ಜಿಯೋ ಗ್ರಾಹಕರಿಗೆ ಗುಡ್‌ನ್ಯೂಸ್; ಈ ಅಗ್ಗದ ಪ್ಲ್ಯಾನಿನಲ್ಲಿ ಇನ್ನು ಭರ್ಜರಿ ಸೌಲಭ್ಯ!
ದೇಶದ ಮುಂಚೂಣಿಯ ಟೆಲಿಕಾಂ ಸಂಸ್ಥೆ ಎನಿಸಿರುವ ಜಿಯೋ ಟೆಲಿಕಾಂ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಕೆಲವಯ ಅತ್ಯುತ್ತಮ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆಯನ್ನು ಒಳಗೊಂಡಿದೆ. ಆ ಪೈಕಿ ಬಹುತೇಕ ಪ್ರಿಪೇಯ್ಡ್ ಪ್ಲ್ಯಾನ್‌ಗಳು ಅಧಿಕ ದೈನಂದಿನ ಡೇಟಾ ಸೌಲಭ್ಯ ಪಡೆದಿದ್ದು, ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿವೆ. ಇನ್ನು ಬಜೆಟ್ ಬೆಲೆಯಲ್ಲಿ ಗಮನ ಸೆಳೆದಿರುವ ಜಿಯೋದ 349 ರೂ. ರೀಚಾರ್ಜ್ ಪ್ರಿಪೇಯ್ಡ್ ಪ್ಲ್ಯಾನ್ ಈಗ ಪರಿಷ್ಕರಣೆ ಕಂಡಿದ್ದು, ಹೊಸ ಸೌಲಭ್ಯದೊಂದಿಗೆ ಮತ್ತಷ್ಟು ಆಕರ್ಷಕ ಎನಿಸಿದೆ.
ಹೌದು, ಜಿಯೋ ಟೆಲಿಕಾಂನ (Jio) 349ರೂ. ರೀಚಾರ್ಜ್ ಪ್ರಿಪೇಯ್ಡ್ ಪ್ಲ್ಯಾನ್ ಅಲ್ಪಾವಧಿ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದ್ದು, ಅದರೊಂದಿಗೆ ಆಕರ್ಷಕ ಡೇಟಾ ಪ್ರಯೋಜನದ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಎಸ್‌ಎಮ್‌ಎಸ್ ಪ್ರಯೋಜನ, ವಾಯಿಸ್ ಕರೆ ಸೌಲಭ್ಯ ಸೇರಿದಂತೆ ಇನ್ನಷ್ಟು ಪ್ರಯೋಜನ ಒಳಗೊಂಡಿವೆ. ಸದ್ಯ ಈ ಪ್ಲ್ಯಾನ್ ಮತ್ತೆ ಗ್ರಾಹಕರನ್ನು ಸೆಳೆದಿದೆ. ಹಾಗಾದರೇ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಟೆಲಿಕಾಂ 349ರೂ. ಪ್ರೀಪೇಯ್ಡ್ ಪ್ಲ್ಯಾನ್
ಜಿಯೋ ಟೆಲಿಕಾಂ 349 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಮಾಸಿಕ ಅವಧಿಯ ಪ್ಲ್ಯಾನ್ ಆಗಿದ್ದು, 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇನ್ನು ಜಿಯೋದ ಈ ಪ್ಲ್ಯಾನಿನ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 56 GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ಸಹ ದೊರೆಯುತ್ತವೆ.
ಜಿಯೋದ ಇತರೆ ಜನಪ್ರಿಯ ಯೋಜನೆಗಳು
ಜಿಯೋ ಟೆಲಿಕಾಂ 999 ರೂ. ಪ್ಲ್ಯಾನ್ - ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಆಕರ್ಷಕ ವ್ಯಾಲಿಡಿಟಿ ಪಡೆದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 98 ದಿನಗಳ ವ್ಯಾಲಿಡಿಟಿ ಲಭ್ಯ ಇದ್ದು, ಗ್ರಾಹಕರಿಗೆ ಪ್ರತಿದಿನ 2 GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 196 GB ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ಸಹ ದೊರೆಯುತ್ತವೆ.
ಜಿಯೋ ಸಂಸ್ಥೆಯ 3999ರೂ. ಪ್ಲ್ಯಾನ್ - ಈ ರೀಚಾರ್ಜ್ ಯೋಜನೆಯು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಹಾಗೆಯೇ ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5 GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇನ್ನು ಜಿಯೋದ ಈ ವಾರ್ಷಿಕ ಅವಧಿಯ ರೀಚಾರ್ಜ್ ಪ್ಲ್ಯಾನಿನ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 912.5 GB ಡೇಟಾ ಪ್ರಯೋಜನ ಪಡೆದುಕೊಂಡಿದೆ. ಹಾಗೆಯೇ ಹೆಚ್ಚುವರಿಯಾಗಿ ಫ್ಯಾನ್‌ಕೋಡ್ (FANCODE) ಚಂದಾದಾರಿಕೆ ಲಭ್ಯ.


Click it and Unblock the Notifications








