Home
ಸುದ್ದಿಜಾಲ

ವೊಡಾಫೋನ್ 255ರೂ. ಪ್ಲ್ಯಾನಿನಲ್ಲಿ ಹೊಸ ಮಾರ್ಪಾಡು‌!..70GB ಡೇಟಾ ಲಭ್ಯ!

ದೇಶದ ಟೆಲಿಕಾಂ ಕ್ಷೇತ್ರದಲ್ಲಿಗ ಪೈಪೋಟಿ ಜೋರಾಗಿದ್ದು, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂ ಸಂಸ್ಥೆಗಳು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಆಫರ್‌ಗಳ ಮೋರೆ ಹೋಗಿದ್ದಾರೆ. ಹೀಗಾಗಿ ಪ್ರಸ್ತುತ ಪ್ರಮುಖ ಎಲ್ಲ ಟೆಲಿಕಾಂ ಕಂಪನಿಗಳು ಸಹ ಅತ್ಯುತ್ತಮ ರೀಚಾರ್ಜ್ ಕೊಡುಗೆಗಳನ್ನು ನೀಡುತ್ತಿದ್ದು, ಈ ನಿಟ್ಟಿನಲ್ಲಿ ವೊಡಾಫೋನ್ ಸಂಸ್ಥೆಯು ಸಹ ಉಚಿತ ಡೇಟಾವನ್ನು ಪ್ರಮಾಣವನ್ನು ಹೆಚ್ಚಿಸಿದೆ.

ವೊಡಾಫೋನ್ 255ರೂ. ಪ್ಲ್ಯಾನಿನಲ್ಲಿ ಹೊಸ ಮಾರ್ಪಾಡು‌!..70GB ಡೇಟಾ ಲಭ್ಯ!

ಹೌದು, ವೊಡಾಫೋನ್ ಸಂಸ್ಥೆಯು ತನ್ನ ಜನಪ್ರಿಯ 255ರೂ.ಗಳ ಪ್ಲ್ಯಾನ್‌ನಲ್ಲಿ ಭರ್ಜರಿ ಬದಲಾವಣೆ ಮಾಡಿದ್ದು, ಗ್ರಾಹಕರಿಗೆ ಇನ್ಮುಂದೆ ಪ್ರತಿದಿನ 2.5GB ಉಚಿತ ಡೇಟಾ ಸೌಲಭ್ಯ ನೀಡಲಿದೆ. ಈ ಮೊದಲು ಪ್ರತಿದಿನ 2GB ಡೇಟಾ ಲಭ್ಯವಾಗುತ್ತಿತ್ತು, ಆದ್ರೆ ಇದೀಗ ಪ್ರತಿದಿನ 0.5 GB ಹೆಚ್ಚುವರಿಯಾಗಿ ಸೇರ್ಪಡೆ ಮಾಡಿದೆ. ಉಳಿದಂತೆ ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಉಚಿತ ಕರೆಗಳು, ಉಚಿತ ಎಸ್‌ಎಮ್ಎಸ್‌ ಇರಲಿವೆ.

ವೊಡಾಫೋನ್ 255ರೂ. ಪ್ಲ್ಯಾನಿನಲ್ಲಿ ಹೊಸ ಮಾರ್ಪಾಡು‌!..70GB ಡೇಟಾ ಲಭ್ಯ!

ವೊಡಾಫೋನ್ 255ರೂ.ಗಳ ಪ್ರೀಪೇಡ್‌ ರೀಚಾರ್ಜ್ ಪ್ಲ್ಯಾನ್ 28ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ವೇಳೆ ಗ್ರಾಹಕರಿಗೆ ಅನಿಯಮಿತ ಉಚಿತ ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳು, ಇದರೊಂದಿಗೆ ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ಗಳು ಸೇರಿದಂತೆ ಪ್ರತಿದಿನ ಉಚಿತ 2.5GB ಡೇಟಾದ ಪ್ರಯೋಜನಗಳು ದೊರೆಯಲಿವೆ. ಒಟ್ಟು 28 ದಿನಗಳಿಗೆ 70GB ಡೇಟಾ ಲಭ್ಯವಾಗಲಿದೆ.

ವೊಡಾಫೋನ್ 255ರೂ. ಪ್ಲ್ಯಾನಿನಲ್ಲಿ ಹೊಸ ಮಾರ್ಪಾಡು‌!..70GB ಡೇಟಾ ಲಭ್ಯ!

ಭಾರ್ತಿ ಏರ್‌ಟೆಲ್‌ ಕಂಪನಿಯು ಸಹ ಇತ್ತೀಚಿಗೆ 299ರೂ.ಗಳ ಪ್ಲ್ಯಾನ್‌ ಬಿಡುಗಡೆ ಮಾಡಿದ್ದು, ಈ ಫ್ಲ್ಯಾನ್‌ ಸಹ ವೊಡಾಫೋನ್ 255ರೂ.ಪ್ಲ್ಯಾನ್‌ಗೆ ಸಾಮ್ಯತೆ ಹೊಂದಿದೆ. ಪ್ರತಿದಿನ 2.5GB ಉಚಿತ ಡೇಟಾ, ಅನಿಯಮಿತ ಉಚಿತ ಲೋಕಲ್ ಮತ್ತ ನ್ಯಾಶನಲ್ ಕರೆಗಳು ಹಾಗೂ ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳನ್ನು ಹೊಂದಿದೆ. ಹಾಗೆಯೇ ಜಿಯೋದ 299ರೂ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 3GB ಡೇಟಾ ಲಭ್ಯವಿದೆ.

ಸದ್ಯ ಪ್ರತಿದಿನ ಉಚಿತ 2GB ಡೇಟಾ ಪ್ಲ್ಯಾನ್‌ಗಳು ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಅದಕ್ಕಾಗಿ ಟೆಲಿಕಾಂ ಕಂಪನಿಗಳು ಸಹ ಈಗಾಗಲೇ 2GB ಡೇಟಾ ಪ್ಲ್ಯಾನ್‌ಗಳನ್ನು‌ ಪರಿಚಯಿಸಿವೆ. ವೊಡಾಫೋನ್ 229ರೂ.ಪ್ಲ್ಯಾನ್‌, ಏರ್‌ಟೆಲ್ 249ರೂ. ಪ್ಲ್ಯಾನ್‌ ಮತ್ತು ಜಿಯೋ 198ರೂ. ಪ್ಲ್ಯಾನ್‌ ಪ್ರತಿದಿನ 2GB ಡೇಟಾವನ್ನು ಒದಗಿಸುತ್ತಿವೆ. ಹಾಗೆಯೇ ಈ ಪ್ಲ್ಯಾನ್‌ಗಳ ವ್ಯಾಲಿಡಿಟಿಯು 28ದಿನಗಳು ಮಾತ್ರ.

Best Mobiles in India

English summary
Vodafone's Rs 255 plan is now shipping with 2.5GB data per day. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+