Home
ಸುದ್ದಿಜಾಲ

Jio: ಜಿಯೋ ಗ್ರಾಹಕರಿಗೆ ಇನ್ನೇನು ತಾನೆ ಬೇಕು? ಬರೋಬ್ಬರಿ 12 OTT ಪ್ರಯೋಜನದೊಂದಿಗೆ ಅಗ್ಗದ ಹೊಸ ಪ್ಲ್ಯಾನ್

ಜಿಯೋ (Jio) ಈಗಾಗಲೇ ಸಾಕಷ್ಟು ಭಿನ್ನ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಹೊಸ ಗ್ರಾಹಕರನ್ನು ಪಡೆಯುವ ಹಾಗೂ ಇರುವ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಅದರಲ್ಲೂ ಏರ್‌ಟೆಲ್‌ಗೆ ತೀವ್ರ ಸ್ಪರ್ಧೆ ನೀಡುವ ಮೂಲಕ ತನ್ನದೇ ಆದ ಹೊಸ ಹೊಸ ಪ್ಲ್ಯಾನ್‌ಗಳನ್ನು ಆಗಾಗ್ಗೆ ಘೋಷಣೆ ಮಾಡುತ್ತಲೇ ಇರುತ್ತದೆ.

ಹೌದು, ಜಿಯೋ ಅಗ್ಗದ ಬೆಲೆಯಲ್ಲಿ ಹೆಚ್ಚಿನ ಸೇವೆ ನೀಡುವ ಟೆಲಿಕಾಂ ಎಂದು ಹೆಸರು ಪಡೆದುಕೊಂಡಿದೆ. ಅದರಲ್ಲೂ ದೇಶದ ಮೂಲೆ ಮೂಲೆಯಲ್ಲೂ ಅತ್ಯುತ್ತಮ ನೆಟ್‌ವರ್ಕ್‌ಅನ್ನೂ ಸಹ ಇದರಿಂದ ಪಡೆಯಬಹುದಾಗಿದೆ. ಈ ಬೆಳವಣಿಗೆ ನಡುವೆ ಜಿಯೋ ಬರೋಬ್ಬರಿ 12 ಓಟಿಟಿ ಪ್ರಯೋಜನದೊಂದಿಗೆ ಅಗ್ಗದ ಹೊಸ ಪ್ಲ್ಯಾನ್ ಅನ್ನು ಘೋಷಣೆ ಮಾಡಿದೆ. ಇದರಿಂದ ಜಿಯೋ ಖಂಡಿತಾ ಸಾಕಷ್ಟು ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯಲಿದೆ. ಹಾಗಿದ್ರೆ, ಈ ಪ್ಲ್ಯಾನ್‌ ಬೆಲೆ ಎಷ್ಟು?, ಮಾನ್ಯತೆ ದಿನಗಳು ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಬರೋಬ್ಬರಿ 12 OTT ಪ್ರಯೋಜನದೊಂದಿಗೆ ಅಗ್ಗದ ಹೊಸ ಜಿಯೋ  ಪ್ಲ್ಯಾನ್

ಜಿಯೋದಿಂದ ಹೊಸ ಪ್ಲ್ಯಾನ್: ಆಕಾಶ್ ಅಂಬಾನಿ ನೇತೃತ್ವದ ಜಿಯೋ ಹೊಸ ಕೈಗೆಟುಕುವ ಪ್ಲ್ಯಾನ್‌ ಅನ್ನು ಘೋಷಣೆ ಮಾಡಿದೆ. ಈ ಪ್ಲ್ಯಾನ್‌ ಮೂಲಕ ಗ್ರಾಹಕರು ಅನಿಯಮಿತ ಕರೆಗಳು, 5G ಡೇಟಾ, 12 ಓಟಿಟಿ ಚಂದಾದಾರಿಕೆ ಪಡೆಯಬಹುದಾಗಿದೆ. ಈ ಮೂಲಕ ಆಕಾಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಟೆಲಿಕಾಂ (Reliance Jio Telecom) ಕ್ಷೇತ್ರದಲ್ಲಿ ಸ್ವಲ್ಪ ಸಮಯದಿಂದ ಪ್ರಾಬಲ್ಯ ಸಾಧಿಸಲು ಮುಂದಾಗಿದೆ.

ಭಾರತದಲ್ಲಿ ಓಟಿಟಿ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ, ರಿಲಯನ್ಸ್ ಜಿಯೋ ಇತರ ಸೇವೆಗಳೊಂದಿಗೆ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯೊಂದಿಗೆ ಸಂಯೋಜಿಸಲ್ಪಟ್ಟಿರುವ ಪ್ಲ್ಯಾನ್‌ ಗಳನ್ನು ನೀಡುವ ಕೆಲಸ ಮಾಡುತ್ತಿದೆ. ಅದರಂತೆ ಈ ಹೊಸ ಪ್ಲ್ಯಾನ್‌ನಲ್ಲಿ Zee5, Disney+ Hotstar, JioCinema ನಂತಹ 12 ಓಟಿಟಿ ಪ್ಲಾಟ್‌ಫಾರ್ಮ್‌ಗಳ ಪ್ರಯೋಜನವನ್ನು ನೀಡಲಿದೆ. ಇದರಿಂದಾಗಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗೆ ನಡುಕ ಶುರುವಾದಂತೆ ಆಗಿದೆ.

ಬರೋಬ್ಬರಿ 12 OTT ಪ್ರಯೋಜನದೊಂದಿಗೆ ಅಗ್ಗದ ಹೊಸ ಜಿಯೋ  ಪ್ಲ್ಯಾನ್

ಇಷ್ಟೆಲ್ಲಾ ಸೇವೆ ನೀಡುತ್ತಿರುವ ಈ ಪ್ಲ್ಯಾನ್‌ ಬೆಲೆ ದುಬಾರಿ ಪ್ರಿಪೇಯ್ಡ್‌ ಇರಬಹುದು ಅಂದುಕೊಂಡರೆ ನಿಮ್ಮ ಅನಿಸಿಕೆ ತಪ್ಪು. ಯಾಕೆಂದರೆ ಇದರ ಬೆಲೆ ಕೇವಲ 148 ರೂ.ಗಳಾಗಿದೆ. ಈ ಪ್ಲ್ಯಾನ್‌ 28 ದಿನಗಳ ಮಾನ್ಯತೆ ಹೊಂದಿದ್ದು, ಬಳಕೆದಾರರಿಗೆ 10GB 5G ಡೇಟಾ ಮತ್ತು ಅನಿಯಮಿತ ವಾಯ್ಸ್‌ ಕರೆ ಸೌಲಭ್ಯ ಕಲ್ಪಿಸಿಕೊಡುತ್ತದೆ. ಅದಾಗ್ಯೂ ನಿಮಗೆ ಇನ್ನೂ ಹೆಚ್ಚಿನ ಸೇವೆ ಬೇಕು ಎಂದರೆ ಇತರೆ ಪ್ಲ್ಯಾನ್‌ ಕಡೆ ಕಣ್ಣಾಯಿಸಬಹುದು.

ಇನ್ನು ಆಕಾಶ್ ಅಂಬಾನಿ ಅವರು ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್‌ನಂತಹ ಸೂಪರ್‌ಫಾಸ್ಟ್ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಯನ್ನು (Superfast satellite broadband service) ಪ್ರಾರಂಭಿಸಲು ಮುಂದಾಗಿದ್ದಾರೆ. ಜಿಯೋ ಸ್ಪೇಸ್ ಫೈಬರ್ ಎಂಬ ಅಂಬಾನಿ ಮಾಲೀಕತ್ವದ ಉಪಗ್ರಹ ಆಧಾರಿತ ಗಿಗಾ ಫೈಬರ್ ಸೇವೆಯು ದೇಶದೊಳಗೆ ಪ್ರವೇಶಿಸಲಾಗದ ಭೌಗೋಳಿಕ ಪ್ರದೇಶಗಳಿಗೆ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಬರೋಬ್ಬರಿ 12 OTT ಪ್ರಯೋಜನದೊಂದಿಗೆ ಅಗ್ಗದ ಹೊಸ ಜಿಯೋ  ಪ್ಲ್ಯಾನ್

ಹೊಸ ಸೇವೆಯ ಪ್ರಾರಂಭದ ಕುರಿತು ಕಂಪನಿಯು ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸದಿದ್ದರೂ, ಕೆಲವು ವರದಿಗಳ ಪ್ರಕಾರ ಜಿಯೋ ಈ ತಿಂಗಳು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದಿಂದ ಅನುಮತಿ ಪಡೆಯಲಿದೆ ಎಂದು ಹೇಳಲಾಗಿದೆ. ಈ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ ದೇಶದ ಮೂಲೆ ಮೂಲೆಯಲ್ಲೂ ಶರವೇಗದ ನೆಟ್‌ವರ್ಕ್‌ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಜಿಯೋ ತನ್ನ 5G ನೆಟ್‌ವರ್ಕ್ ಅನ್ನು ಅಕ್ಟೋಬರ್ 2022 ರಿಂದ ಸ್ಟ್ಯಾಂಡಲೋನ್ (SA) ಆರ್ಕಿಟೆಕ್ಚರ್ ಬಳಸಿಕೊಂಡು ವೇಗವಾಗಿ ವಿಸ್ತರಣೆ ಮಾಡುವ ಕೆಲಸ ಮಾಡುತ್ತಿದೆ. ಅದರಂತೆ ಈಗಾಗಲೇ ತನ್ನ 5G ಸೇವೆಯನ್ನು ಭಾರತದಲ್ಲಿ 36 ರಾಜ್ಯಗಳಲ್ಲಿ 7,764 ನಗರಗಳಲ್ಲಿ ನಿಯೋಜಿಸಿದೆ. ಈ ಬೆಳವಣಿಗೆ ನಡುವೆ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆ ಆರಂಭ ಆದರೆ ಜಿಯೋಗೆ ಸರಿಸಾಟಿ ಯಾರೂ ಇಲ್ಲ ಎಂಬಂತೆ ಆಗಲಿದೆ.

Best Mobiles in India

English summary
Jio has just announced a new OTT-based plan of Rs 148, through which 12 OTT benefits can be availed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+