Home
ಸುದ್ದಿಜಾಲ

ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ಈ ಪ್ಲ್ಯಾನ್‌ಗಳಲ್ಲಿ ಸಿಗುತ್ತೆ ಡಬಲ್ ಡೇಟಾ!

ಅಗ್ಗದ ಡೇಟಾ ಪ್ಲ್ಯಾನ್‌ಗಳ ಮೂಲಕ ಗ್ರಾಹಕರ ಮೆಚ್ಚುಗೆ ಪಡೆದಿರುವ ರಿಲಾಯನ್ಸ್‌ ಜಿಯೋ ಟೆಲಿಕಾಂ ಸಂಸ್ಥೆಯು ಇದೀಗ ತನ್ನ ಚಂದಾದಾರರಿಗೆ ಮತ್ತೆ ಭಾರಿ ಸಿಹಿಸುದ್ದಿ ನೀಡಿದೆ. ಹೆಚ್ಚುವರಿ ಡೇಟಾ ಅಗತ್ಯತೆಗಾಗಿ ಜಿಯೋ ಪರಿಚಯಿಸಿದ್ದ 4G ಡೇಟಾ ವೋಚರ್‌ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಷ್ಕರಣೆ ಮಾಡಿದೆ ಈ ಪ್ಲ್ಯಾನ್‌ಗಳಲ್ಲಿ ಈಗ ಡಬಲ್ ಡೇಟಾ ಪ್ರಯೋಜನಗಳನ್ನು ನೀಡಲು ಮುಂದಾಗಿದೆ.

ಜಿಯೋ ಟೆಲಿಕಾಂ

ಹೌದು, ಜಿಯೋ ಟೆಲಿಕಾಂ ತನ್ನ 4G ಡೇಟಾ ವೋಚರ್‌ ಪ್ಲ್ಯಾನ್‌ಗಳಲ್ಲಿ ಬದಲಾವಣೆ ಮಾಡಿದೆ. ಈ ಡೇಟಾ ವೋಚರ್‌ ಪ್ಲ್ಯಾನ್‌ಗಳಲ್ಲಿ ಅಧಿಕ ಡೇಟಾ ಸೌಲಭ್ಯ ಘೋಷಿಸಿದ್ದು, ರೀಚಾರ್ಜ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ಜಿಯೋ 4G ಡೇಟಾ ವೋಚರ್‌ ಪ್ಲ್ಯಾನ್‌ಗಳು ಆರಂಭಿಕ 11ರೂ.ಯಿಂದ 201ರೂ. ವರೆಗೂ ಒಟ್ಟು ಐದು ಪ್ಲ್ಯಾನ್‌ಗಳ ಆಯ್ಕೆಯಲ್ಲಿವೆ. ಹಾಗಾದರೇ ಜಿಯೋ 4G ಡೇಟಾ ವೋಚರ್‌ಗಳ ಡೇಟಾ ಪ್ರಯೋಜನಗಳ ಬಗ್ಗೆ ಮುಂದೆ ನೋಡೋಣ.

ಡೇಟಾ ವೋಚರ್ ಅಗತ್ಯವೇನು

ಡೇಟಾ ವೋಚರ್ ಅಗತ್ಯವೇನು

ಸಾಮಾನ್ಯವಾಗಿ ಬಳಕೆದಾರರು ದೀರ್ಘಾವಧಿ ಪ್ರಯೋಜನಗಳ ಪ್ಲ್ಯಾನ್ ರೀಚಾರ್ಜ್ ಮಾಡಿಸಿರುತ್ತಾರೆ. ಆದರೆ ಕೆಲವೊಮ್ಮೆ ವ್ಯಾಲಿಡಿಟಿ ಅವಧಿಗೆ ಮುನ್ನವೇ ಡೇಟಾ ಸೌಲಭ್ಯ ಮುಗಿದು ಹೋಗಿರುತ್ತದೆ. ಆಗ ಡೇಟಾ ವೋಚರ್ ರೀಚಾರ್ಜ್ ಪ್ಲ್ಯಾನ್‌ಗಳು ನೆರವಾಗಲಿವೆ. ಹಾಗೂ ಈ ಪ್ಲ್ಯಾನ್‌ಗಳು ಗ್ರಾಹಕರ ಎಕ್ಸಿಸ್ಟಿಂಗ್ ಪ್ಲ್ಯಾನ್ ವ್ಯಾಲಿಡಿಟಿಯನ್ನೇ ಒದಗಿಸುತ್ತದೆ.

ಡೇಟಾ ಹೆಚ್ಚಿಸಿದ ಜಿಯೋ

ಡೇಟಾ ಹೆಚ್ಚಿಸಿದ ಜಿಯೋ

ಜಿಯೋ ತನ್ನ ಐದು 4G ಡಾಟಾ ವೋಚರ್ಸ್‌ ಪೈಕಿ 11ರೂ, 21ರೂ, 51ರೂ ಮತ್ತು 101ರೂ. ಪ್ಲ್ಯಾನ್‌ಗಳಲ್ಲಿ ಬದಲಾವಣೆ ಮಾಡಿದೆ. ಈ ಯೋಜನೆಗಳಲ್ಲಿ ಈ ಮೊದಲು ಲಭ್ಯವಿದ್ದ ಡೇಟಾ ಸೌಲಭ್ಯದ ಎರಡರಷ್ಟು ಡೇಟಾ ಪ್ರಯೋಜನ ಇದೀಗ ದೊರೆಯಲಿದೆ. ಹಾಗೆಯೇ ಜಿಯೋ ದಿಂದ ಇತರೆ ಟೆಲಿಕಾಂಗಳಿಗೆ ಉಚಿತ ನಿಮಿಷಗಳ ಸೌಲಭ್ಯ ನೀಡಿದೆ.

ಪರಿಷ್ಕೃತ ಡೇಟಾ ಸೌಲಭ್ಯ

ಪರಿಷ್ಕೃತ ಡೇಟಾ ಸೌಲಭ್ಯ

ಜಿಯೋ ಸಂಸ್ಥೆಯ ಆರಂಭಿಕ 11ರೂ. ಡೇಟಾ ವೋಚರ್ ನಲ್ಲಿ ಇದೀಗ 800MB ಡೇಟಾ ಸಿಗಲಿದೆ. ಅದೇ ರೀತಿ 21ರೂ. ವೋಚರ್‌ನಲ್ಲಿ 2GB ಡೇಟಾ ಹಾಗೂ 51ರೂ. ನಲ್ಲಿ 6GB ಡೇಟಾ ಸೌಲಭ್ಯ ದೊರೆಯುತ್ತದೆ. ಇನ್ನು 101ರೂ. ಡೇಟಾ ವೋಚರ್ ಪ್ಲ್ಯಾನಿನಲ್ಲಿ ಒಟ್ಟು 12GB ಡೇಟಾ ಸಿಗಲಿದೆ.

ಜಿಯೋ IUC ಟಾಪ್‌-ಅಪ್‌ ಅಗತ್ಯತೆ

ಜಿಯೋ IUC ಟಾಪ್‌-ಅಪ್‌ ಅಗತ್ಯತೆ

ಇನ್ನು ಜಿಯೋ ಕೆಲವು ಆಕರ್ಷಕ IUC ಟಾಪ್‌-ಅಪ್‌ ಪ್ಲ್ಯಾನ್‌ಗಳು ಸದ್ಯ ಚಾಲ್ತಿ ಇವೆ. ಜಿಯೋ ದಿಂದ ಇತರೆ ನೆಟವರ್ಕಗಳಿಗೆ ಹೊರಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿದ ನಂತರ ಜಿಯೋ ಈ IUC ಟಾಪ್‌-ಅಪ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿತು. ವ್ಯಾಲಿಡಿಟಿ ಇದ್ದು, ಇತರೆ ನೆಟವರ್ಕಗಳ ಉಚಿತ ಕರೆ ನಿಮಿಷದ ಮಿತಿ ಮುಗಿದಾಗ, ಜಿಯೋ ಗ್ರಾಹಕರ ಈ IUC ಟಾಪ್‌-ಅಪ್‌ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು 10ರೂ.ಯಿಂದ 1000ರೂ.ವರೆಗೂ ಸಹ IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳಿವೆ.

ಜಿಯೋ IUC ಟಾಪ್‌-ಅಪ್‌ ಪ್ಲ್ಯಾನ್‌ಗಳು

ಜಿಯೋ IUC ಟಾಪ್‌-ಅಪ್‌ ಪ್ಲ್ಯಾನ್‌ಗಳು

ಜಿಯೋದ IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳು ಕ್ರಮವಾಗಿ 10ರೂ, 20ರೂ, 50ರೂ, 100ರೂ, 500ರೂ, ಮತ್ತು 1000ರೂ. ಆಗಿವೆ. ಇನ್ನು ಈ ಫ್ಲ್ಯಾನ್‌ಗಳು ಡಾಟಾ ಪ್ರಯೋಜನ ಪಡೆದಿದ್ದು, ಕ್ರಮವಾಗಿ 1GB, 2GB, 5GB, 10GB, 50GB ಮತ್ತು 100GB ಡಾಟಾ ಸೌಲಭ್ಯವನ್ನು ಒದಗಿಸಲಿವೆ.

Best Mobiles in India

English summary
Jio 4G vouchers were not much in use because they only offered fix data without any calling benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+