಡಿಯೋ ನೋಡಬಹುದಾಗಿದ್ದು, ನೋಡಿದ ವಿಡಿಯೋ ಗಳನ್ನು ನಿಮ್ಮ ಸ್ನೇಹಿತರ ಮೊಬೈಲ್‌ಗೆ ಶೇರ್ ಮಾಡಬಹುದಾಗಿದೆ.

ಯೂಟುಬ್ 'ಗೋ' ಆಪ್: ಆಪ್‌ಲೈನ್ ವಿಡಿಯೋ ನೋಡಿ, ಸ್ನೇಹಿತರ ಮೊಬೈಲ್‌ಗೆ ಶೇರ್ ಮಾಡಿ..!

ಓದಿರಿ: ಬಿಡುಗಡೆಯಾಗಲಿರುವ ಹೊಸ ಐಪೋನ್‌ಗೆ ವೈರ್ ಚಾರ್ಜರ್ ಬೇಡವಂತೆ..!!

ಕಳೆದ ಸೆಪ್ಟೆಂಬರ್ ನಿಂದಲೇ ಕಾರ್ಯಚರಣೆ ಆರಂಭಿಸಿದ ಯೂಟೂಬ್ ಗೋ, ಸದ್ಯ ಸಂಪೂರ್ಣವಾಗಿ ಬಳಕೆಗೆ ಮುಕ್ತವಾಗಿದೆ. ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಈ ಆಪ್ ನಿರ್ಮಾಣಗೊಂಡಿದ್ದು, ಈ ಆಪ್‌ ನಲ್ಲಿ ಆಫ್‌ಲೈನ್ ವಿಡಿಯೋ ನೋಡಬಹುದಾಗಿದ್ದು, ಅಲ್ಲದೇ ಸೇವ್ ಮಾಡಿಕೊಂಡಿದ್ದ ವಿಡಿಯೋ ಗಳನ್ನು ಬೇರೆ ಮೊಬೈಲ್‌ಗಳಿಗೆ ಶೇರ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

ಯೂಟುಬ್ 'ಗೋ' ಆಪ್: ಆಪ್‌ಲೈನ್ ವಿಡಿಯೋ ನೋಡಿ, ಸ್ನೇಹಿತರ ಮೊಬೈಲ್‌ಗೆ ಶೇರ್ ಮಾಡಿ..!

ಸದ್ಯ ಭಾರತದಲ್ಲಿ ಈ ಆಪ್‌ ಡೌನ್‌ಲೋಡಿಗೆ ಲಭ್ಯವಿದ್ದು, ಈ ಬ್ರಾಂಡ್ ನ್ಯೂ ಆಪ್ 8.5 MB ಇದ್ದು, ಸದ್ಯದ ಎಲ್ಲಾ ಆಂಡ್ರಾಯ್ಡ್ ಆವೃತ್ತಿಯಲ್ಲಿಯೂ ಕಾರ್ಯನಿರ್ವಹಿಸಲಿದೆ. ಅಲ್ಲದೇ ವಿಡಿಯೋಗಳನ್ನು ನಮಗೆ ಬೇಕಾದ ಗುಣಮಟ್ಟದಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಈ ಆಪ್ ಮಾಡಿಕೊಡಲಿದೆ.

ಯೂಟುಬ್ 'ಗೋ' ಆಪ್: ಆಪ್‌ಲೈನ್ ವಿಡಿಯೋ ನೋಡಿ, ಸ್ನೇಹಿತರ ಮೊಬೈಲ್‌ಗೆ ಶೇರ್ ಮಾಡಿ..!

ಓದಿರಿ: ರಿಲಯನ್ಸ್ ಜಿಯೋದಿಂದ ಮತ್ತೊಂದು ಆಫರ್...!

ಯೂಟುಬ್ ಗೋ ಆಪ್‌ ವಿಡಿಯೋ ಗಳನ್ನು ಶೇರ್ ಮಾಡುವ ಅವಕಾಶವನ್ನು ಹೊಂದಿದ್ದು, ಶೇರಿಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಆಪ್ ವಿಡಿಯೋಗಳನ್ನು ಬ್ಲೂಟೂಟ್ ಮೂಲಕ ಕಳುಹಿಸಲಿದೆ.

Read more about:
English summary
The YouTube Go app is listed on Google Play, and is available to download in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot