ಜಿಯೋ ಫೈಬರ್‌ಗೆ ಮುಳುವಾಗಲಿದೆಯಾ BSNLನ 'ಭಾರತ್ ಫೈಬರ್' ಪ್ಲ್ಯಾನ್!

|

ಜಿಯೋ ಬಹುನಿರೀಕ್ಷಿತ ಗಿಗಾಫೈಬರ್ ದೇಶಿಯ ಬ್ರಾಡ್‌ಬ್ಯಾಂಡ್ ವಲಯಕ್ಕೆ ಎಂಟ್ರಿ ಕೊಟ್ಟಾಗಿದ್ದು, ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಹಲವು ಪ್ಲ್ಯಾನ್‌ ನೀಡಿದೆ. ಈ ನಿಟ್ಟಿನಲ್ಲಿ ಇತರೆ ಖಾಸಗಿ ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ಪ್ಲ್ಯಾನ್‌ಗಳನ್ನು ಘೋಷಿಸುತ್ತಿವೆ. ಆ ಪೈಕಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಸಹ ಜಿಯೋ ಫೈಬರ್ ಪ್ಲ್ಯಾನ್‌ಗೆ ಮುಳುವಾಗುವಂತಹ ಭಾರೀ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ವೊಂದನ್ನು ಪರಿಚಯಿಸಿದೆ.

ಭಾರತ್ ಫೈಬರ್‌

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ತನ್ನ 'ಭಾರತ್ ಫೈಬರ್‌' ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳ ಲಿಸ್ಟಿಗೆ ಇದೀಗ 1,999ರೂ.ಗಳ ಹೊಸ ಪ್ಲ್ಯಾನ್‌ ಅನ್ನು ಸೇರಿಸಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 33GB ಡೇಟಾ ಲಭ್ಯವಾಗಲಿದ್ದು, ಇದರೊಂದಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯವನ್ನು ನೀಡುತ್ತಿದೆ. ಹಾಗಾದರೇ ಬಿಎಸ್‌ಎನ್‌ಎಲ್ ಸಂಸ್ಥೆಯ ಹೊಸ 1,999ರೂ ಪ್ಲ್ಯಾನ್‌ ಏನೆಲ್ಲಾ ಆಫರ್‌ ಒಳಗೊಂಡಿದೆ ಮತ್ತು ಇತರೆ ಭಾರತ್ ಫೈಬರ್‌ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ನ ಹೊಸ ಅಸ್ತ್ರ

ಬಿಎಸ್‌ಎನ್ಎಲ್ ಸಂಸ್ಥೆಯು ಜಿಯೋ ಫೈಬರ್‌ಗೆ ಎದುರಾಗಿ 1,999ರೂ. ಪ್ಲ್ಯಾನ್‌ ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಪ್ರತಿ ದಿನ 33GB ಡೇಟಾ ಲಭ್ಯವಾಗಲಿದೆ. ಅಂದರೇ ತಿಂಗಳಿಗೆ 990GB ಡೇಟಾ ಸಿಗಲಿದ್ದು, ಅದು 100Mbps ವೇಗದಲ್ಲಿರಲಿದೆ. ಗ್ರಾಹಕರಿಗೆ ಲಭ್ಯವಿರುವ ದಿನದ ಡೇಟಾ ಮುಗಿದ ಬಳಿಕ 4Mbps ವೇಗದಲ್ಲಿ ಇಂಟರ್ನೆಟ್‌ ಮುಂದುವರೆಯಲಿದೆ.

ಭಾರತ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್

ಬಿಎಸ್‌ಎನ್‌ಎಲ್ ಭಾರತ್ ಬ್ರಾಡ್‌ಬ್ಯಾಂಡ್‌ನ ಇತರೆ ಜನಪ್ರಿಯ ಪ್ಲ್ಯಾನ್‌ಗಳು ಇಂತಿವೆ. 1,277ರೂ ಪ್ಲ್ಯಾನ್‌ನಲ್ಲಿ ತಿಂಗಳಿಗೆ ಒಟ್ಟು 750GB ಡೇಟಾ ಸಿಗಲಿದೆ. ಹಾಗೆಯೇ 2,499ರೂ. ಪ್ಲ್ಯಾನ್‌ನಲ್ಲಿ ಪ್ರತಿದಿನ 40GB ಡೇಟಾ ಲಭ್ಯವಾಗಲಿದೆ. 9,999ರೂ. ಪ್ಲ್ಯಾನ್‌ ಸಂಸ್ಥೆಯ ತಿಂಗಳ ದುಬಾರಿ ಪ್ಲ್ಯಾನ್‌ ಆಗಿ ಎನಿಸಿಕೊಂಡಿದ್ದು, ಪ್ರತಿದಿನ ಒಟ್ಟು 120GB ಡೇಟಾ ಒಳಗೊಂಡಿದೆ.

ಓದಿರಿ : ಫೋನಿನಲ್ಲಿ ನೆಟ್‌ ಇಲ್ಲದಿದ್ದರೂ, ನೆಟ್ಟಗೆ ದಾರಿ ತೋರಿಸೊ ಆಪ್ಸ್‌!ಓದಿರಿ : ಫೋನಿನಲ್ಲಿ ನೆಟ್‌ ಇಲ್ಲದಿದ್ದರೂ, ನೆಟ್ಟಗೆ ದಾರಿ ತೋರಿಸೊ ಆಪ್ಸ್‌!

ಭಾರತ್ ಫೈಬರ್ ಮತ್ತು ಜಿಯೋ ಫೈಬರ್

ಜಿಯೋ 1,299ರೂ.ಗಳಿಗೆ 500GB ಡೇಟಾ ನೀಡಲಿದೆ ಜೊತೆಗೆ 250GB ಡೇಟಾ ಸಹ ಸಿಗಲಿದೆ. ಹಾಗೆಯೇ 2,499ರೂ. ಪ್ಲ್ಯಾನ್‌ನಲ್ಲಿ 1,250GB ಡೇಟಾ ದೊರೆಯಲಿದ್ದು, ಹೆಚ್ಚುವರಿಯಾಗಿ 250GB ಸಿಗಲಿದೆ. ಇದರೊಂದಿಗೆ ಜಿಯೋ ಆಪ್‌, ಜಿಯೋ ಟಿವಿ ಮತ್ತು ಅನಿಯಮಿತ ರಾಷ್ಟ್ರೀಯ ಹಾಗೂ ಸ್ಥಳೀಯ ಕರೆಗಳು ಉಚಿತವಾಗಿ ಲಭ್ಯವಾಗಲಿವೆ. ಬಿಎಸ್‌ಎನ್‌ಎಲ್‌ನ ಹೊಸ 1,999ರೂ ಪ್ಲ್ಯಾನ್‌ ಜಿಯೋದ 2,499ರೂ ಪ್ಲ್ಯಾನ್‌ಗೆ ಫೈಟ್‌ ನೀಡಲಿದೆ.

ಓದಿರಿ : ಇನ್‌ಫಿನಿಕ್ಸ್ ಹಾಟ್ 8 ವಿಮರ್ಶೆ : ಅಗ್ಗದ ಬೆಲೆ, ದೈತ್ಯ ಬ್ಯಾಟರಿ ಲೈಫ್.!ಓದಿರಿ : ಇನ್‌ಫಿನಿಕ್ಸ್ ಹಾಟ್ 8 ವಿಮರ್ಶೆ : ಅಗ್ಗದ ಬೆಲೆ, ದೈತ್ಯ ಬ್ಯಾಟರಿ ಲೈಫ್.!

Best Mobiles in India

English summary
BSNL has come with a new Rs 1,999 broadband plan which offers 33GB daily data. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X