Home
ಸುದ್ದಿಜಾಲ

ಜಿಯೋ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್; ಈ ಪ್ಲ್ಯಾನ್‌ನಲ್ಲಿ ಇನ್ಮುಂದೆ ಬೋನಸ್ ಡೇಟಾ ಸಿಗೋಲ್ಲ!

ಜಿಯೋ (jio) ಇತರೆ ಟೆಲಿಕಾಂಗಳಿಗಿಂತ ಅಗ್ರ ಸ್ಥಾನದಲ್ಲಿ ಇದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಕಡಿಮೆ ದರದಲ್ಲಿ ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂದು. ಆದರೆ, ಇತ್ತೀಚಿನ ದಿನಗಳಲ್ಲಿ ನೀಡಲಾದ ಪ್ರಯೋಜನಗಳನ್ನೂ ಸಹ ವಾಪಸ್‌ ಪಡೆಯಲಾಗುತ್ತಿದೆ. ಅದರ ಭಾಗವಾಗಿಯೇ ಈಗ ಈ ಪ್ಲ್ಯಾನ್‌ನಲ್ಲಿ ನೀಡಲಾಗುತ್ತಿದ್ದ ಬೋನಸ್ ಡೇಟಾಗೆ (Bonus data) ಕತ್ತರಿ ಹಾಕಲಾಗಿದೆ.

ಹೌದು, ಜಿಯೋ ಕಂಪೆನಿಯು ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳೊಂದಿಗೆ (Airtel, Vodafone Idea)ಸ್ಪರ್ಧಿಸಲು ಅದ್ಭುತ ಯೋಜನೆಗಳು ಮತ್ತು ಕೊಡುಗೆಗಳನ್ನು ಸದಾ ನೀಡುತ್ತಿರುತ್ತದೆ. ಜೊತೆಗೆ ಜಿಯೋ ಏರ್‌ಟೆಲ್‌ಗಿಂತ ಕೈಗೆಟುಕುವ ಬೆಲೆಯಲ್ಲಿ ಹೆಚ್ಚಿನ ಡೇಟಾ ಯೋಜನೆಗಳನ್ನು ಸಹ ನೀಡುತ್ತಿದೆ. ಆದರೆ, ಈಗ ಜಿಯೋ ತೆಗೆದುಕೊಂಡಿರುವ ನಿರ್ಧಾರ ಮಾತ್ರ ಸಾಕಷ್ಟು ಜನರಿಗೆ ಬೇಸರ ಉಂಟು ಮಾಡಿದೆ. ಹಾಗಿದ್ರೆ, ಯಾವ ಪ್ಲ್ಯಾನ್‌ನಲ್ಲಿ ಈ ಬೋನಸ್‌ ಡೇಟಾಗೆ ಕತ್ತರಿ ಹಾಕಲಾಗಿದೆ?, ಬೋನಸ್‌ ಡೇಟಾ ನೀಡುವ ಇತರೆ ಪ್ಲ್ಯಾನ್‌ ಯಾವುವು ಎಂಬ ಮಾಹಿತಿ ಇಲ್ಲಿದೆ ನೋಡಿ.

ಜಿಯೋ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್; ಇನ್ಮುಂದೆ ಬೋನಸ್ ಡೇಟಾ ಸಿಗೋಲ್ಲ!

ಜಿಯೋದ 999 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ನಿಂದ ಈ ಸೌಲಭ್ಯ ಕಟ್‌: ಜಿಯೋದ ಪ್ರಮುಖ ಪ್ರಿಪೇಯ್ಡ್ ಪ್ಲ್ಯಾನ್‌ ಆಗಿರುವ 999 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಈ ಸೇವೆ ತೆಗೆದುಹಾಕಲಾಗಿದೆ. ಜಿಯೋದ ಈ ಪ್ಲ್ಯಾನ್‌ನಲ್ಲಿ ಈಗ ಬಳಕೆದಾರರು ದಿನಕ್ಕೆ 3GB ಡೇಟಾ, ಜೊತೆಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಜಿಯೋ ಟಿವಿ, ಜಿಯೋಸಿನಿಮಾ, ಜಿಯೋ ಕ್ಲೌಡ್ ನಂತರ ಆಪ್‌ಗಳಿಗೆ ಉಚಿತ ಚಂದಾದಾರಿಕೆ ಸಹ ಲಭ್ಯ ಇದೆ. ಈ ಮೂಲಕ 84 ದಿನಗಳ ಮಾನ್ಯತೆ ಇದೆ.

ಜಿಯೋದ 999ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ನ ಈ ಹಿಂದಿನ ಸೌಲಭ್ಯಗಳ ಕಡೆ ಗಮನಹರಿಸುವುದಾದರೆ 40GB ಬೋನಸ್ ಡೇಟಾ ಪ್ರಯೋಜನವನ್ನು ನೀಡಲಾಗುತ್ತಿತ್ತು. ಈಗ 40GB ಬೋನಸ್ ಡೇಟಾವನ್ನು ತೆಗೆದುಹಾಕಲಾಗಿದ್ದು, ಈ ಮೂಲಕ ಹಲವಾರು ಜಿಯೋ ಗ್ರಾಹಕರಿಗೆ ಬೇಸರ ಉಂಟು ಮಾಡಲಾಗಿದೆ. ಈ ಪ್ಲ್ಯಾನ್‌ ಅನ್ನು ಈ ವರ್ಷದ ಆರಂಭದಲ್ಲಿ ಲಾಂಚ್‌ ಮಾಡಲಾಗಿದ್ದು, ಭಾರೀ ಸದ್ದು ಮಾಡಿತ್ತು.

ಅದಾಗ್ಯೂ ನೀವು ಪ್ರಿಪೇಯ್ಡ್‌ ಪ್ಲ್ಯಾನ್‌ನಲ್ಲಿ ಬೋನಸ್ ಡೇಟಾವನ್ನು ಬಯಸಿದ್ದೇ ಆದರೆ ಬೇರೆ ಪ್ಲ್ಯಾನ್‌ಗಳ ಕಡೆ ಕಣ್ಣಾಯಿಸಬೇಕಿದೆ. ಅಂದರೆ 299 ರೂ.ಗಳು, 749 ರೂ.ಗಳು ಹಾಗೂ 2999 ರೂ.ಗಳ ಪ್ಲ್ಯಾನ್‌ನಲ್ಲಿ ಈ ಪ್ರಯೋಜನ ಇದೆ. ಈ ನಡುವೆ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡುವ ಎರಡು ಪ್ರಿಪೇಯ್ಡ್ ಪ್ಲ್ಯಾನ್‌ ಅನ್ನು ಸಹ ಜಿಯೋ ಘೋ‍ಷಣೆ ಮಾಡಿದೆ.

1099ರೂ.ಗಳ ಪ್ರಿಪೇಯ್ಡ್ ಯೋಜನೆಯು ನೆಟ್‌ಫ್ಲಿಕ್ಸ್ (ಮೊಬೈಲ್) ಚಂದಾದಾರಿಕೆಯನ್ನು ನೀಡುತ್ತದೆ. ಇದರೊಂದಿಗೆ 2GB ದೈನಂದಿನ ಡೇಟಾ ಪ್ರಯೋಜನದೊಂದಿಗೆ 84 ದಿನಗಳ ಮಾನ್ಯತೆ ಸಿಗಲಿದೆ. ಈ ಪ್ಲ್ಯಾನ್‌ನಲ್ಲಿ ಜಿಯೋ 5G ವೆಲ್‌ಕಮ್‌ ಆಫರ್ ಅನ್ನು ಸಹ ನೀಡಲಾಗುತ್ತದೆ. ಉಳಿದಂತೆ ಅನಿಯಮಿತ ಕರೆ ಪ್ರಯೋಜನಗಳು, ದಿನಕ್ಕೆ 100 ಎಸ್‌ಎಮ್‌ಎಸ್, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ ಸೇವೆ ಲಭ್ಯ ಇದೆ.

1499ರೂ.ಗಳ ಮತ್ತೊಂದು ಪ್ಲ್ಯಾನ್‌ನಲ್ಲಿಯೂ ನೆಟ್‌ಫ್ಲಿಕ್ಸ್ ಪ್ರಯೋಜನ ಕಲ್ಪಿಸಿಕೊಡಲಾಗಿದೆ. ಈ ಪ್ಲ್ಯಾನ್‌ನಲ್ಲಿ ನಿತ್ಯವೂ 3GB ದೈನಂದಿನ ಡೇಟಾ ಪ್ರಯೋಜನವನ್ನು ಸಿಗಲಿದ್ದು, 84 ದಿನಗಳ ಮಾನ್ಯತೆ ದಿನಗಳನ್ನು ಹೊಂದಿದೆ. ಇದರಲ್ಲೂ ಸಹ ಜಿಯೋ 5G ವೆಲ್‌ಕಮ್‌ ಆಫರ್ ಸೌಲಭ್ಯ ಇದ್ದು, ಅನಿಯಮಿತ ಕರೆ ಪ್ರಯೋಜನಗಳು, ದಿನಕ್ಕೆ 100 ಎಸ್‌ಎಮ್‌ಎಸ್‌, ಜಿಯೋ ಟಿವಿ, ಜಿಯೋ ಸಿನಿಮಾ ಸೇರಿದಂತೆ ಅನೇಕ ಓಟಿಟಿ ಸೇವೆಗೆ ಅನುಕೂಲ ಮಾಡಿಕೊಡಲಾಗಿದೆ.

ಈ ನಡುವೆ ಜಿಯೋ ಮುಂದಿನ ಗೌರಿ ಹಬ್ಬಕ್ಕೆ ಹೊಸ ಸೇವೆ ನೀಡಲು ಸಜ್ಜಾಗಿದೆ. ಅಂದರೆ ಜಿಯೋ ಏರ್‌ಫೈಬರ್ ಅನ್ನು ಸೆಪ್ಟೆಂಬರ್ 19 ರಂದು ಲಾಂಚ್ ಮಾಡಲಾಗುತ್ತದೆ. ಈ ಸಂಬಂಧ ರಿಲಯನ್ಸ್ ಇಂಡಸ್ಟ್ರೀಸ್‌ನ 46 ನೇ ಎಜಿಎಂನಲ್ಲಿ ಆರ್‌ಐಎಲ್ ಅಧ್ಯಕ್ಷ ಮುಖೇಶ್ ಅಂಬಾನಿ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 2023 ರ ವೇಳೆಗೆ ಇಡೀ ದೇಶವನ್ನು ಅಲ್ಟ್ರಾ-ಹೈ-ಸ್ಪೀಡ್ ನೆಟ್‌ವರ್ಕ್‌ನೊಂದಿಗೆ ಆವರಿಸಲು ಜಿಯೋದ 5G ಸೇವೆಗಳು ಟ್ರಾಕ್‌ನಲ್ಲಿವೆ ಎಂದು ಅಂಬಾನಿ ಹೇಳಿದ್ದಾರೆ.

ಜಿಯೋ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್; ಇನ್ಮುಂದೆ ಬೋನಸ್ ಡೇಟಾ ಸಿಗೋಲ್ಲ!

ಜಿಯೋ ಗ್ರಾಹಕರ ಸಂಖ್ಯೆ 450 ಮಿಲಿಯನ್ ದಾಟಿದೆ. ಅದರ 5G ನೆಟ್‌ವರ್ಕ್ 96 ಪ್ರತಿಶತ ಪಟ್ಟಣಗಳನ್ನು ಒಳಗೊಂಡಿದ್ದು, ಕಂಪನಿಯು ಡಿಸೆಂಬರ್‌ನೊಳಗೆ ಇಡೀ ದೇಶವನ್ನು ಆವರಿಸುವ ಹಾದಿಯಲ್ಲಿದೆ. ಜಿಯೋದ ಒಟ್ಟಾರೆ ಗ್ರಾಹಕರ ನೆಲೆಯು ಈಗ 450 ಮಿಲಿಯನ್ ಚಂದಾದಾರರ ಮೈಲಿಗಲ್ಲನ್ನು ದಾಟಿದ್ದು, ಇದು ವರ್ಷದಿಂದ ವರ್ಷಕ್ಕೆ 20 ಪ್ರತಿಶತದಷ್ಟು ಹೆಚ್ಚಾಗುತ್ತಿದೆ.

Best Mobiles in India

English summary
Jio company is always offering amazing plans and offers to compete with Airtel and Vodafone Idea. But now the bonus data facility has been cut from the Rs 999 prepaid plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+