Jio: ಜಿಯೋದಿಂದ ಹೊಸ ಪ್ರಿಪೇಯ್ಡ್ ಪ್ಲ್ಯಾನ್! ನಿತ್ಯವೂ 2GB ಡೇಟಾ.. 84 ದಿನಗಳ ಮಾನ್ಯತೆ
ತನ್ನ ಗ್ರಾಹಕರಿಗೆ ಭಿನ್ನ ರೀಚಾರ್ಜ್ ಪ್ಲ್ಯಾನ್‌ಗಳನ್ನು ನೀಡುವ ಮೂಲಕ ಜಿಯೋ ಟೆಲಿಕಾಂ (Jio Telecom) ವಲಯದಲ್ಲಿ ಅಗ್ರಸ್ಥಾನದಲ್ಲಿದೆ. ಅದರಲ್ಲೂ ಪ್ರಿಪೇಯ್ಡ್ ವಿಭಾಗದಲ್ಲಿ ಸಾಕಷ್ಟು ಪ್ಲ್ಯಾನ್‌ಗಳು ಸದ್ದು ಮಾಡುತ್ತಿದ್ದು, ಇದೀಗ ಮತ್ತೆ ಹೊಸ ಹಾಗೂ ವಿಶೇಷ ಪ್ಲ್ಯಾನ್‌ವೊಂದನ್ನು ಪರಿಚಯಿಸಲಾಗಿದೆ.
ಹೌದು, ಜಿಯೋ ಅತ್ಯಾಕರ್ಷಕ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು (Jio Prepaid Plan) ಪರಿಚಯಿಸುವುದನ್ನು ಮುಂದುವರೆಸಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಿಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಪ್ರಿಪೇಯ್ಡ್ ಪ್ಲ್ಯಾನ್ ಮೂಲಕ ಟೆಲಿಕಾಂ ವಲಯದಲ್ಲಿ ಆರ್ಭಟಿಸಲಿದೆ. ಹಾಗಿದ್ರೆ, ಯಾವುದು ಈ ಹೊಸ ಪ್ಲ್ಯಾನ್?, ಈ ಪ್ಲ್ಯಾನ್‌ನಲ್ಲಿ ಸಿಗುವ ಪ್ರಯೋಜನಗಳು ಏನೇನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಜಿಯೋ ಪ್ರಿಪೇಯ್ಡ್ ಪ್ಲ್ಯಾನ್: ಜಿಯೋ 866 ರೂ.ಗಳ ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಈ ಹೊಸ ಪ್ರಿಪೇಯ್ಡ್ ಪ್ಲ್ಯಾನ್ ದಿನಕ್ಕೆ 2GB ಡೇಟಾ ಪ್ರಯೋಜನವನ್ನು ನೀಡಲಿದ್ದು, ದೈನಂದಿನ ಡೇಟಾ ಮಿತಿಯನ್ನು ಮೀರಿದ ನಂತರ ನೀವು 64 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಎಂದಿನಂತೆ ಈ ಪ್ಲ್ಯಾನ್‌ನಲ್ಲಿ ಅನಿಯಮಿತ ಕರೆ ಪ್ರಯೋಜನ ಮತ್ತು ನಿತ್ಯವೂ 100 ಎಸ್‌ಎಮ್‌ಎಸ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಇನ್ನು ಇತರೆ ಪ್ರಯೋಜನದ ವಿಚಾರಕ್ಕೆ ಬಂದರೆ ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಜಿಯೋಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸೇರಿದಂತೆ ಅನೇಕಲ ಆಪ್‌ಗಳಿಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಮುಖ್ಯವಾಗಿ 3 ತಿಂಗಳ ಸ್ವಿಗ್ಗಿ ಒನ್‌ಲೈಟ್ ಚಂದಾದಾರಿಕೆಯನ್ನು ಸಹ ನೀಡಲಿದ್ದು, ಒಟ್ಟಾರೆ ಈ ಎಲ್ಲಾ ಸೌಲಭ್ಯಗಳೊಂದಿಗೆ 84 ದಿನಗಳ ಮಾನ್ಯತೆಯನ್ನು ಹೊಂದಿದೆ.
ಏನಿದು ಸ್ವಿಗ್ಗಿ ಒನ್‌ಲೈಟ್ ಚಂದಾದಾರಿಕೆ?: 600 ರೂ. ಮೌಲ್ಯದ ಸ್ವಿಗ್ಗಿ ಒನ್‌ಲೈಟ್ ಚಂದಾದಾರಿಕೆಯು 149 ರೂ. ಕ್ಕಿಂತ ಹೆಚ್ಚಿನ ಆಹಾರ ಆರ್ಡರ್‌ಗಳಲ್ಲಿ 10 ಉಚಿತ ಹೋಮ್ ಡೆಲಿವರಿಗಳನ್ನು ಮತ್ತು 199 ಕ್ಕಿಂತ ಹೆಚ್ಚಿನ ಇನ್‌ಸ್ಟಾಮಾರ್ಟ್ ಆರ್ಡರ್‌ಗಳಲ್ಲಿ 10 ಉಚಿತ ಹೋಮ್ ಡೆಲಿವರಿಗಳನ್ನು ನೀಡಲಿದೆ. ಇದರೊಂದಿಗೆ ಈ ಚಂದಾದಾರಿಕೆಯಲ್ಲಿ ನೀವು ಕ್ಯಾಶ್‌ಬ್ಯಾಕ್ ಆಫರ್‌ಗಳು, ಆಹಾರ ವಿತರಣೆಯಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ಸಹ ಪಡೆಯಬಹುದು.

ಈ ಹಬ್ಬದ ಋತುವಿನ ಭಾಗವಾಗಿ ಕಂಪನಿಯು 866 ರೂ.ಗಳ ರೀಚಾರ್ಜ್‌ನಲ್ಲಿ 50 ರೂ.ಗಳ ಕ್ಯಾಶ್‌ಬ್ಯಾಕ್ ನೀಡುತ್ತಿದೆ ಎಂದು ಜಿಯೋ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಕ್ಯಾಶ್‌ಬ್ಯಾಕ್ ಅನ್ನು ಬಳಕೆದಾರರ ಮೈಜಿಯೋ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ 60 ರೂ.ಗಿಂತ ಕ್ಕಿಂತ ಹೆಚ್ಚಿನ ಜಿನೀ ಡೆಲಿವರಿಗಳಿಗೆ 10% ರಿಯಾಯಿತಿಯನ್ನೂ ಸಹ ನೀಡಲಾಗುತ್ತದೆ.
ಈ ನಡುವೆ ಜಿಯೋದ ವರ್ಷದ ಮಾನ್ಯತೆ ಪ್ಲ್ಯಾನ್‌ಗಳು ಸಹ ಸಖತ್ ಸದ್ದು ಮಾಡುತ್ತಿವೆ. ಅವುಗಳಲ್ಲಿ 3662 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ದಿನಕ್ಕೆ 2.5GB ಡೇಟಾವನ್ನು ನೀಡಲಿದ್ದು, ಈ ಪ್ಲ್ಯಾನ್ ಸಹ ಅನಿಯಮಿತ ಕರೆ ಪ್ರಯೋಜನಗಳನ್ನು ಮತ್ತು ದಿನಕ್ಕೆ 100 ಎಸ್‌ಎನ್‌ಎನ್ ಸೌಲಭ್ಯವನ್ನು ನೀಡಲಿದೆ. ಹಾಗೆಯೇ ಸೋನಿ ಲೈವ್ ಮತ್ತು ಜೀ 5 (SonyLiv, Zee5) ಗೆ ಚಂದಾದಾರಿಕೆಯನ್ನು ಸಹ ನೀಡಲಿದ್ದುಮ ಇದರ ಜೊತೆಗೆ ನೀವು ಜಿಯೋಟಿವಿ, ಜಿಯೋ ಸಿನಿಮಾ ಮತ್ತು ಜಿಯೋಕ್ಲೌಡ್‌ಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ.
ಇದರೊಂದಿಗೆ ಮತ್ತೊಂದು ಪ್ಲ್ಯಾನ್ ಆಗಿರುವ 3225 ಪ್ರಿಪೇಯ್ಡ್ ಪ್ಲ್ಯಾನ್ ಗ್ರಾಹಕರಿಗೆ ನಿತ್ಯವೂ 2GB ಡೇಟಾ ಪ್ರಯೋಜನವನ್ನು ನೀಡಲಿದೆ. ಈ ಯೋಜನೆಯು ಅನಿಯಮಿತ ಕರೆ ಪ್ರಯೋಜನಗಳನ್ನು ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್ ಸೌಲಭ್ಯ ನೀಡಲಿದ್ದು, ಜೀ 5 ಗೆ ಚಂದಾದಾರಿಕೆಯನ್ನು ಸಹ ನೀಡುತ್ತದೆ. ಇದರೊಂದಿಗೆ ಜಿಯೋಟಿವಿ, ಜಿಯೋ ಸಿನಿಮಾ ಮತ್ತು ಜಿಯೋಕ್ಲೌಡ್ ಗೆ ಸುಲಭ ಪ್ರವೇಶ ಪಡೆದುಕೊಳ್ಳಬಹುದು.

ಇದರೊಂದಿಗೆ 3226 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಸಹ 365 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಪ್ಲ್ಯಾನ್ ದಿನಕ್ಕೆ 2GB ಡೇಟಾ, ಅನಿಯಮಿತ ಕರೆ ಪ್ರಯೋಜನಗಳು ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್ ಸೇರಿದಂತೆ ಇತರೆ ಪ್ರಯೋಜನಗಳೊಂದಿಗೆ ನೀಡಲಿದೆ. ಇದು ಸೋ ನಿಲೈವ್ ಗೆ ಚಂದಾದಾರಿಕೆಯನ್ನು ನೀಡಲಿದ್ದ, ಈ ಪ್ಲ್ಯಾನ್‌ನಲ್ಲೂ ಸಹ ಜಿಯೋಟಿವಿ, ಜಿಯೋ ಸಿನಿಮಾ ಮತ್ತು ಜಿಯೋಕ್ಲೌಡ್ ಸೌಲಭ್ಯ ಪಡೆಯಬಹುದಾಗಿದೆ.


Click it and Unblock the Notifications








