ಸಂಚಲನ ಉಂಟು ಮಾಡುತ್ತಿದೆ ಜಿಯೋ ಭಾರತ್,ಇತರೆ ಕಂಪೆನಿಗಳಿಗೆ ನಡುಕ ಹುಟ್ಟಿಸಿದ ಜಿಯೋ!
ಜಿಯೋ ಭಾರತದಲ್ಲಿ ತನ್ನ ವಿಶೇಷ ಸೇವೆಗಳ ಮೂಲಕ ಹೊಸ ಸಂಚಲನವನ್ನೇ ಸೃಷ್ಟಿ ಮಾಡುತ್ತಿದೆ. ಅದರಲ್ಲೂ ಇತ್ತೀಚೆಗೆ ಲಾಂಚ್ ಆಗಿರುವ ಜಿಯೋ ಭಾರತ್ (Jio Bharat) ಫೋನ್ ಭಾರತದಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದು, ಈ ಮೂಲಕ ಜಿಯೋ ಈ ಫೋನ್ ಹಾಗೂ ಇತರೆ ವಿಭಾಗದಲ್ಲಿ ಅಗ್ರ ಸ್ಥಾನ ಪಡೆಯಲು ಸಜ್ಜಾಗಿದೆ.
ಹೌದು, ರಿಲಯನ್ಸ್ ಜಿಯೋ(Reliance Jio)ಇತ್ತೀಚೆಗೆ ತನ್ನ ಜಿಯೋ ಭಾರತ್ ಇಂಟರ್ನೆಟ್-ಸಕ್ರಿಯಗೊಳಿಸಿದ ಫೋನ್ ಅನ್ನು ಲಾಂಚ್ ಮಾಡಿದ್ದು,250 ಮಿಲಿಯನ್ 2Gಬಳಕೆದಾರರನ್ನು ತನ್ನತ್ತ ಸೆಳೆಯುವ ಗುರಿಯನ್ನು ಹೊಂದಿದೆ. ಹಾಗೆಯೇ ಈ ಜಿಯೋ ಭಾರತ್ ಅನ್ನು ಜಿಯೋ ಭಾರತ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಲಾಂಚ್ ಮಾಡಲಾಗಿದ್ದು,ಈ ಫೋನ್ ಜಿಯೋ ಟೆಲಿಕಾಂನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಹಾಗಿದ್ರೆ, ಈ ಫೋನ್‌ಗೆ ಹೇಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ?,Q1FY24ನಲ್ಲಿ ಜಿಯೋಗೆ ಆದ ಲಾಭ ಏನು? ಎಂಬ ಪ್ರಮುಖ ಮಾಹಿತಿ ಇಲ್ಲಿದೆ ನೋಡಿ.

ರಿಲಯನ್ಸ್ ಜಿಯೋದ ಅಧ್ಯಕ್ಷ ಕಿರಣ್ ಥಾಮಸ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ Q1FY24 ನ ಸಂಬಂಧ ಮಾಹಿತಿ ನೀಡಿದ್ದು, ಜಿಯೋ ಭಾರತ್ ಸಂಬಂಧ ಆರಂಭಿಕ ಯಶಸ್ಸನ್ನು ಕಂಡ ಹಿನ್ನೆಲೆ ಜಿಯೋ ಭಾರತ್ ಫೋನ್‌ನ ವಿತರಣೆಯನ್ನು ಹೆಚ್ಚಿಗೆ ಮಾಡಲಾಗುತ್ತಿದೆ. ಹಾಗೆಯೇ ಜಿಯೋದ ARPU, ಚಂದಾದಾರರ ಬೇಸ್ ಮತ್ತು ಇನ್ನೂ ಹಲವು ವಿಭಾಗದಲ್ಲಿ ಗಣನೀಯ ಏರಿಕೆ ಆಗಿದೆ ಎಂದಿದ್ದಾರೆ. ಜೊತೆಗೆ ಇದರ ಬಗ್ಗೆ ಸಂಫೂರ್ಣ ವಿವರ ನೀಡಿದ್ದು, ಅದರ ವಿವರ ಇಲ್ಲಿದೆ.
ಜಿಯೋ ಭಾರತ್ ಫೋನ್‌ಗಾಗಿ ಎಕೋಸಿಸ್ಟಮ್: ಜಿಯೋ ಉತ್ಪನ್ನದ ಈ ವಿನ್ಯಾಸವು ಈಗ ಬಹು OEMಗಳಿಂದ ಬೆಂಬಲಿತವಾಗಿದ್ದು, ಇವೆಲ್ಲವನ್ನೂ ಭಾರತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಂಪೂರ್ಣ ಪೂರೈಕೆ ಸರಪಳಿ, ಮತ್ತು ಹಲವಾರು OEMಗಳ ಮೂಲಕ ಭಾರತದಲ್ಲಿ ಅಸೆಂಬ್ಲಿಯನ್ನು ಮಾಡಲಾಗುತ್ತಿದ್ದು, ಜಿಯೋ ತಂತ್ರಜ್ಞಾನ ಪೂರೈಕೆದಾರರಾಗಿ ಇದು ಕಾರ್ಯನಿರ್ವಹಿಸುತ್ತಿದೆ ತಿಳಿಸಿದ್ದಾರೆ.
ಫೋನ್ ಬೆಲೆ: ಈ ಜಿಯೋ ಭಾರತ್ ಫೋನ್‌ನ ವಿಚಾರದಲ್ಲಿ ಪ್ರಮುಖವಾದ ವಿಷಯ ಏನೆಂದರೆ ಅದರ ಬೆಲೆ. ಈ ಫೋನ್‌ನ ಬೆಲೆಯನ್ನು 1,000ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಇರುವಂತೆ ನೋಡಿಕೊಳ್ಳಲು 'ವಿಶಿಷ್ಟ ತಂತ್ರ' ರೂಪಿಸಲಾಗಿದೆ. ಅಂದರೆ ಜಿಯೋ ವಿಶಿಷ್ಟವಾದ ಗೋ-ಟು-ಮಾರುಕಟ್ಟೆ ತಂತ್ರವನ್ನು ಅಳವಡಿಸಿಕೊಂಡಿದೆ. ಇದರಿಂದಾಗಿ ಫೋನ್ ಅನ್ನು 1,000 ರೂ.ಗಳಿಗಿಂತ ಕಡಿಮೆ ಬೆಲೆಗೆ ನೀಡಲು ಸಹಾಯ ಆಗುತ್ತದೆ ಎಂದಿದ್ದಾರೆ.
5G ಚಂದಾದಾರರಲ್ಲಿ ಏರಿಕೆ: ಜಿಯೋ ಫೋನ್ ಹೊರತುಪಡಿಸಿದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಟೆಲಿಕಾಂ ಆಪರೇಟರ್ ತನ್ನ 5G ರೋಲ್‌ಔಟ್ ಅನ್ನು ಪ್ರಾರಂಭಿಸಿದಾಗಿನಿಂದ ಜಿಯೋದ ನಿವ್ವಳ ಚಂದಾದಾರರ ಸೇರ್ಪಡೆಗಳು ಸ್ಥಿರವಾಗಿ ಹೆಚ್ಚುತ್ತಿವೆಯಂತೆ. ಕಳೆದ ವರ್ಷದ ಕೊನೆಯಲ್ಲಿ ರೋಲ್‌ಔಟ್ ಅನ್ನು ಪ್ರಾರಂಭಿಸಿದಾಗ, ಈ ಸಂಖ್ಯೆಯು ಪ್ರಸ್ತುತ 5.3 ಮಿಲಿಯನ್ ನಿವ್ವಳ ಆಡ್‌ಗಳಷ್ಟಿತ್ತು, ನಂತರ ಅದು 6.5 ಮಿಲಿಯನ್‌ಗೆ ಏರಿತು ಮತ್ತು ಈಗ ನಾವು 10 ಮಿಲಿಯನ್ ನೆಟ್ ಆಡ್‌ಗಳನ್ನು ಸಮೀಪಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಏರ್‌ಟೆಲ್ ಹಿಂದಿಕ್ಕಲು ಮುಂದಾದ ಜಿಯೋ: ಏರ್‌ಟೆಲ್‌ಗಿಂತ ಜಿಯೋ ಚಂದಾದಾರರ(Jio subscribers) ಬೇಸ್‌ನಲ್ಲಿ ವೇಗವಾಗಿ ಬೆಳವಣಿಗೆ ಕಂಡಿದೆ. ಜಿಯೋ ಚಂದಾದಾರರ ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸುಮಾರು 7% ಬೆಳವಣಿಗೆ ಆಗುತ್ತಿದೆ. ಅದರಲ್ಲೂ ನೆಟ್ ಪೋರ್ಟ್-ಇನ್‌ಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರತಿಸ್ಪರ್ಧಿಗೆ ಹೋಲಿಸಿದರೆ ಜಿಯೋ ಎರಡೂವರೆ ಪಟ್ಟು ನಿವ್ವಳ ಪೋರ್ಟ್-ಇನ್ ಪಡೆದಿದೆ ಎಂದು ಹೇಳಿದರು. ಅದರಂತೆ ಜೂನ್ 30ರ ಹೊತ್ತಿಗೆ ರಿಲಯನ್ಸ್ ಜಿಯೊದ ಒಟ್ಟು ಚಂದಾದಾರರ ಸಂಖ್ಯೆ 448.5 ಮಿಲಿಯನ್ ಆಗಿದೆಯಂತೆ.

ಮೇಲಕ್ಕೇರಿದ ARPU ದರ: ಇದರೊಂದಿಗೆ FY23 ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರತಿ ಬಳಕೆದಾರರಿಗೆ ಜಿಯೋನ ಸರಾಸರಿ ಆದಾಯವು (ARPU) 178.8 ರಿಂದ 180.5 ಕ್ಕೆ ಸುಧಾರಿಸಿದೆ. ಇದು ಡೇಟಾ ಬಳಕೆ ಹಾಗೂ ವಾಯರ್‌ಲೆಸ್ ಸೇವೆ ಹೆಚ್ಚಾಗುವಂತೆ ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದು, ಈ ಮೂಲಕ ಜಿಯೋ ಇತರೆ ಏರ್‌ಟೆಲ್, ವಿ ಟೆಲಿಕಾಂ ಹಾಗೂ ಬಿಎಸ್‌ಎನ್‌ಎಲ್‌ಗೆ ತನ್ನದೇ ಆದ ರೀತಿಯಲ್ಲಿ ಪೈಪೋಟಿ ನೀಡುತ್ತಿದೆ.


Click it and Unblock the Notifications








