Jio ಗ್ರಾಹಕರಿಗೆ ಶಾಕ್!..ಈ ಜನಪ್ರಿಯ ರೀಚಾರ್ಜ್ ಯೋಜನೆಗಳು ಇನ್ನು ಸಿಗಲ್ಲ!
ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವ ರಿಲಾಯನ್ಸ್ ಜಿಯೋ ಟೆಲಿಕಾಂ ಕೆಲವು ಅತ್ಯುತ್ತಮ ಪ್ಲ್ಯಾನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಆಕರ್ಷಕ ಪ್ಲ್ಯಾನ್‌ಗಳ ಮೂಲಕ ಏರ್‌ಟೆಲ್ ಹಾಗೂ ವಿ ಟೆಲಕಾಂಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ಇನ್ನು ಸಂಸ್ಥೆಯ ಬಹುತೇಕ ಪ್ಲ್ಯಾನ್‌ಗಳು ಅಧಿಕ ಡೇಟಾ ಜೊತೆಗೆ ಬಿಗ್ ವ್ಯಾಲಿಡಿಟಿ ಸೌಲಭ್ಯ ಸಹ ಪಡೆದಿವೆ. ಹಾಗೆಯೇ ಸಂಸ್ಥೆಯ ವಾರ್ಷಿಕ ಯೋಜನೆಗಳು ಆಕರ್ಷಕ ಎನಿಸಿವೆ. ಆದರೆ, ಜಿಯೋ ಇದೀಗ ಸದ್ದಿಲ್ಲದೇ ಕೆಲವು ಯೋಜನೆಗಳನ್ನು ನಿಲ್ಲಿಸಿದೆ.
ಜಿಯೋ ಟೆಲಿಕಾಂ (Jio) ತನ್ನ ಪ್ಲ್ಯಾನ್‌ಗಳ ಪಟ್ಟಿಯಿಂದ ತೆಗೆದುಹಾಕಿರುವ ಪ್ರೀಪೇಯ್ಡ್ ಪ್ಲ್ಯಾನ್‌ಗಳಲ್ಲಿ ದೀರ್ಘಾವಧಿಯ, ಅಲ್ಪಾವಧಿಯ ಹಾಗೂ ವ್ಯಾಲ್ಯೂ ಯೋಜನೆಗಳು ಸಹ ಸೇರಿವೆ. ಜಿಯೋ ಅಧಿಕೃತವಾಗಿ ನಿಲ್ಲಿಸಿದ ಯೋಜನೆಗಳು ಟೆಲಿಕಾಂನ ಅಧಿಕೃತ ವೆಬ್‌ಸೈಟ್ ಅಥವಾ ಜಿಯೋ ಮೊಬೈಲ್ ಆಪ್‌ನಲ್ಲಿ ಲಭ್ಯ ಇಲ್ಲ. ಹಾಗಾದರೆ ಜಿಯೋ ಟೆಲಿಕಾಂ ತೆಗೆದುಹಾಕಿರುವ ಜನಪ್ರಿಯ ಪ್ಲ್ಯಾನ್‌ಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 3662ರೂ. ಪ್ಲ್ಯಾನ್ - ಇನ್ನು ಅಲಭ್ಯ
ಜಿಯೋದ 3662ರೂ. ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2.5GB ಡೇಟಾ ಪ್ರಯೋಜನ ನೀಡುತ್ತದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ Sony LIV ಮತ್ತು ZEE5 ಓಟಿಟಿ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್ ಸಹ ಪಡೆದಿದೆ.
ಜಿಯೋ 3225ರೂ. ಪ್ಲ್ಯಾನ್ - ಇನ್ನು ಅಲಭ್ಯ
ಜಿಯೋದ 3225ರೂ. ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ ZEE5 ಓಟಿಟಿ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್ ಸಹ ಪಡೆದಿದೆ.
ಜಿಯೋ 909ರೂ. ಪ್ಲ್ಯಾನ್ - ಇನ್ನು ಅಲಭ್ಯ
ಜಿಯೋದ 909ರೂ. ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ Sony LIV ಮತ್ತು ZEE5 ಓಟಿಟಿ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್ ಸಹ ಪಡೆದಿದೆ.
ಜಿಯೋ 806ರೂ. ಪ್ಲ್ಯಾನ್ - ಇನ್ನು ಅಲಭ್ಯ
ಜಿಯೋದ 806ರೂ. ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ Sony LIV ಓಟಿಟಿ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್ ಸಹ ಪಡೆದಿದೆ.
ಜಿಯೋ ನಿಲ್ಲಿಸಿದ ಇತರೆ ಯೋಜನೆಗಳ ಲಿಸ್ಟ್ ಇಲ್ಲಿದೆ
ಜಿಯೋ 3226ರೂ. ಪ್ಲ್ಯಾನ್
ಜಿಯೋ 805ರೂ. ಪ್ಲ್ಯಾನ್
ಜಿಯೋ 4498ರೂ. ಪ್ಲ್ಯಾನ್
ಜಿಯೋ 3178ರೂ. ಪ್ಲ್ಯಾನ್
ಜಿಯೋ 3227ರೂ. ಪ್ಲ್ಯಾನ್
ಜಿಯೋ 2999ರೂ. ಪ್ಲ್ಯಾನ್


Click it and Unblock the Notifications








