Home
ಸುದ್ದಿಜಾಲ

ಗೋಲ್ಡ್‌ನಲ್ಲಿ ಹೂಡಿಕೆ ಮಾಡುವ ಪ್ಲ್ಯಾನ್‌ ಇದ್ರೆ, ಜಿಯೋದ ಈ ಯೋಜನೆ ಗಮನಿಸಿ!

ದಿಗ್ಗಜ ಸಂಸ್ಥೆ ಜಿಯೋ ದೀಪಾವಳಿಯ ಧನ್ ತೇರಸ್ (Dhanteras) ಈ ಸಂದರ್ಭದಲ್ಲಿ ಜಿಯೋ ಫೈನಾನ್ಸ್ ಸರ್ವೀಸಸ್ ಲಿಮಿಟೆಡ್ ಸ್ಮಾರ್ಟ್ ಗೋಲ್ಡ್ ( SmartGold ) ಯೋಜನೆ ಅನ್ನು ಪ್ರಾರಂಭ ಮಾಡಿದೆ. ಗ್ರಾಹಕರು ಈ ಸ್ಮಾರ್ಟ್‌ಗೋಲ್ಡ್ ಯೋಜನೆ ಅಡಿಯಲ್ಲಿ ಚಿನ್ನವನ್ನು ಡಿಜಿಟಲ್ ಸ್ವರೂಪದಲ್ಲಿ ಖರೀದಿಸುವ ಮೂಲಕ ಚಿನ್ನದ ಮೇಲೆ ಹೂಡಿಕೆಯನ್ನು ಮಾಡಬಹುದು.

ಚಿನ್ನದ ಹೂಡಿಕೆಯಿಂದ ಪಡೆದ ಸ್ಮಾರ್ಟ್‌ಗೋಲ್ಡ್ ಯೂನಿಟ್ ಗಳನ್ನು ಯಾವುದೇ ಸಮಯದಲ್ಲಿ ನಗದು, ಚಿನ್ನದ ನಾಣ್ಯಗಳು ಅಥವಾ ಆಭರಣಗಳಾಗಿ ಪರಿವರ್ತಿನೆ ಮಾಡಬಹುದು. ಇನ್ನೂ ಕುತೂಹಲಕಾರಿ ಸಂಗತಿ ಏನೆಂದರೆ, ಸ್ಮಾರ್ಟ್ ಗೋಲ್ಡ್ ನಲ್ಲಿ ( SmartGold ) ಸಾವಿರಾರು ಅಥವಾ ಲಕ್ಷ ರೂ. ಗಳಷ್ಟು ಹೂಡಿಕೆ ಮಾಡುವ ಅಗತ್ಯವಿಲ್ಲ, ಗ್ರಾಹಕರು ಕೇವಲ 10 ರೂ. ಗಳಿಗೂ ಚಿನ್ನವನ್ನು ಖರೀದಿ ಮಾಡಬಹುದು.

ಗೋಲ್ಡ್‌ನಲ್ಲಿ ಹೂಡಿಕೆ ಮಾಡುವ ಪ್ಲ್ಯಾನ್‌ ಇದ್ರೆ, ಜಿಯೋದ ಈ ಯೋಜನೆ ಗಮನಿಸಿ!

ಜಿಯೋ ಫೈನಾನ್ಸ್ (Jio Finance) ಅಪ್ಲಿಕೇಷನ್‌ನಲ್ಲಿ ಸ್ಮಾರ್ಟ್‌ಗೋಲ್ಡ್ ಯೋಜನೆ ಯಡಿ ಚಿನ್ನದಲ್ಲಿ ಹೂಡಿಕೆ ಮಾಡುವುದಕ್ಕೆ ಎರಡು ಆಯ್ಕೆಗಳು ಗ್ರಾಹಕರಿಗೆ ಲಭ್ಯ ಇವೆ. ಮೊದಲನೆಯದಾಗಿ ಹೂಡಿಕೆಯ ಒಟ್ಟು ಮೊತ್ತವನ್ನು ನಿರ್ಧರಿಸಬಹುದು, ಹಾಗೆಯೇ ಎರಡನೆಯದಾಗಿ ಚಿನ್ನದ ತೂಕದ ಆಧಾರದಲ್ಲಿ, ಅಂದರೆ ಗ್ರಾಂ ಲೆಕ್ಕದಲ್ಲಿ ಹೂಡಿಕೆ ಸಹ ಮಾಡಬಹುದು.

ಇನ್ನು ಭೌತಿಕ ಚಿನ್ನದ ವಿತರಣೆಯು 0.5 ಗ್ರಾಂ ಮತ್ತು ಅದಕ್ಕಿಂತ ಹೆಚ್ಚು ಇರಬೇಕಾಗುತ್ತದೆ. ಇದು 0.5 ಗ್ರಾಂ, 1 ಗ್ರಾಂ, 2 ಗ್ರಾಂ, 5 ಗ್ರಾಂ ಮತ್ತು 10 ಗ್ರಾಂ. ಗಳಲ್ಲಿ ಲಭ್ಯ ಇರುತ್ತದೆ. ಗ್ರಾಹಕರು ಬಯಸಿದರೆ, ಅವರು ನೇರವಾಗಿ ಅಪ್ಲಿಕೇಷನ್‌ನಲ್ಲಿ ಚಿನ್ನದ ನಾಣ್ಯಗಳನ್ನು ಖರೀದಿಸುವ ಮೂಲಕ ಹೋಮ್ ಡೆಲಿವರಿ ಸೌಲಭ್ಯವನ್ನು ಸಹ ಪಡೆಯಬಹುದು. ಗ್ರಾಹಕರ ಚಿನ್ನವನ್ನು ಸುರಕ್ಷಿತವಾಗಿ ಇಡುವುದಕ್ಕಾಗಿ ಹೂಡಿಕೆಯ ಬಳಿಕ, ಸ್ಮಾರ್ಟ್ ಗೋಲ್ಡ್ ( SmartGold ) ಹೂಡಿಕೆಗೆ ಸಮನಾದ 24 ಕ್ಯಾರೆಟ್ ಚಿನ್ನವನ್ನು ಖರೀದಿಸುತ್ತದೆ ಮತ್ತು ಅದನ್ನು ವಿಮೆ ಮಾಡಿದ ವಾಲ್ಟ್‌ನಲ್ಲಿ ಇರಿಸುತ್ತದೆ.

ಇದು ಚಿನ್ನವನ್ನು ಜೋಪಾನ ಮಾಡಬೇಕು ಎಂಬ ನಿಮ್ಮ ಜವಾಬ್ದಾರಿಯಿಂದ ಮುಕ್ತಗೊಳಿಸುವುದಲ್ಲದೆ, ಚಿನ್ನವು ಕಳ್ಳತನ ಆಗುತ್ತದೆ ಎಂಬ ಬಗ್ಗೆಯೂ ಚಿಂತಿಸಬೇಕಾಗಿಲ್ಲ. ಜಿಯೋ ಫೈನಾನ್ಸ್ ಆಪ್‌ನಲ್ಲಿ ಬಳಕೆದಾರರು ಬಯಸಿದಾಗ ಚಿನ್ನದ ನೇರ ಮಾರುಕಟ್ಟೆ ಬೆಲೆಗಳನ್ನು ನೋಡಬಹುದು. ಸ್ಮಾರ್ಟ್ ಗೋಲ್ಡ್ ಡಿಜಿಟಲ್ ಚಿನ್ನವನ್ನು ಖರೀದಿಸಲು ಅನುಕೂಲಕರ, ಸುರಕ್ಷಿತ ಮತ್ತು ಅರ್ಥಪೂರ್ಣ ಮಾರ್ಗವಾಗಿದೆ.

ಅಂದಹಾಗೆ ಜಿಯೋ ಸಂಸ್ಥೆಯು ಇತ್ತೀಚಿಗೆ ಜಿಯೋ ಫೈನಾನ್ಸ್ ಆಪ್‌ ಬಿಡುಗಡೆ ಮಾಡಿದೆ. ಈ ಆಪ್‌ ನೆರವಿನಿಂದ ಜನರು ತಮ್ಮ ಹಣಕಾಸು ನಿರ್ವಹಣೆ ಯನ್ನು ಬೆರಳ ತುದಿಯಲ್ಲಿ ಸುಲಭವಾಗಿ ಮಾಡಬಹುದ್ದು, ಇದು ದೈನಂದಿನ ಆರ್ಥಿಕ ವ್ಯವಹಾರಗಳು ಹಾಗೂ ಡಿಜಿಟಲ್ ಬ್ಯಾಂಕಿಂಗ್ ನಲ್ಲಿ ಹೊಸ ಬದಲಾವಣೆ ತರಲಿದೆ. ಈ ಆಪ್‌ ಯಾವುದೇ ಅಡೆತಡೆಗಳು ಇಲ್ಲದಂತೆ ಡಿಜಿಟಲ್ ಬ್ಯಾಂಕಿಂಗ್, ಯುಪಿಐ ವಹಿವಾಟುಗಳು ( UPI ), ವಿಮಾ ಸಲಹೆಯನ್ನು ಸಂಯೋಜಿಸುತ್ತದೆ ಮತ್ತು ಖಾತೆಗಳು ವೀಕ್ಷಣೆ ಮಾಡುವುನ್ನು ಹಾಗೂ ಉಳಿತಾಯಗಳ ಏಕೀಕೃತ ನೋಟವನ್ನು ಒದಗಿಸುತ್ತದೆ.

ಅಲ್ಲದೇ ಜಿಯೋ ಫೈನಾನ್ಸ್ ಆಪ್‌ ಅನ್ನು ಆರ್ಥಿಕ ವಿಚಾರದ ಬಗ್ಗೆ ಎಷ್ಟು ಕನಿಷ್ಠ ಅಥವಾ ಗರಿಷ್ಠ ಜ್ಞಾನ ಮತ್ತು ಯಾವುದೇ ಹಂತದ ಆರ್ಥಿಕ ತಂತ್ರಜ್ಞಾನದ ಜ್ಞಾನ ಇರುವಂಥ ಬಳಕೆದಾರರಿಗೆ ಜಿಯೋಫೈನಾನ್ಸ್ ಆಪ್‌ ಸೇವೆಯನ್ನು ನೀಡುತ್ತದೆ. ಹೀಗಾಗಿ ಜನರು ಹಣಕಾಸು ನಿರ್ವಹಣೆ ಸುಲಭವಾಗಿ ಮಾಡಬಹುದು ಎಂಬುದನ್ನು ಖಚಿತಪಡಿಸುತ್ತದೆ. ಬಳಕೆದಾರರಿಗಾಗಿ ಒಂದೇ ಪ್ಲಾಟ್ ಫಾರ್ಮ್ ನಲ್ಲಿ ಹಣಕಾಸಿಗೆ ಸಂಬಂಧಿಸಿದ ಎಲ್ಲವನ್ನೂ ಸರಳವಾಗಿ ನಿರ್ವಹಿಸಬಹುದು.

Best Mobiles in India

English summary
Jio Financial Services launches SmartGold on Dhanteras for investment in digital gold. check out details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+