ಜಿಯೋ ಟೆಲಿಕಾಂನ ಈ ಹೊಸ ಪ್ಲ್ಯಾನ್‌ಗಳಿಗೆ ಗ್ರಾಹಕರು ಫುಲ್ ಫಿದಾ!
ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಮುಂಚೂಣಿಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಜಿಯೋ ಟೆಲಿಕಾಂ ಈಗಾಗಲೇ ಹಲವು ಅತ್ಯುತ್ತಮ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿ ಚಂದಾದಾರರ ಗಮನ ಸೆಳೆದಿದೆ. ಮುಖ್ಯವಾಗಿ ಜಿಯೋ ಗ್ರಾಹಕರಿಗೆ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯ ವರೆಗೂ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ. ಇದೀಗ 84 ದಿನಗಳ ವ್ಯಾಲಿಡಿಟಿಗಾಗಿ ಸಂಸ್ಥೆಯು ಮತ್ತೆ ಎರಡು ನೂತನ ಪ್ಲ್ಯಾನ್ ಸೇರ್ಪಡೆ ಮಾಡಿದೆ.
ಹೌದು, ಜಿಯೋ ಟೆಲಿಕಾಂ ತನ್ನ ಪ್ರಿಪೇಯ್ಡ್ ಯೋಜನೆಗಳ ಲಿಸ್ಟ್‌ಗೆ ಈಗ 739ರೂ. ಮತ್ತು 789ರೂ. ಬೆಲೆಯ ಎರಡು ಪ್ಲ್ಯಾನ್‌ಗಳನ್ನು ಸೇರಿಸಿದೆ. ಈ ಎರಡು ಪ್ರೀಪೇಯ್ಡ್ ಪ್ಲ್ಯಾನ್‌ಗಳು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದ್ದು, ದೀರ್ಘಾವಧಿಗೆ ಸೂಕ್ತ ಎನಿಸಿವೆ. ಜೊತೆಗೆ ಇತರೆ ಹೆಚ್ಚುವರಿ ಪ್ರಯೋಜನ ಒಳಗೊಂಡಿರುವುದು ಈ ಪ್ಲ್ಯಾನ್‌ಗಳ ಹೈಲೈಟ್ ಆಗಿದೆ. ಹಾಗಾದರೆ ಈ ಎರಡು ನೂತನ ಯೋಜನೆಗಳ ಪ್ರಯೋಜನಗಳ ಬಗ್ಗೆ ಇತರೆ ನೂತನ ಪ್ಲ್ಯಾನ್‌ಗಳ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 739ರೂ. ಪ್ಲ್ಯಾನ್ ಪ್ರಯೋಜನಗಳು : ಜಿಯೋ ಟೆಲಿಕಾಂನ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ನೀಡುತ್ತದೆ. ಒಟ್ಟಾರೇ ವ್ಯಾಲಿಡಿಟಿ ಅವಧಿಗೆ 126GB ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಪಡೆದುಕೊಂಡಿದೆ.
ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಪ್ರಯೋಜನ ಸಹ ಲಭ್ಯವಾಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಜಿಯೋ ಸಾವನ್ ಪ್ರೊ ಸಬ್ಸ್ಕ್ರಿಪ್ಷನ್/ ಚಂದಾದಾರಿಕೆ ಸೌಲಭ್ಯ ಸಹ ದೊರೆಯುತ್ತದೆ. ಇನ್ನುಳಿದಂತೆ ಜಿಯೋ ಸಂಸ್ಥೆಯ ಇತರೆ ಆಪ್ಸ್‌ಗಳು ಕೂಡಾ ಗ್ರಾಹಕರಿಗೆ ಸಿಗುತ್ತವೆ.
ಜಿಯೋ 789ರೂ. ಪ್ಲ್ಯಾನ್ ಪ್ರಯೋಜನಗಳು : ಜಿಯೋ ಟೆಲಿಕಾಂನ 789ರೂ. ಯೋಜನೆಯು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ನೀಡುತ್ತದೆ. ಒಟ್ಟಾರೇ ವ್ಯಾಲಿಡಿಟಿ ಅವಧಿಗೆ 168 GB ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಪಡೆದುಕೊಂಡಿದೆ.
ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಪ್ರಯೋಜನ ಸಹ ಲಭ್ಯವಾಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಜಿಯೋ ಸಾವನ್ ಪ್ರೊ ಸಬ್ಸ್ಕ್ರಿಪ್ಷನ್/ ಚಂದಾದಾರಿಕೆ ಸೌಲಭ್ಯ ಸಹ ದೊರೆಯುತ್ತದೆ. ಇನ್ನುಳಿದಂತೆ ಜಿಯೋ ಸಂಸ್ಥೆಯ ಇತರೆ ಆಪ್ಸ್‌ಗಳು ಕೂಡಾ ಗ್ರಾಹಕರಿಗೆ ಸಿಗುತ್ತವೆ.

ಜಿಯೋ 589 ರೂ. ಪ್ಲ್ಯಾನ್ ಪ್ರಯೋಜನಗಳು : ಜಿಯೋ ಟೆಲಿಕಾಂನ 589 ರೂ. ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ನೀಡುತ್ತದೆ. ಒಟ್ಟಾರೇ ವ್ಯಾಲಿಡಿಟಿ ಅವಧಿಗೆ 112GB ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಪಡೆದುಕೊಂಡಿದೆ.
ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಪ್ರಯೋಜನ ಸಹ ಲಭ್ಯವಾಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಜಿಯೋ ಸಾವನ್ ಪ್ರೊ ಸಬ್ಸ್ಕ್ರಿಪ್ಷನ್/ ಚಂದಾದಾರಿಕೆ ಸೌಲಭ್ಯ ಸಹ ದೊರೆಯುತ್ತದೆ. ಇನ್ನುಳಿದಂತೆ ಜಿಯೋ ಸಂಸ್ಥೆಯ ಇತರೆ ಆಪ್ಸ್‌ಗಳು ಕೂಡಾ ಗ್ರಾಹಕರಿಗೆ ಸಿಗುತ್ತವೆ.
ಜಿಯೋ 529 ರೂ. ಪ್ಲ್ಯಾನ್ ಪ್ರಯೋಜನಗಳು : ಜಿಯೋ ಟೆಲಿಕಾಂನ 529 ರೂ. ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ನೀಡುತ್ತದೆ. ಒಟ್ಟಾರೇ ವ್ಯಾಲಿಡಿಟಿ ಅವಧಿಗೆ 84 GB ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಪಡೆದುಕೊಂಡಿದೆ.
ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಪ್ರಯೋಜನ ಸಹ ಲಭ್ಯವಾಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಜಿಯೋ ಸಾವನ್ ಪ್ರೊ ಸಬ್ಸ್ಕ್ರಿಪ್ಷನ್/ ಚಂದಾದಾರಿಕೆ ಸೌಲಭ್ಯ ಸಹ ದೊರೆಯುತ್ತದೆ. ಇನ್ನುಳಿದಂತೆ ಜಿಯೋ ಸಂಸ್ಥೆಯ ಇತರೆ ಆಪ್ಸ್‌ಗಳು ಕೂಡಾ ಗ್ರಾಹಕರಿಗೆ ಸಿಗುತ್ತವೆ.

Click it and Unblock the Notifications