ಜಿಯೋ ಟೆಲಿಕಾಂನಿಂದ ಮೂರು ಹೊಸ ಪ್ಲ್ಯಾನ್ ಬಿಡುಗಡೆ; ಗ್ರಾಹಕರಿಗೆ ಖುಷಿ!
ಇತ್ತೀಚಿಗೆ ರಿಲಯನ್ಸ್ ಜಿಯೋ ಟೆಲಿಕಾಂ ತನ್ನ ಪ್ರೀಪೇಯ್ಡ್ ಯೋಜನೆಗಳ ದರ ಏರಿಕೆ ಮಾಡಿ ಅಚ್ಚರಿ ಮೂಡಿಸಿದೆ. ಅಲ್ಲದೇ ಕೆಲವು ರೀಚಾರ್ಜ್ ಯೋಜನೆಗಳಿಗೆ ಕೋಕ್ ನೀಡಿದೆ. ಅದಾಗ್ಯೂ, ಸಂಸ್ಥೆಯ ಕೆಲವೊಂದು ರೀಚಾರ್ಜ್ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಗ್ರಾಹಕರ ಗಮನ ಸೆಳೆದಿವೆ. ಈ ನಡುವೆ ಸಂಸ್ಥೆಯು ಸದ್ದಿಲ್ಲದೆ ಮೂರು ಹೊಸ ಟ್ರೂ ಅನ್ಲಿಮಿಟೆಡ್ ಅಪ್‌ಗ್ರೇಡ್ ಪ್ಲ್ಯಾನ್‌ಗಳನ್ನು ಸೇರ್ಪಡೆ ಮಾಡುವ ಮೂಲಕ ಮಾರುಕಟ್ಟೆಯ ಚಿತ್ತ ಸೆಳೆದಿದೆ. ಈ ಅಪ್‌ಗ್ರೇಡ್ ರೀಚಾರ್ಜ್ ಯೋಜನೆಗಳು ಅನಿಯಮಿತ 5G ಸೇವೆಯನ್ನು ಒದಗಿಸುತ್ತವೆ.
ಹೌದು, ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಜಿಯೋ ಟೆಲಿಕಾಂ ಕೆಲವು ಆಕರ್ಷಕ ರೀಚಾರ್ಜ್ ಯೋಜನೆಗಳ ಆಯ್ಕೆ ಪಡೆದಿದೆ. ಆ ಲಿಸ್ಟ್‌ಗೆ ಇದೀಗ ಹೊಸದಾಗಿ ಮೂರು ಟ್ರೂ ಅನ್ಲಿಮಿಟೆಡ್ ಅಪ್‌ಗ್ರೇಡ್ ಪ್ಲ್ಯಾನ್‌ಗಳನ್ನು ಸೇರಿಸಿದೆ. ಅವುಗಳು ಕ್ರಮವಾಗಿ ಜಿಯೋ 51ರೂ. 101ರೂ ಹಾಗೂ 151ರೂ. ಗಳ ಬೆಲೆಯಲ್ಲಿ ಇವೆ. ಹಾಗಾದರೇ ಈ ಯೋಜನೆಗಳ ಒಟ್ಟಾರೇ ಸೌಲಭ್ಯಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 51ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂನ ಈ ಯೋಜನೆಯಲ್ಲಿ 3GB ಅಧಿಕ ವೇಗದ 4G ಇಂಟರ್ನೆಟ್ ಸೇವೆ ಲಭ್ಯ ಆಗಲಿದೆ. ನಿಗದಿತ ಡೇಟಾ ಮುಕ್ತಾಯವಾದ ಬಳಿಕ ಇಂಟರ್ನೆಟ್ ವೇಗವು 64Kbps (FUP ಮಿತಿ) ಗೆ ಇಳಿಕೆ ಆಗುತ್ತದೆ. ಅಂದಹಾಗೆ ಈ ಯೋಜನೆಯ ವ್ಯಾಲಿಡಿಟಿಯು ಬಳಕೆದಾರರ ಸಕ್ರಿಯ ಮೂಲ ಪ್ಲ್ಯಾನಿನದ್ದೆ ಆಗಿರುತ್ತದೆ.
ಜಿಯೋ 101ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂನ 101ರೂ. ರೀಚಾರ್ಜ್ ಯೋಜನೆಯಲ್ಲಿ 6 GB ಅಧಿಕ ವೇಗದ 4G ಇಂಟರ್ನೆಟ್ ಸೇವೆ ಲಭ್ಯ ಆಗಲಿದೆ. ನಿಗದಿತ ಡೇಟಾ ಮುಕ್ತಾಯವಾದ ಬಳಿಕ ಇಂಟರ್ನೆಟ್ ವೇಗವು 64Kbps (FUP ಮಿತಿ) ಗೆ ಇಳಿಕೆ ಆಗುತ್ತದೆ. ಅಂದಹಾಗೆ ಈ ಯೋಜನೆಯ ವ್ಯಾಲಿಡಿಟಿಯು ಬಳಕೆದಾರರ ಸಕ್ರಿಯ ಮೂಲ ಪ್ಲ್ಯಾನಿನದ್ದೆ ಆಗಿರುತ್ತದೆ.
ಜಿಯೋ 151ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂನ 151 ರೂ ಯೋಜನೆಯಲ್ಲಿ 9GB ಅಧಿಕ ವೇಗದ 4G ಇಂಟರ್ನೆಟ್ ಸೇವೆ ಲಭ್ಯ ಆಗಲಿದೆ. ನಿಗದಿತ ಡೇಟಾ ಮುಕ್ತಾಯವಾದ ಬಳಿಕ ಇಂಟರ್ನೆಟ್ ವೇಗವು 64Kbps (FUP ಮಿತಿ) ಗೆ ಇಳಿಕೆ ಆಗುತ್ತದೆ. ಅಂದಹಾಗೆ ಈ ಯೋಜನೆಯ ವ್ಯಾಲಿಡಿಟಿಯು ಬಳಕೆದಾರರ ಸಕ್ರಿಯ ಮೂಲ ಪ್ಲ್ಯಾನಿನದ್ದೆ ಆಗಿರುತ್ತದೆ.
ಟ್ರೂ ಅನ್ಲಿಮಿಟೆಡ್ ಅಪ್‌ಗ್ರೇಡ್ ಪ್ಲ್ಯಾನ್ ರೀಚಾರ್ಜ್ ಮಾಡಲು ಈ ಕ್ರಮ ಫಾಲೋ ಮಾಡಿ:
ಹಂತ 1 : ಅಧಿಕೃತ Jio.com ವೆಬ್‌ಸೈಟ್‌ಗೆ ಹೋಗಿ
ಹಂತ 2 : ನಂತರ ಮೇಲಿನ ಮೆನು ಬಾರ್‌ನಲ್ಲಿರುವ ಮೊಬೈಲ್ ಆಯ್ಕೆ ಅನ್ನು ಕ್ಲಿಕ್ ಮಾಡಿ.
ಹಂತ 3 : ಬಳಿಕ ಮೇಲಿನ ಮೆನು ಬಾರ್‌ನಲ್ಲಿ ಪ್ರಿಪೇಯ್ಡ್ ಆಯ್ಕೆ ಅನ್ನು ಸೆಲೆಕ್ಟ್ ಮಾಡಿ.
ಹಂತ 4 : ಟ್ರೂ 5G ಅನ್ಲಿಮಿಟೆಡ್ ಪ್ಲ್ಯಾನ್‌ಗಳ ಆಯ್ಕೆ ಅನ್ನು ಕ್ಲಿಕ್ ಮಾಡಿ.
ಹಂತ 5 : ಆ ನಂತರದಲ್ಲಿ ನೆಕ್ಸ್ಟ್ ಪೇಜ್‌ನಲ್ಲಿ, ನೀವು 3 ಹೊಸ ಪ್ಲ್ಯಾನ್‌ಗಳನ್ನು ಕಾಣುತ್ತೀರಿ ಹಾಗೂ ಅವುಗಳ ಕೆಳಗೆ ಉಳಿದ 16 ಟ್ರೂ 5G ಅನ್‌ಲಿಮಿಟೆಡ್ ಪ್ಲಾನ್‌ಗಳನ್ನು ಕಾಣುತ್ತೀರಿ.
ಹಂತ 6 : ರೀಚಾರ್ಜ್ ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟ್ರಿ ಮಾಡಿ.
ಹಂತ 7 : ಬಳಿಕ ಅನುಕೂಲಕ್ಕೆ ಅನುಗುಣವಾಗಿ ಪಾವತಿ ಆಯ್ಕೆ ಅನ್ನು ಬಳಸಿಕೊಂಡು ಪಾವತಿಸಿ.


Click it and Unblock the Notifications








