Home
ಸುದ್ದಿಜಾಲ

Jio: ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್! ಹಬ್ಬದ ಹಿನ್ನೆಲೆ ಬೊಂಬಾಟ್‌ ಪ್ಲ್ಯಾನ್ ಪರಿಚಯ, 365 ದಿನಗಳ ಮಾನ್ಯತೆ!

ಜಿಯೋ ಟೆಲಿಕಾಂ (Jio Telecom) ಇತರೆ ಟೆಲಿಕಾಂಗಳಿಗಿಂತ ಭಿನ್ನವಾದ ತನ್ನ ವಿಶೇಷ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಈಗಾಗಲೇ ಸಾಕಷ್ಟು ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ರೀಚಾರ್ರ್‌ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಹೆಚ್ಚಿನ ಜನರನ್ನು ತನ್ನತ್ತ ಸೆಳೆದಿದೆ. ಈ ನಡುವೆ ಹಬ್ಬದ ಹಿನ್ನೆಲೆ ಮಗದೊಂದು ಹೊಸ ಪ್ಲ್ಯಾನ್‌ ಅನ್ನು ಘೋಷಣೆ ಮಾಡಿದೆ.

ಹೌದು, ಜಿಯೋ ಭಾರತೀಯರ ಎಲ್ಲಾ ರೀತಿಯ ಸಂಭ್ರಮಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಜೊತೆಯಾಗುತ್ತದೆ. ಇದೇ ಕಾರಣಕ್ಕೆ ಇಂದು ಹೆಚ್ಚು ಗ್ರಾಹಕರನ್ನು ಪಡೆದಿರುವ ಟೆಲಿಕಾಂ ಕಂಪೆನಿಯಾಗಿ ಹೆಸರು ಪಡೆದುಕೊಂಡಿದೆ. ಈಗ ಜಿಯೋ ತನ್ನ ಶ್ರೇಣಿಗೆ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ (Prepaid Recharge Plan) ಅನ್ನು ಸೇರಿಸಿದೆ. ಈ ಪ್ಲ್ಯಾನ್‌ ಬಳಕೆದಾರರಿಗೆ 365 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಅಂದರೆ ಬರೋಬ್ಬರಿ ಒಂದು ವರ್ಷದ ಸೌಲಭ್ಯ ಅದೂ ಸಹ ಅಮೆಜಾನ್‌ ಪ್ರೈಮ್‌ ವಿಡಿಯೋ ಚಂದಾದಾರಿಕೆ (Amazon Prime Video subscription) ಜೊತೆಗೆ. ಹಾಗಿದ್ರೆ, ಇದರ ಬೆಲೆ ಎಷ್ಟು?, ಸೌಲಭ್ಯಗಳೇನು ಎಂಬ ಮಾಹಿತಿ ತಿಳಿದುಕೊಳ್ಳಿ.

ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್! ಹಬ್ಬದ ಹಿನ್ನೆಲೆ ಬೊಂಬಾಟ್‌ ಪ್ಲ್ಯಾನ್ ಪರಿಚಯ

ಜಿಯೋ ಹೊಸ ಪ್ರಿಪೇಯ್ಡ್‌ ಪ್ಲ್ಯಾನ್‌: ಜಿಯೋ ಇತ್ತೀಚೆಗೆ ತನ್ನ ಗ್ರಾಹಕರಿಗೆ ಅನೇಕ ಒಟಿಟಿ (OTT) ಪ್ರಯೋಜನಗಳೊಂದಿಗೆ ಲಭ್ಯವಿರುವ ಕೈಗೆಟುಕುವ ಪ್ಲ್ಯಾನ್‌ಗಳನ್ನು ಪರಿಚಯಿಸಿ ಬಹಳ ಸದ್ದು ಮಾಡಿತ್ತು. ಅಂದರೆ ಈ ಮೂಲಕ ಗ್ರಾಹಕರು ಯಾವುದೇ ಅಡೆ ತಡೆ ಇಲ್ಲದೆ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಇಷ್ಟವಾದ ವಿಡಿಯೋಗಳನ್ನು ಸ್ಟ್ರೀಮ್‌ ಮಾಡಲು ಅವಕಾಶ ಕಲ್ಪಿಸಿದೆ. ಇದರ ಭಾಗವಾಗಿ ಮತ್ತಷ್ಟು ಒಟಿಟಿ ಪ್ರಿಯರನ್ನು ತನ್ನತ್ತ ಸೆಳೆಯಲು ಈ ಪ್ಲ್ಯಾನ್ ಘೋಷಣೆ ಮಾಡಿದೆ.

ಈ ವಿಶೇಷ ಪ್ಲ್ಯಾನ್‌ 1 ವರ್ಷಕ್ಕೆ ಮಾನ್ಯವಾಗಿರುವ ಹೊಸ ವಾರ್ಷಿಕ ಪ್ಯಾಕ್ ಆಗಿದೆ. ಸಾಮಾನ್ಯವಾಗಿ ಈಗಾಗಲೇ ನೀಡಲಾಗುತ್ತಿರುವ ಎಲ್ಲಾ ರೀತಿಯ ಪ್ರಯೋಜನಗಳೊಂದಿಗೆ ಅಮೆಜಾನ್‌ ಪ್ರೈಮ್‌ ವಿಡಿಯೋ ಚಂದಾದಾರಿಕೆ ಲಭ್ಯವಾಗುತ್ತಿರುವು ಈ ಪ್ಲ್ಯಾನ್‌ನ ವಿಶೇಷ. ಈ ಮೊದಲು ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ಸೋನಿಲೈವ್ ಯೋಜನೆಗಳು, ಜೀ5 ಯೋಜನೆಗಳು ಮತ್ತು ಜೀ5-ಸೋನಿಲೈಬ್ ಕಾಂಬೊ ಪ್ಲ್ಯಾನ್‌ಗಳ ಆಧಾರದಲ್ಲಿ ಪ್ಲ್ಯಾನ್‌ಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗ ಅಮೆಜಾನ್‌ ಪ್ರೈಮ್‌ ವಿಡಿಯೋ ಸೌಲಭ್ಯ ಸಿಗಲಿದೆ.

ಅಂದರೆ ಇನ್ಮುಂದೆ ಅಮೆಜಾನ್ ಪ್ರೈಮ್ ಪ್ಲ್ಯಾನ್‌ ಅನ್ನು ಜಿಯೋದಿಂದ ಖರೀದಿಸಲು ಅನುಕೂಲ ಮಾಡಿಕೊಡಲಾಗಿದೆ. ಜಿಯೋದ ಈ ಹೊಸ ಪ್ಲಾನ್ ದರ 3,227 ರೂ.ಗಳು. ಇದರಲ್ಲಿ ಗ್ರಾಹಕರು ನಿತ್ಯವೂ 2GB ದೈನಂದಿನ ಡೇಟಾ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಈ ದೈನಂದಿನ ಡೇಟಾ ಮಿತಿಯನ್ನು ಒಮ್ಮೆ ಮೀರಿದರೆ, ಇಂಟರ್ನೆಟ್ ವೇಗವು ಕೇವಲ 64 Kbps ಗೆ ಕಡಿಮೆಯಾಗುತ್ತದೆ. ವಿಶೇಷ ಏನೆಂದರೆ, ಇದು ಅನಿಯಮಿತ ಬಳಕೆಯೊಂದಿಗೆ ಬರುತ್ತದೆ.

ಈ ಪ್ಲ್ಯಾನ್‌ನಲ್ಲಿ ಒಂದು ವರ್ಷದ ಅವಧಿಗೆ ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ, ದಿನಕ್ಕೆ 100 ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಪಡೆದುಕೊಳ್ಳಲಿದ್ದು, ಒಟ್ಟಾರೆ 365 ದಿನಗಳವರೆಗೆ ಮಾನ್ಯವಾಗಿರುವ ದೀರ್ಘಾವಧಿಯ ಪ್ಲ್ಯಾನ್‌ ಆಗಿದೆ. ಮೊದಲೇ ತಿಳಿಸಿದಂತೆ ಈ ಪ್ಲ್ಯಾನ್‌ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಚಂದಾದಾರಿಕೆಯೊಂದಿಗೆ ಬರಲಿದ್ದು, ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್‌ (Jio TV, Jio Cinema and Jio Cloud) ಸೇವೆಗಳನ್ನೂ ಸಹ ಪಡೆದುಕೊಳ್ಳಬಹುದು.

ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್! ಹಬ್ಬದ ಹಿನ್ನೆಲೆ ಬೊಂಬಾಟ್‌ ಪ್ಲ್ಯಾನ್ ಪರಿಚಯ

ಇದಿಷ್ಟೇ ಅಲ್ಲದೆ ಈ ವಿಶೇಷ ಪ್ಲ್ಯಾನ್‌ನಲ್ಲಿ ಅನಿಯಮಿತ 5G ಡೇಟಾ ಪ್ರಯೋಜನವನ್ನೂ ಸಹ ಪಡೆದುಕೊಳ್ಳಬಹುದಾಗಿ. ಅಂದರೆ ಯಾವುದೇ ನಿರ್ಬಂಧಗಳಿಲ್ಲದೆ ತನ್ನ ಬಳಕೆದಾರರಿಗೆ ಅನಿಯಮಿತ 5G ನೆಟ್‌ವರ್ಕ್ ಅನ್ನು ಉಚಿತವಾಗಿ ನೀಡುವ ಪ್ಲ್ಯಾನ್‌ ಆಗಿದೆ. ಆದರೆ ಯಾರೆಲ್ಲಾ 5G ವಲಯದಲ್ಲಿ ಇದ್ದಾರೋ ಅವರಿಗೆ ಮಾತ್ರ ಇದು ಲಭ್ಯ ಇರಲಿದೆ. ವರ್ಷಕ್ಕೊಮ್ಮೆ ಮಾತ್ರ ರೀಚಾರ್ಜ್ ಮಾಡಬೇಕು ಎಂದುಕೊಳ್ಳುವವರಿಗೆ ಈ ಪ್ಲ್ಯಾನ್‌ ಉತ್ತಮ ಆಯ್ಕೆ ಆಗಿದೆ

Best Mobiles in India

English summary
Jio has added a new prepaid recharge plan to its range. This plan offers users 365 days validity. Its price is Rs.3227.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+