Home
ಸುದ್ದಿಜಾಲ

ಈ ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಇದೀಗ ಫ್ಯಾನ್ ಕೋಡ್ ಚಂದಾದಾರಿಕೆ ಲಭ್ಯ!

ಕ್ರೀಡಾ ಪ್ರಿಯರಿಗೆ ಜಿಯೋದಿಂದ ನೂತನ ಹಾಗೂ ರೋಮಾಂಚಕ ಡಿಜಿಟಲ್ ಅನುಭವವನ್ನು ಪರಿಚಯಿಸಲಾಗಿದೆ. ಜಿಯೋಏರ್ ಫೈಬರ್, ಜಿಯೋಫೈಬರ್ ಹಾಗೂ ಜಿಯೋ ಮೊಬಿಲಿಟಿ ಪ್ರೀಪ್ರೇಯ್ಡ್ ಗ್ರಾಹಕರು ಇದೀಗ 'ಫ್ಯಾನ್ ಕೋಡ್' ಪ್ರೀಮಿಯಂ ಸ್ಪೋರ್ಟ್ಸ್‌ ಓಟಿಟಿ ಆಪ್‌ಗೆ ಕಾಂಪ್ಲಿಮೆಂಟರಿ ಚಂದಾದಾರಿಕೆ ಪಡೆಯಬಹುದಾಗಿದೆ.

ಫ್ಯಾನ್ ಕೋಡ್ ನ ಎಕ್ಸ್ ಕ್ಲೂಸಿವ್‌ ಫಾರ್ಮುಲಾ ಒನ್ ಪ್ರಸಾರದ ಕಂಟೆಂಟ್ ಕನೆಕ್ಷನ್‌ ಅನ್ನು ಸಹ ಪಡೆಯಬಹುದು. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಜಿಯೋಏರ್ ಫೈಬರ್, ಜಿಯೋಫೈಬರ್ ಮತ್ತು ಜಿಯೋ ಮೊಬಿಲಿಟಿಯ ಆಯ್ದ ಅರ್ಹ ಚಂದಾದಾರರಿಗೆ ಮಾತ್ರ ಈ ಕಾಂಪ್ಲಿಮೆಂಟರಿ ಯೋಜನೆ ಅನ್ವಯಿಸುತ್ತವೆ.

ಈ ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಇದೀಗ ಫ್ಯಾನ್ ಕೋಡ್ ಚಂದಾದಾರಿಕೆ ಲಭ್ಯ!

ಜಿಯೋಏರ್ ಫೈಬರ್ ಮತ್ತು ಜಿಯೋಫೈಬರ್ ಗ್ರಾಹಕರು 1199ರೂ.ಗಳು ಹಾಗೂ ಅದಕ್ಕೂ ಮೇಲ್ಪಟ್ಟ ಪ್ಲಾನ್ ಗೆ ಚಂದಾದಾರಿಕೆ ಪಡೆದಾಗ ಹೆಚ್ಚುವರಿಯಾಗಿ ಆಗಿ ಫ್ಯಾನ್ ಕೋಡ್ ಪಡೆಯುವುದಕ್ಕೆ ಅರ್ಹರು. ಅದೇ ರೀತಿ ಜಿಯೋ ಮೊಬಿಲಿಟಿ ಪ್ರಿಪೇಯ್ಡ್ ಗ್ರಾಹಕರು ತಮ್ಮ ಈಗಿರುವ 398ರೂ, 1198ರೂ, 4498ರೂ, ಪ್ಲಾನ್‌ಗಳ ಮೂಲಕ ಅಥವಾ ನೂತನ 3333ರೂ,ಗಳ ವಾರ್ಷಿಕ ಪ್ಲಾನ್ ಬಳಸುತ್ತಿದ್ದಲ್ಲಿ ಈ ಕಾಂಪ್ಲಿಮೆಂಟರಿ ಫ್ಯಾನ್ ಕೋಡ್ ಲಭ್ಯ.

ಇನ್ನು ಗ್ರಾಹಕರು ಯಾವುದೇ ಹೆಚ್ಚುವರಿಯಾದ ಶುಲ್ಕ ಇಲ್ಲದೆ ಈ ಕಾಂಪ್ಲಿಮೆಂಟರಿ ಪ್ಲ್ಯಾನ್‌ಗೆ ಸೇರ್ಪಡೆ ಆಗುತ್ತದೆ. ನೂತನ ಹಾಗೂ ಈಗಾಗಲೇ ಚಂದಾದಾರರಾದವರಿಗೆ ಈ ಯೋಜನೆಯು ದೊರೆಯುತ್ತದೆ. ಅಂದಹಾಗೆ ಫ್ಯಾನ್ ಕೋಡ್ ಎಂಬುದು ಪ್ರಮುಖ ಕ್ರೀಡಾ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಎನಿಸಿದೆ.

ಪ್ರೀಮಿಯರ್ ಕ್ರಿಕೆಟ್ ಪಂದ್ಯಾವಳಿಗಳು, ಮಹಿಳಾ ಕ್ರಿಕೆಟ್, ಫುಟ್ ಬಾಲ್ ನೇರಪ್ರಸಾರ, ಬ್ಯಾಸ್ಕೆಟ್ ಬಾಲ್, ಬೇಸ್ ಬಾಲ್, ಕುಸ್ತಿ, ಬ್ಯಾಡ್ಮಿಂಟನ್ ಮತ್ತು ಇತರ ಪ್ರಮುಖ ಕ್ರೀಡಾ ಕಾರ್ಯಕ್ರಮಗಳು ಪ್ರಸಾರ ಆಗುತ್ತವೆ. ಫಾರ್ಮುಲಾ 1 ಉತ್ಸಾಹಿಗಳ ಮಧ್ಯೆ ಇದು ಬಹಳ ಖ್ಯಾತಿಯನ್ನು ಪಡೆದಿದೆ.

ಹಾಗೆಯೇ 2024 ಮತ್ತು 2025ನೇ ಸಾಲಿನ ಫಾರ್ಮುಲಾ 1 ಭಾರತದ ಪ್ರಸಾರ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಬಳಕೆದಾರರು ರಿಯಲ್‌ ಟೈಮ್‌ ಪಂದ್ಯದ ಹೈಲೈಟ್ಸ್‌, ಸಂಪೂರ್ಣ ಮ್ಯಾಚ್ ವಿಡಿಯೋಗಳು, ಭಾರತೀಯ ಕ್ರಿಕೆಟ್ ಪ್ರಮುಖಾಂಶಗಳು, ಡೇಟಾ, ಅಂಕಿ-ಅಂಶಗಳು, ಫ್ಯಾಂಟಸಿ ಸ್ಪೋರ್ಟ್ಸ್ ಇನ್‌ಸೈಟ್‌ ಹಾಗೂ ವಿಶ್ವ ಮಟ್ಟದ ಕ್ರೀಡೆಗೆ ಸಂಬಂಧಿಸಿದ ಬ್ರೇಕಿಂಗ್ ಸುದ್ದಿ ಇವೆಲ್ಲವೂ ದೊರೆಯುತ್ತವೆ.

ಗ್ರಾಹಕರಿಗೆ ಕಾಂಪ್ಲಿಮೆಂಟರಿಯಾಗಿ ಏನೇನು ಲಭ್ಯವಾಗಲಿದೆ

* ಪ್ರೀಮಿಯಂ ಫ್ಯಾನ್ ಕೋಡ್ ಕಂಟೆಂಟ್: ಫ್ಯಾನ್ ಕೋಡ್ ನ ಎಕ್ಸ್ ಕ್ಲೂಸಿವ್ ಆದ ಕ್ರೀಡಾ ಕಂಟೆಂಟ್ ಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಜಿಯೋಟಿವಿ+ ಅಥವಾ ಜಿಯೋಟಿವಿ ಅಪ್ಲಿಕೇಷನ್ ಮೂಲಕ ವೀಕ್ಷಣೆ ಮಾಡಬಹುದು.

* ಎಫ್1 ಸಂಪರ್ಕ: 2024 ಮತ್ತು 2025ನೇ ಸೀಸನ್‌ಗೆ ಫಾರ್ಮುಲಾ 1 ಭಾರತದ ಪ್ರಸಾರ ಹಕ್ಕುಗಳನ್ನು ಫ್ಯಾನ್ ಕೋಡ್ ತನ್ನದಾಗಿಸಿಕೊಂಡಿದೆ. ಭಾರತೀಯ ಅಭಿಮಾನಿಗಳು ರೇಸ್ ಗಳನ್ನು ಫ್ಯಾನ್ ಕೋಡ್ ಮೂಲಕ ಸ್ಮಾರ್ಟ್ ಟೀವಿಗಳು, ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ವೀಕ್ಷಿಸಬಹುದು. ಇನ್ನು ಕವರೇಜ್ ನಲ್ಲಿ ಅಭ್ಯಾಸ, ಅರ್ಹತಾ ಸೆಷನ್ ಗಳು, ಸ್ಪ್ರಿಂಟ್ ರೇಸ್ ಗಳು ಹಾಗೂ ಗ್ರಾಂಡ್ ಪ್ರಿಕ್ಸ್ ಒಳಗೊಂಡಿರುತ್ತದೆ.

* ವಿಸ್ತೃತವಾದ ಕವರೇಜ್: ಪ್ರಮುಖ ಕ್ರೀಡಾ ಮ್ಯಾಚ್‌ಗಳ ನೇರಪ್ರಸಾರ, ಡೆಪ್ತ್ ವಿಶ್ಲೇಷಣೆ ಮತ್ತು ರಿಯಲ್ ಟೈಮ್ ವಿಶ್ಲೇಷಣೆ ಲಭ್ಯ.
* ಸಮಗ್ರವಾದ ಸ್ಪೋರ್ಟ್ಸ್ ಲೈಬ್ರರಿ: ಮ್ಯಾಚ್‌ನ ಹೈಲೈಟ್ಸ್‌, ಸಂಪೂರ್ಣವಾದ ಅಂಕಿ- ಅಂಶ ಹಾಗೂ ಇನ್‌ಸೈಟ್‌ ಸುದ್ದಿ ಸಂಪರ್ಕ ದೊರೆಯುತ್ತದೆ.

* ಬ್ರೇಕಿಂಗ್ ಸುದ್ದಿ: ಭಾರತೀಯ ಕ್ರಿಕೆಟ್ ಮತ್ತು ಜಾಗತಿಕ ಕ್ರೀಡೆಗಳ ತಾಜಾ ಸುದ್ದಿ ಬಗ್ಗೆ ಅಪ್ ಡೇಟ್ ದೊರೆಯುತ್ತದೆ.
* ಹೊಸ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್: ಜಿಯೋದಿಂದ ನೂತನ 3333ರೂ. ಪ್ಲಾನ್ ಇದ್ದು, ಇದರಲ್ಲಿ 2.5GB/ದಿನಕ್ಕೆ ನೀಡುತ್ತಿದೆ, ಈ ಪ್ಲ್ಯಾನ್ ಜತೆಗೆ ಕಾಂಪ್ಲಿಮೆಂಟರಿ ಆಗಿ ಫ್ಯಾನ್‌ಕೋಡ್ ಚಂದಾದಾರಿಕೆ ಸಿಗಲಿದೆ.

Best Mobiles in India

English summary
Jio introduces complimentary FanCode subscription with these plans. check jiofiber, jio airfiber and jio mobile plans benefits and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+