Jio ದಿಂದ ಹೊಸ ISD ಪ್ಯಾಕ್ ಘೋಷಣೆ; ಕಡಿಮೆ ದರದಲ್ಲಿ ರೀಚಾರ್ಜ್‌ಗೆ ಲಭ್ಯ!
ಟೆಲಿಕಾಂ ದಿಗ್ಗಜ ಸಂಸ್ಥೆ ಎಂದೆನಿಸಿರುವ ರಿಲಯನ್ಸ್ ಜಿಯೋ ಕಂಪನಿಯು ತನ್ನ ಚಂದಾದಾರರಿಗೆ ಇದೀಗ ನೂತನ ಅಂತರರಾಷ್ಟ್ರೀಯ ಪ್ಯಾಕ್‌ಗಳನ್ನು ಘೋಷಿಸಿದೆ. ನಿರ್ದಿಷ್ಟ ದೇಶಗಳಿಗೆ ಅನ್ವಯಿಸುವಂತೆ 39ರೂ. ಗಳ ಬೆಲೆಯಿಂದ ಆರಂಭವಾಗುವ ಪ್ರೀ-ಪೇಯ್ಡ್ ಹಾಗೂ ಪೋಸ್ಟ್-ಪೇಯ್ಡ್‌ನ ಹೊಸ ಐಎಸ್‌ಡಿ (ISD) ಪ್ಯಾಕ್‌ಗಳನ್ನು ಲಭ್ಯ ಮಾಡಿದೆ. ಈ ಎಲ್ಲಾ ಹೊಸ ಯೋಜನೆಗಳು 7 ದಿನಗಳ ವ್ಯಾಲಿಡಿಟಿ ಒಳಗೊಂಡಿರಲಿವೆ.
ಹೌದು, ಜಿಯೋ ಟೆಲಿಕಾಂ ಹೊಸ ಐಎಸ್‌ಡಿ ಪ್ಯಾಕ್ ಪರಿಚಯಿಸಿದೆ. ಯುಎಸ್‌ಎ ಮತ್ತು ಕೆನಡಾ ದೇಶಗಳಿಗೆ 39ರೂ. ಗಳ ದರದ ಐಎಸ್‌ಡಿ 7 ದಿನಗಳ ವ್ಯಾಲಿಡಿಟಿಯ ಪ್ಲಾನ್ ನೀಡಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ 30 ನಿಮಿಷಗಳ ವಾಯಿಸ್ ಕರೆ ಸೌಲಭ್ಯ ಇರಲಿದೆ. ಅದೇ ರೀತಿ ಯುಎಇ (UAE), ಸೌದಿ ಅರೇಬಿಯಾ, ಕುವೈತ್, ಟರ್ಕಿ ಮತ್ತು ಬಹ್ರೇನ್ ದೇಶಗಳಿಗೆ 99ರೂ. ಗಳ ಬೆಲೆಯ ಪ್ಲಾನ್‌ನಲ್ಲಿ 10 ನಿಮಿಷಗಳ ವಾಯಿಸ್ ಕರೆ ಸೌಲಭ್ಯ ಲಭ್ಯ.

ಇನ್ನು ಸಿಂಗಪುರ, ಥಾಯ್ಲೆಂಡ್, ಮಲೇಷ್ಯಾ ಮತ್ತು ಹಾಂಗ್‌ಕಾಂಗ್‌ಗೆ ವಾಯಿಸ್ ಕರೆ ಮಾಡುವವರಿಗೆ 15 ನಿಮಿಷಗಳ ಕರೆ ಸೌಲಭ್ಯ ಇರುವ 59ರೂ. ದರದ ಯೋಜನೆ ನೀಡಲಾಗಿದೆ. ಅಲ್ಲದೇ ಚೀನಾ, ಜಪಾನ್, ಬೂತಾನ್‌ಗೆ 15 ನಿಮಿಷಗಳ ಕರೆ ಸೌಲಭ್ಯದ 89ರೂ. ಬೆಲೆಯ ಪ್ಲಾನ್ ನೀಡಲಾಗಿದೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳಿಗೆ 69ರೂ. ದರದ ಬೆಲೆಯ 15 ನಿಮಿಷಗಳ ವಾಯಿಸ್ ಕರೆ, ಬಾಂಗ್ಲಾದೇಶಕ್ಕೆ 49ರೂ. ಬೆಲೆಯ 20 ನಿಮಿಷಗಳ ಕರೆ ಹಾಗೂ ಯುಕೆ, ಜರ್ಮನಿ, ಫ್ರಾನ್ಸ್ ಮತ್ತು ಸ್ಪೇನ್‌ಗೆ 10 ನಿಮಿಷಗಳ ಕರೆ ಸೌಲಭ್ಯದ 79ರೂ. ದರದ ಪ್ಲಾನ್ ನೀಡಲಾಗಿದೆ. ಅಂದಾಹಗೆ ಈ ಹೊಸ ಐಎಸ್‌ಡಿ ರಿಚಾರ್ಜ್ ಪ್ಲಾನ್ ಗಳು ಅಕ್ಟೋಬರ್ 10 ರಿಂದ ಜಾರಿಯಾಗಿದೆ.
ಇತರೆ ಜನಪ್ರಿಯ ಯೋಜನೆಗಳ ಮಾಹಿತಿ
ಜಿಯೋ ಸಂಸ್ಥೆಯ 719ರೂ ರೀಚಾರ್ಜ್ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರತಿದಿನ 2 GB ಡೇಟಾ ಸೌಲಭ್ಯ ಲಭ್ಯ ಇದ್ದು, ಹಾಗೆಯೇ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೇ ಗ್ರಾಹಕರಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಹೆಚ್ಚುವರಿಯಾಗಿ ಜಿಯೋ ಆಪ್‌ಗಳ ಸೌಲಭ್ಯ ಲಭ್ಯ.
ಜಿಯೋ ಸಂಸ್ಥೆಯ 749ರೂ ರೀಚಾರ್ಜ್ ಪ್ಲ್ಯಾನ್ ಒಟ್ಟು 72 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರತಿದಿನ 2 GB ಡೇಟಾ ಸೌಲಭ್ಯ ಲಭ್ಯ ಇದ್ದು, ಹಾಗೆಯೇ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೇ ಗ್ರಾಹಕರಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಹೆಚ್ಚುವರಿಯಾಗಿ 20GB ಡೇಟಾ ಪ್ರಯೋಜನ ಹಾಗೂ ಜಿಯೋ ಆಪ್‌ಗಳ ಸೌಲಭ್ಯ ದೊರೆಯುತ್ತದೆ.
ಜಿಯೋ ಸಂಸ್ಥೆಯ 899ರೂ ರೀಚಾರ್ಜ್ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರತಿದಿನ 2 GB ಡೇಟಾ ಸೌಲಭ್ಯ ಲಭ್ಯ ಇದ್ದು, ಹಾಗೆಯೇ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೇ ಗ್ರಾಹಕರಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಹೆಚ್ಚುವರಿಯಾಗಿ 20GB ಡೇಟಾ ಪ್ರಯೋಜನ ಹಾಗೂ ಜಿಯೋ ಆಪ್‌ಗಳ ಸೌಲಭ್ಯ ದೊರೆಯುತ್ತದೆ.
ಜಿಯೋ ಸಂಸ್ಥೆಯ 859ರೂ ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರತಿದಿನ 2 GB ಡೇಟಾ ಸೌಲಭ್ಯ ಲಭ್ಯ ಇದ್ದು, ಹಾಗೆಯೇ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಸಿಗಲಿದೆ.


Click it and Unblock the Notifications








