ಜಿಯೋ ಗ್ರಾಹಕರೇ, Data ಖಾಲಿ ಆದಾಗ ಈ ಪ್ಲ್ಯಾನ್‌ಗಳು ನಿಮಗೆ ಸೂಪರ್!
ದೇಶದ ಬಹುದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ರಿಲಯನ್ಸ್ ಜಿಯೋ ಈಗಾಗಲೇ ಹಲವು ಅನುಕೂಲಕರ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಜಿಯೋ ಸಂಸ್ಥೆಯು ಇದೀಗ ತನ್ನ ಪೋರ್ಟ್‌ಫೋಲಿಯೊದಲ್ಲಿ ನಾಲ್ಕು ಡೇಟಾ ಬೂಸ್ಟರ್‌ಗಳನ್ನು ಒಳಗೊಂಡಿದ್ದು, ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಉಪಯುಕ್ತ ಎನಿಸಿವೆ. ಜಿಯೋ ಟೆಲಿಕಾಂ ಡೇಟಾ ಬೂಸ್ಟರ್ ಯೋಜನೆಗಳ ಆರಂಭಿಕ ಬೆಲೆ 1GB ಗೆ 19ರೂ. ಗಳು ಆಗಿದೆ.
ಹೌದು, ಜಿಯೋ ಟೆಲಿಕಾಂ ಭಿನ್ನ ಶ್ರೇಣಿಯ ಪ್ರೀಪೇಯ್ಡ್ ಯೋಜನೆಗಳ ಆಯ್ಕೆ ಪಡೆದಿದೆ. ಅವುಗಳ ಪೈಕಿ ಡೇಟಾ ಬೂಸ್ಟರ್ ಪ್ಲ್ಯಾನ್‌ಗಳ ಆಯ್ಕೆ ಸಹ ಪಡೆದುಕೊಂಡಿದೆ. ಸದ್ಯ ನಾಲ್ಕು ಡೇಟಾ ಬೂಸ್ಟರ್ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸಿದೆ. ಅಂದಹಾಗೆ ಈ ಯೋಜನೆಗಳು ಹೆಚ್ಚುವರಿ ಡೇಟಾ ಪ್ರಯೋಜನ ಮಾತ್ರ ಪಡೆದಿರುತ್ತದೆ. ಹಾಗಾದರೇ ಜಿಯೋ ಟೆಲಿಕಾಂನ ಡೇಟಾ ಬೂಸ್ಟರ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ 19ರೂ. ಡೇಟಾ ಬೂಸ್ಟರ್ ಪ್ಲ್ಯಾನ್
ಜಿಯೋ ಟೆಲಿಕಾಂನ 19ರೂ. ಡೇಟಾ ಬೂಸ್ಟರ್ ಪ್ಲ್ಯಾನ್ ಆರಂಭಿಕ ಪ್ಲ್ಯಾನ್ ಆಗಿದೆ. ಈ ಯೋಜನೆಗಳಲ್ಲಿ ಚಂದಾದಾರರಿಗೆ 1GB ಡೇಟಾ ಪ್ರಯೋಜನ ಮಾತ್ರ ಲಭ್ಯ ವಾಗಲಿದೆ. ಇದರೊಂದಿಗೆ ಯಾವುದೇ ವಾಯಿಸ್ ಕರೆ, ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ ಇರುವುದಿಲ್ಲ. ಇನ್ನು ವ್ಯಾಲಿಡಿಟಿಯು ಮೂಲ ಆಕ್ಟಿವ್ ಪ್ಲ್ಯಾನಿನದ್ದೇ ಅನ್ವಯವಾಗಲಿದೆ.
ಜಿಯೋ 29ರೂ. ಡೇಟಾ ಬೂಸ್ಟರ್ ಪ್ಲ್ಯಾನ್
ಜಿಯೋ ಸಂಸ್ಥೆಯ 29ರೂ. ಡೇಟಾ ಬೂಸ್ಟರ್ ಪ್ಲ್ಯಾನ್ ಆರಂಭಿಕ ಪ್ಲ್ಯಾನ್ ಆಗಿದೆ. ಈ ಯೋಜನೆಗಳಲ್ಲಿ ಚಂದಾದಾರರಿಗೆ 2 GB ಡೇಟಾ ಪ್ರಯೋಜನ ಮಾತ್ರ ಲಭ್ಯ ವಾಗಲಿದೆ. ಇದರೊಂದಿಗೆ ಯಾವುದೇ ವಾಯಿಸ್ ಕರೆ, ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ ಇರುವುದಿಲ್ಲ. ಇನ್ನು ಮೂಲ ಆಕ್ಟಿವ್ ಪ್ಲ್ಯಾನಿನ ವ್ಯಾಲಿಡಿಟಿಯೇ ಇದಕ್ಕೂ ಅನ್ವಯವಾಗಲಿದೆ.
ಜಿಯೋ 69ರೂ. ಡೇಟಾ ಬೂಸ್ಟರ್ ಪ್ಲ್ಯಾನ್
ಜಿಯೋ ಟೆಲಿಕಾಂನ 69ರೂ. ಡೇಟಾ ಬೂಸ್ಟರ್ ಪ್ಲ್ಯಾನ್ ಆರಂಭಿಕ ಪ್ಲ್ಯಾನ್ ಆಗಿದೆ. ಈ ಯೋಜನೆಗಳಲ್ಲಿ ಚಂದಾದಾರರಿಗೆ 6 GB ಡೇಟಾ ಪ್ರಯೋಜನ ಮಾತ್ರ ಲಭ್ಯ ವಾಗಲಿದೆ. ಇದರೊಂದಿಗೆ ಯಾವುದೇ ವಾಯಿಸ್ ಕರೆ, ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ ಇರುವುದಿಲ್ಲ. ಇನ್ನು ವ್ಯಾಲಿಡಿಟಿಯು ಮೂಲ ಆಕ್ಟಿವ್ ಪ್ಲ್ಯಾನಿನದ್ದೇ ಅನ್ವಯವಾಗಲಿದೆ.
ಜಿಯೋ 139ರೂ. ಡೇಟಾ ಬೂಸ್ಟರ್ ಪ್ಲ್ಯಾನ್
ಜಿಯೋ ಟೆಲಿಕಾಂನ 139ರೂ. ಡೇಟಾ ಬೂಸ್ಟರ್ ಪ್ಲ್ಯಾನ್ ಆರಂಭಿಕ ಪ್ಲ್ಯಾನ್ ಆಗಿದೆ. ಈ ಯೋಜನೆಗಳಲ್ಲಿ ಚಂದಾದಾರರಿಗೆ 12 GB ಡೇಟಾ ಪ್ರಯೋಜನ ಮಾತ್ರ ಲಭ್ಯ ವಾಗಲಿದೆ. ಇದರೊಂದಿಗೆ ಯಾವುದೇ ವಾಯಿಸ್ ಕರೆ, ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ ಇರುವುದಿಲ್ಲ. ಇನ್ನು ಮೂಲ ಆಕ್ಟಿವ್ ಪ್ಲ್ಯಾನಿನ ವ್ಯಾಲಿಡಿಟಿಯೇ ಇದಕ್ಕೂ ಅನ್ವಯವಾಗಲಿದೆ.
ಜಿಯೋ ಡೇಟಾ ಪ್ಯಾಕ್ ಯೋಜನೆಗಳ ಆಯ್ಕೆ ಸಹ ಪಡೆದಿದೆ. ಜಿಯೋದ 219ರೂ. ಡೇಟಾ ಪ್ಯಾಕ್ 30GB ಡೇಟಾ ಪ್ರಯೋಜನ ಪಡೆದಿದ್ದು, ಒಟ್ಟು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇನ್ನು ಜಿಯೋದ 289ರೂ. ಪ್ಲ್ಯಾನ್ 40GB ಡೇಟಾ ಪ್ರಯೋಜನ ಒಳಗೊಂಡಿದ್ದು, ಇದು ಸಹ 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಒದಗಿಸಲಿದೆ.
ಇನ್ನು ಜಿಯೋದ 359ರೂ. ಪ್ಲ್ಯಾನ್ 30 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಈ ಅವಧಿಗೆ ಒಟ್ಟು 50 GB ಡೇಟಾ ಪ್ರಯೋಜನ ಪಡೆದಿದೆ. ಹಾಗೆಯೇ ಜಿಯೋದ 175ರೂ. ಬೆಲೆಯ ಪ್ಯಾಕ್ ಒಟ್ಟು 10GB ಡೇಟಾ ಸೌಲಭ್ಯ ನೀಡಲಿದ್ದು, 28 ದಿನಗಳ ವ್ಯಾಲಿಡಿಟಿ ಪಡೆದುಕೊಂಡಿದೆ. ಇದರೊಂದಿಗೆ 10 ಜನಪ್ರಿಯ OTT ಪ್ರಯೋಜನ ಸಹ ಪಡೆದುಕೊಂಡಿದೆ.


Click it and Unblock the Notifications








