Home
ಸುದ್ದಿಜಾಲ

ಜಿಯೋದಿಂದ ಎರಡು ಹೊಸ ಏರ್‌ಫೈಬರ್ ಡೇಟಾ ಬೂಸ್ಟರ್‌ ಪ್ಲ್ಯಾನ್‌ ಬಿಡುಗಡೆ!

ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಿಲಯನ್ಸ್ ಜಿಯೋ ಟೆಲಿಕಾಂ ಇದೀಗ ತನ್ನ ಏರ್‌ಫೈಬರ್ ಬಳಕೆದಾರರಿಗೆ ಎರಡು ನೂತನ ಡೇಟಾ ಬೂಸ್ಟರ್‌ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ನೂತನ ಡೇಟಾ ಬೂಸ್ಟರ್‌ ಪ್ಲ್ಯಾನ್‌ಗಳು ಬಳಕೆದಾರರ ಬೇಸ್ ಪ್ಲಾನ್ ಸ್ಪೀಡ್‌ ಜೊತೆಗೆ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಕೂಡಾ ಒದಗಿಸಲಿವೆ.

ಹೌದು, ಜಿಯೋ ಟೆಲಿಕಾಂ 101ರೂ ಮತ್ತು 251ರೂ. ಬೆಲೆಯ ಎರಡು ಹೊಸ ಡೇಟಾ ಬೂಸ್ಟರ್ ಯೋಜನೆಗಳನ್ನು ಪರಿಚಯಿಸಿದೆ. ಕಂಟೆಂಟ್‌ ಸ್ಟ್ರೀಮಿಂಗ್ ಮಾಡುವ ಪ್ರಮುಖ ಉದ್ದೇಶ ಹಾಗೂ ಅಧಿಕ ಡೇಟಾ ಬಳಕೆಯ ಅಗತ್ಯವಿರುವ ಬಳಕೆದಾರರಿಗೆ ಸಂಸ್ಥೆಯ ಈ ಎರಡು ಹೊಸ ಡೇಟಾ ಆಡ್-ಆನ್‌ಗಳನ್ನು ಪರಿಚಯಿಸಿದೆ.

ಜಿಯೋದಿಂದ ಎರಡು ಹೊಸ ಏರ್‌ಫೈಬರ್ ಡೇಟಾ ಬೂಸ್ಟರ್‌ ಪ್ಲ್ಯಾನ್‌ ಬಿಡುಗಡೆ!

ಸದ್ಯ ಇಂಟರ್ನೆಟ್ ಸೇವೆಗಳು ತಲುಪಲು ಕಷ್ಟಕರವಾದ ಪ್ರದೇಶಗಳಿಗೆ ಸಂಪರ್ಕವನ್ನು ನೀಡುತ್ತಿರುವ ಜಿಯೋ ಏರ್ ಫೈಬರ್ ಈಗ ಅದಕ್ಕೆ ಹೆಚ್ಚು ಅಗತ್ಯವಿರುವ ಉತ್ತೇಜನವನ್ನು ನೀಡಲು, ಕಂಪನಿಯು ಕ್ರಮವಾಗಿ ಜಿಯೋ 101 ರೂ ಮತ್ತು ಜಿಯೋ 251 ರೂ ವೆಚ್ಚದ ಈ ಹೊಸ ಬೂಸ್ಟರ್ ಯೋಜನೆಗಳನ್ನು ಘೋಷಿಸಿದೆ.

ತಿಂಗಳಿಗೆ 1TB ಯ ನ್ಯಾಯೋಚಿತ ಬಳಕೆಯ ನೀತಿ (FUP) ಮುಗಿದ ನಂತರ ಯೋಜನೆಗಳನ್ನು ಪಡೆಯಬಹುದಾಗಿದೆ. ಪ್ಲ್ಯಾನ್‌ಗಳು ಮೈ ಜಿಯೋ (MyJio) ಮತ್ತು Jio.com ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಈಗಾಗಲೇ 401ರೂ ಕ್ಕೆ ಜಿಯೋ ಏರ್ ಫೈಬರ್ ಡೇಟಾ ಬೂಸ್ಟರ್ ಪ್ಲ್ಯಾನ್‌ ಅನ್ನು ನೀಡುತ್ತಿದೆ.

ಜಿಯೋದಿಂದ ಎರಡು ಹೊಸ ಏರ್‌ಫೈಬರ್ ಡೇಟಾ ಬೂಸ್ಟರ್‌ ಪ್ಲ್ಯಾನ್‌ ಬಿಡುಗಡೆ!

ಜಿಯೋ 251ರೂ ಡೇಟಾ ಬೂಸ್ಟರ್ ಪ್ಲ್ಯಾನ್‌

ಜಿಯೋದ ಈ ನೂತನ ಯೋಜನೆಯಲ್ಲಿ ಏರ್ ಫೈಬರ್ ಬಳಕೆದಾರರಿಗೆ ವೇಗದ 500GB ಡೇಟಾವನ್ನು ಒದಗಿಸುತ್ತದೆ. ಆದರೆ ಇದು ಒಂದೇ ಬಿಲ್ಲಿಂಗ್ ಸೈಕಲ್‌ ನಲ್ಲಿ ಮಾತ್ರವೇ ಬಳಕೆಗೆ ಅನ್ವಯವಾಗಲಿದೆ.

ಜಿಯೋ 101ರೂ ಡೇಟಾ ಬೂಸ್ಟರ್ ಪ್ಲ್ಯಾನ್‌

ಜಿಯೋದ ಈ ನೂತನ ಯೋಜನೆಯಲ್ಲಿ ಏರ್ ಫೈಬರ್ ಬಳಕೆದಾರರಿಗೆ ವೇಗದ 100GB ಡೇಟಾವನ್ನು ನೀಡುತ್ತದೆ. ಆದರೆ ಇದು ಒಂದೇ ಬಿಲ್ಲಿಂಗ್ ಸೈಕಲ್‌ ನಲ್ಲಿ ಮಾತ್ರವೇ ಬಳಕೆಗೆ ಮಾನ್ಯವಾಗಿದೆ.

ಇದರ ಹೆಸರೇ ಸೂಚಿಸುವಂತೆ, ಇದು ಡೇಟಾ ಬೂಸ್ಟರ್ ಯೋಜನೆ ಆಗಿದೆ ಅಲ್ಲದೇ ಇದನ್ನು ಬಳಕೆ ಮಾಡಿಕೊಳ್ಳಲು ಸಾಮಾನ್ಯ ಜಿಯೋ ಏರ್‌ಫೈಬರ್‌ ಅಥವಾ ಜಿಯೋ ಏರ್‌ಫೈಬರ್‌ಮ್ಯಾಕ್ಸ್ ಪ್ಲ್ಯಾನ್‌ ಅನ್ನು ಹೊಂದಿರಬೇಕು. ಸೀಮಿತ ಅವಧಿಗೆ ಹೆಚ್ಚುವರಿ ಡೇಟಾ ಅಗತ್ಯವಿರುವ ಬಳಕೆದಾರರಿಗಾಗಿ ಹೊಸ ಪ್ಲ್ಯಾನ್‌ ಸಹಾಯಕಾರಿ ಆಗಲಿದೆ.

ಜಿಯೋ ಏರ್‌ಫೈಬರ್ ಭೌತಿಕ ಸಂಪರ್ಕವಿಲ್ಲದ ಜಿಯೋ ಫೈಬರ್‌ನಂತಿಯೇ ಕೆಲಸ ಮಾಡಲಿದೆ. ಸೇವೆಯ ಚಂದಾದಾರರು ನಿಮ್ಮ ಮನೆ ಅಥವಾ ವ್ಯಾಪಾರದ ಆವರಣದಲ್ಲಿ ವೈಫೈ ರೂಟರ್, 4K ಸ್ಮಾರ್ಟ್ ಸೆಟ್ ಟಾಪ್ ಬಾಕ್ಸ್ ಮತ್ತು ಧ್ವನಿ-ಸಕ್ರಿಯ ರಿಮೋಟ್ ಬಳಕೆಯ ಲಾಭವನ್ನು ಪಡೆಯಬಹುದಾಗಿದೆ.

ಜಿಯೋ ಏರ್‌ಫೈಬರ್‌ಬಳಕೆದಾರರು ಪ್ರಮುಖ ಓಟಿಟಿ (OTT) ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಬಳಕೆದಾರರು ಈ ಚಂದಾದಾರಿಕೆಯನ್ನು ಟಿವಿ, ಲ್ಯಾಪ್‌ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ನಂತಹ ಅವರ ಆಯ್ಕೆಯ ಯಾವುದೇ ಸಾಧನದಾದ್ಯಂತ ಬಳಸಬಹುದು. ಭಾರತದಲ್ಲಿ ಜಿಯೋ ಏರ್‌ಫೈಬರ್ ಸಬ್‌ಸ್ಕ್ರಿಪ್ಶನ್ ಬೆಲೆಯು ರೂ 599 ರಿಂದ ಪ್ರಾರಂಭವಾಗುತ್ತದೆ.

ಜಿಯೋ ಏರ್‌ ಫೈಬರ್‌ 1199ರೂ. ಯೋಜನೆ
ಜಿಯೋದ ಈ ಯೋಜನೆಯಲ್ಲಿ 100 Mbps ವೇಗದ ಇಂಟರ್ನೆಟ್ ಸೇವೆ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ 550+ ಡಿಜಿಟಲ್ ಚಾನೆಲ್‌ಗಳು ಸೇರಿದಂತೆ ನೆಟ್‌ಫ್ಲಿಕ್ಸ್‌, ಪ್ರೈಮ್‌ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಜಿಯೋ ಸಿನಿಮಾ ಪ್ರೀಮಿಯಂ ಅಲ್ಲದೇ ಇನ್ನೂ ಹೆಚ್ಚಿನ ಓಟಿಟಿ ಆಪ್‌ಗಳಿಗೆ ಈ ಮೂಲಕ ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಜಿಯೋದ 599ರೂ ಹಾಗೂ 899ರೂ ಏರ್‌ಫೈಬರ್‌ ಯೋಜನೆಗಳು ಆಕರ್ಷಕ ಎನಿಸಿವೆ.

Best Mobiles in India

English summary
Jio introduces Two New Data Booster Plan for Jio AirFiber User. know the all benefits and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+