Home
ಸುದ್ದಿಜಾಲ

BSNLನಿಂದ ಎರಡು ಹೊಸ ಪ್ಲ್ಯಾನ್‌ ಲಾಂಚ್!.270 ದಿನಗಳ ವ್ಯಾಲಿಡಿಟಿ!

ಜಿಯೋ ಸಂಸ್ಥೆಯು ಭಾರತೀಯ ಟೆಲಿಕಾಂ ವಲಯದ ಎಂಟ್ರಿ ಕೊಟ್ಟಾಗಿನಿಂದ ಹೊಸ ಅಲೆ ಶುರುವಾಗಿದ್ದು, ಹೀಗಾಗಿ ಏರ್‌ಟೆಲ್‌, ವೊಡಾಫೋನ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಹ ಪೈಪೋಟಿಗೆ ಇಳಿದಿದೆ. ಇತ್ತೀಚಿಗೆ ತುಸು ಹೆಚ್ಚಿನ ಆಫರ್‌ಗಳನ್ನು ಘೋಷಿಸುತ್ತಲೇ ಸಾಗಿರುವ ಬಿಎಸ್‌ಎನ್‌ಎಲ್ ಈ ಬಾರಿ ಮತ್ತೆರಡು ಭರ್ಜರಿ ವ್ಯಾಲಿಡಿಟಿಯ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

BSNLನಿಂದ ಎರಡು ಹೊಸ ಪ್ಲ್ಯಾನ್‌ ಲಾಂಚ್!.270 ದಿನಗಳ ವ್ಯಾಲಿಡಿಟಿ!

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು 1,001ರೂ ಮತ್ತು 1,399ರೂ. ಬೆಲೆಗಳ ಪ್ರೋಪೇಡ್‌ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದು, 270 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿವೆ. ಉಳಿದಂತೆ ಪ್ರತಿದಿನ ಉಚಿತ ಡೇಟಾ, ಉಚಿತ ವಾಯಿಸ್‌ ಕರೆಗಳು ಮತ್ತು ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿವೆ. ಹಾಗಾದರೇ ಬಿಎಸ್‌ಎನ್‌ಎಲ್‌ನ ಹೊಸ ಪ್ಲ್ಯಾನ್‌ಗಳ ವಿಶೇಷತೆಗಳೆನು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಎರಡು ಬಿಗ್‌ ಪ್ಲ್ಯಾನ್‌ಗಳು

ಎರಡು ಬಿಗ್‌ ಪ್ಲ್ಯಾನ್‌ಗಳು

ಬಳಕೆದಾರರನ್ನು ಉಳಿಸಿಕೊಳ್ಳುವ ಮತ್ತು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಖಾಸಗಿ ಟೆಲಿಕಾಂ ಕಂಪನಿಗಳು ಲಾಂಗ್‌ ಟರ್ಮ್‌ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಲಾಂಚ್‌ ಮಾಡಿವೆ. ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆ ಸಹ ಇದೀಗ ಎರಡು ಬಿಗ್ ಪ್ರೈಸ್‌ನ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳು ಕ್ರಮವಾಗಿ 1,001ರೂ ಮತ್ತು 1,399ರೂ.ಗಳು ಆಗಿವೆ.

ವ್ಯಾಲಿಡಿಟಿ ಮತ್ತು ಲಭ್ಯತೆ

ವ್ಯಾಲಿಡಿಟಿ ಮತ್ತು ಲಭ್ಯತೆ

ಬಿಎಸ್‌ಎನ್‌ಎಲ್ ಹೊಸ 1,001ರೂ ಮತ್ತು 1,399ರೂ.ಗಳು ಪ್ರೀಪೇಡ್‌ ರೀಚಾರ್ಜ್‌ ಪ್ಲ್ಯಾನ್‌ಗಳು 270 ದಿನಗಳ ದೀರ್ಘ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಹೊಸ ಪ್ಲ್ಯಾನ್‌ಗಳು ಇದೇ ಜುಲೈ 25ರಿಂದ ಶುರುವಾಗಿದ್ದು, 90 ದಿನಗಳ ಕಾಲ ಲಭ್ಯ ಇರಲಿವೆ. ಈ ಪ್ಲ್ಯಾನ್‌ಗಳು ಕೇವಲ ಆಂಧ್ರ ಪ್ರದೇಶ ಮತ್ತು ತೆಲಗಾಣ ರಾಜ್ಯಗಳ ಟೆಲಿಕಾಂ ವ್ಯಾಪ್ತಿಯಲ್ಲಿನ ಗ್ರಾಹಕರಿಗೆ ದೊರೆಯಲಿವೆ.

ಪ್ರಯೋಜನಗಳೆನು

ಪ್ರಯೋಜನಗಳೆನು

ಬಿಎಸ್‌ಎನ್‌ಎಲ್‌ ಸಂಸ್ಥೆಯ ನೂತನ 1,001ರೂ ಮತ್ತು 1,399ರೂ.ಗಳು ಪ್ರೀಪೇಡ್‌ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ಗ್ರಾಹಕರಿಗೆ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ವಾಯಿಸ್‌ ಕರೆಗಳು, ಪ್ರತಿದಿನ 1.5GB ಉಚಿತ ಡೇಟಾ ಹಾಗೂ ಪ್ರತಿದಿನ ಉಚಿತ 50 ಎಸ್‌ಎಮ್ಎಸ್‌ಗಳು ಸೇರಿದಂತೆ 270 ದಿನಗಳ ಬಿಗ್ ವ್ಯಾಲಿಡಿಟಿ ವಾಯಿದೆ ಗ್ರಾಹಕರಿಗೆ ಲಭ್ಯವಾಗಲಿವೆ.

BSNL ಸ್ಟಾರ್‌ ಮೆಂಬರ್‌ಶಿಪ್

BSNL ಸ್ಟಾರ್‌ ಮೆಂಬರ್‌ಶಿಪ್

ಬಿಎಸ್‌ಎನ್ಎಲ್ ಸಂಸ್ಥೆಯು ಇತ್ತೀಚಿಗೆ ಸ್ಟಾರ್‌ ಮೆಂಬರ್‌ಶಿಪ್ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಲಾಂಚ್‌ ಮಾಡಿದ್ದು, 498ರೂ.ಗಳ ಈ ಪ್ಲ್ಯಾನ್‌ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಉಚಿತ ಕರೆಗಳು, ಉಚಿತ ಎಸ್‌ಎಮ್‌ಎಸ್‌, ಉಚಿಯ ಡೇಟಾ ಸೌಲಭ್ಯಗಳ ಜೊತೆಗೆ ಸ್ಟಾರ್‌ ಸದಸ್ಯರುಗಳಿಗೆ ಜನಪ್ರಿಯ ಕಂಪನಿಯ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ರಿಯಾಯಿತಿ ದೊರೆಯಲಿದೆ.

Best Mobiles in India

English summary
BSNL has introduced two new plans priced at Rs 1,001 and Rs 1,399 for subscribers in AP and Telangana circle. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+