Home
ಸುದ್ದಿಜಾಲ

ಮತ್ತೊಂದು ಹೊಸ ಮೈಲುಗಲ್ಲು ಸ್ಥಾಪಿಸಿದ ರಿಲಯನ್ಸ್ ಜಿಯೋ; ಇದು ತುಂಬಾ ವೇಗ!

ಓಕ್ಲಾದ ಮೆಟ್ರಿಕ್ ಪರೀಕ್ಷೆಯಲ್ಲಿ ದೇಶದ ಮುಂಚೂಣಿಯ ಟೆಲಿಕಾಂ ಜಿಯೋ ಟಾಪ್ ಸಂಸ್ಥೆ ಆಗಿ ಹೊರಹೊಮ್ಮಿದೆ. 2023ರ ಮೊದಲ ತ್ರೈಮಾಸಿಕದಿಂದ ಎರಡನೇ ತ್ರೈಮಾಸಿಕದಲ್ಲಿ 5ಜಿ ಡೌನ್ ಲೋಡ್ ಮತ್ತು ಅಪ್ಲೋಡ್ ವೇಗದಲ್ಲಿ ತನ್ನ ಪ್ರಮುಖ ಪ್ರತಿಸ್ಪರ್ಧಿ ಏರ್‌ಟೆಲ್‌ ಟೆಲಿಕಾಂ ಗಿಂತ ಹೆಚ್ಚಿನ ಅಂತರದಿಂದ ಮುಂದೆ ಇದೆ.

'ಭಾರತದ ನಂಬರ್ ಒನ್ ನೆಟ್‌ವರ್ಕ್‌ ಆಗಿ ಜಿಯೋ ರೂಪುಗೊಂಡಿದ್ದು, ಮೊಬೈಲ್ ನೆಟ್‌ವರ್ಕ್‌ಗಾಗಿ ಮಾರುಕಟ್ಟೆಯ ಎಲ್ಲ ಒಂಬತ್ತು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಜತೆಗೆ 5ಜಿ ನೆಟ್ ವರ್ಕ್ ಗಾಗಿನ ಎಲ್ಲ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಈ ರೀತಿ ಜಗತ್ತಿನಲ್ಲಿ ಯಾವುದೇ ಸೇವಾ ಪೂರೈಕೆದಾರರಿಗೆ ಆಗಿರುವುದು ಇದೇ ಮೊದಲಾಗಿದೆ' ಎಂದು ಓಕ್ಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮತ್ತೊಂದು ಹೊಸ ಮೈಲುಗಲ್ಲು ಸ್ಥಾಪಿಸಿದ ರಿಲಯನ್ಸ್ ಜಿಯೋ; ಇದು ತುಂಬಾ ವೇಗ!

ಬೆಸ್ಟ್ ಮೊಬೈಲ್ ನೆಟ್ ವರ್ಕ್, ಫಾಸ್ಟೆಸ್ಟ್ ಮೊಬೈಲ್ ನೆಟ್ ವರ್ಕ್, ಬೆಸ್ಟ್ ಮೊಬೈಲ್ ಕವರೇಜ್, ಟಾಪ್ ರೇಟೆಡ್ ಮೊಬೈಲ್ ನೆಟ್ ವರ್ಕ್, ಬೆಸ್ಟ್ ಮೊಬೈಲ್ ವಿಡಿಯೋ ಎಕ್ಸ್ ಪೀರಿಯೆನ್ಸ್, ಬೆಸ್ಟ್ ಮೊಬೈಲ್ ಗೇಮಿಂಗ್ ಎಕ್ಸ್ ಪೀರಿಯೆನ್ಸ್, ಫಾಸ್ಟೆಸ್ಟ್ 5ಜಿ ಮೊಬೈಲ್ ನೆಟ್ ವರ್ಕ್, ಬೆಸ್ಟ್ 5ಜಿ ಮೊಬೈಲ್ ವಿಡಿಯೋ ಎಕ್ಸ್ ಪೀರಿಯೆನ್ಸ್, ಹಾಗೂ ಬೆಸ್ಟ್ 5ಜಿ ಮೊಬೈಲ್ ಗೇಮಿಂಗ್ ಎಕ್ಸ್ ಪೀರಿಯೆನ್ಸ್ ಹೀಗೆ ಒಂಬತ್ತು ಪ್ರಶಸ್ತಿಗಳು ಬಂದಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

5ಜಿ ಮೊಬೈಲ್ ನೆಟ್ ವರ್ಕ್ ಮೆಟ್ರಿಕ್ ನಲ್ಲಿ ಜಿಯೋ 335.75 ಅಂಕ ಪಡೆದ್ದರೆ, ಭಾರ್ತಿ ಏರ್ ಟೆಲ್ 179.49 ಅಂಕ ಪಡೆದಿದೆ. ಜಿಯೋದ 5ಜಿ ಬಳಕೆದಾರರು ಮೀಡಿಯನ್ ಡೌನ್ ಲೋಡ್ ವೇಗ 416.55 ಎಂಬಿಪಿಎಸ್ ಪಡೆಯುತ್ತಿದ್ದರೆ, ಏರ್ ಟೆಲ್ ವೇಗ 213.3 ಎಂಬಿಪಿಎಸ್ ಇದೆ. ಮತ್ತು ಜಿಯೋದ ಮೀಡಿಯನ್ ಅಪ್ ಲೋಡ್ ವೇಗ 21.20 ಎಂಬಿಪಿಎಸ್ ಇದ್ದರೆ, ಏರ್ ಟೆಲ್ ವೇಗ 19.83 ಎಂಬಿಪಿಎಸ್ ಇದೆ.

ಮತ್ತೊಂದು ಹೊಸ ಮೈಲುಗಲ್ಲು ಸ್ಥಾಪಿಸಿದ ರಿಲಯನ್ಸ್ ಜಿಯೋ; ಇದು ತುಂಬಾ ವೇಗ!

ಜಿಯೋ 5ಜಿ ಬಳಕೆದಾರರು ಅತಿ ಹೆಚ್ಚು ಡೌನ್ ಲೋಡ್ ವೇಗ ಎಂದು 432.97 ಎಂಬಿಪಿಎಸ್ ಪಡೆದಿದ್ದರೆ, ಅತಿ ಹೆಚ್ಚು ಅಪ್ ಲೋಡ್ ವೇಗ ಎಂದು 19.12 ಎಂಬಿಪಿಎಸ್ ಪಡೆದಿದ್ದಾರೆ. ಮುಂಬೈನಲ್ಲಿ ಏರ್ ಟೆಲ್ ಗ್ರಾಹಕರು ಅತಿ ಹೆಚ್ಚು ಡೌನ್ ಲೋಡ್ ವೇಗ 269.63 ಎಂಬಿಪಿಎಸ್ ವೇಗ ಪಡೆದಿದ್ದಾರೆ. ಮತ್ತು ಅತಿ ಹೆಚ್ಚು ಅಪ್ ಲೋಡ್ ಬೆಂಗಳೂರಿನಲ್ಲಿ ದಾಖಲಿಸಿದ್ದು, 30.83 ಎಂಬಿಪಿಎಸ್ ವೇಗ ಪಡೆದಿದ್ದಾರೆ.

ಆಕಾಶ್ ಅಂಬಾನಿ ಮಾತನಾಡಿ, ಡಿಜಿಟಲ್ ಇಂಡಿಯಾದ ಪೂರ್ತಿ ಪ್ರಯೋಜನವನ್ನು ಸಾಧಿಸುವ ವಿಚಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಮತ್ತು ಭಾರತವನ್ನು ಜಾಗತಿಕ ವೇದಿಕೆಯಲ್ಲಿ ನಾಯಕ ಮಾಡುವುದಕ್ಕೆ ಸಹಾಯ ಮಾಡುತ್ತೇವೆ ಎಂದಿದ್ದಾರೆ. 5ಜಿ ನೆಟ್ ವರ್ಕ್ ಅನ್ನು ತಲುಪಿಸುವುದರಲ್ಲಿ ನಮ್ಮ ವೇಗದ ಕೆಲಸದ ಬಗ್ಗೆ ಬಹಳ ಹೆಮ್ಮೆ ಇದೆ. ಈ ವರ್ಷದ ಡಿಸೆಂಬರ್ ಹೊತ್ತಿಗೆ ಏನು ಇಡೀ ದೇಶದಾದ್ಯಂತ 5ಜಿ ಕವರ್ ಮಾಡುವುದಾಗಿ ಮಾತು ನೀಡಿದ್ದೆವು, ಅದಕ್ಕಿಂತ ಮುಂಚೆಯೇ ಇಡೀ ದೇಶಾದ್ಯಂತ ಕವರ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಮತ್ತೊಂದು ಹೊಸ ಮೈಲುಗಲ್ಲು ಸ್ಥಾಪಿಸಿದ ರಿಲಯನ್ಸ್ ಜಿಯೋ; ಇದು ತುಂಬಾ ವೇಗ!

ಜಿಯೋದಿಂದ ಶೇಕಡಾ ಎಂಬತ್ತೈದರಷ್ಟು 5ಜಿ ನಿಯೋಜನೆ ಆಗಿದೆ. ಜಿಯೋ ಕಂಪನಿಯು ಪ್ರತಿ ಹತ್ತು ಸೆಕೆಂಡ್ ಗೆ ಒಂದು 5ಜಿ ಸೆಲ್ ನಿಯೋಜನೆ ಮಾಡುವುದನ್ನು ಮುಂದುವರಿಸಿದೆ. ಜಿಯೋ ಹಾಗೂ ಏರ್ ಟೆಲ್ ಎರಡೂ ತಮ್ಮ 5ಜಿ ಜಾರಿ ತುಂಬ ವೇಗವಾಗಿ ಮುಗಿಸುವುದಕ್ಕೆ ಮುಂದಾಗಿವೆ. ತಮ್ಮ 5ಜಿ ನೆಟ್ ವರ್ಕ್ ಆರಂಭಿಸಿದ ಒಂದು ವರ್ಷದೊಳಗೆ ಐದು ಕೋಟಿ ಬಳಕೆದಾರರ ಗುರಿಯನ್ನು ಮುಟ್ಟಿದ ಬಗ್ಗೆ ಹೇಳಿಕೊಂಡಿವೆ. ವಿಐ (ವೊಡಾಫೋನ್ ಐಡಿಯಾ) 5ಜಿ ನೆಟ್ ವರ್ಕ್ ಆರಂಭಕ್ಕೆ ಸಂಬಂಧಿಸಿದಂತೆ ಇನ್ನೂ ಘೋಷಣೆ ಮಾಡಬೇಕಿದೆ.

Best Mobiles in India

English summary
Jio emerges as no.1 network in India in 5G upload and download speeds said Ookla. details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+