Home
ಸುದ್ದಿಜಾಲ

IPL ವೀಕ್ಷಕರಿಗೆ ಸಿಹಿಸುದ್ದಿ!..ಜಿಯೋದಿಂದ ಸಿಗಲಿದೆ ಉಚಿತ ಹೈ ಸ್ಪೀಡ್‌ ಇಂಟರ್ನೆಟ್‌ ಸೇವೆ!

ರಿಲಯನ್ಸ್‌ ಜಿಯೋ ಟೆಲಿಕಾಂ ಇದೀಗ ನೂತನವಾಗಿ ಧನ್ ಧನಾ ಧನ್ ಆಫರ್ ಅನ್ನು ಏರ್‌ಫೈಬರ್ ಪ್ಲಸ್ ಬಳಕೆದಾರರಿಗೆ ಘೋಷಿಸಿದೆ. ಈ ಕೊಡುಗೆಯಲ್ಲಿ ಜಿಯೋ ಟೆಲಿಕಾಂ ಏರ್‌ಫೈಬರ್ ಸೇವೆಗಳ ಹೊಸ ಗ್ರಾಹಕರಿಗೆ ಹಾಗೂ ಈಗಾಗಲೇ ಬಳಕೆ ಮಾಡುತ್ತಿರುವ ಗ್ರಾಹಕರಿಗೆ 60 ದಿನಗಳವರೆಗೆ ಮೂರು ಪಟ್ಟು ಇಂಟರ್ನೆಟ್ ಸ್ಪೀಡ್‌ ಅನ್ನು ಉಚಿತವಾಗಿ ನೀಡುವುದಾಗಿ ವರದಿಯಾಗಿದೆ.

ಹೌದು, ರಿಲಾಯನ್ಸ್‌ ಜಿಯೋ ಏರ್‌ಫೈಬರ್‌ ಪ್ಲಸ್ ಬಳಕೆದಾರರಿಗೆ ಇದು ಖುಷಿಯ ಸಂಗತಿ ಆಗಿದೆ. ಜಿಯೋ ಸಂಸ್ಥೆಯು ತನ್ನ ಏರ್‌ಫೈಬರ್‌ ಬಳಕೆದಾರರಿಗೆ 60 ದಿನಗಳವರೆಗೆ ಮೂರು ಪಟ್ಟು ವೇಗದ ಇಂಟರ್ನೆಟ್ ಸೇವೆಯನ್ನು ಉಚಿತವಾಗಿ ನೀಡಲಿದೆ. ಈ ಸ್ಪೆಷಲ್‌ ಕೊಡುಗೆಯು IPL 2024 ಹತ್ತಿರದಲ್ಲಿ ಇರುವಾಗ ನೀಡಿರುವುದು ಕ್ರಿಕೆಟ್‌ ಪ್ರಿಯರಿಗೆ ಹಬ್ಬದ ಸಂಗತಿ ಎನಿಸಿದೆ.

ಜಿಯೋದ ಈ ಧನ್ ಧನಾ ಧನ್ ಆಫರ್ ಹೊಸ ಗ್ರಾಹಕರಿಗೆ ಹಾಗೂ ಅಸ್ತಿತ್ವದಲ್ಲಿ ಇರುವ ಗ್ರಾಹಕರಿಗೆ ಲಭ್ಯ ಆಗಲಿದೆ. ಈ ಕೊಡುಗೆಯಲ್ಲಿ ಉಚಿತವಾಗಿ ಹೈ ಸ್ಪೀಡ್‌ ಇಂಟರ್ನೆಟ್‌ ಸೇವೆ ಪಡೆಯಬಹುದಾಗಿದೆ. ಅಂದಹಾಗೆ IPL 2024 ಅನ್ನು ಜಿಯೋ ಸಿನಿಮಾ (JioCinema) ಉಚಿತವಾಗಿ ಸ್ಟ್ರೀಮ್‌ ಮಾಡಬಹುದು. ಹಾಗಾದರೇ ಜಿಯೋ ಟೆಲಿಕಾಂನ ಈ ಕೊಡುಗೆಯ ಬಗ್ಗೆ ಹಾಗೂ ಜನಪ್ರಿಯ ಏರ್‌ಫೈಬರ್‌ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

IPL ವೀಕ್ಷಕರಿಗೆ ಸಿಹಿಸುದ್ದಿ!..ಜಿಯೋದಿಂದ ಸಿಗಲಿದೆ ಉಚಿತ ಹೈ ಸ್ಪೀಡ್‌ ಇಂಟರ್ನೆಟ್

ಜಿಯೋ ಏರ್‌ಫೈಬರ್ ಪ್ಲಸ್ ಧನ್ ಧನಾ ಧನ್ ಕೊಡುಗೆಯು ಸ್ಪೀಡ್‌ ಬೂಸ್ಟರ್‌ ಎಂದೇ ಗುರುತಿಸಿಕೊಂಡಿದೆ. ಈ ಕೊಡುಗೆಯು ಎಲ್ಲಾ ಜಿಯೋ ಏರ್‌ಫೈಬರ್ ಬಳಕೆದಾರರಿಗೆ ದೊರೆಯಲಿದ್ದು, ಮೂರು ಪಟ್ಟು ವೇಗದ ಇಂಟರ್ನೆಟ್ ಸೇವೆಯನ್ನು ನೀಡುತ್ತದೆ. ಅಂದಹಾಗೆ ಈ ಆಫರ್ ಮಾರ್ಚ್ 16, 2024 ರಿಂದ 60 ದಿನಗಳವರೆಗೆ ವ್ಯಾಲಿಡಿಟಿ ಪಡೆದಿರುತ್ತದೆ.

ಜಿಯೋ ಏರ್‌ ಫೈಬರ್‌ ಪ್ಲ್ಯಾನ್‌ ಮಾಹಿತಿ

ಜಿಯೋ ಏರ್‌ ಫೈಬರ್‌ 30mpbs ಯೋಜನೆಯ ಬೆಲೆಯು 599ರೂ ಆಗಿದೆ. ಇದರಲ್ಲಿ 550+ ಡಿಜಿಟಲ್ ಕನೆಕ್ಷನ್‌ ಲಭ್ಯ ಇದ್ದು, ಜೊತೆಗೆ 14 ಆಪ್ಸ್‌ ಸೇವೆ ಸಿಗಲಿವೆ. ಹಾಗೆಯೇ ಜಿಯೋ ಏರ್‌ ಫೈಬರ್‌ 100mpbs ಯೋಜನೆಯ ಬೆಲೆಯು 899ರೂ ಆಗಿದೆ. ಇದರಲ್ಲಿ 550+ ಡಿಜಿಟಲ್ ಕನೆಕ್ಷನ್‌ ದೊರೆಯಲಿದ್ದು, ಇದರ ಜೊತೆಗೆ 14 ಆಪ್ಸ್‌ ಸೇವೆ ಕೂಡಾ ಲಭ್ಯ ಆಗಲಿವೆ.

IPL ವೀಕ್ಷಕರಿಗೆ ಸಿಹಿಸುದ್ದಿ!..ಜಿಯೋದಿಂದ ಸಿಗಲಿದೆ ಉಚಿತ ಹೈ ಸ್ಪೀಡ್‌ ಇಂಟರ್ನೆಟ್

ಹಾಗೆಯೇ ರಿಲಯನ್ಸ್‌ ಜಿಯೋ ಟೆಲಿಕಾಂ 1199ರೂ. ಏರ್‌ಫೈಬರ್‌ ಯೋಜನೆಯು 550+ ಡಿಜಿಟಲ್ ಕನೆಕ್ಷನ್‌ ಲಭ್ಯ ಇದ್ದು, ಇದರ ಜೊತೆಗೆ 14 ಆಪ್ಸ್‌ ಸೇವೆ ಸೇರಿದಂತೆ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮೀಯಂ ಸೇವೆಗಳನ್ನು ಸಹ ಗ್ರಾಹಕರು ಪಡೆಯಬಹುದಾಗಿದೆ.

ಅಲ್ಲದೇ ಜಿಯೋ ಏರ್‌ ಫೈಬರ್‌ ಮ್ಯಾಕ್ಸ್‌ 300mpbs ಪ್ಲ್ಯಾನ್‌ ಬೆಲೆಯು 1499ರೂ ಆಗಿದೆ. ಈ ಯೋಜನೆಯಲ್ಲಿ 550+ ಡಿಜಿಟಲ್ ಕನೆಕ್ಷನ್‌ ಸಿಗಲಿದೆ. ಇದರ ಜೊತೆಗೆ 14 ಆಪ್ಸ್‌ ಸೇವೆ ಹಾಗೂ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಸಹ ಲಭ್ಯ. ಅದೇ ರೀತಿ ಜಿಯೋ ಏರ್‌ ಫೈಬರ್‌ ಮ್ಯಾಕ್ಸ್‌ 500mpbs ಪ್ಲ್ಯಾನ್‌ ದರವು 2499ರೂ ಆಗಿದ್ದು, ಈ ಯೋಜನೆಯಲ್ಲಿ 550+ ಡಿಜಿಟಲ್ ಕನೆಕ್ಷನ್‌ ಲಭ್ಯ. ಇದರ ಜೊತೆಗೆ 14 ಆಪ್ಸ್‌ ಸೇವೆ ಸೇರಿದಂತೆ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಕೂಡಾ ಸಿಗಲಿವೆ.

ಅದೇ ರೀತಿ ರಿಲಯನ್ಸ್‌ ಜಿಯೋ ಏರ್‌ ಫೈಬರ್‌ ಮ್ಯಾಕ್ಸ್‌ 1000mpbs ಪ್ಲ್ಯಾನಿನ ಬೆಲೆಯು 3999ರೂ ಆಗಿದೆ. ಈ ಯೋಜನೆಯಲ್ಲಿ 550+ ಡಿಜಿಟಲ್ ಕನೆಕ್ಷನ್‌ ಸೌಲಭ್ಯ ಸಿಗಲಿದೆ. ಇದರ ಜೊತೆಗೆ 14 ಆಪ್ಸ್‌ ಸೇವೆ ಸೇರಿದಂತೆ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಕೂಡಾ ಬಳಕೆದಾರರಿಗೆ ಲಭ್ಯ.

Best Mobiles in India

English summary
Jio has announced new Dhan Dhana Dhan offer for AirFiber Plus during IPL 2024. Jio offering Triple Internet Speeds in this special offer. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+